ಭಾರತದಲ್ಲಿ ಅಮೆಜಾನ್‌ನಿಂದ ಹೊಸ ಡಿವೈಸ್‌ ಲಾಂಚ್!..ಏನದು?..ಬೆಲೆ ಎಷ್ಟು?

|

ಟೆಕ್ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಅಮೆಜಾನ್‌ ಫೈರ್ ಟಿವಿ ಸ್ಟಿಕ್ ಡಿವೈಸ್‌ ಇದೀಗ ಅಪ್‌ಡೇಟ್‌ ಆವೃತ್ತಿಯಲ್ಲಿ ಭಾರತದಲ್ಲಿ ಲಾಂಚ್ ಆಗಿದೆ. ಅದುವೇ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ (Amazon Fire TV Stick Lite). ಈ ಮೂಲಕ ಅಮೆಜಾನ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿಕೊಂಡಿದೆ. ಇನ್ನು ನೂತನ ಡಿವೈಸ್‌ ಕೆಲವೊಂದು ಕುತೂಹಲಕಾರಿ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹಾಟ್‌ಕೀಗಳ

ಹೌದು, ಅಮೆಜಾನ್ ನೂತನ ಫೈರ್ ಟಿವಿ ಸ್ಟಿಕ್ ಲೈಟ್‌ (Amazon Fire TV Stick Lite) ಆವೃತ್ತಿಯು, ಇತ್ತೀಚಿನ ಫೈರ್ ಟಿವಿ ಸ್ಟಿಕ್ ಲೈಟ್ 2020 ಡಿವೈಸ್‌ ನಂತೆಯೇ ಅದೇ ಲುಕ್‌ನೊಂದಿಗೆ ಕಾಣಿಸಿಕೊಂಡಿದೆ. ಆದರೆ ನೂತನ ಡಿವೈಸ್‌ ರಿಮೋಟ್‌ ಹಾಗೂ ಕೆಲವು ಹಾಟ್‌ಕೀಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಡಿವೈಸ್‌ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಬಳಕೆದಾರರು ಅಲೆಕ್ಸಾ ಮೂಲಕ ಆಡಿಯೋ ನಿಯಂತ್ರಿಸಬಹುದಾಗಿದೆ.

ಬಳಕೆದಾರರು

ಫೈರ್ ಟಿವಿ ಸ್ಟಿಕ್ ಲೈಟ್‌ ಪ್ಲಗ್‌ ಅಂಡ್ ಪ್ಲೇ ಡಿಸೈನ್‌ ಅನ್ನು ಹೊಂದಿದ್ದು, ಇದು ಹಳೆಯ ಫ್ಲ್ಯಾಟ್‌ ಸ್ಕ್ರೀನ್ ಟಿವಿ ಹೊಂದಿರುವ ಬಳಕೆದಾರರು ಸಹ ಭಿನ್ನ ಓಟಿಟಿ ಆಪ್‌ ನೋಡಲು ನೆರವಾಗಲಿದೆ. ಬಳಕೆದಾರರು ಎಚ್‌ಡಿಎಮ್‌ಐ (HDMI) ಪೋರ್ಟ್ ಮೂಲಕ ಹೊಸ ಟಿವಿಗಳು ಅಥವಾ ಪ್ರೊಜೆಕ್ಟರ್‌ಗಳಿಗೆ ಕನೆಕ್ಟ್‌ ಮಾಡಬಹುದು. ಫೈರ್ ಟಿವಿ ಸ್ಟಿಕ್ ವಿವಿಧ ಪುನರಾವರ್ತನೆಗಳಲ್ಲಿ ಲಭ್ಯವಿದ್ದು, ಆದರೂ ವಿನ್ಯಾಸವು ಬಹುತೇಕ ಒಂದೇ ಆಗಿರುತ್ತದೆ. ಹಾಗಾದರೇ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ ಸಾಧನದ ಫೀಚರ್ಸ್‌ ಏನು? ಈ ಸಾಧನದ ಬೆಲೆ ಎಷ್ಟು? ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ ಫೀಚರ್ಸ್‌

ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ ಫೀಚರ್ಸ್‌

ಹೊಸ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ ಡಿವೈಸ್‌ ಬಹುತೇಕ ಈ ಹಿಂದಿನ ಆವೃತ್ತಿಯ ಸಾಧನದಂತೆ ಇದೆ. ಅದಾಗ್ಯೂ, ಇದು ರಿಮೋಟ್ ಸೌಲಭ್ಯವನ್ನು ಹಾಗೂ ಅಮೆಜಾನ್ ಪ್ರೈಮ್‌ ಮ್ಯೂಸಿಕ್, ನೆಟ್‌ಫ್ಲಿಕ್ಸ್‌ ಗಳಿಗಾಗಿ ಹಾಟ್‌ಕೀ ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಡಿಸ್ನಿಪ್ಲಸ್ ಹಾಟ್‌ಸ್ಟಾರ್, ಜೀ5, ಸೋನಿಲೈವ್, ಸನ್‌ನೆಕ್ಸ್ಟ್‌, ಎಲ್‌ಟಿ ಬಾಲಾಜಿ, ಡಿಸ್ಕವರಿ ಪ್ಲಸ್‌ ಸೇರಿದಂತೆ ಇತರೆ ಕೆಲವು ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಮಾಡಬಹುದಾಗಿದೆ

ಬಳಕೆದಾರರು ಫುಲ್‌ ಹೆಚ್‌ಡಿ 1080p ಸಾಮರ್ಥ್ಯದ ವಿಡಿಯೋಗಳನ್ನು 60fps ನಲ್ಲಿ ವೀಕ್ಷಿಸಬಹುದಾಗಿದೆ. ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಹಾಗೂ ಐಫೋನ್‌ ಬಳಕೆದಾರರು ಆಪಲ್‌ ಆಪ್‌ ಸ್ಟೋರ್‌ನಿಂದ ಅಲೆಕ್ಸಾ ಆಪ್‌ ಅನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಹಾಗೆಯೇ ಬ್ಲೂಟೂತ್ ಸಂಪರ್ಕ ಪಡೆದ ಹೆಡ್‌ಫೋನ್‌ ಹಾಗೂ ಸೌಂಡ್‌ಬಾರ್‌ ಡಿವೈಸ್‌ಗಳಿಗೆ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ 2022 ಕನೆಕ್ಟ್ ಮಾಡಬಹುದು. ಇನ್ನು ಕನೆಕ್ಟಿಟಿವಿ ಆಯ್ಕೆಗಳಲ್ಲಿ ಡ್ಯುಯಲ್‌ ಬ್ಯಾಂಡ್ ವೈ ಫೈ, ಬ್ಲೂಟೂತ್ 5 ಆಯ್ಕೆಗಳ ಸಪೋರ್ಟ್‌ ಪಡೆದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ ಡಿವೈಸ್‌ ಬಿಡುಗಡೆ ಆಗಿದ್ದು, ಫೀಚರ್ಸ್‌ಗಳು ಆಕರ್ಷಕ ಎನಿಸಿವೆ. ಈ ಡಿವೈಸ್‌ 2,999ರೂ. ಗಳ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದ್ದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಖರೀದಿಗೆ ಲಭ್ಯ. ಅದೇ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ 2020 ಆವೃತ್ತಿಯು 2,499ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್‌ 2022 ಡಿವೈಸ್‌ ಸಿಂಗಲ್ ಬ್ಲ್ಯಾಕ್‌ ಕಲರ್ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
Amazon Fire TV Stick Lite 2022 Launched in India: Price and Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X