ಏರ್‌ಟೆಲ್‌ನ ಈ ಹೊಸ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ದಿನವಿಡೀ ಇಂಟರ್‌ನೆಟ್‌ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!

|

ಸಾಮಾಜಿಕ ಜಾಲತಾಣಗಳು ಇಂದು ದೈನಂದಿನ ಜೀವನದಲ್ಲಿ ಅಗತ್ಯ ವಿಷಯಗಳಾಗಿವೆ. ಯಾಕೆಂದರೆ ಇಲ್ಲಿ ಮಾಹಿತಿ ಹಾಗೂ ಮನರಂಜನೆ ಅಗಾದವಾಗಿ ಲಭ್ಯವಾಗುವುದರಿಂದ ಬಹುಪಾಲು ಮಂದಿ ಈ ಪ್ಲಾಟ್‌ಫಾರ್ಮ್‌ಗಳ ಕಡೆ ಹೆಚ್ಚು ವಾಲುತ್ತಾರೆ. ಅದಾಗ್ಯೂ ನೀವು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿದಷ್ಟು ವೇಗವಾಗಿ ನಿಮ್ಮ ಡೇಟಾ ಖಾಲಿಯಾವುದು ಸಾಮಾನ್ಯ ವಿಷಯ. ಆದರೆ, ಇನ್ಮುಂದೆ ಈ ಸಮಸ್ಯೆ ನೀಗಿಸಲು ಏರ್‌ಟೆಲ್‌ ಹೊಸ ಎರಡು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಏರ್‌ಟೆಲ್‌ನ ಹೊಸ  ಪ್ಲ್ಯಾನ್‌; ದಿನವಿಡೀ  ನೆಟ್‌ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!

ಹೌದು, ಸಾಮಾಜಿಕ ಜಾಲತಾಣವನ್ನು ದಿನಪೂರ್ತಿ ಬಳಕೆ ಮಾಡಿದರೂ ಸಹ ನಿಮ್ಮ ಇಂಟರ್ನೆಟ್‌ ಖಾಲಿಯಾವುದಿಲ್ಲ. ಇದಕ್ಕಾಗಿಯೇ ಏರ್‌ಟೆಲ್‌ ಹೊಸ ಎರಡು ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ್ದು, ವಿಶೇಷ ಎಂದರೆ ರೀಚಾರ್ಜ್ ಪ್ಲ್ಯಾನ್‌ನಲ್ಲಿ 5G ಸೇವೆ ಸಹ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಹೊಸ ರೀಚಾರ್ಜ್‌ ಪ್ಲ್ಯಾನ್‌ ದರ ಏನು?, ದಿನಪೂರ್ತಿ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಆಡ್‌ ಆನ್‌ ಪ್ಲ್ಯಾನ್‌ ಅಗತ್ಯವಿಲ್ಲ
ಗ್ರಾಹಕರ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಏರ್‌ಟೆಲ್‌ ಅದಕ್ಕೆ ತಕ್ಕಂತೆ ವಿವಿಧ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಇದರ ಭಾಗವಾಗಿಯೇ ಈ ಹೊಸ ರೀಚಾರ್ಜ್‌ ಪ್ಲ್ಯಾನ್‌ಗಳು ಇನ್ನಷ್ಟು ಸೌಲಭ್ಯ ನೀಡಲಿದ್ದು, ಈ ಮೊದಲು ಬಳಕೆದಾರರ ಮೊಬೈಲ್‌ನಲ್ಲಿ ಇಂಟರ್ನೆಟ್‌ ಖಾಲಿಯಾದಾಗ ಲಭ್ಯವಿರುವ ಡೇಟಾ ಮಿತಿಯ ನಂತರವೂ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಡೇಟಾ ಸೌಲಭ್ಯವನ್ನು ಆಡ್‌ ಆನ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಆದರೆ, ಇದಕ್ಕೆ ಮತ್ತೆ ಹೆಚ್ಚಿನ ಹಣ ವಿನಿಯೋಗಿಸಬೇಕಿತ್ತು. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.

ಹೊಸದಾಗಿ ಪರಿಚಯಿಸಲಾಗಿರುವ ಈ ಪ್ಲ್ಯಾನ್‌ ನಲ್ಲಿ ಗ್ರಾಹಕರು ಹೆಚ್ಚುವರಿ ರೀಚಾರ್ಜ್‌ ಪ್ಲ್ಯಾನ್‌ ಇಲ್ಲದೆ ಸುಲಭವಾಗಿ 30 ದಿನಗಳ ಮಾನ್ಯತೆಯೊಂದಿಗೆ ಈ ಸೌಲಭ್ಯ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಲಭ್ಯ ಇರುವ ದಿನದಂದು ಇಂಟರ್ನೆಟ್‌ ಬಳಕೆ ಮಾಡಬಹುದು, ಇಲ್ಲವಾದರೆ ಅದನ್ನು ತಿಂಗಳ ಕೊನೆಯಲ್ಲಿ ಉಳಿಕೆಯಾದ ಡೇಟಾವನ್ನು ಉಪಯೋಗಿಸಿಕೊಳ್ಳಬಹುದು.

ಏರ್‌ಟೆಲ್‌ನ ಹೊಸ  ಪ್ಲ್ಯಾನ್‌; ದಿನವಿಡೀ  ನೆಟ್‌ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!

ಏರ್‌ಟೆಲ್‌ನ ಹೊಸ ರೀಚಾರ್ಜ್‌ ಪ್ಲ್ಯಾನ್‌ ದರ ಎಷ್ಟು?
ಏರ್‌ಟೆಲ್‌ ಇದೀಗ 489ರೂ. ಹಾಗೂ 509 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ್ದು, ಹೆಚ್ಚಾಗಿ ಇಂಟರ್ನೆಟ್ ಬಳಕೆ ಮಾಡುವ ಗ್ರಾಹಕರಿಗೆ ಇದು ಯೋಗ್ಯವಾಗಿದೆ. ಅದರಲ್ಲೂ ಪ್ರಮುಖ ವಿಷಯ ಎಂದರೆ ಈ ಪ್ಲ್ಯಾನ್‌ನಲ್ಲಿ 5G ಸೇವೆ ಸಹ ಸಿಗಲಿದೆ. ಈ ಮೂಲಕ ಬಳಕೆದಾರರು ಈ ಹೊಸ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ 5G ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಹಾಗೆಯೇ ಇತರೆ ರೀಚಾರ್ಜ್‌ ಪ್ಲ್ಯಾನ್‌ಗಳಂತೆಯೇ ವಾಯ್ಸ್‌, ಟೆಕ್ಸ್‌ ಮೆಸೆಜ್‌ ಹಾಗೂ ಇನ್ನಿತರೆ ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್ ಪ್ರಿಪೇಯ್ಡ್ 489ರೂ. ಗಳ ಪ್ಲಾನ್
ಏರ್‌ಟೆಲ್ ಪ್ರಿಪೇಯ್ಡ್ 489ರೂ. ಗಳ ಪ್ಲಾನ್ ನಲ್ಲಿ ಗ್ರಾಹಕರು ಅನಿಯಮಿತ ಕರೆ, 300 ಎಸ್‌ಎಮ್‌ಎಸ್‌ ಸೇರಿದಂತೆ ದಿನವೂ ಬಳಕೆ ಮಾಡಬಹುದಾದ ಮಿತಿಯಿಲ್ಲದ ಒಟ್ಟು 50GB ಡೇಟಾ ಕ್ರೆಡಿಟ್ ಇದರಲ್ಲಿ ಲಭ್ಯವಾಗಲಿದೆ. ಹೆಚ್ಚುವರಿಯಾಗಿ ಏರ್‌ಟೆಲ್ ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್, ಅಪೊಲೊ 24/7 ಮತ್ತು ಫಾಸ್ಟ್‌ಟ್ಯಾಗ್ ಪ್ರಯೋಜನ ಸಹ ಇದರಲ್ಲಿ ಲಭ್ಯ. ಈ ಪ್ಲ್ಯಾನ್‌ 30 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ.

ಏರ್‌ಟೆಲ್‌ನ ಹೊಸ  ಪ್ಲ್ಯಾನ್‌; ದಿನವಿಡೀ  ನೆಟ್‌ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!

ಏರ್‌ಟೆಲ್ ಪ್ರಿಪೇಯ್ಡ್ 509 ರೂ. ಗಳ ಪ್ಲ್ಯಾನ್‌
ಏರ್‌ಟೆಲ್ ಪ್ರಿಪೇಯ್ಡ್ 509 ರೂ. ಗಳ ಪ್ಲಾನ್ ನಲ್ಲಿ ಸ್ಥಳೀಯ ಮತ್ತು STD ಕರೆಗಳ ಪ್ರಯೋಜನದ ಜೊತೆಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಹಾಗೂ 300 ಎಸ್ಎಮ್‌ಎಸ್‌ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಒಟ್ಟು 60 GB ಡೇಟಾ ಲಭ್ಯವಾಗಲಿದ್ದು, ಮಾನ್ಯತೆ ದಿನ ಮುಗಿಯುವುದರ ಒಳಗಾಗಿ ಯಾವಾಗ ಬೇಕಾದರೂ ಇದನ್ನು ಬಳಕೆ ಮಾಡಬಹುದಾಗಿದೆ.

7 ರಾಜ್ಯಗಳಲ್ಲಿ ಏರ್‌ಟೆಲ್ ರೀಚಾರ್ಜ್‌ ದರ ಹೆಚ್ಚಳ!
ಇದರ ನಡುವೆ ಏರ್‌ಟೆಕ್‌ ಕೆಲವು ದಿನಗಳ ಹಿಂದಷ್ಟೇ ಬೇಸರದ ಸುದ್ದಿಯೊಂದನ್ನು ಸಹ ನೀಡಿತ್ತು. ಅದರ ಪ್ರಕಾರ ಏರ್‌ಟೆಲ್‌ನ ಕನಿಷ್ಠ ರೀಚಾರ್ಜ್‌ ದರದಲ್ಲಿ ಏರಿಕೆ ಮಾಡಲಾಗಿದೆ. ಅಂದರೆ ಗ್ರಾಹಕರು 57% ರಷ್ಟು ದರ ಹೆಚ್ಚಳ ಇರುವ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಖರೀದಿ ಮಾಡಬೇಕಿದೆ. ಅಂತೆಯೇ ಹೊಸ ರೀಚಾರ್ಜ್‌ ಬೆಲೆ 155 ರೂ. ಗಳು. ಇದೇ ಕನಿಷ್ಠ ರೀಚಾರ್ಜ್‌ ಪ್ಲ್ಯಾನ್‌ ಈ ಹಿಂದೆ 99 ರೂ. ಗಳಾಗಿತ್ತು.

ಇದರೊಂದಿಗೆ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಈಶಾನ್ಯ ಭಾಗ, ರಾಜಸ್ಥಾನ, ಮತ್ತು ಯುಪಿ-ಪಶ್ಚಿಮದಲ್ಲಿ ತನ್ನ ಕಡಿಮೆ ದರದ ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಮೊದಲು ಈ ದರ ಏರಿಕೆ ಕ್ರಮವನ್ನು ಒಡಿಶಾ ಮತ್ತು ಹರಿಯಾಣದಲ್ಲಿ ಪ್ರಯೋಗಿಸಲಾಗಿತ್ತು.

Best Mobiles in India

English summary
Airtel introduced Rs 489 And Rs 509 prepaid recharge plan. internet will not be consumed even if it is used throughout the day. These plans have a validity of 30 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X