Subscribe to Gizbot

GST ಜಾರಿಯಾದರೆ ಸ್ಮಾರ್ಟ್‌ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

By: srinidhi

GST ಜಾರಿಯಾದರೆ ಎಲೆಕ್ಟ್ರಾನಿಕ್ಸ್ ಲೋಕದ ಮೇಲೆ ಆಗುವ ಪರಿಣಾಮಗಳನ್ನು ನೋಡುವುದಾರೆ ಹಲವು ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ ಇನ್ನು ಕೆಲವು ವಸ್ತುಗಳ ಬೆಲೆಯೂ ಹೆಚ್ಚುವ ಸಾಧ್ಯತೆ ಇದೆ. ಇದೇ ಜುಲೈ 1 ರಿಂದ ದೇಶದಲ್ಲಿ GST ಜಾರಿಯಾಗಲಿದ್ದು, ಕೇಂದ್ರ ಸರಕಾರ ಈ ಕುರಿತು ತಯಾರಿ ನಡೆಸಿದೆ.

GST ಜಾರಿಯಾದರೆ ಸ್ಮಾರ್ಟ್‌ಫೋನ್ ಬೆಲೆ ಏನಾಗಲಿದೆ..?

ಓದಿರಿ: ಆಪಲ್ ಮಾಡಿದರುವ 6 ಘೋಷಣೆಗಳನ್ನು ನೀವು ತಿಳಿಯಲೇ ಬೇಕು..!!

GST ಜಾರಿಗೆ ಕುರಿತಂತೆ ಸಾಕಷ್ಟು ವಾದ ಪ್ರತಿವಾದಗಳು ಕೇಳಿಬರುತ್ತಿದೆ. GST ಯಲ್ಲಿ ಒಟ್ಟು 5 ವರ್ಗದಲ್ಲಿ ಟ್ಯಾಕ್ಸ್ ಅನ್ನು ನಿರ್ಧರಿಸಲಾಗುತ್ತಿದ್ದು, ಶೂನ್ಯ ತೆರಿಗೆ, 5% ತೆರಿಗೆ, 12% ತೆರಿಗೆ, 18 % ತೆರಿಗೆ ಮತ್ತು 28 % ತೆರಿಗೆಯನ್ನು ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತದೆ. ಈ ಹಿನ್ನಲೆಯಲ್ಲಿ GST ಜಾರಿಗೆ ಬಂದರೆ ಯಾವ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ, ಯಾವುದರ ಬೆಲೆ ಇಳಿಕೆಯಾಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಓದಿರಿ: ಭಾರತದಲ್ಲಿ ತಯಾರಾಗುವ ಐಫೋನ್ ಬೆಲೆ ಕಡಿಮೆ ಇರಲಿದೆ: ಅದಕ್ಕೂ ಕಾರಣ ಇದೆ...!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
GST ಜಾರಿಯಿಂದ ಸ್ಮಾರ್ಟ್‌ಫೋನ್ ಬೆಲೆಯ ಮೇಲಾಗುವ ಪರಿಣಾಮ:

GST ಜಾರಿಯಿಂದ ಸ್ಮಾರ್ಟ್‌ಫೋನ್ ಬೆಲೆಯ ಮೇಲಾಗುವ ಪರಿಣಾಮ:

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಒಟ್ಟು 13.5 % ಟ್ಯಾಕ್ಸ್ ಬಿಳುತ್ತಿದೆ. ಅದೇ ಮಾದರಿಯಲ್ಲಿ GST ಜಾರಿಗೆ ಬಂದರೆ 12% ರಷ್ಟು ತೆರಿಗೆ ಬಿಳಲಿದ್ದು, ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕೊಂಚ ಮಟ್ಟದ ಇಳಿಕೆಯನ್ನು ಕಾಣಬಹುದಾಗಿದೆ. ಇದಲ್ಲದೇ ಸರಕಾರ ಮೇಕ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ಘೋಷಿಸುವ ಸಾಧ್ಯತೆಯೂ ಇದೆ.

ಕ್ಯಾಮೆರಾ, ಸ್ಪೀಕರ್, ಮಾನಿಟರ್, ಟಿವಿಗಳ ಮೇಲಾಗುವ ಪರಿಣಾಮ:

ಕ್ಯಾಮೆರಾ, ಸ್ಪೀಕರ್, ಮಾನಿಟರ್, ಟಿವಿಗಳ ಮೇಲಾಗುವ ಪರಿಣಾಮ:

ಪಾಯಿಂಟ್ ಅಂಡ್ ಶೂಟ್ ಮತ್ತು DSLR ಕ್ಯಾಮೆರಾ, ಟಿವಿ, ಸ್ಪೀಕರ್, ಕಂಪ್ಯೂಟರ್ ಮತ್ತು ಮಾನಿಟರ್ ಗಳು 18% ಟ್ಯಾಕ್ಸ್ ವರ್ಗಕ್ಕೆ ಬರಲಿದ್ದು, ಹೀಗಾಗಿ ಜುಲೈ 1 ರಿಂದ ಇವುಗಳ ಬೆಲೆಯಲ್ಲಿ ಸ್ವಲ್ಪಮಟ್ಟದ ಏರಿಕೆಯನ್ನು ನಾವು ಕಾಣಬಹುದಾಗಿದೆ. ಲ್ಯಾಪ್ ಟಾಪ್ ಬೆಲೆಯಲ್ಲಿಯೂ ತೀರಾ ಹೆಚ್ಚಲ್ಲದಿದ್ದರು ಕೊಂಚ ಏರಿಕೆಯಾಗಲಿದೆ.

ಟೆಲಿಕಾಮ್ ಮತ್ತ ಡಿಟಿಹೆಚ್ ಸೇವೆಗಳ ಮೇಲಾಗುವ ಪರಿಣಾಮ:

ಟೆಲಿಕಾಮ್ ಮತ್ತ ಡಿಟಿಹೆಚ್ ಸೇವೆಗಳ ಮೇಲಾಗುವ ಪರಿಣಾಮ:

ಸದ್ಯ ಟೆಲಿಕಾಮ್ ಮತ್ತು ಡಿಟಿಹೆಚ್ ಸೇವೆಗಳು 14% ಟ್ಯಾಕ್ಸ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, GST ಜಾರಿಯಾದ ನಂತರದಲ್ಲಿ ಇವುಗಳ ಮೇಲೆ 18% ಟ್ಯಾಕ್ಸ್ ಬಿಳಲಿದೆ. ಇದು ನೀವು ಪಾವತಿ ಮಾಡುವ ಬಿಲ್ ಗಳ ಮೇಲೆ ವಿಧಿಸುವ ದರವಾಗಿದೆ. ಸದ್ಯ ನೀವು 100 ರೂ. ರಿಚಾರ್ಜ್ ಮಾಡಿಸಿದರೆ 85 ರೂ.ಗಳ ಟಾಕ್‌ಟೈಮ್ ದೊರೆಯುತ್ತಿದೆ. ಮುಂದೆ 82 ರೂ. ಮಾತ್ರವೇ ದೊರೆಯಲಿದೆ.

ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯ ಮೇಲಾಗುವ ಪರಿಣಾಮ:

ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯ ಮೇಲಾಗುವ ಪರಿಣಾಮ:

ಎಲೆಕ್ಟ್ರಾನಿಕ್ ಉತ್ಪನ್ನಗಳಾದ ವಾಷಿಂಗ್ ಮಿಷಿನ್, ರೆಫ್ರಿಜಿರೇಟರುಗಳು, ವ್ಯಾಕ್ಯೂಮ್ ಕ್ಲಿನರ್ಗಳು, ಶೇಷರ್ ಗಳು, ಟ್ರಿಮರ್ ಗಳು, ಡಿಶ್ ವಾಷರ್‌ಗಳು, ವಾಟರ್ ಹಿಟರ್ ಗಳು, ಮಿಕ್ಸಿ, ಟೋಷ್ಟರ್ ಗಳು 28% ಟ್ಯಾಕ್ಸ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಇವುಗಳ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳು ತೀರಾ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Here’s a look at electronic products that are set to get cheaper, and ones that will be dearer after GST is implemented. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot