'ಅಮೆಜಾನ್‌ ಇಕೋ ಶೋ 5' ಲಾಂಚ್‌!.ಭಾರತದಲ್ಲಿ ಬೆಲೆ 8,999ರೂ!

|

ಅಮೆಜಾನ್‌ ಇಕೋ ಶೋ ಡಿವೈಸ್‌ಗಳು ಅತ್ಯುತ್ತಮ ಮನರಂಜನೆಯ ಸಾಧನಗಳೆಂದು ಗುರುತಿಸಿಕೊಂಡಿದ್ದು, ಅಲೆಕ್ಸಾ ವಾಯಿಸ್‌ ಕಮಾಂಡ್‌ ಸೌಲಭ್ಯವನ್ನು ಪಡೆದಿವೆ. ಹೀಗಾಗಿ ಗ್ರಾಹಕರು ಕೇವಲ ಧ್ವನಿ ಮೂಲಕ ಮಾಹಿತಿಗಳನ್ನು ಪಡೆಯಬಹುದಾಗಿದೆ, ಏನೇ ಕೇಳಿದರೂ ಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇದೀಗ ಅಮೆಜಾನ್‌ ಇಕೋ ಶೋ ಡಿವೈಸ್‌ಗಳ ಸಾಲಿಗೆ ಮತ್ತೆ ಹೊಸದೊಂದು ಇಕೋ ಶೋ ಸಾಧನ ಸೇರಿಕೊಂಡಿದೆ.

'ಅಮೆಜಾನ್‌ ಇಕೋ ಶೋ 5' ಲಾಂಚ್‌!.ಭಾರತದಲ್ಲಿ ಬೆಲೆ 8,999ರೂ!

ಹೌದು, ಅಮೆಜಾನ್‌ ಸಂಸ್ಥೆಯು ಹೊಸದಾಗಿ 'ಇಕೋ ಶೋ 5' ಎಡಿಷನ್‌ ಅನ್ನು ಘೋಷಿಸಿದ್ದು, ಈ ಡಿವೈಸ್‌ ಮಾಹಿತಿಗಳ ವಿಡಿಯೊಗಳನ್ನು wikiHow ನಿಂದ ಒದಗಿಸುವ ಆಯ್ಕೆಯನ್ನು ಒಳಗೊಂಡಿದೆ. ಸ್ಮಾರ್ಟ್‌ಹೋಮ್‌ ಕಂಟ್ರೋಲ್‌ ಆಯ್ಕೆಗಳು ಸೇರಿದಂತೆ ಹೊಸ ಪ್ರೈವೆಸಿ ಸೆಟ್ಟಿಂಗ್‌ ಆಯ್ಕೆಗಳನ್ನು ಸಹ ಹೊಂದಿದೆ. ಹಾಗಾದರೇ ಅಮೆಜಾನ್ ಇಕೋ ಶೋ 5 ಸಾಧನವು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಮತ್ತು ಸೌಲಭ್ಯಗಳನ್ನ ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

ಡಿಸ್‌ಪ್ಲೇ ಮತ್ತು ಕ್ಯಾಮೆರಾ

ಡಿಸ್‌ಪ್ಲೇ ಮತ್ತು ಕ್ಯಾಮೆರಾ

ಅಮೆಜಾನ್‌ ಇಕೋ ಶೋ 5 ಡಿವೈಸ್‌ 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಡಿಯೊ ವೀಕ್ಷಣೆಗೆ ಸೂಕ್ತ ಎನಿಸಿಲಿದೆ. ಹಾಗಾಯೇ ಇದರಲ್ಲಿ ಹೆಚ್‌ಡಿ ಗುಣಮಟ್ಟದ ಕ್ಯಾಮೆರಾ ನೀಡಲಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ವಿಡಿಯೊ ಕಾಲ್ ಮಾಡಲು ಸಹ ಹೆಚ್ಚು ಪ್ರಯೋಜನವಾಗಿದೆ.

ವಿಡಿಯೊ ಮತ್ತು ಆಡಿಯೊ

ವಿಡಿಯೊ ಮತ್ತು ಆಡಿಯೊ

ಅಮೆಜಾನ್‌ ಇಕೋ ಶೋ 5 ಡಿವೈಸ್‌ ಅಲೆಕ್ಸಾ ಬೆಂಬಲ ಪಡೆದಿದ್ದು, ವಾಯಿಸ್‌ ಮೂಲಕವೇ ವಿಡಿಯೊ ಮತ್ತಯ ಆಡಿಯೊ ಪ್ಲೇ ಮಾಡುವ ಆಯ್ಕೆ ಹೊಂದಿದೆ. ಫೇವರೇಟ್‌ ಶೋ, ಕೇಲವು ಚಾನಲ್‌ಗಳಿಂದ ನ್ಯೂಸ್‌ ವಿಡಿಯೊ ಕ್ಲಿಪ್‌, ಮತ್ತು ಪ್ರೈಮ್‌ ವಿಡಿಯೊಗಳು ಪ್ಲೇ ಆಗುತ್ತದೆ ಹಾಗಾಯೇ ಅಮೆಜಾನ್‌ ಮ್ಯೂಸಿಕ್‌, ಸಾವನ್‌, ಗಾನಾ, ಹಂಗಾಮಾ, ಟ್ಯೂನ್‌ಇನ್‌ ಸೇರಿದಂತೆ ಹಲವು ಮ್ಯೂಸಿಕ್‌ ಸೇವೆಗಳು ಲಭ್ಯವಾಗಲಿವೆ.

ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'! ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

ಅಮೆಜಾನ್ ಅಲೆಕ್ಸಾ

ಅಮೆಜಾನ್ ಅಲೆಕ್ಸಾ

ಅಮೆಜಾನ್ ಇಕೋ ಶೋ 5 ಸಾಧನ ಅಮೆಜಾನ್ ಅಲೆಕ್ಸಾ ವಾಯಿಸ್‌ ರಿಕಗ್ನೈಸ್‌ ಸೌಲಭ್ಯ ಒಳಗೊಂಡಿದ್ದು, ಬಳಕೆದಾರರು ವಾಯಿಸ್‌ ಮೂಲಕವೇ ಇಕೋ ಶೋ ಸಾಧನವನ್ನು ಕಮಾಂಡ್‌ ಮಾಡಬಹುದಾಗಿದೆ ಮತ್ತು ನಿಯಂತ್ರಿಸಬಹುದಾಗಿದೆ. ಬಳಕೆದಾರರು ಹೇಳುವ ಎಲ್ಲವನ್ನು ಇದು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ.

ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?

ವಿಡಿಯೊ ಕಾಲ್‌

ವಿಡಿಯೊ ಕಾಲ್‌

ಅಮೆಜಾನ್ ಇಕೋ ಶೋ 5 ಡಿವೈಸ್‌ ಅತ್ಯುತ್ತಮ ಕ್ಯಾಮೆರಾವನ್ನು ಹೊಂದಿದ್ದು, ಈ ಮೂಲಕ ಫ್ರೆಂಡ್ಸ್‌ ಮತ್ತು ಕುಟುಂಬ ಸದಸ್ಯರೊಂದಿಗೆ ಹ್ಯಾಂಡ್ಸ್‌ ಫ್ರೀ ವಿಡಿಯೊ ಕಾಲ್‌ ಮಾಡುವ ಸೌಲಭ್ಯವನ್ನು ಹೊಂದಿದೆ. ಅಮೆಜಾನ ಇಕೋ, ಇಕೋ ಸ್ಪಾಟ್‌, ಅಲೆಕ್ಸಾ ಆಪ್‌ ಮತ್ತು ಸ್ಕೈಪ್‌ ಬಳಕೆ ಮಾಡುವ ಗೆಳೆಯ ಮತ್ತ ಕುಟುಂಬರೊಂದಿಗೆ ವಿಡಿಯೊ ಕಾಲ್‌ ಕನೆಕ್ಟ್‌ ಮಾಡಬಹುದು.

ಆನ್‌ಲೈನ್‌ ಸೇವೆಗಳು

ಆನ್‌ಲೈನ್‌ ಸೇವೆಗಳು

ಮನರಂಜನೆಗಳ ಆಯ್ಕೆಗಳೊಂದಿಗೆ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಇದು ನೆರವಾಗುವ ಆಯ್ಕೆಗಳಿವೆ. ಈ ಸಾಧನದ ಮೂಲಕ ಆನ್‌ಲೈನ್‌ನಲ್ಲಿ ಓಲಾ ಟ್ಯಾಕ್ಸಿ ಬುಕ್ಕ್‌, ಸಿನಿಮಾ ಟಿಕೆಟ್ ಬುಕ್ಕ್‌ ಮತ್ತು ಇತರೆ ಆನ್‌ಲೈನ್‌ ಬುಕ್ಕಿಂಗ್ ಮಾಡಬಹುದಾಗಿದೆ. ಜೊತೆಗೆ ನ್ಯೂಸ್‌ ಅಪ್‌ಡೇಟ್‌ ಹಾಗೂ ಇತರೆ ವಿಷಯಗಳ ಬಗ್ಗೆ ಅಪ್‌ಡೇಟ್‌ ಮಾಹಿತಿಗಳನ್ನು ತಿಳಿಯಬಹುದು.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮೆಜಾನ್‌ ಇಕೋ ಶೋ 5 ಡಿವೈಸ್‌ ಕಂಪನಿಯಿಂದ ಅಧಿಕೃತವಾಗಿ ಲಾಂಚ್‌ ಆಗಿದ್ದು, ಬ್ಲ್ಯಾಕ್‌ ಮತ್ತು ವೈಟ್‌ ಎರಡು ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇ ಕಾಮರ್ಸ್‌ ಜಾಲತಾಣ ಅಮೆಜಾನ್‌ನಲ್ಲಿ ಇದೇ ಜೂನ್‌ನಲ್ಲಿ ಪ್ರೀ ಆರ್ಡರ್‌ ಮಾಡುವ ಅವಕಾಶ ಲಭ್ಯವಾಗಲಿದ್ದು, ಆದರೆ ಗ್ರಾಹಕರ ಕೈಗೆ ಇದೇ ಜುಲೈನಲ್ಲಿ ದೊರೆಯಲಿವೆ.

ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

Best Mobiles in India

English summary
Amazon announced the latest addition to its Echo Show family, the Echo Show 5 with a 5.5-inch display at Rs 8,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X