ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಏರ್‌ಟೆಲ್..!!!

Written By:

ಭಾರ್ತಿ ಏರ್‌ಟೆಲ್ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಾಂಪಿಟೆಷನ್ ಕಮಿಷನ್ ನಿಂದ ಮತ್ತೊಂದು ಟೆಲಿಕಾಂ ಟೆಲಿನಾರ್ ಜೊತೆಗೆ ವಿಲೀನವಾಗಲು ಅನುಮತಿಯನ್ನು ಪಡೆದುಕೊಂಡಿದೆ. ಈಗಾಗಲೇ ಏರ್‌ಟೆಲ್ - ಟೆಲಿನಾರ್ ವಿಲೀನಕ್ಕೆ ಸೆಬಿ, ಬಿಎಸ್ಇ ಮತ್ತು ಎನ್ಎಸ್ಇ ನಿಂದ ಒಪ್ಪಿಗೆಯೂ ದೊರೆತಿದ್ದು, ಶೀಘ್ರವೆ ವಿಲೀನ ಪ್ರಕ್ರಿಯೇ ನಡೆಯಲಿದೆ.

ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಏರ್‌ಟೆಲ್..!!!

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

ಈ ಕುರಿತು ಫೆ.2017ನಲ್ಲಿಯೇ ಘೋಷನೆಯನ್ನು ಮಾಡಿದ್ದ ಏರ್‌ಟೆಲ್, ಟೆಲಿನಾರ್ ಸೌತ್ ಏಷ್ಯಾ ಇನ್‌ವೆಸ್ಟ್‌ಮೆಂಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಈ ಒಪ್ಪಂದಂತೆ ಏರ್‌ಟೆಲ್ ಕಂಪನಿಯೂ ಟೆಲಿನಾರ್ ಇಂಡಿಯಾದ 7 ಸರ್ಕಲ್ ಗಳನ್ನು ತನ್ನದಾಗಿಸಿಕೊಳ್ಳುತ್ತಿತ್ತು.

ಆಂಧ್ರಪ್ರದೇಶ, ಬಿಹಾರ್, ಮಹಾರಾಷ್ಟ್ರ, ಗುಜಾರಾತ್, ಉತ್ತರ ಪ್ರದೇಶ(ಪೂರ್ವ) ಮತ್ತು ಉತ್ತರ ಪ್ರದೇಶ (ದಕ್ಷಿಣ) ಮತ್ತು ಅಸ್ಸಾಂ ಇದರಲ್ಲಿ ಸೇರಿದೆ. ಈ ಸರ್ಕಲ್ ಗಳಲ್ಲಿ ದೇಶದ ಅತೀ ಹೆಚ್ಚು ಜನ ಸಂಖ್ಯೆಯನ್ನು ಕಾಣಬಹುದಾಗಿದೆ. ಅಲ್ಲದೇ ಬೆಳವಣಿಗೆಯ ದರವೂ ಇಲ್ಲಿಯೇ ಹೆಚ್ಚಾಗಿದೆ.

ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಏರ್‌ಟೆಲ್..!!!

ಓದಿರಿ: ಜಿಯೋ ಎಂದರೆ ಮೂಗು ಮುರಿಯುವವರೆ ಇಲ್ಲಿ ನೋಡಿ..!! ಜಿಯೋ ಯಾಕೆ ಬೆಸ್ಟ್ ಎಂದು..

ಹಾಗಾಗಿ ಈ ಭಾಗದಲ್ಲಿ ಹೆಚ್ಚಿನ ಹಿಡಿತವನ್ನು ಸಾಧಿಸುವ ಸಲುವಾಗಿ ಏರ್‌ಟೆಲ್ ಟೆಲಿನಾರ್ ಅನ್ನು ತನ್ನೊಂದಿಗೆ ವಿಲೀನ ಮಾಡಿಕೊಳ್ಳಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಒಂದು ಒಪ್ಪಂದವು ಸುಮಾರು ರೂ. 1,800 ಕೋಟಿಗಳಿಂದ 2,000 ಕೋಟಿ ವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿದ್ದು, ಆದರೆ ಯಾವುದೇ ಅಧಿಕೃತ ಮಾಹತಿಗಳು ಈ ಕುರಿತಂತೆ ಲಭ್ಯವಾಗಿಲ್ಲ.

Read more about:
English summary
Airtel will acquire Telenor India's running operations in seven circles. to konw more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot