ಡಿಸ್ಕೌಂಟ್‌ನಲ್ಲಿ ಫೋನ್‌ ಖರೀದಿಸಬೇಕಿದ್ರೆ, ಅಮೆಜಾನ್‌ನ ಈ ಸೇಲ್‌ನತ್ತ ಗಮನ ನೀಡಿ!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಭಾರತದಲ್ಲಿ ಇದೀಗ ಮತ್ತೆ ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ ಅನ್ನು ಘೋಷಿಸಿದೆ. ಇನ್ನು ಈ ಸೇಲ್‌ ಇದೇ ನವೆಂಬರ್ 11 ರಿಂದ ಲೈವ್‌ ಆಗಿದ್ದು, ಇದೇ ನವೆಂಬರ್ 15, 2022 ರವರೆಗೆ ನಡೆಯಲಿದೆ. ಈ ಮಾರಾಟ ಮೇಳದಲ್ಲಿ ಅಮೆಜಾನ್‌ ಇ ಕಾಮರ್ಸ್‌ ತಾಣವು ಕೆಲವು ಆಯ್ದ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ನೀಡಲಿದೆ.

ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌

ಹೌದು, ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ ನೀಡಲಾಗ್ತಿದೆ. ಮುಖ್ಯವಾಗಿ ಸ್ಯಾಮ್‌ಸಂಗ್, ಶಿಯೋಮಿ, ರಿಯಲ್‌ಮಿ, ಒನ್‌ಪ್ಲಸ್‌, ಐಕ್ಯೂ, ಒಪ್ಪೋ ಸೇರಿದಂತೆ ಇತರೆ ಕೆಲವು ಕಂಪನಿಗಳ ಫೋನ್‌ಗಳು ಸುಮಾರು 40% ವರೆಗೂ ರಿಯಾಯಿತಿ ಪಡೆದಿವೆ. ಇದರೊಂದಿಗೆ ಬ್ಯಾಂಕ್‌ ಆಫರ್‌ಗಳು ಸಹ ಲಭ್ಯ ಇವೆ. ಹಾಗಾದರೇ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ಫೋನ್ ಆಯ್ದ ಬ್ಯಾಂಕ್

ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 (Samsung Galaxy M13) ಸ್ಮಾರ್ಟ್‌ಫೋನ್ 9,499ರೂ. ಗೆ ಲಭ್ಯವಿರುತ್ತದೆ. ಹಾಗೆಯೇ ಈ ಫೋನ್ ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 1,000ರೂ. ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G

ಇನ್ನು ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G (Samsung Galaxy M33 5G) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G (Samsung S20 FE 5G) ಫೋನ್‌ಗಳು ಕ್ರಮವಾಗಿ 14,999ರೂ ಮತ್ತು 28,740ರೂ. ಗಳಿಗೆ ಲಭ್ಯವಿರುತ್ತದೆ.

ರೆಡ್ಮಿ 10 ಪವರ್

ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ರೆಡ್ಮಿ ನೋಟ್ 11T 5G (Redmi Note 11T 5G) ಸ್ಮಾರ್ಟ್‌ಫೋನ್‌ 16,999 ರೂ.ಗಳಿಗೆ ಲಭ್ಯವಿದೆ. ಅದೇ ರೀತಿ ರೆಡ್ಮಿ 10 ಪವರ್ (Redmi 10 Power) ಫೋನ್ 11,499 ರೂ.ಗಳಿಗೆ ಲಭ್ಯ. ಹಾಗೆಯೇ ರೆಡ್ಮಿ 9 ಆಕ್ಟಿವ್, ರೆಡ್ಮಿ ನೋಟ್ 11, ಮತ್ತು ರೆಡ್ಮಿ K50i ಫೋನ್‌ಗಳು ಕ್ರಮವಾಗಿ 8,550ರೂ, 12,499ರೂ ಮತ್ತು 24,999ರೂ. ಲಭ್ಯ.

 ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ iQOO

ಇನ್ನು ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ iQOO ನಿಯೋ 6 5G ಫೋನ್ ಆರಂಭಿಕ ವೇರಿಯಂಟ್‌ 24,999 ರೂ.ಗಳಲ್ಲಿ ಲಭ್ಯ. ಇನ್ನು ಈ ಫೋನ್ ಆಸಕ್ತ ಖರೀದಿದಾರರು ಮೂರು ಮತ್ತು ಆರು ತಿಂಗಳವರೆಗೆ ನೋ ಕಾಸ್ಟ್‌ ಇಎಮ್‌ಐ ಕೊಡುಗೆಯನ್ನು ಸಹ ಲಭ್ಯವಾಗಲಿದೆ.

onePlus Nord CE 2

ಸದ್ಯ ಚಾಲ್ತಿ ಇರುವ ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 (OnePlus Nord CE 2) ಮತ್ತು ಒನ್‌ಪ್ಲಸ್‌ 10R ಪ್ರೈಮ್ (OnePlus 10R ಪ್ರೈಮ್) ಫೋನ್‌ಗಳು ಕ್ರಮವಾಗಿ 23,499 ರೂ. ಮತ್ತು 29,499 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯ ಆಗಲಿವೆ.

ರಿಯಲ್‌ಮಿ ನಾರ್ಜೋ 50i

ಅದೇ ರೀತಿ ಅಮೆಜಾನ್‌ನ ಈ ಸೇಮ್‌ನಲ್ಲಿ ರಿಯಲ್‌ಮಿ ನಾರ್ಜೋ 50 4G (Realme Narzo 50 4G) ಸ್ಮಾರ್ಟ್‌ಫೋನ್ 9,999ರೂ. ಗಳಿಗೆ ಲಭ್ಯವಾಗಲಿದೆ. ರಿಯಲ್‌ಮಿ ನಾರ್ಜೋ 50i (Realme Narzo 50i) ಫೋನ್ 5,749ರೂ. ಲಭ್ಯವಾಗಲಿದೆ. ಹಾಗೆಯೇ ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಆರು ತಿಂಗಳವರೆಗೆ ನೋ ಕಾಸ್ಟ್‌ ಇಎಮ್‌ಐ ಕೊಡುಗೆ ಸಹ ಸಿಗಲಿದೆ.

Best Mobiles in India

English summary
Amazon announces Smartphone Upgrade Days sale: Check top deals here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X