Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್‌ನ 399ರೂ. ರೀಚಾರ್ಜ್ ಪ್ಲ್ಯಾನಿನಲ್ಲಿ ಹೆಚ್ಚುವರಿ 33GB ಉಚಿತ ಡೇಟಾ!
ಭಾರತೀಯ ಟೆಲಿಕಾಂ ವಲಯಕ್ಕೆ ಜಿಯೋ ಎಂಟ್ರಿ ಕೊಟ್ಟು ಅಗ್ಗದ ಡೇಟಾ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಜಿಯೋದೊಂದಿಗೆ ನೇರ ಸ್ಪರ್ಧೆಗೆ ಇಳಿದಿದ್ದು, ಈಗಾಗಲೇ ಹಲವು ಅತ್ಯುತ್ತಮ ಆಫರ್‌ಗಳನ್ನು ಗ್ರಾಹಕರಿಗೆ ನೀಡಿದೆ. ಈಗ ಅದೇ ಹಾದಿಯಲ್ಲಿ ಮುಂದುವರೆದಿರುವ ಕಂಪನಿಯು ಇದೀಗ ಮತ್ತೆ ಗ್ರಾಹಕರನ್ನು ಆಕರ್ಷಿಸಲು ಉಚಿತ ಡೇಟಾ ನೀಡಲು ಅಣಿಯಾಗಿದೆ.

ಹೌದು, ಏರ್‌ಟೆಲ್ ಕಂಪನಿಯು ತನ್ನ ಜನಪ್ರಿಯ 399ರೂ. ಪ್ಲ್ಯಾನ್‌ನಲ್ಲಿ ಇದೀಗ ಹೆಚ್ಚುವರಿಯಾಗಿ 33GB ಉಚಿತ ಡೇಟಾ ನೀಡಲು ಮುಂದಾಗಿದೆ. ಉಳಿದಂತೆ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಉಚಿತ ಎಸ್‌ಎಮ್‌ಎಸ್, ಉಚಿತ ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳಿಯ ಕರೆಗಳು ಹಾಗೂ 84 ದಿನಗಳ ವ್ಯಾಲಿಡಿಟಿ ದೊರೆಯಲಿದೆ. ಹಾಗಾದರೇ ಏರ್‌ಟೆಲ್‌ನ 399ರೂ. ಪ್ಲ್ಯಾನ್‌ನ ಇತರೆ ವಿಶೇಷ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡೇಟಾ ಬಳಕೆ ಹೆಚ್ಚಳ
ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಡೇಟಾ ಬಳಕೆ ಮಾಡುತ್ತಿದ್ದು, ಈ ದೃಷ್ಠಿಕೋನದಿಂದ ಏರ್‌ಟೆಲ್ ತನ್ನ ಹೆಚ್ಚುವರಿಯಾಗಿ ಉಚಿತ ಡೇಟಾ ನೀಡುವತ್ತ ಹೆಜ್ಜೆ ಹಾಕಿದೆ. ಹೀಗಾಗಿ ಕಂಪನಿಯು ತನ್ನ ಜನಪ್ರಿಯ 399ರೂ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಲಭ್ಯವಿರುವ ಉಚಿತ ಡೇಟಾ ಜೊತೆಗೆ ಗ್ರಾಹಕರಿಗೆ ಒಟ್ಟು 33GB ಹೆಚ್ಚುವರಿ ಡೇಟಾವನ್ನು ನೀಡಿದೆ.

ಪ್ರಯೋಜನಗಳೇನು
ಏರ್‌ಟೆಲ್‌ನ 399ರೂ.ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳು, ಉಚಿತ ರೋಮಿಂಗ್ ಕರೆಗಳು, ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ಗಳು ಹಾಗೂ ಪ್ರತಿದಿನ ಉಚಿತ 1GB ಡೇಟಾ ಸಹ ದೊರೆಯಲಿದೆ. ಆದರೆ ಇದೀಗ ಈ ಪ್ರಯೋಜನಗಳೊಂದಿಗೆ ಹೆಚ್ಚುವರಿಯಾಗಿ ಉಚಿತ 33GB ಡೇಟಾ ಸಹ ಸೇರಿಕೊಳ್ಳಲಿದೆ.

ವ್ಯಾಲಿಡಿಟಿ ಮತ್ತು ಲಭ್ಯತೆ
ಈಗಾಗಲೇ ಗ್ರಾಹಕರಿಗೆ ಬೆಸ್ಟ್ ಎನಿಸಿರುವ ಏರ್‌ಟೆಲ್‌ನ ಜನಪ್ರಿಯ 399ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಹೆಚ್ಚುವರಿ ಡೇಟಾವು ಮತ್ತಷ್ಟು ಖುಷಿ ನೀಡಿದೆ. ಗ್ರಾಹಕರು ಏರ್‌ಟೆಲ್ ಆಪ್ ಅನ್ನು ಅಪ್‌ಡೇಟ್ ಮಾಡಿಕೊಂಡು ಆಪ್ ಮೂಲಕವೇ ರೀಚಾರ್ಜ್ ಮಾಡಿಕೊಂಡರೇ ಹೆಚ್ಚುವರಿ ಉಚಿತ ಡೇಟಾ ಪ್ರಯೋಜನಗಳು ದೊರೆಯಲಿದೆ ಎನ್ನಲಾಗಿದೆ.

ಪೈಪೋಟಿ ಇದೆ
ಸದ್ಯ ಜಿಯೋ ಮತ್ತು ವೊಡಾಫೋನ್ ಕಂಪನಿಯು ತಮ್ಮ ಜನಪ್ರಿಯ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. ಏರ್‌ಟೆಲ್ ಸಹ ಈ ಕಂಪನಿಗಳಿಗೆ ಪೈಪೋಟಿ ನಿಡುವತ್ತ ಈಗ ಹೆಜ್ಜೆ ಇರಿಸಿದೆ. ಅದಕ್ಕಾಗಿ 33GB ಹೆಚ್ಚುವರಿ ಡೇಟಾ ಪ್ರಯೋಜನ ಒದಗಿಸಲು ಶುರುಮಾಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470