ಏನು ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಾಗಿಯೇ ಇಲ್ಲವೇ?

By Shwetha
|

ನೀವು ಎಷ್ಟೇ ದುಬಾರಿ ಫೋನ್ ಕೊಂಡರೂ ಫೋನ್ ಚಾರ್ಜ್ ಮಾಡುವುದು ಹೆಚ್ಚು ತಲೆನೋವಿನ ಕೆಲಸ ಎಂದೇ ಫೋನ್ ಬಳಕೆದಾರರ ಅಭಿಪ್ರಾಯವಾಗಿರುತ್ತದೆ. ಎಷ್ಟೇ ಉತ್ತಮ ಗುಣಮಟ್ಟದ ಚಾರ್ಜರ್ ಖರೀದಿಸಿದರೂ ಒಮ್ಮೊಮ್ಮೆ ಫೋನ್‌ನಲ್ಲಿ ಚಾರ್ಜ್ ನಿಲ್ಲುವುದಿಲ್ಲ, ಇಲ್ಲವೇ ಬ್ಯಾಟರಿ ಗುಣಮಟ್ಟ ನಿರೀಕ್ಷಿಸಿದಷ್ಟು ಅತ್ಯುತ್ತಮವಾಗಿಲ್ಲ ಎಂಬುದೇ ಫೋನ್ ಬಳಕೆದಾರರ ಅಳಲಾಗಿದೆ.

ಓದಿರಿ: ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು

ಎಷ್ಟೇ ಒಳ್ಳೆಯ ಚಾರ್ಜರ್ ಕೂಡ ಒಮ್ಮೊಮ್ಮೆ ಕೈಕೊಡುತ್ತದೆ ಮತ್ತು ಫೋನ್‌ಗೆ ಚಾರ್ಜ್ ಮಾಡುವುದೇ ಬೇಡ ಎಂಬ ಬೇಸರವನ್ನು ನಿಮ್ಮಲ್ಲಿ ಉಂಟುಮಾಡುತ್ತದೆ. ಹಾಗಿದ್ದರೆ ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ. ಬರಿಯ ಚಾರ್ಜರ್ ಮಾತ್ರವೇ ಫೋನ್ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆಯೇ? ಇಷ್ಟೆಲ್ಲಾ ಚಿಂತೆಗಳು ನಿಮ್ಮನ್ನು ಕಾಡುತ್ತಿದೆಯೇ ಹಾಗಿದ್ದರೆ ಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಫೋನ್ ಕ್ಷೇತ್ರದಲ್ಲೇ ನಮ್ಮ ದೇಶದಿಂದ ಹೊಸ ಇತಿಹಾಸ ಸೃಷ್ಟಿ

ಕೆಳಗಿನ ಸ್ಲೈಡರ್‌ಗಳಲ್ಲಿ ಆ ವಿಧಾನಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಹ್ಯಾಂಡ್ ಕ್ರಾಂಕ್

ಹ್ಯಾಂಡ್ ಕ್ರಾಂಕ್

ಫ್ಲ್ಯಾಶ್‌ಲೈಟ್, ರೇಡಿಯೊಗಳನ್ನು ಈ ಹ್ಯಾಂಡ್ ಕ್ರಾಂಕ್ ಬಳಸಿ ಚಾರ್ಜ್ ಮಾಡಬಹುದು.

ವಿಂಡ್ ಟರ್ಬಿನ್

ವಿಂಡ್ ಟರ್ಬಿನ್

ಮಾರ್ಪಡಿಸಬಹುದಾದ ಕಂಪ್ಯೂಟರ್ ಫ್ಯಾನ್ ಬಳಸಿ ವಿಂಡ್ ಟರ್ಬಿನ್ ಚಾರ್ಜರ್ ಅನ್ನು ತಯಾರಿಸಲಾಗಿದೆ. ಆರು ಗಂಟೆಗಳ ಚಾರ್ಜಿಂಗ್ ಸಮಯವನ್ನು ಇದು ತೆಗೆದುಕೊಳ್ಳುತ್ತದೆ.

ಫೈರ್ ಸೈಡ್ ಚಾರ್ಜರ್

ಫೈರ್ ಸೈಡ್ ಚಾರ್ಜರ್

ಸೂಪ್ ಅನ್ನು ಬಿಸಿಮಾಡುವುದರ ಜೊತೆಗೆ ಫೋನ್ ಅನ್ನು ಚಾರ್ಜ್ ಮಾಡಬಹುದು.

ಸೂರ್ಯನ ಬೆಳಕು

ಸೂರ್ಯನ ಬೆಳಕು

ಯುಎಸ್‌ಬಿ ಪವರ್ ಉಳ್ಳ ಗ್ಯಾಜೆಟ್ಸ್ ಅನ್ನು ಚಾರ್ಜ್ ಮಾಡುತ್ತದೆ. ನಿಮ್ಮ ಡಿವೈಸ್ ಚಾರ್ಜ್ ಮಾಡಲು ಇದು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹಣ್ಣಿನ ತುಂಡು

ಹಣ್ಣಿನ ತುಂಡು

ಹೌದು ಹಣ್ಣು/ತರಕಾರಿ ಬಳಸಿ ಫೋನ್ ಚಾರ್ಜ್ ಮಾಡಬಹುದಾಗಿದೆ. ಜಿಂಕ್ ಮತ್ತು ಕೋಪರ್ ಅಂಶಗಳನ್ನು ಹಣ್ಣಿಗೆ ಸೇರಿಸಿ ಫ್ರುಟ್ ಚಾರ್ಜರ್ ತಯಾರಿಸಿ ನಿಮ್ಮ ಮೊಬೈಲ್‌ಗೆ ಚಾರ್ಜ್ ಮಾಡಬಹುದಾಗಿದೆ.

ಸಾಫ್ಟ್ ಡ್ರಿಂಕ್

ಸಾಫ್ಟ್ ಡ್ರಿಂಕ್

ಚೀನಾ ವಿನ್ಯಾಸಕಾರರು ತಂಪು ಪಾನೀಯವನ್ನು ಬಳಸಿ ಫೋನ್ ಚಾರ್ಜ್ ಮಾಡುವ ವಿಧಾನವನ್ನು ಕಂಡು ಹುಡುಕಿದ್ದಾರೆ. ವಿಶೇಷ ಸೆಲ್‌ಗೆ ನೀವು ತಂಪು ಪಾನೀಯವನ್ನು ಸುರಿಯಬೇಕು ಮತ್ತು ಸೋಡಾದಿಂದ ಬಿಡುಗಡೆಯಾಗುವ ಶಕ್ತಿಯನ್ನು ವಿಶೇಷ ಸೆಲ್ ಬಳಸಿ ಫೋನ್ ಅನ್ನು ಚಾರ್ಜಿಂಗ್ ಮಾಡುತ್ತದೆ.

ಆಹಾರ ಬೇಯಿಸಿ ಫೋನ್ ಕೂಡ ಚಾರ್ಜ್ ಮಾಡಿ

ಆಹಾರ ಬೇಯಿಸಿ ಫೋನ್ ಕೂಡ ಚಾರ್ಜ್ ಮಾಡಿ

ಪ್ಯಾನ್ ಚಾರ್ಜರ್ ಅನ್ನು ಜಪಾನೀ ಸಂಶೋಧಕರು ಕಂಡುಹುಡುಕಿದ್ದು, ಪ್ಯಾನ್‌ನಲ್ಲಿರುವ 100 ಸೆಲ್ಶಿಯಸ್ ಬಿಸಿಯಾಗುವಾಗ ಪವರ್ ಉತ್ಪತ್ತಿಯಾಗುತ್ತದೆ ನಂತರ ಈ ಶಕ್ತಿಯನ್ನು ಯುಎಸ್‌ಬಿ ಬಳಸಿ ಫೋನ್ ಚಾರ್ಜಿಂಗ್‌ಗೆ ಉಪಯೋಗಿಸಬಹುದು.

ಕಿರುಚಿ ಫೋನ್ ಚಾರ್ಜ್ ಮಾಡಿ

ಕಿರುಚಿ ಫೋನ್ ಚಾರ್ಜ್ ಮಾಡಿ

ಹೌದು ನಿಮ್ಮ ಕಿರುಚುವಿಕೆ ಕೂಡ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ನೀವು ಕಿರುಚಿದಾಗ ಧ್ವನಿಯಲ್ಲಿರುವ ವೈಬ್ರೇಶನ್ ಶಕ್ತಿಯನ್ನು ಉತ್ಪಾದಿಸುತ್ತದೆ.

Best Mobiles in India

English summary
Everyone can charge a smartphone using a charger; but have you ever wondered what if you are stranded on an island, and there is no electric power? Smartphones can certainly be a huge help during an emergency, but about this emergency when the smartphone goes out of power.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X