ಎಟಿಎಂನಲ್ಲಿ ಹಣ ತೆಗೆಯುವ ಮಿತಿ ಪೂರ್ಣ ರದ್ದು!!

Written By:

500 ಮತ್ತು 1000 ರೂ.ನೋಟು ರದ್ದಾದ ನಂತರ ವಿಧಿಸಲಾಗಿದ್ದ ಎಟಿಎಂನಲ್ಲಿ ಹಣ ತೆಗೆಯುವ ಮಿತಿಯನ್ನು ಆರ್‌ಬಿಐ ಪೂರ್ಣವಾಗಿ ತೆಗೆದುಹಾಕಿದೆ. ಮಾರ್ಚ್ 13 ನೇ ತಾರೀಖಿನಿಂದ ಎಟಿಎಂ ನಲ್ಲಿ ಹಣ ಡ್ರಾ ಮಿತಿ ಇರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. .

ಬುಧವಾರ ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮಿತಿಯನ್ನು ತೆಗೆಯಲಾಗಿದ್ದು, ಇನ್ನು ಹಣ ತೆಗೆಯಲು ಯಾವುದೇ ಮಿತಿ ಇಲ್ಲ ಎಂದು ಹೇಳಿದೆ. ಅರ್ಥವ್ಯವಸ್ಥಗೆ ಪೂರಕವಾದ ಹಣದ ಹರಿವು ಆರ್‌ಬಿಐ ನೀಡುತ್ತಿದ್ದು, ಇದರಿಂದ ಮುಂದೆ ಯಾವುದೇ ಹಣದ ಅಭಾವವಿರುವುದಿಲ್ಲ ಎಂದು ಹೇಳಿದೆ.

ಎಟಿಎಂನಲ್ಲಿ ಹಣ ತೆಗೆಯುವ ಮಿತಿ ಪೂರ್ಣ ರದ್ದು!!

ಮೋದಿ ಸರ್ಕಾರದಿಂದ ಬಡವರ ಖಾತೆಗೆ ನೇರ ಹಣ ವರ್ಗಾವಣೆ!!

ನೋಟು ರದ್ದಾದ ನಂತರ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಎಟಿಎಂನಲ್ಲಿ ಹಣ ಡ್ರಾ ಮಾಡುವುದಕ್ಕೆ ಮಿತಿ ಏರಿತ್ತು, ಪ್ರತಿ ದಿನ ಕೇವಲ 2 ಸಾವಿರ ರೂಗಳನ್ನು ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಹೇಳಿತ್ತು.

ಎಟಿಎಂನಲ್ಲಿ ಹಣ ತೆಗೆಯುವ ಮಿತಿ ಪೂರ್ಣ ರದ್ದು!!

ಇನ್ನು ಇದೇ ತಿಂಗಳು 1 ನೇ ತಾರೀಖು ಹಣ ಡ್ರಾ ಮಾಡುವ ಮಿತಿಯನ್ನು 10 ಸಾವಿರಕ್ಕೆ ಏರಿಸಿದ್ದ ಸರ್ಕಾರ ಇದೀಗ ಸಂಪೂರ್ಣ ಮಿತಿಯನ್ನು ಸಡಿಲಪಡಿಸಿದ್ದು. ಜನರು ಯಾವುದೇ ಮಿತಿಯಿಲ್ಲದೇ ಹಣ ಡ್ರಾ ಮಾಡಿಕೊಳ್ಳಬಹುದು.Read more about:
English summary
RBI said withdrawal limit for savings accounts would be increased to Rs 50,000 a week from Feb 20.to know more visit to kannada.gizbot.com
Please Wait while comments are loading...
Opinion Poll

Social Counting