ಏರ್‌ಟೆಲ್‌ನಿಂದ ಹೊಸ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.100Mbps ವೇಗ!

|

ದೇಶದ ಬ್ರಾಡ್‌ಬ್ಯಾಂಡ್‌ ಕ್ಷೇತ್ರಕ್ಕೆ ಜಿಯೋ ಗಿಗಾಫೈಬರ್ ಹೊಸದಾಗಿ ಎಂಟ್ರಿ ಕೊಟ್ಟಿದ್ದು, ಅಗ್ಗದ ದರದಲ್ಲಿ ಆರಂಭಿಕ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ಹಾಗೆಯೇ ಬಿಎಸ್‌ಎನ್‌ಎಲ್‌, ಏರ್‌ಟೆಲ್, ವೊಡಾಫೋನ್, ಆಕ್ಟ್‌(ಎಸಿಟಿ) ಸೇರಿದಂತೆ ಇತರೆ ಬ್ರಾಂಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಸಹ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ಘೋಷಿಸಿದವು. ಅದೇ ಹಾದಿಯಲ್ಲಿ ಏರ್‌ಟೆಲ್‌ ಸಂಸ್ಥೆಯು ಅಗ್ಗದ ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಅನಿಯಮಿತ ಡೇಟಾ ನೀಡಲು ಮುಂದಾಗಿದೆ.

ಏರ್‌ಟೆಲ್ ಸಂಸ್ಥೆ

ಹೌದು, ಜನಪ್ರಿಯ ಏರ್‌ಟೆಲ್ ಸಂಸ್ಥೆಯು 799ರೂ.ಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಅನ್ನು ಸಾಕಷ್ಟು ಅಪ್‌ಗ್ರೇಡ್‌ ಮಾಡಿ ಪರಿಚಯಿಸಿದ್ದು, ಈ ಪ್ಲ್ಯಾನ್‌ನಲ್ಲಿ ಗ್ರಾಹಕರಗೆ ಅನಿಯಮಿತ ಡೇಟಾ ಬಳಕೆ ಲಭ್ಯವಾಗಲಿದೆ. ಹಾಗೆಯೇ ಇಂಟರ್ನೆಟ್ ಬಳಕೆಯ ವೇಗವು 100Mbps ಸಾಮರ್ಥ್ಯದಲ್ಲಿರಲಿದ್ದು, (FUP) ಡೇಟಾ ಬಳಕೆಯ ಮೀತಿಯಲ್ಲಿಯು ಸಡಲಿಕೆ ಮಾಡಿದೆ. ಹಾಗಾದರೇ ಏರ್‌ಟೆಲ್‌ನ ಅಪ್‌ಗ್ರೇಡ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

100Mbps ವೇಗ

100Mbps ವೇಗ

ರಿಲಯನ್ಸ್ ಜಿಯೋ ಫೈಬರ್‌ನಂತೆಯೇ, ಏರ್‌ಟೆಲ್ ಸಹ ತನ್ನ ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿ 100Mbps ವೇಗವನ್ನು ನೀಡುವುದಾಗಿ ತಿಳಿಸಿದ್ದು, ಆರಂಭಿಕ 799ರೂ. ಪ್ಲ್ಯಾನಿನ ಗ್ರಾಹಕರಿಗೂ ಲಭ್ಯವಾಗಲಿದೆ. ಹಾಗೆಯೇ ಆಯ್ದ ವ್ಯಾಪ್ತಿಯಲ್ಲಿ ಅನಿಯಮಿತ ಡೇಟಾ ಬಳಕೆಯ ಪ್ರಯೋಜನ ಸಹ ಗ್ರಾಹಕರಿಗೆ ದೊರೆಯಲಿದೆ. ಎಂಟರ್‌ಟೈನಮೆಂಟ್‌ ಪ್ಲ್ಯಾನ್‌, ಪ್ರೀಮಿಯಂ ಪ್ಲ್ಯಾನ್‌ ಮತ್ತು ವಿಐಪಿ ಪ್ಲ್ಯಾನ್‌ಗಳು ಭಿನ್ನ ವೇಗವನ್ನು ಪಡೆದಿವೆ.

ಏರ್‌ಟೆಲ್‌ ಬೇಸಿಕ್ ಪ್ಲ್ಯಾನ್‌

ಏರ್‌ಟೆಲ್‌ ಬೇಸಿಕ್ ಪ್ಲ್ಯಾನ್‌

ಏರ್‌ಟೆಲ್‌ನ ಹೊಸ ಬ್ರಾಡ್‌ಬ್ಯಾಂಡ್ ಬೇಸಿಕ್ ಪ್ಲ್ಯಾನ್‌ 799 ರೂ.ಗಳಾಗಿದ್ದು, ಇದು 100 ಎಂಬಿಪಿಎಸ್ ವೇಗವನ್ನು 150 ಜಿಬಿ ವರೆಗೆ ನೀಡುತ್ತದೆ. ಎಫ್‌ಯುಪಿ ಮಿತಿಯ ನಂತರ, ವೇಗವನ್ನು 1 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ ಮತ್ತು ಈ ಯೋಜನೆಯು ಯಾವುದೇ ಒಟಿಟಿ ಸೇವಾ ಚಂದಾದಾರಿಕೆಗಳೊಂದಿಗೆ ರವಾನಿಸುವುದಿಲ್ಲ. ಭಾರ್ತಿ ಏರ್‌ಟೆಲ್ ಬಳಕೆದಾರರು ವಿಷಯವನ್ನು ಉಚಿತವಾಗಿ ವೀಕ್ಷಿಸಲು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಮಾತ್ರ ಪ್ರವೇಶ ಪಡೆಯುತ್ತಾರೆ. ಬ್ರಾಡ್‌ಬ್ಯಾಂಡ್ ಡೇಟಾದ ಜೊತೆಗೆ, ಏರ್‌ಟೆಲ್ ಗ್ರಾಹಕರ ಮನೆಯಲ್ಲಿ ಲ್ಯಾಂಡ್‌ಲೈನ್ ಸಂಪರ್ಕವನ್ನು ಸಹ ಸ್ಥಾಪಿಸುತ್ತದೆ.

ಏರ್‌ಟೆಲ್‌ ಎಂಟರ್‌ಟೈನಮೆಂಟ್‌ ಪ್ಲ್ಯಾನ್‌

ಏರ್‌ಟೆಲ್‌ ಎಂಟರ್‌ಟೈನಮೆಂಟ್‌ ಪ್ಲ್ಯಾನ್‌

ಏರ್‌ಟೆಲ್‌ನ 999 ರೂ.ಗಳ ಏರ್‌ಟೆಲ್‌ ಎಂಟರ್‌ಟೈನಮೆಂಟ್‌ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ 200 Mbps ವರೆಗೆ ವೇಗವನ್ನು ನೀಡುತ್ತದೆ. ಈ ಬ್ರಾಡ್‌ಬ್ಯಾಂಡ್ ಯೋಜನೆಯ ಎಫ್‌ಯುಪಿ ಮಿತಿ 300 ಜಿಬಿ ಆಗಿದೆ. ಇದರೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದೆ. ಉಚಿತ ಲ್ಯಾಂಡ್‌ಲೈನ್ ಸಂಪರ್ಕದೊಂದಿಗೆ ಬರುತ್ತದೆ ಹಾಗೂ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

ಏರ್‌ಟೆಲ್ ಪ್ರೀಮಿಯಂ ಪ್ಲ್ಯಾನ್‌

ಏರ್‌ಟೆಲ್ ಪ್ರೀಮಿಯಂ ಪ್ಲ್ಯಾನ್‌

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಈ ಯೋಜನೆಯು 300 ಎಮ್‌ಬಿಪಿಎಸ್ ವರೆಗೆ ವೇಗವನ್ನು ನೀಡುತ್ತದೆ ಮತ್ತು ಮಾಸಿಕ ಎಫ್‌ಯುಪಿ ಮಿತಿ 500 ಜಿಬಿ ನೀಡುತ್ತದೆ. ಏರ್‌ಟೆಲ್‌ ಎಂಟರ್ಟೈನ್ಮೆಂಟ್ ಯೋಜನೆಯಂತೆಯೇ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಚಂದಾದಾರಿಕೆಗಳಂತಹ ಪ್ರಯೋಜನಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲಭ್ಯವಾಗುತ್ತವೆ. ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ಧ್ವನಿ ಕರೆ ಪ್ರಯೋಜನ ಲಭ್ಯ. ಈ ಪ್ಲ್ಯಾನ್‌ ದರವು ತಿಂಗಳಿಗೆ 1,499 ರೂ.ಆಗಿದೆ.

ಏರ್‌ಟೆಲ್‌ ವಿಐಪಿ ಪ್ಲ್ಯಾನ್

ಏರ್‌ಟೆಲ್‌ ವಿಐಪಿ ಪ್ಲ್ಯಾನ್

ಏರ್‌ಟೆಲ್‌ನ ಈ ವಿಐಪಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಬೆಲೆಯು 3,999ರೂ.ಗಳಾಗಿದೆ. ಗ್ರಾಹಕರಿಗೆ 1 ಜಿಬಿಪಿಎಸ್ (1 Gbps) ವೇಗದಲ್ಲಿ ಇಂಟರ್ನೆಟ್ ಸೇವೆ ಸಿಗಲಿದ್ದು, ಹಾಗೆಯೇ ತಿಂಗಳ ಡೇಟಾವನ್ನು ಬಳಕೆಯನ್ನು 3.3TB ವರೆಗೂ ನೀಡಲಾಗಿದೆ. ಏರ್‌ಟೆಲ್ ಥ್ಯಾಂಕ್ಸ್ ಪ್ಲ್ಯಾಟಿನಮ್ ಶ್ರೇಣಿಯ ಎಲ್ಲಾ ಪ್ರಯೋಜನಗಳನ್ನು ಸಹ ಹೊಂದಿದೆ ಮತ್ತು ಗ್ರಾಹಕರಿಗೆ ಉಚಿತ ಲ್ಯಾಂಡ್‌ಲೈನ್ ದೂರವಾಣಿಯನ್ನು ಸಹ ಒದಗಿಸಲಾಗುವುದು.

Best Mobiles in India

English summary
Airtel now has a 100 Mbps broadband plan at just Rs 799, but the FUP limit is still on the lower side at 150GB. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X