ಏರ್‌ಟೆಲ್‌ನಿಂದ ಮಹತ್ವದ ಘೋಷಣೆ; ಇನ್ಮುಂದೆ ಈ ಪ್ರದೇಶದಲ್ಲೂ 5G ಸೇವೆ ಲಭ್ಯ

|

5G ಎಂಬುದು 5 ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ಆಗಿದ್ದು, ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ವ್ಯಾಪಾರ ಸಂಬಂಧಿ ಕ್ಷೇತ್ರಗಳಲ್ಲಿ ಬಹುಪಾಲು ಜನರು ಈಗಾಗಲೇ 5G ಗೆ ಬದಲಾಗಿದ್ದಾರೆ. ಹಾಗೆಯೇ 5G ಸೇವೆ ಆರಂಭಿಕ ಹಂತದಲ್ಲಿದ್ದು, ಆಯ್ದ ಪ್ರದೇಶಗಳಲ್ಲಿ ಮಾತ್ರ ಇದು ಲಭ್ಯವಿದೆ. ಉಳಿದಂತೆ ಹಂತಹಂತವಾಗಿ ಬೇರೆ ರಾಜ್ಯಗಳು ಹಾಗೂ ಪ್ರದೇಶಗಳಿಗೆ ವಿಸ್ತರಿಸಲು ಟೆಲಿಕಾಂ ಸಂಸ್ಥೆಗಳು ಮುಂದಾಗಿದೆ. ಇದರ ಭಾಗವಾಗಿ ಏರ್‌ಟೆಲ್‌ 5G ಸೇವೆ ಈ ನಗರಕ್ಕೆ ಎಂಟ್ರಿ ಕೊಡಲಿದೆ.

ಮುಂಬೈ

ಹೌದು, ಈಗಾಗಲೇ ದೆಹಲಿ, ಮುಂಬೈ, ಚೆನ್ನೈ ಮತ್ತು ವಾರಣಾಸಿ, ಬೆಂಗಳೂರು ಸೇರಿದಂತೆ ಇನ್ನಿತರೆ ಪ್ರಮುಖ ನಗರದಲ್ಲಿ ಈ ಸೇವೆ ಲಭ್ಯವಿದ್ದು, ಇದೀಗ ಏರ್‌ಟೆಲ್‌ 5G ಪಾಣಿಪತ್‌ನಲ್ಲೂ ಲಭ್ಯವಿರಲಿದೆ. ಈ ಮೂಲಕ ಈ ಪಾಣಿಪತ್‌ 5G ಸೇವೆ 9 ನೇ ಪ್ರದೇಶವಾಗಿದೆ. ಇನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಏರ್‌ಟೆಲ್ ತನ್ನ 5G ಪ್ಲಸ್ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಿತ್ತು.

ಯಾವ ಏರಿಯಾಗಳಲ್ಲಿ ಲಭ್ಯ?

ಯಾವ ಏರಿಯಾಗಳಲ್ಲಿ ಲಭ್ಯ?

ಏರ್‌ಟೆಲ್ ತನ್ನ 5G ಪ್ಲಸ್ ಸೇವೆಯನ್ನು ಈಗ ಪಾಣಿಪತ್‌ ಗೆ ವಿಸ್ತರಿಸಿದ್ದು, ಇಲ್ಲಿನ ಆಯ್ದ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ತಿಳಿಸಿದೆ. ಹಾಗೆಯೇ ಶೀಘ್ರದಲ್ಲೇ ನಗರದ ಹೆಚ್ಚಿನ ಪ್ರದೇಶಗಳಿಗೆ 5G ಪ್ಲಸ್ ಸೇವೆಯನ್ನು ವಿಸ್ತರಿಸುವುದಾಗಿ ಕಂಪನಿ ಮಾಹಿತಿ ನೀಡಿದೆ. ಇನ್ನು ಆರಂಭಿಕವಾಗಿ ತೆಹಸಿಲ್ ಕ್ಯಾಂಪ್, ಬರ್ಸಾತ್ ರಸ್ತೆ, IOCL, ದೇವಿ ಮಂದಿರ, ಭಾವನಾ ಚೌಕ್ ಮತ್ತು ಇತರ ಕೆಲವು ಸ್ಥಳಗಳಲ್ಲಿನ ಗ್ರಾಹಕರು 5G ಪ್ಲಸ್ ಸೇವೆ ಪಡೆಯಬಹುದಾಗಿದೆ.

9 ನಗರಗಳಲ್ಲಿ ಈ ಸೇವೆ ಲಭ್ಯ!

9 ನಗರಗಳಲ್ಲಿ ಈ ಸೇವೆ ಲಭ್ಯ!

5G ಪ್ಲಸ್ ನೆಟ್‌ವರ್ಕ್‌ನ ಲಭ್ಯತೆಯನ್ನು ನಿಗದಿತ ಅವಧಿಯಲ್ಲಿ ನಗರದ ಇತರ ಭಾಗಗಳಿಗೆ ವಿಸ್ತರಿಸುವುದಾಗಿ ಕಂಪೆನಿಯು ಹೇಳಿಕೊಂಡಿದ್ದು, ಈ ಮೂಲಕ ಏರ್‌ಟೆಲ್ 5G ಪ್ಲಸ್ ಸೇವೆ ದೇಶದಾದ್ಯಂತ ಒಟ್ಟು ಒಂಬತ್ತು ನಗರಗಳಲ್ಲಿ ಲಭ್ಯವಾದಂತಾಗಿದೆ. ಈ ಮೊದಲು ಏರ್‌ಟೆಲ್‌ನ 5G ಪ್ಲಸ್ ನೆಟ್‌ವರ್ಕ್ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿತ್ತು.

ಭಾರ್ತಿ ಏರ್ಟೆಲ್

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಭಾರ್ತಿ ಏರ್ಟೆಲ್ ನ ಸಿಒಒ ತರುಣ್ ವಿರ್ಮಾನಿ, ಪಾಣಿಪತ್‌ನಲ್ಲಿ ಏರ್‌ಟೆಲ್ 5G ಪ್ಲಸ್ ಬಿಡುಗಡೆಯನ್ನು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ನಾವು ಇಡೀ ನಗರವನ್ನು ಈ ವ್ಯಾಪ್ತಿಗೆ ತರುವ ಪ್ರಕ್ರಿಯೆಯಲ್ಲಿದ್ದೇವೆ, ಇದು ಗ್ರಾಹಕರಿಗೆ ಹೈ-ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್‌ಗೆ ಸೂಪರ್‌ಫಾಸ್ಟ್ ಪ್ರವೇಶವನ್ನು ನೀಡಲಿದೆ ಎಂದಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯ

ಇನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಏರ್‌ಟೆಲ್ ತನ್ನ 5G ಪ್ಲಸ್ ಸೇವೆಗಳನ್ನು ಆರಂಭಿಸಿದ ಒಂದು ವಾರದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಅದರಲ್ಲಿ ಆಗಮನ ಮತ್ತು ನಿರ್ಗಮನ ಟರ್ಮಿನಲ್‌ಗಳು, ಲಾಂಜ್‌ಗಳು, ಬೋರ್ಡಿಂಗ್ ಗೇಟ್‌ಗಳು, ವಲಸೆ ಪ್ರದೇಶಗಳು, ಭದ್ರತಾ ಗೇಟ್‌ಗಳು, ಬ್ಯಾಗೇಜ್ ಕ್ಲೈಮ್ ಬೆಲ್ಟ್ ಪ್ರದೇಶಗಳಲ್ಲಿ ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್‌ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಅದರಂತೆ ಈ ಸೇವೆ ಪಡೆದ ಭಾರತದ ಮೊದಲ ಮಾನ ನಿಲ್ದಾಣವಾಗಿದೆ ಎಂಬ ಹೆಸರನ್ನು ಸಹ ಪಡೆದುಕೊಂಡಿದೆ.

ಸಿಮ್‌ ಬದಲಾಯಿಸುವ ಅವಶ್ಯಕತೆ ಇಲ್ಲ

ಸಿಮ್‌ ಬದಲಾಯಿಸುವ ಅವಶ್ಯಕತೆ ಇಲ್ಲ

ಪ್ರಮುಖ ವಿಷಯ ಎಂದರೆ 5G ಫೋನ್‌ನಲ್ಲಿ ಈಗಾಗಲೇ ಇರುವ 4G ಸಿಮ್‌ ಬದಲಿಸಬೇಕಾದ ವ್ಯವಸ್ಥೆ ಇಲ್ಲ. ಬದಲಾಗಿ 4G ಸಿಮ್‌ ಆಟೋಮ್ಯಾಟಿಕ್‌ ಆಗಿ 5G ಗೆ ಅಪ್‌ಗ್ರೇಡ್‌ ಆಗಲಿದೆ. ಹಾಗೆಯೆ ಈಗ ನೀವು 4G ಸಿಮ್‌ಗೆ ಯಾವ ರೀಚಾರ್ಜ್‌ ಮಾಡಿಸಿಕೊಡಿರುವಿರೋ ಅದೇ ಪ್ಲ್ಯಾನ್‌ನಲ್ಲಿ 5G ಸೇವೆ ಪಡೆಯಬಹುದಾಗಿದ್ದು, ಇದಕ್ಕೆಂದೇ ಹೆಚ್ಚಿನ ಶುಲ್ಕ ಭರಿಸಬೇಕಾಗಿಲ್ಲ. ಆದರೆ 5G ಸೇವೆ ಎಲ್ಲಾ ಕಡೆ ವಿಸ್ತರಿಸಿದಾಗ ಇದಕ್ಕೆಂದೇ ವಿಶೇಷ ಪ್ಲ್ಯಾನ್‌ ಘೋಷಣೆ ಮಾಡಲು ಏರ್‌ಟೆಲ್‌ ಸಿದ್ಧತೆ ನಡೆಸಿದೆ.

ಜಿಯೋದಿಂದಲೂ ವಿಸ್ತರಣೆ

ಜಿಯೋದಿಂದಲೂ ವಿಸ್ತರಣೆ

ಜಿಯೋ ಸಹ ತನ್ನ 5G ಸೇವೆಯನ್ನು ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಇನ್ನೂ ಎರಡು ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಈ ನಗರಗಳಲ್ಲಿನ ಜಿಯೋ ಬಳಕೆದಾರರು 'ಮೈ ಜಿಯೋ' ಆಪ್‌ ಮೂಲಕ 'ಜಿಯೋ ವೆಲ್ಕಮ್ ಆಫರ್' ಗೆ ಚಂದಾದಾರರಾಗಿ 5G ಸೇವೆ ಪಡೆಯಬಹುದಾಗಿದೆ. ಇನ್ನು ಜಿಯೋದ ಈ ಘೋಷಣೆಯ ನಂತರ ಏರ್‌ ಟೆಲ್‌ ಪಾಣಿಪತ್‌ನಲ್ಲಿ ಈ ಸೇವೆ ನೀಡುವುದಾಗಿ ತಿಳಿಸಿದೆ.

Best Mobiles in India

English summary
5G is the 5th generation mobile network. Meanwhile, Airtel's 5G service has been expanded and 5G service will be available in Panipat from now on.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X