Subscribe to Gizbot

ಜಿಯೋ-ಏರ್‌ಟೆಲ್ ಸಮರ: ಬೊಂಬಾಟ್ ಬೂಸ್ಟರ್ ಆಫರ್ ಕೊಟ್ಟ ಏರ್‌ಟೆಲ್...!

Written By:

ಜಿಯೋವನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಏರ್‌ಟೆಲ್, ಟೆಲಿಕಾಂ ಇತಿಹಾಸದಲ್ಲಿ ನೀಡಿಲ್ಲದ ಆಫರ್ ವೊಂದನ್ನು ಘೋಷಣೆ ಮಾಡಿದೆ. ಈ ಮೂಲಕ ಜಿಯೋಗೆ ಸೆಡ್ಡ ಹೊಡೆದು ತಾನು ಕಳೆದುಕೊಂಡಿರುವ ಬಳಕೆದಾರರನ್ನು ಹಿಂಪಡೆಯುವ ಸಾಹಸವನ್ನು ಮಾಡುತ್ತಿದೆ ಎನ್ನಲಾಗಿದೆ. ಸದ್ಯ ಏರ್‌ಟೆಲ್ ಘೋಷಣೆ ಮಾಡಿರುವ ಹೊಸ ಪ್ಲಾನ್ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ.

ಜಿಯೋ-ಏರ್‌ಟೆಲ್ ಸಮರ: ಬೊಂಬಾಟ್ ಬೂಸ್ಟರ್ ಆಫರ್ ಕೊಟ್ಟ ಏರ್‌ಟೆಲ್...!

ಏರ್‌ಟೆಲ್ ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋಗೆ ಟಕ್ಕರ್ ನೀಡುವ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಮತ್ತೊಂಮ್ಮೆ ಸಣ್ಣ ಬೆಲೆಯಲ್ಲಿ ಅತೀ ಹೆಚ್ಚಿನ ಲಾಭವನ್ನು ತಂದು ಕೊಡುವಂತೆ ಪ್ಲಾನ್ ಜಾರಿ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಮಾದರಿಯ ಆಫರ್ ಅನ್ನು ಕಾಣಬಹುದಾಗಿದ್ದರೂ ಸಹ, ಏರ್‌ಟೆಲ್ ಕೊಂಚ ಬದಲಾವಣೆಯನ್ನು ಮಾಡಿ ಹೆಚ್ಚಿನ ಲಾಭ ಮಾಡಿಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.98ಕ್ಕೆ 5GB 4G ಡೇಟಾ:

ರೂ.98ಕ್ಕೆ 5GB 4G ಡೇಟಾ:

ಏರ್‌ಟೆಲ್ ಜಿಯೋ ಮಣಿಸುವ ಸಲುವಾಗಿ ರೂ.98ಕ್ಕೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ 5GB 4G ಡೇಟಾವನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

ಬೂಸ್ಟರ್ ಪ್ಲಾನ್:

ಬೂಸ್ಟರ್ ಪ್ಲಾನ್:

ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಬಿಡುಗಡೆಯಾಗಿರುವ ಏರ್‌ಟೆಲ್ ಬೂಸ್ಟರ್ ಪ್ಲಾನ್ ಇದಾಗಿದೆ. ಜಿಯೋ ಇಷ್ಟು ಕಡಿಮೆ ಬೆಲೆಗೆ ಯಾವುದೇ ಬೂಸ್ಟರ್ ಪ್ಲಾನ್ ಅನ್ನು ಬಿಡುಗಡೆ ಮಾಡಿಲ್ಲ.

ಡೇಟಾ ಮಾತ್ರವೇ:

ಡೇಟಾ ಮಾತ್ರವೇ:

ಈ ಪ್ಲಾನ್‌ನಲ್ಲಿ ಏರ್‌ಟೆಲ್ ಬಳಕೆದಾರರಿಗೆ ಯಾವುದೇ ಉಚಿಕ ಕರೆ ಸೇವೆ ಮತ್ತು ಮೆಸೇಜ್ ಮಾಡುವ ಅವಕಾಶವನ್ನು ನೀಡಿಲ್ಲ ಎನ್ನಲಾಗಿದೆ. ಇದು ಬೂಸ್ಟರ್ ಪ್ಲಾನ್ ಆಗಿದ್ದು, ಬಳಕೆದಾರರಿಗೆ ಕೇವಲ ಡೇಟಾ ಆಯ್ಕೆಯನ್ನು ಮಾತ್ರವೇ ನೀಡಲಿದೆ.

3G/4G ಬಳಕೆದಾರರಿಗೆ:

3G/4G ಬಳಕೆದಾರರಿಗೆ:

ಈ ಬೂಸ್ಟರ್ ಪ್ಲಾನ್ ಅನ್ನು 3G/4G ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುತ್ತಿರುವವರು ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ, ಎರಡು ನೆಟ್‌ವರ್ಕಿಗೂ ಒಂದೇ ಬೆಲೆಯಲ್ಲಿ ಸೇವೆಯನ್ನು ನೀಡುತ್ತಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಜಿಯೋ ಆಫರ್:

ಜಿಯೋ ಆಫರ್:

ಜಿಯೋ ಇದೇ ಮಾದರಿಯ ಆಫರ್ ಅನ್ನು ನೀಡಿದ್ದು, ರೂ.101ಕ್ಕೆ 6GB ಡೇಟಾವನ್ನು ನೀಡಲಿದೆ. ಆದರೆ ಏರ್‌ಟೆಲ್ 3G/4G ಬಳಕೆದಾರರಿಗೂ ಈ ಆಫರ್ ಅನ್ನು ಬಳಕೆಗೆ ನೀಡುತ್ತಿದೆ. ಇದೇ ಈ ಬೂಸ್ಟರ್ ಪ್ಲಾನ್ ವಿಶೇಷತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel Offers 5GB of 4G Data With 28-Day Validity at Rs. 98 to Beat Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot