ಹೊಸ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದ ಏರ್‌ಟೆಲ್‌; ಇದರ ಪ್ರಯೋಜನ ಯಾರಿಗೆ?

|

ಏರ್‌ಟೆಲ್ ಟೆಲಿಕಾಂ ಮುಂಚೂಣಿಯ ಕಾಣಿಸಿಕೊಂಡಿರುವ ಜಿಯೋ ಟೆಲಿಕಾಂಗೆ ಪೈಪೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತಾ ಮುನ್ನಡೆದಿದೆ. ಈಗಾಗಲೇ ಕೆಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಚಂದಾದಾರರನ್ನ ಸೆಳೆದಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಏರ್‌ಟೆಲ್‌ ಎರಡು ಹೊಸ ಸ್ಮಾರ್ಟ್ ರೀಚಾರ್ಜ್ ಯೋಜನೆಗಳು ಸೇರಿದಂತೆ ಇತರೆ ಎರಡು ಹೊಸ ದರ ಕಟ್ಟರ್ ಯೋಜನೆಗಳನ್ನು ಪ್ರಕಟಿಸಿದ್ದು, ಚಂದಾದಾರರ ಗಮನ ಸೆಳೆದಿದೆ.

ಪ್ರಕಟಿಸಿದೆ

ಹೌದು, ಏರ್‌ಟೆಲ್‌ ಟೆಲಿಕಾಂ ನೂತನವಾಗಿ ಎರಡು ಸ್ಮಾರ್ಟ್‌ ರೀಚಾರ್ಜ್‌ ಪ್ಲ್ಯಾನ್ (calendar month plans) ಹಾಗೂ ಎರಡು ಪ್ರೈಸ್‌ ಕಟ್ಟರ್ (rate cutter plans) ಯೋಜನೆ ಪ್ರಕಟಿಸಿದೆ. ಅವುಗಳು ಕ್ರಮವಾಗಿ ಏರ್‌ಟೆಲ್‌ 111 ರೂ, ಏರ್‌ಟೆಲ್‌ 109ರೂ, ಏರ್‌ಟೆಲ್‌ 128ರೂ ಮತ್ತು ಏರ್‌ಟೆಲ್‌ 139ರೂ. ಆಗಿವೆ. ಇನ್ನು ಏರ್‌ಟೆಲ್‌ ಟೆಲಿಕಾಂನ ಸ್ಮಾರ್ಟ್‌ ರೀಚಾರ್ಜ್‌ ಪ್ಲ್ಯಾನ್ ಹಾಗೂ ಪ್ರೈಸ್‌ ಕಟ್ಟರ್ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್‌ ಕರೆಯ ಯೋಜನೆ/ ಪ್ಲ್ಯಾನ್ ಹೊಂದಿರದ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸುತ್ತದೆ. ಹಾಗಾದರೇ ಏರ್‌ಟೆಲ್‌ ಟೆಲಿಕಾಂನ ನೂತನ ಯೋಜನೆಗಳ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನಗಳ ಬಗ್ಗೆ ಮಂದೆ ತಿಳಿಯೋಣ ಬನ್ನಿರಿ.

ತಿಂಗಳ ವ್ಯಾಲಿಡಿಟಿ ಸೌಲಭ್ಯ

ತಿಂಗಳ ವ್ಯಾಲಿಡಿಟಿ ಸೌಲಭ್ಯ

ಭಾರ್ತಿ ಏರ್‌ಟೆಲ್‌ ಟೆಲಿಕಾಂ ಪರಿಚಯಿಸಿರುವ 2 ಹೊಸ ಸ್ಮಾರ್ಟ್ ಯೋಜನೆಗಳು ಹಾಗೂ 2 ಪ್ರೈಸ್‌ ಕಟ್ಟರ್ ಯೋಜನೆಗಳು ಒಂದು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಇದರೊಂದಿಗೆ ಇತರೆ ಕೆಲವೊಂದು ಸೌಲಭ್ಯಗಳನ್ನು ಪಡೆದಿವೆ.

ಏರ್‌ಟೆಲ್ 109ರೂ. ಯೋಜನೆ

ಏರ್‌ಟೆಲ್ 109ರೂ. ಯೋಜನೆ

ಈ ಹೊಸ ಏರ್‌ಟೆಲ್ 109 ರೂ. ದರ ಕಟ್ಟರ್ ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.

ಏರ್‌ಟೆಲ್ 111ರೂ. ಯೋಜನೆ

ಏರ್‌ಟೆಲ್ 111ರೂ. ಯೋಜನೆ

ಈ ಹೊಸ ಏರ್‌ಟೆಲ್ 111 ರೂ. ಸ್ಮಾರ್ಟ್ ಪ್ಲಾನ್ 99 ರೂ. ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ, ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗಲಿದೆ. ಈ ಯೋಜನೆಯು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 128ರೂ. ಯೋಜನೆ

ಏರ್‌ಟೆಲ್ 128ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 128 ರೂ. ಸ್ಮಾರ್ಟ್ ಯೋಜನೆಯು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್‌ಎಮ್‌ಎಸ್‌ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್‌ ಗೆ 1.5 ರೂ. ಈ ಪ್ಯಾಕ್ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 131ರೂ. ಯೋಜನೆ

ಏರ್‌ಟೆಲ್ 131ರೂ. ಯೋಜನೆ

ಏರ್‌ಟೆಲ್ ಟೆಲಿಕಾಂನ 131 ರೂ.ಸ್ಮಾರ್ಟ್ ಪ್ಲಾನ್ ಬಹುತೇಕ 128 ರೂ. ಪ್ಯಾಕ್ ಅನ್ನು ಹೋಲುತ್ತದೆ. ಈ ಪ್ಯಾಕ್ ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಬಳಕೆದಾರರಿಗೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸಲಾಗುತ್ತದೆ. ಪ್ರತಿ MB ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಕೊನೆಯದಾಗಿ, ಸ್ಥಳೀಯ ಎಸ್‌ಎಮ್‌ಎಸ್‌ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್‌ ಗೆ 1.5 ರೂ. ಆಗಿದೆ.

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 296ರೂ. ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯು 25GB ಡೇಟಾವನ್ನು ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಚಂದಾದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನದ ಪ್ರಯೋಗವನ್ನು ಪಡೆಯುತ್ತಾರೆ,

Best Mobiles in India

English summary
Airtel Launches New Smart Recharge and Rate Cutter Plans: Check Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X