ಅಮೆಜಾನ್ ಫೆಸ್ಟಿವಲ್ ಸೇಲ್: ಟಾಪ್ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳಿಗೆ ಭಾರೀ ಡಿಸ್ಕೌಂಟ್‌

|

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಅಮೆಜಾನ್‌ ಹಲವಾರು ಗ್ಯಾಜೆಟ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. ಈ ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಟಿವಿಗಳು ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರ ನಡುವೆ ಈಗ ಪ್ರಮುಖ ಕಂಪೆನಿಗಳ ಲ್ಯಾಪ್‌ಟಾಪ್‌ಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ ಆಗಲಿವೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಸೇಲ್‌ನಲ್ಲಿ ಹೆಚ್‌ಪಿ, ಲೆನೊವೊ ಹಾಗೂ ಡೆಲ್‌ ಸೇರಿದಂತೆ ಪ್ರಮುಖ ಕಂಪೆನಿಯ ಲ್ಯಾಪ್‌ಟಾಪ್‌ಗಳನ್ನು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ಸುಮಾರು 10,000ರೂ. ಗಳಿಗೂ ಹೆಚ್ಚಿನ ರಿಯಾಯಿತಿ ಪಡೆದುಕೊಂಡಿರುವ ಲ್ಯಾಪ್‌ಟಾಪ್‌ಗಳು ನಿಮಗೆ ಕೇವಲ 40,000ರೂ. ಗಳ ಒಳಗೆ ಲಭ್ಯ ಇರಲಿವೆ. ಹಾಗಿದ್ರೆ ಯಾವ ಬ್ರಾಂಡ್‌‌ನ ಲ್ಯಾಪ್‌ಟಾಪ್‌ಗಳಿಗೆ ಎಷ್ಟು ಬೆಲೆ?, ಫೀಚರ್ಸ್‌ ಏನು ಎಂಬ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡೆಲ್‌ ವೋಸ್ಟ್ರೋ 3420

ಡೆಲ್‌ ವೋಸ್ಟ್ರೋ 3420

ಡೆಲ್‌ ವೋಸ್ಟ್ರೋ 3420 ಲ್ಯಾಪ್‌ಟಾಪ್‌ಗೆ 16,500ರೂ. ಗಳ ರಿಯಾಯಿತಿ ನೀಡಲಾಗಿದ್ದು, 40,000ರೂ. ಗಳಿಗೆ ಖರೀದಿ ಮಾಡಬಹುದು. ಇದು 14 ಇಂಚಿನ ಫುಲ್ HD ಡಿಸ್‌ಪ್ಲೇ ಹೊಂದಿದ್ದು, 11 ನೇ ಜನ್ ಇಂಟೆಲ್ i3 ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಹೆಚ್‌ಪಿ 14s

ಹೆಚ್‌ಪಿ 14s

ಹೆಚ್‌ಪಿ 14s ಲ್ಯಾಪ್‌ಟಾಪ್‌ 11,200ರೂ. ಗಳ ರಿಯಾಯಿತಿ ಪಡೆದಿದ್ದು, ನೀವು 36,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್‌ 14 ಇಂಚಿನ ಫುಲ್ HD ಡಿಸ್‌ಪ್ಲೇ ಜೊತೆಗೆ 11 ನೇ ಜನ್ ಇಂಟೆಲ್ i3 ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಹಾಗೆಯೇ ಡ್ಯುಯಲ್ ಸ್ಪೀಕರ್ ರಚನೆಯನ್ನು ಪಡೆದಿದೆ. ಜೊತೆಗೆ ಇದು 8GB RAM ಮತ್ತು 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

ಅಸೂಸ್ ವಿವೊಬುಕ್ ಅಲ್ಟ್ರಾ K14

ಅಸೂಸ್ ವಿವೊಬುಕ್ ಅಲ್ಟ್ರಾ K14

ಈ ಲ್ಯಾಪ್‌ಟಾಪ್‌ 19,000ರೂ. ಗಳ ರಿಯಾಯಿತಿ ಪಡೆದಿದ್ದು, 39,990ರೂ. ಗಳಿಗೆ ಲಭ್ಯ ಇದೆ. ಹಾಗೆಯೇ 14 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 11ನೇ ಜನ್‌ ಇಂಟೆಲ್‌ i3 ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಇದರ ಜೊತೆಗೆ 8GB RAM ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಲೆನೊವೊ ಐಡಿಯಾ ಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾ ಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾ ಪ್ಯಾಡ್‌ ಸ್ಲಿಮ್‌ 3 ಲ್ಯಾಪ್‌ಟಾಪ್‌ 28,400ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 33,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್‌ 14 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 11 ನೇ ಜನ್ ಇಂಟೆಲ್ i3 ಚಿಪ್‌ಸೆಟ್ ಆಯ್ಕೆ ಪಡೆದಿದೆ. ಇದರ ಜೊತೆಗೆ 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ.

ಏಸರ್ ಆಸ್ಪೈರ್ 3

ಏಸರ್ ಆಸ್ಪೈರ್ 3

ಏಸರ್ ಆಸ್ಪೈರ್ 3 ಲ್ಯಾಪ್‌ಟಾಪ್‌ 18,000ರೂ. ಗಳ ರಿಯಾಯಿತಿ ಪಡೆದಿದ್ದು, 37,990ರೂ. ಗಳಲ್ಲಿ ಖರೀದಿ ಮಾಡಬಹುದು. ಈ ಗ್ಯಾಜೆಟ್‌ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, AMD Ryzen 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿದೆ 16 GB RAM ಹಾಗೂ 512 GB ಇಂಟರ್ನಲ್‌ ಸ್ಟೋರೇಜ್‌‌ ಆಯ್ಕೆ ಪಡೆದಿದೆ.

ಹಾನರ್‌ ಮ್ಯಾಜಿಕ್‌ ಬುಕ್‌15

ಹಾನರ್‌ ಮ್ಯಾಜಿಕ್‌ ಬುಕ್‌15

ಹಾನರ್‌ ಮ್ಯಾಜಿಕ್‌ ಬುಕ್‌15 ಲ್ಯಾಪ್‌ಟಾಪ್‌ 19,000ರೂ. ಗಳ ರಿಯಾಯಿತಿ ಪಡೆದಿದ್ದು, 36,990ರೂ. ಗಳಲ್ಲಿ ಲಭ್ಯ ಇದೆ. ಇದರ ಜೊತೆಗೆ 15.6 ಇಂಚಿನ ಫುಲ್‌ HD IPS ಡಿಸ್‌ಪ್ಲೇ ಆಯ್ಕೆ ಹೊಂದಿರುವ ಈ ಲ್ಯಾಪ್‌ಟಾಪ್‌ AMD Ryzen 5 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 256GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ.

ರೆಡ್ಮಿ ಬುಕ್‌ ಪ್ರೊ

ರೆಡ್ಮಿ ಬುಕ್‌ ಪ್ರೊ

ಈ ಲ್ಯಾಪ್‌ಟಾಪ್‌ 20,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 39,990ರೂ. ಗಳಿಗೆ ಕೊಂಡುಕೊಳ್ಳಬಹುದು. ಹಾಗೆಯೇ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 11 ನೇ ಜನ್‌ H ಸರಣಿಯ ಇಂಟೆಲ್‌ i5 ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಇದರ ಜೊತೆಗೆ 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಅಸೂಸ್ ವಿವೊಬುಕ್ 15

ಅಸೂಸ್ ವಿವೊಬುಕ್ 15

ಅಸೂಸ್ ವಿವೊಬುಕ್ 15 ಲ್ಯಾಪ್‌ಟಾಪ್‌ 20,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 37,990ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, AMD Ryzen 5 ಸರಣಿಯ ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಇದರ ಜೊತೆಗೆ 8GB RAM ಹಾಗೂ 512GB ಇಂಟರ್ನಲ್ ಸ್ಟೋರೇಜ್‌ ಆಯ್ಕೆ ಹೊಂದಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 1 ಲ್ಯಾಪ್‌ಟಾಪ್‌ ಬರೋಬ್ಬರಿ 22,500ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 31,990ರೂ. ಗಳಲ್ಲಿ ಲಭ್ಯ ಇದೆ. ಈ ಡಿವೈಸ್‌ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, AMD Ryzen 3 ಸರಣಿಯ ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಇದರ ಜೊತೆಗೆ 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ.

ಏಸರ್ ಎಕ್ಸ್‌ಟೆನ್ಸಾ 15

ಏಸರ್ ಎಕ್ಸ್‌ಟೆನ್ಸಾ 15

ಏಸರ್ ಎಕ್ಸ್‌ಟೆನ್ಸಾ 15 ಲ್ಯಾಪ್‌ಟಾಪ್‌ 10,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನಿಮಗೆ 31,990ರೂ. ಗಳಲ್ಲಿ ಲಭ್ಯ ಇದೆ. ಹಾಗೆಯೇ ಇದು 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 11 ನೇ ಜನ್ ಇಂಟೆಲ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

Best Mobiles in India

English summary
Amazon has given huge discounts on several gadgets during the Great Indian Festival Sale. In between, laptops from leading brands are available at lower prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X