ಏರ್ ಟೆಲ್ ಥ್ಯಾಂಕ್ಸ್ ಕಾರ್ಯಕ್ರಮ – ಗ್ರಾಹಕರಿಗೆ ಧನ್ಯವಾದ ಸಮರ್ಪಣೆ

By Gizbot Bureau
|

ಟೆಲಿಕಾಂ ಆಪರೇಟರ್ ಏರ್ ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಉಚಿತ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಪ್ರಕಟಿಸಿದೆ. ರುಪಾಯಿ 299 ರ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಸಾಕಷ್ಟು ಬೆನಿಫಿಟ್ ಗಳು ಗ್ರಾಹಕರಿಗೆ ಲಭ್ಯವಾಗಲಿದ್ದು ಅನಿಯಮಿತ ಕರೆಗಳು, 2.5ಜಿಬಿ ಡಾಟಾ ಪ್ರತಿದಿನ ಮತ್ತು 100ಎಸ್ಎಂಎಸ್ ಗಳು ಪ್ರತಿದಿನ ಉಚಿತವಾಗಿರುತ್ತದೆ. ಇದು ಇಂಡಸ್ಟ್ರಿಯಲ್ಲಿ ನಡೆದ ಮೊದಲ ಹೆಜ್ಜೆಯಾಗಿತ್ತು. ಏರ್ ಟೆಲ್ ನಡೆಸಿದ ಈ ಕಾರ್ಯಕ್ರಮವು ಸಾಕಷ್ಟು ಯಶಸ್ಸನ್ನು ಗಳಿಸಿರುವ ಕಾರಣದಿಂದ ಇದೀಗ ಗ್ರಾಹಕರಿಗೆ ಧನ್ಯವಾದ ತಿಳಿಸುವ ಕಾರ್ಯಕ್ರವೊಂದನ್ನು ಏರ್ ಟೆಲ್ ಸಂಸ್ಥೆಯಿಂದ ನಡೆಸಲಾಗುತ್ತಿದೆ.

ಮೂರು ಲೆವೆಲ್:

ಮೂರು ಲೆವೆಲ್:

ಈ ಕಾರ್ಯಕ್ರಮವು ಮೂರು ವಿಭಿನ್ನ ಲೆವೆಲ್ಲಿನ ಬೆನಿಫಿಟ್ ಗಳನ್ನು ನೀಡುತ್ತದೆ - ಬೆಳ್ಳಿ, ಗೋಲ್ಡ್ ಮತ್ತು ಪ್ಲಾಟಿನಂ. ಏರ್ ಟೆಲ್ ಗ್ರಾಹಕರಿಗೆ ಮೂರು ವಿಭಿನ್ನ ಸೆಟ್ ಗಳು ವಿಭಿನ್ನ ಬೆನಿಫಿಟ್ ನ್ನು ನೀಡುತ್ತದೆ ಎಂದು ಕಂಪೆನಿಯು ಪ್ರೆಸ್ ಮೀಟ್ ನಲ್ಲಿ ತಿಳಿಸಿದೆ.

ಯಾವ ಟಯರ್ ನಲ್ಲಿ ಏನು ಲಾಭ?

ಯಾವ ಟಯರ್ ನಲ್ಲಿ ಏನು ಲಾಭ?

ಸಿಲ್ವರ್ ಟಯರ್ ನ ಭಾಗವಾಗಿ ಏರ್ ಟೆಲ್ ಗ್ರಾಹಕರಿಗೆ ಏರ್ ಟೆಲ್ ಟಿವಿ, Wynk ಗೆ ಆಕ್ಸಿಸ್ ಸಿಗುತ್ತದೆ. ಗೋಲ್ಡ್ ಟಯರ್ ಗ್ರಾಹಕರಿಗೆ ಟೆಲಿಕಾಂ ಬೆನಿಫಿಟ್ ಗಳ ಜೊತೆಗೆ ಪ್ರೀಮಿಯಂ ಕಟೆಂಟ್ ಮತ್ತು ಹಣಕಾಸು ಸೇವೆಗಳು ಸಿಗುತ್ತದೆ. ಪ್ಲಾಟಿನಂ ಟಯರ್ ನ ಬಳಕೆದಾರರಿಗೆ ವಿಐಪಿ ಸೇವೆ, ಪ್ರೀಮಿಯಂ ಕಟೆಂಟ್, ಇ-ಬುಕ್ಸ್, ಡಿವೈಸ್ ಪ್ರೊಟೆಕ್ಷನ್ ಮತ್ತು ಎಕ್ಸ್ ಕ್ಲೂಸೀವ್ ಆಮಂತ್ರಣಗಳು ಜೊತೆಗೆ ಕಾರ್ಯಕ್ರಮಗಳು ಮತ್ತು ಸೇಲ್ಸ್ ಇವೆಂಟ್ ನಲ್ಲಿ ಪ್ರಿಯಾರಿಟಿ ಆಕ್ಸಿಸ್ ಸಿಗುತ್ತದೆ.

ಏರ್ ಟೆಲ್ ಥ್ಯಾಂಕ್ಸ್:

ಏರ್ ಟೆಲ್ ಥ್ಯಾಂಕ್ಸ್:

ಆಪ್ ನಲ್ಲಿ ಮಾಡಲಾಗುತ್ತಿರುವ ಆ ಕಾರ್ಯಕ್ರಮಕ್ಕೆ "ಏರ್ ಟೆಲ್ ಥ್ಯಾಂಕ್ಸ್" ಎಂದು ಮರುನಾಮಕರಣ ಮಾಡಲಾಗಿದೆ. ಆಪ್ ಬಳಸಿ ಗ್ರಾಹಕರು ಬೆನಿಫಿಟ್ ಗಳನ್ನು ಆಕ್ಸಿಸ್, ಆಯ್ಕೆ ಮತ್ತು ನೇವಿಗೇಟ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಏರ್ ಟೆಲ್ ನ ಹೇಳಿಕೆಗಳು:

ಏರ್ ಟೆಲ್ ನ ಹೇಳಿಕೆಗಳು:

ಭಾರತೀ ಏರ್ ಟೆಲ್ ಮುಖ್ಯ ಪ್ರೊಡಕ್ಟ್ ಆಫೀಸರ್ ಆಗಿರುವ ಆದರ್ಶ್ ನಾಯರ್ ಅವರು ಹೇಳಿರುವಂತೆ ""#ಏರ್ ಟೆಲ್ ಥ್ಯಾಂಕ್ಸ್ ಒಂದು ಅಧ್ಬುತ ಕಾರ್ಯಕ್ರಮವಾಗಿದ್ದು ಆಳವಾದ ತಂತ್ರಜ್ಞಾನ ಮತ್ತು ಅತ್ಯಧ್ಬುತವಾದ ಸಹಭಾಗಿತ್ವದ ಸಂಕೇತವಾಗಿದೆ. ನಮ್ಮ ಗ್ರಾಹಕರ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಆರಂಭವಾದ ಮತ್ತು ಅವರ ಅನುಭವಕ್ಕೆ ಹೆಚ್ಚಿನ ಸಾಥ್ ನೀಡುವ ಕಾರ್ಯಕ್ರಮ ಇದಾಗಿದೆ.

ನಾವು ಗರಿಷ್ಟ ಗುಣಮಟ್ಟದ ವಿಐಪಿ ಸೇವೆಯನ್ನ ಗ್ರಾಹಕರಿಗೆ ನೀಡಲಿದ್ದೇವೆ. ನಾವು ಡಾಟಾ ಸೈನ್ಸ್, ಮಷೀನ್ ಲರ್ನಿಂಗ್ ಮತ್ತು ಸ್ಮಾರ್ಟ್ ಎಪಿಐಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದು ಡಿಜಿಟಲ್ ನ ಅತ್ಯುತ್ತುಮ ಬ್ರ್ಯಾಂಡ್ ಆಗಿರುವ ಅಮೇಜಾನ್ ನೊಂದಿಗೆ ಕೈಜೋಡಿಸಿದ್ದೇವೆ. ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಕೂಡ ನಮಗೆ ಕಾತುರತೆ ಇದ್ದು ಗ್ರಾಹಕರು ಮುಂದಿನ ದಿನಗಳಲ್ಲ ಹೆಚ್ಚಿನ ಸೇವೆಯನ್ನು ನಮ್ಮಿಂದ ನಿರೀಕ್ಷಿಸಬಹುದಾಗಿದೆ "

ಇನ್ನು ಭಾರತೀ ಏರ್ ಟೆಲ್ ನ ಮುಖ್ಯ ಮಾರ್ಕೆಟಿಂಗ್ ಆಫೀಸರ್ ಆಗಿರುವ ಶುಶಾಂತ್ ಶರ್ಮಾ ಕೂಡ ಏರ್ ಟೆಲ್ ಥ್ಯಾಂಕ್ಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದು ಏರ್ ಟೆಲ್ ನಿಂದ ಎಕ್ಸ್ ಕ್ಲೂಸೀವ್ ರಿವಾರ್ಡ್ಸ್ ಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಅಮೇಜಾನ್ ಜೊತೆಗಿನ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ ಎಂದು ಅಬಿಪ್ರಾಯ ಪಟ್ಟಿದ್ದಾರೆ.

Best Mobiles in India

English summary
Airtel is thanking these customers with Amazon Prime membership, 2.5GB data per day and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X