IPLನಲ್ಲಿ ಈ ಬಾರಿ ಬರೀ ಮ್ಯಾಚ್ ಇಲ್ಲ: ಏರ್‌ಟೆಲ್-ಜಿಯೋ ಬಳಕೆದಾರಿಗೆ 5G ಇಂಟರ್ನೆಟ್ ಇದೆ...!

|

ದೇಶದಲ್ಲಿ ಕ್ರಿಕೆಟ್ ಅತೀ ದೊಡ್ಡ ಮಾರುಕಟ್ಟೆ ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ಆರಂಭವಾಗಲಿರುವ IPL ಮೇಲೆ ಸಾಕಷ್ಟು ಹೂಡಿಕೆಯಾಗಿದ್ದು, ಎಲ್ಲಾ ಮಾದರಿಯ ವ್ಯವಹಾರಗಳು IPL ನಿಂದ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ IPL ಹವಾ ಜೋರಾಗಿಯೇ ಇದ್ದು, IPL ಕಳೆಕಟ್ಟಿದೆ ಎಂದರೆ ತಪ್ಪಾಗುವುದಿಲ್ಲ.

IPLನಲ್ಲಿ ಈ ಬಾರಿ ಬರೀ ಮ್ಯಾಚ್ ಇಲ್ಲ: 5G ಇಂಟರ್ನೆಟ್ ಇದೆ...!

ಈ ಬಾರಿ IPL ಪಂದ್ಯಾವಳಿಯನ್ನು ಟೆಲಿಕಾಂ ಕಂಪನಿಗಳು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿಯೂ ಏರ್‌ಟೆಲ್ ಮತ್ತು ಜಿಯೋ ಹೆಚ್ಚಿನ ಪ್ರಮಾಣದಲ್ಲಿ ಈ ಕಾರ್ಯಕ್ಕೆ ಮುಂದಾಗಿವೆ. BSNL ಸಹ ಇದರಲ್ಲಿ ಹಿಂದೆ ಉಳಿದಿಲ್ಲ.

ಓದಿರಿ: IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್: ಜಿಯೋ-ಏರ್‌ಟೆಲ್‌ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!

5G ಸೇವೆ:

5G ಸೇವೆ:

ಈಗಾಗಲೇ ಸ್ಮಾರ್ಟ್‌ಫೋನಿನಲ್ಲಿ IPL ನೋಡುವವರಿಗೆ ಸಾಕಷ್ಟು ಆಫರ್ ಗಳನ್ನು ಆಯ್ಕೆಗಳನ್ನು ನೀಡಿರುವ ಈ ಎರಡು ಟೆಲಿಕಾಂ ಕಂಪನಿಗಳು ಇದೇ ಮೊದಲ ಬಾರಿಗೆ ದೇಶದಲ್ಲಿ 5G ಸೇವೆಯನ್ನು ಆರಂಭಿಸಲು ಮುಂದಾಗಿದೆ. ಇದಕ್ಕಾಗಿ IPL ಪಂದ್ಯಾವಳಿಗಳು ನಡೆಯುವ ಸ್ಥಳದಲ್ಲಿ 5G ಸೇವೆಯನ್ನು ಪರೀಕ್ಷಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲಿವೆ.

MIMO ಪ್ರಿ-5G:

MIMO ಪ್ರಿ-5G:

ಮಲ್ಟಿ ಇನ್ ಫುಟ್- ಮಲ್ಟಿ ಔಟ್ ಫುಟ್ (multiple input, multiple output) ಎನ್ನುವುದು MIMOನ ಪೂರ್ಣ ರೂಪವಾಗಿದ್ದು, ಇದು 4G ನಂತರದ ತಂತ್ರಜ್ಞಾನವಾಗಿದ್ದು, 5G ಆರಂಭಕ್ಕೂ ಮುನ್ನ ಬಳಕೆಯಾಗಲಿದೆ. ಇದರ ಪ್ರಯೋಗವನ್ನು ಈ ಎರಡು ಟೆಲಿಕಾಂ ಕಂಪನಿಗಳು IPL ಪಂದ್ಯಾವಳಿಗಳು ನಡೆಯಲಿರುವ ಮೈದಾನಗಳಲ್ಲಿ ಪರೀಕ್ಷೆಯನ್ನು ಮಾಡಲಿದೆ. ಬಳಕೆದಾರರಿಗೆ 4G ಗಿಂತಲೂ ವೇಗದ ಸೇವೆ ಇಲ್ಲಿ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ:

ತಂತ್ರಜ್ಞಾನ:

ಇದರ ಹೆಸರಿನಲ್ಲಿ ಹೇಳುವಂತೆ ಹೆಚ್ಚಿನ ಪ್ರಮಾಣದಲ್ಲಿ ತರಂಗಾಂತರಗಳನ್ನು ಹೊರ ಸುಸುವುದಲ್ಲದೇ ಹೆಚ್ಚಿನ ಪ್ರಮಾಣ ತರಂಗಾಂತರಗಳನ್ನು ಸೆಳೆಯುವಲ್ಲಿಯೂ ಶಕ್ತವಾಗಿದೆ. ಒಂದೇ ಮಾಹಿತಿಯನ್ನು ಎರಡು ಮೂರು ಮೂಲಗಳಿಂದ ಸ್ವೀಕರಿಸಲಿದ್ದು, ಇದರಿಂದ ಡೇಟಾ ಪ್ರವಾಹವೂ ವೇಗವಾಗಿ ಸಾಗಲಿದೆ.

ಎಲ್ಲಿ ಪ್ರಯೋಗ:

ಎಲ್ಲಿ ಪ್ರಯೋಗ:

ಏರ್‌ಟೆಲ್ MIMO ಪ್ರಿ-5G ಟೆಕ್ನಾಲಜಿಯನ್ನು ದೆಹಲಿ, ಮುಂಬೈ, ಹೈದರಬಾದ್, ಕೊಲ್ಕತ್ತಾ, ಮೊಹಲಿ, ಇಂದೋರ್, ಜೈಪುರ, ಬೆಂಗಳೂರು ಮತ್ತು ಚೆನ್ನೈ ಸ್ಟೇಡಿಯಂಗಳಲ್ಲಿ ಪ್ರಯೋಗ ಮಾಡಲಿದ್ದು, ಅಭಿಮಾನಿಗಳಿಗೆ ದೇಶದಲ್ಲಿಯೇ ಅತೀ ವೇಗದ ಸೇವೆಯನ್ನು ನೀಡಲಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಜಿಯೋ:

ಜಿಯೋ:

MIMO ಪ್ರಿ-5G ಪ್ರಯೋಗ ವಿಚಾರದಲ್ಲಿ ಜಿಯೋವನ್ನು ಏರ್‌ಟೆಲ್ ಹಿಂದಿಕ್ಕಲಿದೆ ಎನ್ನಬಹುದು. ಜಿಯೋ ಕೇವಲ ದೆಹಲಿ ಮತ್ತು ಮುಂಬೈನಲ್ಲಿ ಮಾತ್ರವೇ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲಿದೆ. ಇದರಿಂದಾಗಿ ಏರ್‌ಟೆಲ್ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.

ಬದಲಾಗಲಿದೆ:

ಬದಲಾಗಲಿದೆ:

ಈಗಾಗಲೇ 4G ವೇಗದ ಡೇಟಾವನ್ನು ಪಡೆದುಕೊಳ್ಳುತ್ತಿರುವ ಬಳಕೆದಾರರಿಗೆ 4G ನಂತರದ ವೇಗವು ಬಳಕೆಗೆ ದೊರೆಯಲಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಬಳಕೆಯ ವಿಚಾರವೂ ಸಾಕಷ್ಟು ಬದಲಾವಣೆಯನ್ನು ಕಾಣಲಿದೆ. ಒಟ್ಟಿನಲ್ಲಿ 4G ಸೇವೆಯನ್ನು ಮೀರಿಸುವ ಸೇವೆಯೂ ಶೀಘ್ರವೇ ದೇಶದಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Airtel - jio MIMO Pre-5G technology across IPL match venues. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X