ATM ಮತ್ತು ಫಾರ್ಮಸಿ ಅಂಗಡಿಗಳಲ್ಲಿಯೂ ಏರ್‌ಟೆಲ್ ರೀಚಾರ್ಜ್ ಸೌಲಭ್ಯ!

|

ಕೋವಿಡ್-19 ಸಾಂಕ್ರಾಮಿಕ ಸೋಂಕು ಇಡೀ ವಿಶ್ವದಲ್ಲಿಯೇ ತಲ್ಲಣ ಮೂಡಿಸಿದೆ. ಭಾರತದಲ್ಲಿಯೂ ಕರಿಛಾಯೆಯನ್ನು ಬೀರಿದೆ. ವೈರಸ್‌ ವ್ಯಾಪಕವಾಗಿ ಹರಡುವುದನ್ನು ತಡೆಯುಬ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಸೂಚಿಸಿದೆ. ಲಾಕ್‌ಡೌನ್‌ನಿಂದಾಗಿ ಎಲ್ಲರು ಮನೆಯಲ್ಲಿಯೇ ಇರುವುದರಿಂದ ಬಹುತೇಕರಿಗೆ ಮೊಬೈಲ್ ರೀಚಾರ್ಜ್ ಮಾಡಿಸುವುದು ತೊಂದರೆ ಅನಿಸಿದೆ. ಈ ನಿಟ್ಟಿನಲ್ಲಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ರೀಚಾರ್ಜ್ ಮಾಡಿಸಿಕೊಳ್ಳಲು ಸಹಾಯಕ ವ್ಯವಸ್ಥೆಯನ್ನು ಜಾರಿ ಮಾಡಿದೆ.

ದೇಶದಲ್ಲಿ ಲಾಕ್‌ಡೌನ್

ಹೌದು, ಪ್ರಸ್ತುತ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಆದ್ರೆ ಜನರು ತಮಗೆ ಅಗತ್ಯ ಇರುವ ದೈನಂದಿನ ವಸ್ತುಗಳನ್ನು ಖರೀದಿಸಲು ಲಾಕ್‌ಡೌನ್‌ನಿಂದ ವಿನಾಯಿತಿ ಇದೆ. ದೈನಂದಿನ ಅಗತ್ಯ ವಸ್ತುಗಳು ಸಿಗುವ ಸ್ಥಳಗಳಲ್ಲಿಯೇ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವ ಅವಕಾಶವನ್ನು ಏರ್‌ಟೆಲ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಹೀಗಾಗಿ ಗ್ರಾಹಕರು ದಿನಸಿ ಅಂಗಡಿ, ಎಟಿಎಮ್ ಸೆಂಟರ್ ಮತ್ತು ಫಾರ್ಮಸಿ ಅಂಗಡಿಗಳಲ್ಲಿಯೂ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ಮೊಬೈಲ್ ರೀಚಾರ್ಜ್

ಲಾಕ್‌ಡೌನ್‌ ಪರಿಣಾಮದಿಂದ ಇದೇ ಏಪ್ರಿಲ್ 14ರ ರವರೆಗೆ ಚಿಲ್ಲರೆ/ರೀಚಾರ್ಜ್ ಅಂಗಡಿಗಳು ಕ್ಲೋಸ್ ಆಗಿರುವ ಹಿನ್ನಲೆಯಲ್ಲಿ ಈ ಅವಧಿಯಲ್ಲಿ ಬಹುತೇಕ ಬಳಕೆದಾರರಿಗೆ ಮೊಬೈಲ್ ರೀಚಾರ್ಜ್ ಮಾಡಲು ತೊಂದರೆಯಾಗಿದೆ. ಹೀಗಾಗಿ ಏರ್‌ಟೆಲ್ ಟೆಲಿಕಾಂ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ತನ್ನ ಚಂದಾದಾರರಿಗೆ ಎಟಿಎಮ್‌ಗಳಲ್ಲಿ ರೀಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಲಾಗಿದೆ ಎಂದ ಸಂಸ್ಥೆಯ ಸಿಇಒ ಗೋಪಾಲ್ ವಿಟ್ಟಲ್ ಹೇಳಿದ್ದಾರೆ. .

ಆನ್‌ಲೈನ್ ರೀಚಾರ್ಜ್

ಆನ್‌ಲೈನ್ ರೀಚಾರ್ಜ್

ಪ್ರಸ್ತುತ ಮೊಬೈಲ್ ರೀಚಾರ್ಜ್ ಮಾಡಿಸಲು ಆನ್‌ಲೈನ್‌ನಲ್ಲಿ ಹಲವು ರೀಚಾರ್ಜ್ ಆಯ್ಕೆಗಳು ಇವೆ. ಅನೇಕರು ಮನೆಯಿಂದಲೇ ಆನ್‌ಲೈನ್‌ ತಾಣಗಳ ಮೂಲಕ, ಯುಪಿಐ ಆಪ್‌ಗಳ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದರೆ ಆನ್‌ಲೈನ್‌ ತಾಣದಲ್ಲಿ ರೀಚಾರ್ಜ್ ಮಾಡಿಕೊಳ್ಳುವ ಸೌಲಭ್ಯದ ಬಗ್ಗೆ ತಿಳಿದಿರದ ಅನೇಕ ಜನರಿದ್ದಾರೆ. ಅಂತಹ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಏರ್‌ಟೆಲ್ ಈ ಹೊಸ ರೀಚಾರ್ಜ್ ವ್ಯವಸ್ಥೆ ಜಾರಿ ಮಾಡಿದೆ.

ರೀಚಾರ್ಜ್ ಪಾಯಿಂಟ್‌ಗಳು

ರೀಚಾರ್ಜ್ ಪಾಯಿಂಟ್‌ಗಳು

ಏರ್‌ಟೆಲ್‌ ಗ್ರಾಹಕರು ಆನ್‌ಲೈನ್‌ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಇನ್ನು ಆನ್‌ಲೈನ್ ರೀಚಾರ್ಜ್ ಮಾಡುವ ಬಗ್ಗೆ ತಿಳಿದಿರದಿದ್ದರೇ ದಿನಸಿ ಅಂಗಡಿಗಳು, ಫಾರ್ಮಸಿ ಅಂಗಡಿಗಳು ಮತ್ತು ಎಟಿಎಮ್‌ ಸೆಂಟರ್‌ಗಳಲ್ಲಿಯೂ ಸುಲಭವಾಗಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಅಪೋಲೊ ಮತ್ತು ಬಿಗ್‌ ಬಜಾರ್‌ನಂತಹ ಆಯ್ದ ಅಗತ್ಯ ಸ್ಥಳಗಳಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ATM ಸೆಂಟರ್‌ನಲ್ಲಿ ಜಿಯೋ ರೀಚಾರ್ಜ್

ATM ಸೆಂಟರ್‌ನಲ್ಲಿ ಜಿಯೋ ರೀಚಾರ್ಜ್

ಭಾರತಿ ಏರ್‌ಟೆಲ್‌ನಂತೆಯೇ, ರಿಲಯನ್ಸ್ ಜಿಯೋ ಸಹ ತನ್ನ ಪ್ರಿಪೇಯ್ಡ್ ಚಂದಾದಾರರಿಗೆ ATM ಸೆಂಟರ್‌ನಲ್ಲಿ ರೀಚಾರ್ಜ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಅದಕ್ಕಾಗಿ ಒಂಬತ್ತು ವಿವಿಧ ಬ್ಯಾಂಕುಗಳೊಂದಿಗೆ ಕೈಜೋಡಿಸಿದೆ. ರಿಲಯನ್ಸ್ ಜಿಯೋ ಜೊತೆ ಕೈಜೋಡಿಸಿರುವ ಒಂಬತ್ತು ಬ್ಯಾಂಕುಗಳು ಭಾರತದಲ್ಲಿ ಸುಮಾರು 90,000 ಕ್ಕೂ ಹೆಚ್ಚು ಎಟಿಎಂಗಳನ್ನು ಹೊಂದಿವೆ. ಅವುಗಳಲ್ಲಿ ಕೆಲವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇನ್ನೂ ಹಲವು.

Best Mobiles in India

English summary
Airtel prepaid subscribers will be able to recharge their prepaid numbers at HDFC and ICICI Bank ATMs, Apollo Pharmacy and Big Bazaar grocery stores.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X