Subscribe to Gizbot

ಜಿಯೋ ಪ್ಲಾನ್ ಕಾಪಿ: ಏರ್‌ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇದು ಬೆಸ್ಟ್ ಆಯ್ಕೆ..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಏರ್‌ಟೆಲ್ ಹಾಗೂ ಜಿಯೋ ನಡುವಿನ ದರ ಸಮರವೂ ತಾರಕ್ಕೆ ಏರಿದೆ. ಜಿಯೋ ಯಾವುದೇ ಆಫರ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದರೆ ಅದರ ಹಿಂದೆಯೇ ಏರ್‌ಟೆಲ್ ಸಹ ಜಿಯೋಗೆ ಸೆಡ್ಡು ಹೊಡೆಯುವಂತೆ ತಾನು ಸಹ ಅದೇ ಮಾದರಿಯ ಆಫರ್ ವೊಂದನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ಜಿಯೋ ಲಾಂಚ್ ಮಾಡಿರುವ ಜನಪ್ರಿಯ ಪ್ಲಾನ್ ವೊಂದಕ್ಕೆ ಸೆಡ್ಡು ಹೊಡೆಯುವಂತೆ ಏರ್‌ಟೆಲ್ ಸಹ ಆಫರ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

ಜಿಯೋ ಪ್ಲಾನ್ ಕಾಪಿ: ಏರ್‌ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇದು ಬೆಸ್ಟ್ ಆಯ್ಕೆ

ಈಗಾಗಲೇ ಮಾರುಕಟ್ಟೆಗೆ ಜಿಯೋ ಸಂಕ್ರಾಂತಿ ಹಬ್ಬದ ಅಂಗವಾಗಿ ಬಿಡುಗಡೆ ಮಾಡಿದ್ದ ಆಫರ್ ಗಳಿಗೆ ಎದುರಾಗಿ ಏರ್‌ಟೆಲ್ ಸಹ ಬೆಸ್ಟ್ ಆಫರ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಏರ್‌ಟೆಲ್ ಬಳಕೆದಾರರು ಜಿಯೋ ನೀಡುವ ಆಫರ್ ನಿಂದ ಆಕರ್ಷಿತರಾಗಿ ಜಿಯೋ ಕಡಗೆ ವಲಸೆ ಹೋಗದಿರಲಿ ಎನ್ನುವುದು ಏರ್‌ಟೆಲ್ ಹೊಸ ಪ್ಲಾನ್ ಲಾಂಚ್ ಮಾಡಿರುವ ಹಿಂದಿನ ಸತ್ಯವಾಗಿದೆ.

ಓದಿರಿ: ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ರೂ. 59 ಪ್ಲಾನ್:

ಏರ್‌ಟೆಲ್ ರೂ. 59 ಪ್ಲಾನ್:

ಏರ್‌ಟೆಲ್ ತನ್ನ ಬಳಕೆದಾರರಿಗೆ ಎಂಟ್ರಿ ಲೆವೆಲ್ ಪ್ಲಾನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಈ ರೂ,59ರ ಪ್ಲಾನ್ ನಲ್ಲಿ ಏರ್‌ಟೆಲ್ ಬಳಕೆದಾರರು ಏಳು ದಿನದ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು, ಇದರಲ್ಲಿ ಉಚಿತ ಕರೆ ಮಾಡುವ ಮತ್ತು ಉಚಿತ ಡೇಟಾ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಲಿದ್ದಾರೆ.

 3G ಮತ್ತು 4G ಗ್ರಾಹಕರಿಬ್ಬರಿಗೂ:

3G ಮತ್ತು 4G ಗ್ರಾಹಕರಿಬ್ಬರಿಗೂ:

ಏರ್‌ಟೆಲ್ ರೂ. 59 ಪ್ಲಾನ್‌ನಲ್ಲಿ ಗ್ರಾಹಕರು 500MB ಡೇಟಾವನ್ನು ಪಡೆದುಕೊಳ್ಳಲಿದ್ದು, ಇದನ್ನು ಯಾವುದೇ ದಿನದ ಮಿತಿ ಇಲ್ಲದೇ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ಈ ಆಫರ್ ಪ್ರಮುಖ ಆಕರ್ಷಣೆ ಎಂದರೆ 3G ಮತ್ತು 4G ಗ್ರಾಹಕರು ಸಹ ಈ ಆಫರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋ ಪ್ಲಾನ್‌ಗೆ ಸೆಡ್ಡು:

ಜಿಯೋ ಪ್ಲಾನ್‌ಗೆ ಸೆಡ್ಡು:

ಇದೇ ಮಾದರಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ರೂ.52ರ ಪ್ಲಾನ್ ಘೋಷಣೆ ಮಾಡಿದ್ದು, ಇದಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಏರ್‌ಟೆಲ್ ಈ ಆಫರ್ ಅನ್ನು ನೀಡುತ್ತಿದೆ ಎನ್ನಲಾಗಿದೆ. ಆದರೆ ಜಿಯೋ ಕೇವಲ 4G ಬಳಕೆದಾರರಿಗೆ ಮಾತ್ರವೇ ಆಫರ್ ನೀಡುತ್ತುದ್ದು, ಏರ್‌ಟೆಲ್ ಎಲ್ಲಾ ಮಾದರಿಯ ನೆಟ್ ವರ್ಕ್‌ ಗಳಿಗೂ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಇದು ಹೊಸದಲ್ಲ:

ಇದು ಹೊಸದಲ್ಲ:

ಈ ಹಿಂದೆಯೂ ಹಲವು ಭಾರೀ ಜಿಯೋ ಹೊಸ ಮಾದರಿಯ ಆಫರ್ ನೀಡಿದ ಸಂದರ್ಭದಲ್ಲಿ ಏರ್‌ಟೆಲ್ ಅದೇ ಮಾದರಿಯಲ್ಲಿ ಆಫರ್ ಅನ್ನು ಕಾಪಿ ಮಾಡಿ ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದೇ ಕಾರಣದಿಂದಾಗಿ ಏರ್‌ಟೆಲ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯನ್ನು ಕಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel Launches New Rs. 59 Prepaid Plan To Counter Jio's Rs. 52 Plan. Details Here. to know more visit kannada.gizbot,com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot