ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!

|

ಗ್ರಾಹಕರ ನೆಚ್ಚಿನ ಆನ್‌ಲೈನ್‌ ಶಾಪಿಂಗ್ ತಾಣ ಅಮೆಜಾನ್ ಭರ್ಜರಿ ರಿಯಾಯಿಗಳಿಂದ ಜನಪ್ರಿಯವಾಗಿದ್ದು, ಸದಾ ಒಂದಿಲ್ಲೊಂದು ಆಫರ್‌ ಇದ್ದೇ ಇರುತ್ತದೆ. ಇದೀಗ ಇ ಕಾಮರ್ಸ್‌ ದೈತ್ಯ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಖುಷಿ ಸಮಾಚಾರವನ್ನು ನೀಡಿದ್ದು, ಫ್ಯಾಬ್‌ ಫೋನ್‌ ಫೆಸ್ಟ್‌ ಮೇಳವನ್ನು ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಮೇಳದಲ್ಲಿ ಇತ್ತೀಚಿನ ಬಿಡುಗಡೆಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌ಗಳು ಲಭ್ಯವಾಗಲಿವೆ.

ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!

ಹೌದು, ಅಮೆಜಾನ್ ಮತ್ತೆ ತನ್ನ ಫ್ಯಾಬ್‌ ಫೋನ್‌ ಫೆಸ್ಟ್‌ ಮೇಳವನ್ನು ಮತ್ತೆ ಆಯೋಜಿಸಿದ್ದು, ಈ ಮೊಬೈಲ್ ಹಬ್ಬ ಇದೇ ಜೂನ್ 10 ರಿಂದ ಇದೇ ಜೂನ್ 13ರ ವರೆಗೂ ನಡೆಯಲಿದೆ. ಈ ಫೆಸ್ಟ್‌ನಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್‌, ಹುವಾವೆ, ಹಾನರ್, ಶಿಯೋಮಿ ಕಂಪನಿಯ ಲೆಟೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ, ಮೊಬೈಲ್‌ ಆಕ್ಸ್‌ಸರಿಸ್‌ಗಳ ಮೇಲೂ ವಿಶೇಷ ಡಿಸ್ಕೌಂಟ್‌ಗಳ ಆಯ್ಕೆಗಳನ್ನು ನೀಡಿದೆ.

ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು! ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!

ಈ ಮೇಳದಲ್ಲಿ ಎಕ್ಸ್‌ಚೇಂಜ್ ಆಫರ್‌, ಬಜೆಟ್‌ ಸ್ಮಾರ್ಟ್‌ಫೋನ್‌, ಮತ್ತು ನೋ ಕಾಸ್ಟ್ ಇಎಮ್‌ಐ ಆಫರ್‌ ಆಯ್ಕೆಗಳು ಸೇರಿದಂತೆ ಮತ್ತಷ್ಟು ರಿಯಾಯಿತಿಯ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಹಾಗಾದರೇ ಅಮೆಜಾನ್ ಆಯೋಜಿಸಿರುವ ಫ್ಯಾಬ್ ಫೋನ್ ಫೆಸ್ಟ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಆಕ್ಸ್‌ಸರಿಸ್‌ಗಳಿಗೆ ಡಿಸ್ಕೌಂಟ್‌ ನೀಡಲಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಬಿಗ್‌ ವಾರ್ ಶುರು!..'ನೋಕಿಯಾ 2.2' ಮತ್ತು 'ರೆಡ್ಮಿ 7' ಯಾವುದು ಬೆಸ್ಟ್‌? ಓದಿರಿ : ಬಿಗ್‌ ವಾರ್ ಶುರು!..'ನೋಕಿಯಾ 2.2' ಮತ್ತು 'ರೆಡ್ಮಿ 7' ಯಾವುದು ಬೆಸ್ಟ್‌?

ಒನ್‌ಪ್ಲಸ್‌ 6T

ಒನ್‌ಪ್ಲಸ್‌ 6T

ಒನಪ್ರಿಯ ಒನ್‌ಪ್ಲಸ್‌ 6T 8GB RAM ಮತ್ತು 128GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ ಸದ್ಯ 32,999ರೂ.ಗಳಿಗೆ ದೊರೆಯುತ್ತಿದೆ. ಆದರೆ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್‌ನಲ್ಲಿ 27,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 6.41 ಇಂಚಿನ ಫುಲ್‌ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ಯಾಮೆರಾವು 16ಎಂಪಿ + 20ಎಂಪಿ ಸಾಮರ್ಥ್ಯದಲ್ಲಿದೆ.

ಬಜೆಟ್‌ ಸ್ಮಾರ್ಟ್‌ಫೋನ್‌ ಆಫರ್

ಬಜೆಟ್‌ ಸ್ಮಾರ್ಟ್‌ಫೋನ್‌ ಆಫರ್

ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿರುವ ಶಿಯೋಮಿ ರೆಡ್ಮಿ 6A, ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ20, ವಿವೋ ವೈ91i, ಹಾನರ್‌ 10ಲೈಟ್, ಒಪ್ಪೊ A5, ರೆಡ್ಮಿ 7, ರೆಡ್ಮಿ ವೈ2 ಮತ್ತು ಹಾನರ್‌ 9N ಸ್ಮಾರ್ಟ್‌ಫೋನ್‌ಗಳಿಗೆ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್‌ನಲ್ಲಿ ಬೆಸ್ಟ್‌ ಡಿಸ್ಕೌಂಟ್‌ ಆಫರ್‌ ನೀಡಲಾಗುತ್ತಿದೆ. ಹೀಗಾಗಿ ಖರೀದಿಗೆ ಈ ಮೇಳ ಬೆಸ್ಟ್‌ ಟೈಮ್ ಆಗಲಿದೆ.

ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌! ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

ಎಕ್ಸ್‌ಚೇಂಜ್ ಆಫರ್

ಎಕ್ಸ್‌ಚೇಂಜ್ ಆಫರ್

ಅಮೆಜಾನ್‌ ಫ್ಯಾಬ್ ಫೋನ್ ಫೆಸ್ಟ್‌ನಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಎಕ್ಸ್‌ಚೇಂಜ್ ಆಫರ್‌ ಸಹ ಇದೆ. ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9, ವಿವೋ ನೆಕ್ಸ್‌, ಹುವಾವೆ ಪಿ30 ಪ್ರೊ, ಒಪ್ಪೊ ಆರ್‌17 ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿ ದೊರೆಯಲಿದ್ದು, ಒಟ್ಟು 12000ರೂ.ಗಳ ವರೆಗೂ ಎಕ್ಸ್‌ಚೇಂಜ್ ಬೆನಿಫಿಟ್ಸ್‌ಗಳು ಲಭ್ಯವಾಗಿವೆ.

ನೋ ಕಾಸ್ಟ್‌ EMI

ನೋ ಕಾಸ್ಟ್‌ EMI

ಈ ಅಮೆಜಾನ್ ಫೆಸ್ಟ್‌ ಮೇಳದಲ್ಲಿ, ನೋಕಿಯಾ 8.1, ಹಾನರ್‌ ವ್ಯೂವ್‌ 20, ವಿವೋ ವಿ15 ಪ್ರೊ ಮತ್ತು ಒಪ್ಪೊ ಎಫ್‌ 11 ಪ್ರೊ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ನೋ ಕಾಸ್ಟ್‌ ಇಎಮ್‌ಐ ಆಯ್ಕೆಯ ಪ್ರಯೋಜನಗಳು ದೊರೆಯಲಿವೆ. ಇದರೊಂದಿಗೆ ಮತ್ತಷ್ಟು ವಿಶೇಷ ರಿಯಾಯಿತಿಗಳು ಸೇರಲಿವೆ.

ಓದಿರಿ : ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ! ಓದಿರಿ : ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!

ಮೊಬೈಲ್‌ ಆಕ್ಸ್‌ಸರಿಸ್

ಮೊಬೈಲ್‌ ಆಕ್ಸ್‌ಸರಿಸ್

ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲದೇ ಮೊಬೈಲ್‌ಗೆ ಅಗತ್ಯವೆನಿಸುವ ಕೇಲವು ಸ್ಮಾರ್ಟ್‌ಫೋನ್‌ ಅಕ್ಸ್‌ಸರಿಸಗಳಿಗೂ ಅಮೆಜಾನ್ ಫ್ಯಾಬ್ ಪೋನ್‌ ಫೆಸ್ಟ್‌ ಮೇಳದಲ್ಲಿ ಟಾಪ್‌ ಡೀಲ್‌ ಆಫರ್‌ಗಳು ಸೇರಿರಲಿವೆ. ಅವುಗಳಲ್ಲಿ ಪವರ್‌ ಬ್ಯಾಂಕ್, ಬ್ಲೂಟೂತ್ ಹೆಡ್‌ಫೋನ್, ಸ್ಕ್ರೀನ್‌ ಪ್ರೊಟೆಕ್ಟರ್, ಬ್ಯಾಕ್‌ಕವರ್‌ ಮತ್ತು ಇನ್ನಿತರೆ ಆಕ್ಸ್‌ಸರಿಸ್‌ಗಳು ಇರಲಿವೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

ಸದ್ಯ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿರುವ ಗ್ಯಾಲ್ಯಾಕ್ಸಿ ಎಂ 30 ಸ್ಮಾರ್ಟ್‌ಫೋನ್‌ ಈ ಅಮೆಜಾನ್ ಮೇಳದಲ್ಲಿ 14,990ರೂ.ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್ಫೋನಿನ ಪ್ರಮುಖ ಹೈಲೈಟ್ಸ್‌ಗಳೆಂದರೇ 6.4 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಜೊತೆಗೆ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಅವು ಕ್ರಮವಾಗಿ 13ಎಂಪಿ+5ಎಂಪಿ+5ಎಂಪಿ ಸಾಮರ್ಥ್ಯದಲ್ಲಿವೆ. ಹಾಗೆಯೇ 5000mAH ಸಾಮರ್ಥ್ಯ ಬ್ಯಾಟರಿಯನ್ನು ಒಳಗೊಂಡಿದೆ.

ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ? ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

Best Mobiles in India

English summary
Amazon is hosting a mobile-only sale starting Monday, June 10, and going on till Thursday, June 13. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X