Just In
- 18 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 21 hrs ago
Tech News of this Week; ಜಿಯೋ ಹಿಂದಿಕ್ಕಿದ ಏರ್‌ಟೆಲ್, ಹೆಚ್ಚು ಸೇಲ್ ಆದ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- News
ಬೆಂಗಳೂರು ಏರ್ಪೋರ್ಟ್ನಲ್ಲಿ ವನ್ಯಜೀವಿಗಳ ಕಳ್ಳಸಾಗಣೆ; ಮಹಿಳೆ ಸೇರಿ ಏಳು ಮಂದಿ ಬಂಧನ
- Movies
ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್‌ನಿಂದ ಅನಿಯಮಿತ 'ಹಲೋ ಟ್ಯೂನ್' ಆಯ್ಕೆ!..ಜಿಯೋಗೆ ನೇರಾನೇರ ಫೈಟ್!
ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಎಂಟ್ರಿ ಕೊಟ್ಟಾಗಿನಿಂದ ಊಹೆಗೂ ನಿಲುಕದ ಹಲವು ಬದಲಾವಣೆಗಳು ದೇಶದ ಟೆಲಿಕಾಂ ವಲಯದಲ್ಲಿ ಕಂಡಿವೆ. ಜಿಯೋ ಅಗ್ಗದ ಬೆಲೆಯಲ್ಲಿ ಸೇವೆ ನೀಡಲಾರಂಭಿಸಿದ್ದೆ ತಡ, ಮಾರುಕಟ್ಟೆಯಲ್ಲಿ ಇತರೆ ಟೆಲಿಕಾಂ ಸಂಸ್ಥೆಗಳು ಸ್ಪರ್ಧೆಗೆ ಇಳಿದು ದರಸಮರ ಶುರುಮಾಡಿದವು. ಈಗಲೂ ಜಿಯೋ ಓಟಕ್ಕೆ ಲಗಾಮು ಹಾಕಲೂ ಹವಣಿಸುತ್ತಿದ್ದು, ಆದರೆ ಸದ್ಯ 'ಏರ್‌ಟೆಲ್' ಸಂಸ್ಥೆ ಜಿಯೋಗೆ ನೇರಾನೇರ ಎದುರಾಳಿ ಎನಿಸಿಕೊಂಡಿದೆ.

ಹೌದು, ಜಿಯೋ ಹಲವು ಸೇವೆಗಳನ್ನು ನೀಡಿದ್ದು, ಅದರಲ್ಲಿ ಹಲೋ ಟ್ಯೂನ್ ಅನ್ನು ಉಚಿತವಾಗಿ ತನ್ನ ಎಲ್ಲ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದ್ದು, ಯಾವಾಗ ಬೇಕಾದರೂ ಸಾಂಗ್ ಬದಲಿಸಿಕೊಳ್ಳುವ ಅವಕಾಶ ನೀಡಿದೆ. ಈಗ ಏರ್‌ಟೆಲ್ ಕಂಪನಿ ಸಹ ತನ್ನ ಬಳಕೆದಾರರಿಗೆ ಅನಿಯಮಿತ ಹಲೋ ಟ್ಯೂನ್ ಸೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದು, ಜಿಯೋಗೆ ಭಾರಿ ಪೆಟ್ಟು ಕೊಡಲಿದೆ.

ಏರ್‌ಟೆಲ್‌ನ Wynk ಮ್ಯೂಸಿಕ್ ಆಪ್ ಮೂಲಕ ಬಳಕೆದಾರರು ತಮ್ಮ ನಂಬರ್‌ಗೆ ಹಲೋ ಟ್ಯೂನ್ ಸೆಟ್ ಮಾಡಿಕೊಳ್ಳಬಹುದಾಗಿದ್ದು, ಯಾವಾಗ ಬೇಕಾದರೂ ಹೆಲೋ ಟ್ಯೂನ್ ಅನ್ನು ಬದಲಾಯಿಸಿಕೊಳ್ಳಬಹುದು. ಈ ಆಪ್‌ನಲ್ಲಿ ಸುಮಾರು 1 ಮಿಲಿಯನ್ ಹಾಡುಗಳಿದ್ದು, ಇದರೊಂದಿಗೆ 15 ಭಾಷೆಗಳ ಆಯ್ಕೆ ಸಹ ನೀಡಲಾಗಿದೆ. ಹಾಗಾದರೇ ಏರ್‌ಟೆಲ್‌ನ ಹಲೋ ಟ್ಯೂನ್ ಇತರೆ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹಲೋ ಟ್ಯೂನ್
ಹೆಲೋ ಟ್ಯೂನ್ ಯಾರಾದರು ಕರೆ ಮಾಡಿದಾಗ ರಿಂಗಣ ಬದಲಿಗೆ ಹಾಡು ಕೇಳಿಸುವ ಸೇವೆ ಆಗಿದೆ. ಆರಂಭದ ದಿನಗಳಲ್ಲಿ ಬಳಕೆದಾರರು ತಮ್ಮ ನಂಬರ್‌ಗೆ ಹಲೋ ಟ್ಯೂನ್ ಹಾಕಿಸಿಕೊಳ್ಳಲು ತಿಂಗಳಿಗೆ ಸುಮಾರು 40ರೂ.ಗಳಿಂದ 45ರೂ.ಗಳ ವರೆಗೂ ಶುಲ್ಕ ವ್ಯಯಿಸಬೇಕಿತ್ತು. ಒಂದು ಭಾರಿ ಹಾಡು ಸೆಟ್ ಮಾಡಿದರೇ ಮುಗಿತು. ಮತ್ತೆ ಬೇರೆ ಹಾಡು ಸೆಟ್ ಮಾಡಲು ಎಕ್ಸ್‌ಟ್ರಾ 15ರೂ. ಹಾಡು ಬದಲಾವಣೆ ಶುಲ್ಕ ನೀಡಬೇಕಿತ್ತು.

ಏರ್‌ಟೆಲ್ ಹಲೋ ಟ್ಯೂನ್ ಸೇವೆ
ಹಲೋ ಟ್ಯೂನ್‌ಗೆ ಶುಲ್ಕ ವಿಧಿಸುವ ಪರಂಪರೆಯನ್ನು ಬದಲಿಸಿದ ಜಿಯೋ ತನ್ನ ಎಲ್ಲ ಬಳಕೆದಾರರಿಗೆ ಉಚಿತ ಹಲೋ ಟ್ಯೂನ್ ಸೇವೆ ನೀಡುತ್ತಿದೆ. ಈಗ ಇದೇ ಹಾದಿ ಹಿಡಿದಿರುವ ಏರ್‌ಟೆಲ್ ಸಂಸ್ಥೆಯು ಸಹ ತನ್ನ ಬಳಕೆದಾರರಿಗೆ ಅನಿಯಮಿತವಾಗಿ ಹಲೋ ಸಾಂಗ್ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಜಿಯೋಗೆ ಪೈಪೋಟಿ ನೀಡಲು Wynk ಮ್ಯೂಸಿಕ್ ಆಪ್ ಮೂಲಕ ಹಾಡು ಬದಲಿಸುವ ಅವಕಾಶ ನಿಡಿದೆ.

Wynk ಮ್ಯೂಸಿಕ್ ಆಪ್
ಏರ್‌ಟೆಲ್ ಹಲೋ ಟ್ಯೂನ್ ಚಂದಾದಾರರು ಕಂಪನಿಯ Wynk ಮ್ಯೂಸಿಕ್ ಆಪ್ ಮೂಲಕ ಹಾಡುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಯಾವಾಗ ಬೇಕಾದರೂ ಮತ್ತು ಎಷ್ಟು ಸಲವಾದರೂ ಹಾಡುಗಳನ್ನು ಬದಲಾಯಿಸಿಕೊಳ್ಳಬಹುದಾದ ಸೌಲಭ್ಯ ಇರಲಿದೆ. ಜಿಯೋ ಸಂಸ್ಥೆಯು ತನ್ನ ಜಿಯೋ ಮ್ಯೂಸಿಕ್ ಮೂಲಕ ಹಲೋ ಟ್ಯೂನ್ ಹಾಡು ಬದಲಾಯಿಸುವ ಆಯ್ಕೆ ನೀಡಿದೆ.

ಹಲೋ ಟ್ಯೂನ್ ಬೇಡವಾದರೇ
ಏರ್‌ಟೆಲ್ ಸಹ ಈಗ ಅನಿಯಮಿತವಾಗಿ ಹಲೋ ಟ್ಯೂನ್ ಬದಲಾವಣೆಗೆ ಅವಕಾಶ ನೀಡುತ್ತಿದ್ದು, ಬಳಕೆದಾರರಿಗೆ ಒಂದು ಖುಷಿ ತಂದಿದೆ. ಆದರೆ ಎಲ್ಲ ಬಳಕೆದಾರರು ಹಲೋ ಟ್ಯೂನ್ ಅನ್ನು ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ ಯಾವುದೇ ಹಾಡು ಬೇಡವಾಗಿರುತ್ತದೆ. ಹಲೋ ಟ್ಯೂನ್ ಬೇಡವೆಂದರೇ 155223 ನಂಬರಿಗೆ STOP ಎಂದು ಎಸ್‌ಎಮ್‌ಎಸ್ ಮಾಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470