Subscribe to Gizbot

ಹೊಸ ವರ್ಷಕ್ಕೆ ಸರ್ಪ್ರೈಸ್ ಕೊಟ್ಟ ಏರ್‌ಟೆಲ್: ಜಿಯೋ ಬಿಡಿ, ಪ್ರತಿ ನಿತ್ಯ 3.5GB 4G ಡೇಟಾ ಇಲ್ಲಿದೇ ನೋಡಿ..!

Written By:

ದೇಶಿಯಾ ಟೆಲಿಕಾಂ ವಲಯದಲ್ಲಿ ಸಾಕಷ್ಟು ವಿಚಾರದಲ್ಲಿ ಟೆಲಿಕಾಂ ಕಂಪನಿಗಳ ನಡುವೆ ಸ್ಪರ್ಧೇ ನಡೆಯುತ್ತಿದ್ದು, ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗುತ್ತಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್‌ ಹಾಗೂ ಜಿಯೋ ನಡುವೆ ದರ ಸಮರ ಮತ್ತು ಆಕರ್ಷಕ ಪ್ಲಾನ್ ಘೋಷಣೆ ಮಾಡುವ ಪ್ರಯತ್ನಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಹೊಸ ಆಫರ್ ವೊಂದನ್ನು ಘೋಷಣೆ ಮಾಡಿದ್ದು, ಮೂಲಕ ಜಿಯೋ ವಿರುದ್ಧ ತೊಡೆತಟ್ಟಿದೆ.

ಜಿಯೋ ಬಿಡಿ, ಪ್ರತಿ ನಿತ್ಯ 3.5GB 4G ಡೇಟಾ ಇಲ್ಲಿದೇ ನೋಡಿ..!

ಓದಿರಿ: ಬಾಂಡ್ ತರ ನೀವು ಕಾರಿನಲ್ಲಿ ಹಾರಿ: ಬೆಲೆ ಕೇಳಿ ಶಾಕ್ ಆಗಬೇಡಿ ಅಷ್ಟೆ..!

ಈಗಾಗಲೇ ಜನರಿಗೆ ದಿನನಿತ್ಯಕ್ಕೆ ಒಂದು GB 4G ಡೇಟಾ ಸಾಲುತ್ತಿಲ್ಲ ಎನ್ನುವುದನ್ನು ಅರಿತು ಕೊಂಡಿರುವ ಈ ಎರಡು ಕಂಪನಿಗಳು, ದಿನಕ್ಕೇ ಒಂದು GB ಗಿಂತ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಜಿಯೋ ಈಗಾಗಲೇ ದಿನಕ್ಕೆ 1.5GB ಡೇಟಾ ಮತ್ತು 2GB ಡೇಟಾವನ್ನು ನೀಡುವ ಪ್ಲಾನ್ ಘೊಷಣೆ ಮಾಡಿದೆ. ಇದಕ್ಕೆ ಸೆಡ್ಡು ಹೊಡೆಯುವಂತೆ ಏರ್‌ಟೆಲ್ ಪ್ರತಿ ನಿತ್ಯ 3.5GB 4G ಡೇಟಾವನ್ನು ಬಳಕೆದಾರರಿಗೆ ನೀಡುವ ಪ್ಲಾನ್‌ವೊಂದನ್ನು ಘೋಷಣೆ ಮಾಡಿದೆ.

ಓದಿರಿ: ಹೊಸ ವರ್ಷಕ್ಕೆ ಗ್ರಾಹಕರಿಗೆ ಶಾಕ್ ಕೊಟ್ಟ BSNL: ಗ್ರಾಹಕರನ್ನು ಕಳೆದುಕೊಳ್ಳುತ್ತಾ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿತ್ಯ 3.5GB ಡೇಟಾ:

ನಿತ್ಯ 3.5GB ಡೇಟಾ:

ಏರ್‌ಟೆಲ್ ತನ್ನ ಗ್ರಾಹಕರಿಗೆ ಜಿಯೋವನ್ನು ಮೀರಿಸುವಂತಹ ಪ್ಲಾನ್‌ ಘೋಷಣೆ ಮಾಡಿದ್ದು, ಇದರಲ್ಲಿ ಪ್ರತಿ ನಿತ್ಯ 3.5GB 3G/4G ಡೇಟಾವನ್ನು ಬಳಕೆಗೆ ನೀಡಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಇದಕ್ಕಾಗಿ ಗ್ರಾಹಕರು ರೂ. 799 ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ಉಚಿತ ಕರೆ ಮಾಡುವ ಸೇವೆ:

ಉಚಿತ ಕರೆ ಮಾಡುವ ಸೇವೆ:

ಇದಲ್ಲದೇ ಈ ಹೊಸ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್‌ ಕರೆಗಳನ್ನು ಉಚಿತವಾಗಿ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಪ್ರತಿ ನಿತ್ಯ ಗ್ರಾಹಕರು 100 SMSಗಳನ್ನು ಉಚಿತವಾಗಿ ಸೆಂಡ್ ಮಾಡಬಹುದಾಗಿ. ಇದರೊಂದಿಗೆ ಏರ್‌ಟೆಲ್ ಆಪ್‌ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಜಿಯೋಗೆ ಸೆಡ್ಡು:

ಜಿಯೋಗೆ ಸೆಡ್ಡು:

ಇದೇ ಮಾದರಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ರೂ. 799ಗೆ ಪ್ರತಿ ನಿತ್ಯ 3GB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಗೆ ನೀಡಲಿದೆ. ಆದರೆ ಏರ್‌ಟೆಲ್ ಜಿಯೋಗೆ ಸೆಡ್ಡು ಹೊಡೆಯುವಂತೆ ರೂ.799ಕ್ಕೆ ಪ್ರತಿ ನಿತ್ಯ 3.5GB ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ. ಇದರಿಂದಾಗಿ 14GB ಡೇಟಾವನ್ನು ಏರ್‌ಟೆಲ್‌ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಮಾರುಕಟ್ಟೆ ತಂತ್ರ:

ಮಾರುಕಟ್ಟೆ ತಂತ್ರ:

ಈಗಾಗಲೇ ಜಿಯೋ ಆರಂಭದ ನಂತರದಲ್ಲಿ ಹೆಚ್ಚಿನ ಬಳಕೆದಾರರನ್ನು ಕಳೆದುಕೊಂಡಿದ್ದ ಏರ್‌ಟೆಲ್, ಸದ್ಯ ಕಳೆದ ಕೆಲವು ದಿನಗಳಿಂದ ಗ್ರಾಹಕರನ್ನು ಮತ್ತೆ ಹಿಂದಕ್ಕೆ ಪಡೆಯುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ ಈ ಮಾದರಿಯಲ್ಲಿ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Airtel Takes on Jio With Updated Rs. 799 Pack That Offers 3.5GB Data per Day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot