Subscribe to Gizbot

ದಿಪಾವಳಿ ಧಮಾಕಾ: ಏರ್‌ಟೆಲ್‌ನಿಂದ 3GB 4G ಡಾಟಾ ಬರೇ ರೂ.348

Written By:

ದಿಪಾವಳಿ ಸೀಸನ್‌ನಲ್ಲಿ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳು, ಆನ್‌ಲೈನ್ ರೀಟೇಲ್‌ ತಾಣಗಳು ಗ್ರಾಹಕರಿಗೆ ಆಫರ್‌ ಮತ್ತು ದರಕಡಿತ ವಿನಿಮಯ ಪ್ಲಾನ್‌ಗಳನ್ನು ನೀಡುವುದನ್ನು ನೋಡಿರುತ್ತೀರಿ. ಆದರೆ ಈ ಆಫರ್ ಪೈಪೋಟಿ ಈಗ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿಯೂ ಸಹ ಶುರುವಾಗಿದೆ. ಹೌದು, ಹೆಚ್ಚು ಗ್ರಾಹಕರನ್ನು ಸೆಳೆಯಲು ಮತ್ತು ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಹಲವು ಟೆಲಿಕಾಂಗಳು ದಿಪಾವಳಿ ಸೀಸನ್‌ ಆಫರ್‌ಗಳನ್ನು ಸಹ ನೀಡುತ್ತಿವೆ. ಈ ಸಾಲಿನಲ್ಲಿ ಮೊದಲು ಇರುವುದು ಭಾರತೀಯ ಏರ್‌ಟೆಲ್‌.

ದಿಪಾವಳಿ ಸೀಸನ್‌ ಪ್ರಯುಕ್ತ ವೊಡಾಫೋನ್‌, ರಿಲಾಯನ್ಸ್ ಜಿಯೋ, ಏರ್‌ಸೆಲ್‌ ಮತ್ತು ಬಿಎಸ್‌ಎನ್‌ಎಲ್‌ ಈಗಾಗಲೇ ತಮ್ಮನ್ನು ಮರೆಯದಂತೆ ತಮ್ಮ ಗ್ರಾಹಕರಿಗೆ ಹಲವು ಕೊಡುಗೆಯ ಡಾಟಾ ಪ್ಲಾನ್‌ಗಳನ್ನು ನೀಡಿವೆ. ಆದರೆ ಈಗ ಉಳಿದಿರುವುದು ಏರ್‌ಟೆಲ್‌(Airtel). ಏರ್‌ಟೆಲ್‌ ಇತ್ತೀಚೆಗಷ್ಟೆ 4G ಡಾಟಾ ಪ್ಲಾನ್ ಒಂದನ್ನು ಅತಿ ಕಡಿಮೆ ಬೆಲೆಗೆ ರೂ.117 ಕಡಿಮೆ ಮಾಡಿ ನೀಡಿತ್ತು.

ಏರ್‌ಟೆಲ್‌ನಲ್ಲಿ ಹಿಂದಿಗಿಂತ ಅರ್ಧ ಬೆಲೆಯಲ್ಲಿ ಡಾಟಾ ಆಫರ್: 2GB 4G ಡಾಟಾ ರೂ.153

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿಪಾವಳಿ ಡಾಟಾ ಪ್ಲಾನ್‌ ಆಫರ್

ದಿಪಾವಳಿ ಡಾಟಾ ಪ್ಲಾನ್‌ ಆಫರ್

ಏರ್‌ಟೆಲ್‌, ಪ್ರೀಪೇಡ್ ಗ್ರಾಹಕರಿಗಾಗಿ ಹೊಸ 4G ಪ್ಲಾನ್ ಪ್ರಕಟಗೊಳಿಸಿದ್ದು,, ಈ ಪ್ಲಾನ್‌ನಲ್ಲಿ 3GB ಡಾಟಾವನ್ನು ಕೇವಲ 348 ರೂಗೆ ಪಡೆಯಬಹುದಾಗಿದೆ. ಈ ಪ್ಲಾನ್ ದಿಪಾವಳಿ ಸೀಸನ್‌ ಆಫರ್‌ ಆಗಿದೆ. ಆದರೆ ಈ ಹಿಂದೆ 3GB ಡಾಟಾಗೆ ಗ್ರಾಹಕರು 465 ರೂ ರೀಚಾರ್ಜ್‌ ಪಡೆಯಬೇಕಿತ್ತು. ವಿಶೇಷ ಅಂದ್ರೆ ದಿಪಾವಳಿ ಡಾಟಾ ಪ್ಲಾನ್‌ ಆಫರ್ ಕೇವಲ ಆಯ್ಕೆಗೊಂಡ ಗ್ರಾಹಕರಿಗೆ ಮಾತ್ರವಾಗಿದ್ದು, ಈ ಮೇಲಿನ ಚಿತ್ರದಲ್ಲಿರುವ ಮೆಸೇಜ್‌ ಪಡೆದಿರಬೇಕು. ಈ ಆಫರ್ ಪಡೆಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

 ವ್ಯಾಲಿಡಿಟಿ 28 ದಿನಗಳು

ವ್ಯಾಲಿಡಿಟಿ 28 ದಿನಗಳು

ಏರ್‌ಟೆಲ್‌ನ ಇತರೆ ಸಾಮಾನ್ಯ ಪ್ಲಾನ್‌ಗಳಂತೆ ರೂ.348 4G ಡಾಟಾ ಪ್ಲಾನ್‌ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು ಪ್ರಮೋಶನಲ್‌ ಪ್ಲಾನ್‌ ಆಗಿದ್ದು, ದಿಪಾವಳಿ ಸೀಸನ್‌ಗೆ ಮಾತ್ರವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಆಫರ್ ಪಡೆಯುವುದು ಹೇಗೆ?

ಈ ಆಫರ್ ಪಡೆಯುವುದು ಹೇಗೆ?

ಏರ್‌ಟೆಲ್‌ ಫೆಸ್ಟಿವ್ ಆಫರ್ ಅನ್ನು ಪಡೆಯಲು ಎರಡು ಮಾರ್ಗಗಳನ್ನು ಆಫರ್‌ ಮಾಡಿದೆ. ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರು USSD ಕೋಡ್‌ ಅನ್ನು ಡಯಲ್ ಮಾಡಬಹುದು ಅಥವಾ ಮೈಏರ್‌ಟೆಲ್‌ ಆಪ್‌ ಅನ್ನು ಬಳಸಬಹುದು. ಪ್ರಕ್ರಿಯೆಯನ್ನು ಕೆಳಗೆ ಗಮನಿಸಿ.

ಕೀಪ್ಯಾಡ್‌ನಿಂದ USSD ಕೋಡ್ ಡಯಲ್ ಮಾಡಿ

ಕೀಪ್ಯಾಡ್‌ನಿಂದ USSD ಕೋಡ್ ಡಯಲ್ ಮಾಡಿ

ಮೇಲಿನ ಚಿತ್ರದಲ್ಲಿರುವಂತೆ ಈಗಾಗಲೇ ಮೆಸೇಜ್‌ ಪಡೆದಿದ್ದರೆ, ಫೆಸ್ಟಿವ್‌ ಆಫರ್ ನಿಮಗೆ ಲಭ್ಯವಾಗಿರುತ್ತದೆ. ಮೆಸೇಜ್‌ ಪಡೆಯದಿದ್ದಲ್ಲಿ, *121*1# ಅನ್ನು ಏರ್‌ಟೆಲ್‌ ನಂಬರ್‌ನಿಂದ ಡಯಲ್‌ ಮಾಡಿ. ಈ ಪ್ಲಾನ್‌ ಆಕ್ಟಿವೇಟ್‌ ಆಗಲು ಪ್ಲಾನ್‌ಗೆ ಸಾಕಷ್ಟು ಹಣ ನಿಮ್ಮ ಖಾತೆಯಲ್ಲಿ ಇರಬೇಕು. ನೀವು ಡಯಲ್ ಮಾಡಿದಾಗ ಪ್ಲಾನ್ ಆಕ್ಟಿವೇಟ್‌ ಆಗಲು ರೀಚಾರ್ಜ್‌ ಹಣ ಖಡಿತಗೊಳ್ಳುತ್ತದೆ.

ಮೈಏರ್‌ಟೆಲ್‌ ಆಪ್‌ನಿಂದ ಪ್ಲಾನ್ ಪಡೆಯುವುದು ಹೇಗೆ?

ಮೈಏರ್‌ಟೆಲ್‌ ಆಪ್‌ನಿಂದ ಪ್ಲಾನ್ ಪಡೆಯುವುದು ಹೇಗೆ?

ಇತ್ತೀಚೆಗಷ್ಟೆ ಏರ್‌ಟೆಲ್‌ ಟೆಲಿಕಾಂ ಆಪರೇಟರ್ ಅಪ್‌ಡೇಟೆಡ್ ವರ್ಸನ್‌ನ ಮೈಏರ್‌ಟೆಲ್ ಆಪ್ ಅನ್ನು ಬಿಡುಗಡೆ ಮಾಡಿದ್ದಾರೆ. ನೀವು ಈಗಾಗಲೇ ಅಪ್‌ಡೇಟೆಡ್ ವರ್ಸನ್‌ ಆಫ್ ಅನ್ನು ಹೊಂದಿದ್ದಲ್ಲಿ, ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

- ಮೈಏರ್‌ಟೆಲ್‌ ಆಪ್‌ ಲಾಂಚ್‌ ಮಾಡಿ

- Special Offer ಸೆಕ್ಷನ್ ಮೇಲೆ ಕ್ಲಿಕ್ ಮಾಡಿ

- ಈ ಮೇಲೆ ಹೇಳಿದ ಪ್ಲಾನ್‌ ಅನ್ನು ಟೆಲಿಕಾಂ ಆಫರ್‌ನ ಸಬ್‌-ಸೆಕ್ಷನ್‌ ಟಾಫ್‌ನಲ್ಲಿ ನೋಡಬಹುದು. 'Get it' ಎಂಬಲ್ಲಿ ಕ್ಲಿಕ್ ಮಾಡಿ. ಇತರೆ ಪಾಪಪ್ ಪ್ರದರ್ಶನಗೊಳ್ಳುತ್ತದೆ.

- 'OK' ಕ್ಲಿಕ್ ಮಾಡಿ ಪ್ಲಾನ್‌ ಆಕ್ಟಿವೇಟ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Airtel Offers 3GB 4G Data at Rs. 348 This Diwali Season. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot