ಗೂಗಲ್ ಹಿಂದಿಕ್ಕಿದ ಅಮೆಜಾನ್ ಈಗ ವಿಶ್ವದ 2ನೇ ಮೌಲ್ಯಯುತ ಕಂಪೆನಿ!!

ವಿಶ್ವದ ಅತಿ ದೊಡ್ಡ ಇ ಕಾಮರ್ಸ್ ಜಾಲತಾಣ ಅಮೆಜಾನ್, ವಿಶ್ವದ ಟೆಕ್ ದೈತ್ಯ ಗೂಗಲ್ ಅನ್ನು ಸಹ ಮೀರಿಸಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

|

ವಿಶ್ವದ ಅತಿ ದೊಡ್ಡ ಇ ಕಾಮರ್ಸ್ ಜಾಲತಾಣ ಅಮೆಜಾನ್, ವಿಶ್ವದ ಟೆಕ್ ದೈತ್ಯ ಗೂಗಲ್ ಅನ್ನು ಸಹ ಮೀರಿಸಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ವಿಶ್ವದ ನಂಬರ್ ಒನ್ ಶ್ರೀಮಂತನಾಗಿ ಜೆಫ್ ಬೆಜೂಸ್ ಹೊರಹೊಮ್ಮಿದ ಕೇವಲ ಒಂದು ತಿಂಗಳಿನಲ್ಲಿಯೇ ಅಮೆಜಾನ್ ಕಂಪೆನಿ ಅಂತರ್ಜಾಲ ದೈತ್ಯ ಗೂಗಲ್ ಅನ್ನು ಮೀರಿಸಿದೆ.!!

ಇದೀಗ ಅಮೆಜಾನ್ ಮಾರುಕಟ್ಟೆ ಮೌಲ್ಯವು ಗೂಗಲ್‌ ಕಂಪೆನಿಯ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದ್ದು, ಅಮೆಜಾನ್ ಪ್ರಸ್ತುತ $ 768 ಶತಕೋಟಿ ಮೌಲ್ಯದ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದೇ ವೇಳೆಯಲ್ಲಿ ಟೆಕ್ ದೈತ್ಯ ಗೂಗಲ್‌ನ ಮಾರುಕಟ್ಟೆ ಮೌಲ್ಯ $ 761.4 ಬಿಲಿಯನ್‌ನೊಂದಿಗೆ ಸ್ಥಿರವಾಗಿ ನಿಂತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಗೂಗಲ್ ಹಿಂದಿಕ್ಕಿದ ಅಮೆಜಾನ್ ಈಗ ವಿಶ್ವದ 2ನೇ ಮೌಲ್ಯಯುತ ಕಂಪೆನಿ!!

ಕಳೆದ 12 ತಿಂಗಳುಗಳಲ್ಲಿ ಇ ಕಾಮರ್ಸ್ ಜಾಲತಾಣ ಅಮೆಜಾನ್ ಮಾರುಕಟ್ಟೆ ಮೌಲ್ಯ ಶೇ. 85 ರಷ್ಟು ಏರಿಕೆ ಕಂಡಿದ್ದರೆಮ 2018 ರ ರ ಆರಂಭದ ತಿಂಗಳುಗಳಲ್ಲಿ 35% ಏರಿಕೆ ಕಂಡಿದೆ. ಹಾಗಾಗಿ, ಅಮೆಜಾನ್ ವಿಶ್ವದ ಭಾರೀ ಕಂಪೆನಿಗಳನ್ನೇ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.!

ಗೂಗಲ್ ಹಿಂದಿಕ್ಕಿದ ಅಮೆಜಾನ್ ಈಗ ವಿಶ್ವದ 2ನೇ ಮೌಲ್ಯಯುತ ಕಂಪೆನಿ!!

ಮೊದಲ ಸ್ಥಾನದಲ್ಲಿ ಮತ್ತೋರ್ವ ಟೆಕ್ ದೈತ್ಯ ಆಪಲ್ ಕಂಪೆನಿಯು ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದು, 889.2 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಆದರೆ, ಬೆಳವಣಿಗೆಯಲ್ಲಿ ಅಮೆಜಾನ್ ಆಪಲ್ ಅನ್ನು ಹಿಂದಿಕ್ಕುವ ವೇಗದಲ್ಲಿ ಓಡುತ್ತಿದೆ.!

ಗೂಗಲ್ ಹಿಂದಿಕ್ಕಿದ ಅಮೆಜಾನ್ ಈಗ ವಿಶ್ವದ 2ನೇ ಮೌಲ್ಯಯುತ ಕಂಪೆನಿ!!

ಇನ್ನು ಸಿಎನ್‌ಬಿಸಿ ಪ್ರಕಾರ, ಅಮೆಜಾನ್ ಕ್ಲೌಡ್ ಕಂಪ್ಯೂಟಿಂಗ್ ವಿಭಾಗದಲ್ಲಿಯೂ ಹೆಚ್ಚು ಪ್ರಭಾವಿತವಾಗಿವೆ. 2017 ರಲ್ಲಿ ಅಮೆಜಾನ್ ವೆಬ್ ಸರ್ವಿಸಸ್ ಆದಾಯ 43 ಪ್ರತಿಶತ ಏರಿಕೆಯಾಗಿ, ವಿಶ್ವದಲ್ಲೇ ಐದನೇ ದೊಡ್ಡ ಉದ್ಯಮ ಸಾಫ್ಟ್‌ವೇರ್ ಕಂಪೆನಿಯಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ವಿಭಾಗದಲ್ಲಿ ಟೆಕ್ ದೈತ್ಯ ಮೈಕ್ರೋಸಾಫ್ಟ್, ಐಬಿಎಂ, ಒರಾಕಲ್ ಮತ್ತು ಎಸ್ಎಪಿ ನಂತರದ ಸ್ಥಾನದಲ್ಲಿ ಮುಂದುವರೆದಿದೆ.!!

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಓದಿರಿ: ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಪೋನಿನಲ್ಲಿ ಇರಲಿದೆ ಫೇಸ್‌ ಅನ್‌ಲಾಕ್ ಫೀಚರ್!!

Best Mobiles in India

English summary
We all know very well that the world’s biggest shopping or e-commerce site Amazon is one of the best e-commerce sites for shopping. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X