Aiwa ದಿಂದ ರೆಟ್ರೋ ಲುಕ್‌ ಇರುವ ಸ್ಪೀಕರ್‌ ಲಾಂಚ್‌: ಬೆಲೆ 34,990ರೂ.!

|

Aiwa ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳಲ್ಲಿ ಇಂದಾಗಿದ್ದು, ಬಜೆಟ್‌ ಬೆಲೆಯಿಂದ ಹೈ ಎಂಡ್‌ ಗ್ಯಾಜೆಟ್‌ಗಳನ್ನು ಪರಿಚಯಿಸುತ್ತಾ ಬರುತ್ತಿದೆ. ಅದರಲ್ಲೂ ಈ ಕಂಪೆನಿಯ ಐಷಾರಾಮಿ ಹೆಡ್‌ಫೋನ್‌, ಇಯರ್‌ಫೋನ್‌ ಹಾಗೂ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಹೆಚ್ಚಿನ ಬೇಡಿಕೆಯೇ ಇದೆ. ಇದರ ಬೆನ್ನಲ್ಲೇ ಈಗ Aiwa ಮೆಟೇವ್ರ್ ಮಿ-X330 (Aiwa Meteor MI-X330) ಸ್ಪೀಕರ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದ್ದು, ದುಬಾರಿ ಬೆಲೆಯ ಗ್ಯಾಜೆಟ್‌ಗಳ ಪಟ್ಟಿಗೆ ಇದು ಸೇರಲಿದೆ.

ಸೋನಿ

ಹೌದು, ಸೋನಿ ಹಾಗೂ ಇನ್ನಿತರ ಪ್ರಮುಖ ಆಡಿಯೋ ಕಂಪೆನಿಗಳ ಸಾಲಿನಲ್ಲಿ Aiwa ಕಂಪೆನಿ ಸಹ ಇದ್ದು, ಇದೀಗ ತನ್ನ ಆಡಿಯೋ ವಿಭಾಗದಲ್ಲಿ ಹೊಸದಾಗಿ ಅತ್ಯುತ್ತಮ ಶ್ರೇಣಿಯ Aiwa ಮೆಟೇವ್ರ್ ಮಿ-X330 ಲಾಂಚ್‌ ಮಾಡಿದೆ. ಈ ಸ್ಪೀಕರ್‌ ಲೆದರ್ ಫಿನಿಶ್‌ನಿಂದ ಕೂಡಿದ್ದು, ಐಷಾರಾಮಿ ನೋಟವನ್ನು ಹೊಂದಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಿಸೈನ್‌ ಹೇಗಿದೆ?

ಡಿಸೈನ್‌ ಹೇಗಿದೆ?

Aiwa ಮೆಟೇವ್ರ್ ಮಿ-X330 ಸ್ಪೀಕರ್‌ನ್ನು ಎಲ್ಲಿಯಾದರೂ ಸಹ ಬಳಕೆ ಮಾಡಬಹುದಾಗಿದೆ. ಇದು ರೆಟ್ರೋ ಲುಕ್‌ ಜೊತೆಗೆ ನೋಡಲು ಹಳೇ ಕಾಲದ ಟೇಪ್‌ ರೆಕಾರ್ಡರ್‌ನಂತೆ ಕಾಣುತ್ತದೆಯಾದರೂ ಇದರ ಫೀಚರ್ಸ್‌ ಮಾತ್ರ ಅತ್ಯುತ್ತಮವಾದ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. ಇದರ ಬಾಹ್ಯ ಡಿಸೈನ್‌ ಅನ್ನು ಹೆಚ್ಚಿಗೆ ಮಾಡಲು ಲೆದರ್ ಫಿನಿಶ್ ಟಚ್‌ ಕೊಡಲಾಗಿದೆ.

ಸ್ಪೀಕರ್‌

ಈ ಸ್ಪೀಕರ್‌ ವುಡನ್‌ ಫಿಟ್‌ ಆಯ್ಕೆ ಹೊಂದಿದ್ದು ಹಗುರವಾಗಿದೆ. ಇನ್ನು ಇದರ ಮೇಲ್ಭಾಗದಲ್ಲಿ ಬಟನ್‌ಗಳ ಆಯ್ಕೆ ನೀಡಲಾಗಿದ್ದು, ಸ್ಪೀಕರ್‌ ಅನ್ನು ಹಿಡಿದುಕೊಳ್ಳಲು ಒಂದು ಹ್ಯಾಂಡಲ್‌ ಸಹ ಇದೆ. ಹಾಗೆಯೇ ಎರಡು ದೊಡ್ಡ ಬಟನ್‌ಗಳು ಇದರ ನೋಟವನ್ನು ಇನ್ನಷ್ಟು ಆಕರ್ಷಣೀಯಗೊಳಿಸಿವೆ. ಇದರ ಮುಂದೆ ವೃತ್ತಾಕಾರದ ಚಿಕ್ಕ ಎಲ್‌ಇಡಿ ಡಿಸ್‌ಪ್ಲೇ ನೀಡಲಾಗಿದ್ದು, ಇದರಲ್ಲಿ ಡಿವೈಸ್‌ನ ಬ್ಯಾಟರಿ ಪರ್ಸಂಟೇಜ್‌ ಹಾಗೂ ಹಾಡಿನ ಕೆಲವು ಮಾಹಿತಿಯನ್ನು ಕಾಣಬಹುದು.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಸ್ಪೀಕರ್‌ ಬ್ಲೂಟೂತ್ ಆವೃತ್ತಿ 5.0 ಹೊಂದಿದ್ದು, ಇದು 24 ಬಿಟ್ ಸಂಗೀತದ ಗುಣಮಟ್ಟ ನೀಡಲಿದೆ. ಹಾಗೆಯೇ ಇದರಲ್ಲಿ ಮುಂದೆ ಹಾಗೂ ಹಿಂದೆ ಎರಡು ಬೇಸ್ ರೇಡಿಯೇಟರ್‌ ಇರಿಸಲಾಗಿದೆ. ಇದರ ಜೊತೆಗೆ ಸ್ಪೀಕರ್‌ ಸಹ 40 ಎಂಎಂ ಸಕ್ರಿಯ ಆಡಿಯೊ ಡ್ರೈವರ್‌ ಫೀಚರ್ಸ್‌ ಪಡೆದಿದ್ದು, ಸಂಗೀತ ಪ್ರಿಯರಿಗೆ ಹೆಚ್ಚಿನ ಆನಂದ ಉಂಟಾಗಲಿದೆ. ಇದು ಟೈಪ್ - ಸಿ ಚಾರ್ಜಿಂಗ್ ಪಾಯಿಂಟ್ ಪೋರ್ಟ್‌ ಹೊಂದಿದೆ.

ಸ್ಪೀಕರ್‌

ಈ ಸ್ಪೀಕರ್‌ 60W ಔಟ್‌ಪುಟ್‌ ಸೌಂಡ್‌ ನೀಡಲಿದ್ದು, ವೃತ್ತಾಕಾರದ ಎಲ್ಇಡಿ ಡಿಸ್‌ಪ್ಲೇ ಮೂಲಕ ಸ್ಪೀಕರ್‌ನ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಕಂಟ್ರೋಲ್‌ ಬಟನ್‌ಗಳ ಜೊತೆಗೆ 3.5 ಎಂಎಂ AUX-in ಹೊಂದಿದ್ದು, ಎಲ್ಲಾ ರೀತಿಯ ಸ್ಮಾರ್ಟ್‌ ಡಿವೈಸ್‌ಗಳಿಗೆ ಸಂಪರ್ಕ ಕಲ್ಪಿಸಿಕೊಳ್ಳಬಹುದಾದ ಪೋರ್ಟ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ ಡಿವೈಸ್‌ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಟೈಪ್-ಸಿ ಚಾರ್ಜಿಂಗ್‌ ಕೇಬಲ್‌ ಮೂಲಕ 6 ರಿಂದ 7 ಗಂಟೆಗಳ ಕಾಲ ಚಾರ್ಜಿಂಗ್ ಮಾಡಿದರೆ 6 ರಿಂದ 10 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. ದೊಡ್ಡ ಸಾಮರ್ಥ್ಯದ ಬ್ಯಾಟರಿ ಇದರಲ್ಲಿ ಇರುವುದರಿಂದ ಮನೆ ಹೊರತುಪಡಿಸಿ ಔಟಿಂಗ್‌ ಹೋದಾಗ ಹಾಗೂ ಪಾರ್ಟಿ ಮಾಡುವ ಸಮಯಗಳಲ್ಲಿ ಬಳಕೆ ಮಾಡಿಕೊಳ್ಳಬಹುದು.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗೆ 34,990ರೂ. ನಿಗದಿ ಮಾಡಲಾಗಿದ್ದು, ಇದನ್ನು Aiwa ವೆಬ್‌ಸೈಟ್ ಹಾಗೂ ಇತರ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು. ಹಾಗೆಯೇ ಕ್ರೊಮಾ, ರಿಲಾಯನ್ಸ್‌ ಡಿಜಿಟಲ್‌ ಮತ್ತು Aiwa ಜೊತೆಗೆ ಪಾಲುದಾರಿಕೆ ಹೊಂದಿರುವ ಸ್ಟೋರ್‌ಗಳಲ್ಲಿ ರಿಯಾಯಿತಿ ದರದಲ್ಲಿ ಸ್ಪೀಕರ್ ಲಭ್ಯ ಇದೆ.

Best Mobiles in India

English summary
Aiwa is a leading electronics brand that has been introducing high-end gadgets. Now the high priced MI-X 330 speaker has been launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X