ಏರ್‌ಟೆಲ್‌ನ ಈ ಪ್ಲ್ಯಾನ್‌ಗಳಲ್ಲಿ ಈಗ zee 5 ಚಂದಾದಾರಿಕೆ ಉಚಿತ ಉಚಿತ ಉಚಿತ!

|

ಮಾರಕ ಕೊರೊನಾ ವೈರಸ್‌ ಇಡೀ ವಿಶ್ವವನ್ನೇ ನಡುಗಿಸಿದೆ. ದೇಶದಲ್ಲಿ ಈ ಕೊರೊನಾ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಇದೀಗ ಮೂರನೇ ಹಂತದ ಲಾಕ್‌ಡೌನ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಲಾಕ್‌ಡೌನ್‌ ವೇಳೆ ಬಳಕೆದಾರರಿಗೆ ಹಲವು ಅನುಕೂಲಕರ ಕೊಡುಗೆಗಳನ್ನು ಘೋಷಿಸಿವೆ. ಆ ಪೈಕಿ ಜನಪ್ರಿಯ ಏರ್‌ಟೆಲ್‌ ಟೆಲಿಕಾಂ ತನ್ನ ಚಂದಾದಾರರಿಗೆ ಭಾರಿ ಆಫರ್ ನೀಡಿದ್ದು, ಈಗ ತನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಮತ್ತೆ ಕೊಡುಗೆ ಘೋಷಿಸಿದೆ.

ಭಾರ್ತಿ ಏರ್‌ಟೆಲ್ ಸಂಸ್ಥೆ

ಹೌದು, ಭಾರ್ತಿ ಏರ್‌ಟೆಲ್ ಸಂಸ್ಥೆಯು ತನ್ನ 149ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ಗೂ ಮೇಲ್ಪಟ್ಟ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ZEE5-ಜೀ5 ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಚಂದಾದಾರಿಕೆಯ ಸೌಲಭ್ಯ ನೀಡಿದೆ. ಈ ಸೌಲಭ್ಯಕ್ಕಾಗಿ ಸಂಸ್ಥೆಯು ಯಾವುದೇ ಹೆಚ್ಚುವರಿ ಶುಲ್ಕ ನಿಗದಿಪಡಿಸಿಲ್ಲ. ಏರ್‌ಟೆಲ್‌ನ ಥ್ಯಾಂಕ್ಸ್‌ ಪ್ರೋಗ್ರಾಂನಡಿಯಲ್ಲಿ ಬಳಕೆದಾರರಿಗೆ ಈ ಕೊಡುಗೆಯು ಲಭ್ಯವಾಗಲಿದೆ. ಹಾಗೆಯೇ ವೊಡಾಫೋನ್ ಸಹ ಜೀ5 ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಚಂದಾದಾರಿಕೆಯನ್ನು ಘೋಷಿಸಿದೆ.

ಏರ್‌ಟೆಲ್- ZEE5

ಏರ್‌ಟೆಲ್- ZEE5

ಏರ್‌ಟೆಲ್ ZEE5 ವಿಡಿಯೊ ಸ್ಟ್ರೀಮಿಂಗ್ ಜೊತೆಗೆ ಪಾಲುದಾರಿಕೆ ಹೊಂದಿದ್ದು, ಏರ್‌ಟೆಲ್ ಥ್ಯಾಂಕ್ಸ್ ಕಾರ್ಯಕ್ರಮದಡಿ ತನ್ನ ಗ್ರಾಹಕರಿಗೆ ಉಚಿತ ZEE5 ಚಂದಾದಾರಿಕೆ ನೀಡುವುದಾಗಿ ಹೇಳಿದೆ. ಅರ್ಹ ಬಳಕೆದಾರರಿಗೆ ZEE5 ಪ್ರೀಮಿಯಂ ಕಂಟೆಂಟ್‌ ಅನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಅಂದಹಾಗೇ ಈ ಕೊಡುಗೆ ಮೇ 4 ರಿಂದ ಜುಲೈ 12, 2020 ರವರೆಗೆ ಮಾನ್ಯವಾಗಿರುತ್ತದೆ. ಏರ್‌ಟೆಲ್ 149ರೂ.ಗಿಂತ ಹೆಚ್ಚಿನ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಬಳಕೆದಾರರಿಗೆ ಏರ್‌ಟೆಲ್ ZEE5 ಪ್ರೀಮಿಯಂ ಲಭ್ಯವಾಗಲಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಲ್ಲಿಯೂ ZEE5 ಲಭ್ಯ

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಲ್ಲಿಯೂ ZEE5 ಲಭ್ಯ

ಏರ್‌ಟೆಲ್ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ಸಹ ZEE5 ವಿಡಿಯೊ ಸ್ಟ್ರೀಮಿಂಗ್ ಚಂದಾದಾರಿಕೆ ಲಭ್ಯವಾಗಲಿದೆ. ಆದರೆ ಸದ್ಯ ಆಯ್ದ ನಾಲ್ಕು ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಹಾಗೆಯೇ ಆಯ್ದ ನಾಲ್ಕು ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೂ ZEE5 ಲಭ್ಯವಾಗಿಸಿದೆ. ಇನ್ನು ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನ ಬೇಸ್‌ ಪ್ಲ್ಯಾನ್‌ 150GB ಡೇಟಾವನ್ನು ಒಳಗೊಂಡಿದ್ದು, 100 Mbps ವೇಗದಲ್ಲಿ ಇಂಟರ್ನೆಟ್ ದೊರೆಯಲಿದೆ.

ಏರ್‌ಟೆಲ್‌ 401ರೂ. ಪ್ಲ್ಯಾನ್‌

ಏರ್‌ಟೆಲ್‌ 401ರೂ. ಪ್ಲ್ಯಾನ್‌

ಏರ್‌ಟೆಲ್‌ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಿರುವುದಿಲ್ಲ.

Best Mobiles in India

English summary
The offer will be available for Airtel Thanks customers from May 4, 2020, to July 12, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X