ಅಮೆಜಾನ್‌ ಗ್ರೇಟ್ ಇಂಡಿಯನ್‌ ಸೇಲ್‌: ಎಕೋ ಸ್ಮಾರ್ಟ್ ಸ್ಪೀಕರ್‌ಗಳಿಗೆ ಭರ್ಜರಿ ಡಿಸ್ಕೌಂಟ್‌!

|

ಪ್ರಮುಖ ಇ- ಕಾಮರ್ಸ್‌ ತಾಣವಾದ ಅಮೆಜಾನ್‌ ತನ್ನ ಗ್ರೇಟ್‌ ಇಂಡಿಯಲ್‌ ಸೇಲ್‌ ಆರಂಭಿಸಿದೆ. ಇಂದಿನಿಂದ (ಸೆ.23) ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿಯಲ್ಲಿ ಡಿವೈಸ್‌ ಹಾಗೂ ಇನ್ನಿತರ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದಾಗಿದೆ. ಇದರಲ್ಲಿ ಎಕೋ ಸ್ಮಾರ್ಟ್ ಸ್ಪೀಕರ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ. ಅಷ್ಟೇ ಅಲ್ಲದೆ ಇತರೆ ಉತ್ಪನ್ನಗಳಿಗೂ ಅಮೆಜಾನ್‌ ಭಾರೀ ರಿಯಾಯಿತಿ ಘೋಷಣೆ ಮಾಡಿದೆ.

 ಗ್ರೇಟ್‌ ಇಂಡಿಯಲ್‌ ಸೇಲ್‌

ಅಮೆಜಾನ್‌ನ ಈ ಗ್ರೇಟ್‌ ಇಂಡಿಯಲ್‌ ಸೇಲ್‌ನಲ್ಲಿ 50% ಅಥವಾ ಅದಕ್ಕೂ ಹೆಚ್ಚಿನ ರಿಯಾಯಿತಿಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ನೀವು ಫೈರ್ ಟಿವಿ ಸ್ಟಿಕ್, ಎಕೋ ಸ್ಮಾರ್ಟ್ ಸ್ಪೀಕರ್ ಅಥವಾ ಕಿಂಡಲ್‌ಗಳಿಗೆ ಅಮೆಜಾನ್‌ ಉತ್ತಮ ರಿಯಾಯಿತಿ ನೀಡಿದೆ. ನೀವು ಈ ಸ್ಮಾರ್ಟ್‌ ಡಿವೈಸ್‌ಗಳನ್ನು ಕೊಂಡುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಇದ್ದರೆ ಇದು ಸೂಕ್ತ ಸಮಯ. ಹಾಗಿದ್ರೆ ಯಾವ ಪ್ರೊಡಕ್ಟ್‌ಗಳಿಗೆ ಎಷ್ಟು ಆಫರ್‌ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಎಕೋ ಶೋ 5 (2 ನೇ ತಲೆಮಾರು)

ಎಕೋ ಶೋ 5 (2 ನೇ ತಲೆಮಾರು)

ಈ ಸ್ಮಾರ್ಟ್‌ ಸ್ಪೀಕರ್ 5,000ರೂ.ಗಳ ರಿಯಾಯಿತಿ ಪಡೆದಿದ್ದು, 3,999 ರೂ. ನಲ್ಲಿ ಲಭ್ಯವಿದೆ. ಈ ಎಕೋ ಶೋ 5 ಸಾಧನವು 5.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ವಾಯ್ಸ್ ಕಮಂಡ್ಸ್ ಮೂಲಕ ಇದು ಕಾರ್ಯನಿರ್ವಹಿಸಲಿದೆ. ಇನ್‌ಬಿಲ್ಟ್ ಕ್ಯಾಮೆರಾವನ್ನು ಆನ್ ಮಾಡುವ ಮೂಲಕ ನಿಮ್ಮ ಮನೆಯನ್ನು ದೂರದಿಂದಲೂ ಮೇಲ್ವಿಚಾರಣೆ ಮಾಡಬಹುದಾಗಿದೆ.

ಎಕೋ ಶೋ 8  (2 ನೇ ತಲೆಮಾರು)

ಎಕೋ ಶೋ 8 (2 ನೇ ತಲೆಮಾರು)

ಈ ಸ್ಮಾರ್ಟ್‌ ಡಿವೈಸ್‌ 6,500 ರೂ.ಗಳ ರಿಯಾಯಿತಿ ಪಡೆದಿದ್ದು, 7,499 ರೂ.ನಲ್ಲಿ ಮಾರಾಟವಾಗುತ್ತಿದೆ. ಇದು 8 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಟಿರಿಯೊ ಧ್ವನಿ ಆಯ್ಕೆ ಪಡೆದಿದೆ. ಇದರಲ್ಲಿ ಸಂಗೀತವನ್ನು ಆಲಿಸುವುದರ ಹೊರತಾಗಿ ಎಕೋ ಶೋ 8 ರ ಸಹಾಯದಿಂದ ಮನೆಯಲ್ಲಿನ ಸ್ಮಾರ್ಟ್ ಹೋಮ್ ಸಾಧನಗಳನ್ನು ಸಹ ನಿಯಂತ್ರಿಸಬಹುದಾಗಿದೆ.

ಎಕೋ ಡಾಟ್ (3ನೇ ತಲೆಮಾರು)

ಎಕೋ ಡಾಟ್ (3ನೇ ತಲೆಮಾರು)

ಈ ಸ್ಮಾರ್ಟ್‌ ಡಿವೈಸ್‌ ಅನ್ನು ಅಮೆಜಾನ್‌ನ ಈ ಆಫರ್‌ನಲ್ಲಿ ಕೇವಲ 1,549 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದಕ್ಕೆ 2,950ರೂ. ಗಳ ರಿಯಾಯಿತಿ ನೀಡಲಾಗಿದೆ. ಎಕೋ ಡಾಟ್‌ನ್ನು ನಿಮ್ಮ ಧ್ವನಿಯೊಂದಿಗೆ ನಿಯಂತ್ರಿಸಬಹುದು. ಇದು ಅಮೆಜಾನ್‌ ಪ್ರೈಮ್‌ ಮ್ಯೂಸಿಕ್‌ ಹಾಗೂ ಸ್ಪಾಟಿಫೈ, ಗಾನಾ ಸೇರಿದಂತೆ ಇತರ ಅಪ್ಲಿಕೇಶನ್‌ಗಳಿಂದ ಹಾಡುಗಳನ್ನು ಸ್ಟ್ರೀಮ್ ಮಾಡುತ್ತದೆ. ಇದರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಬಹುದಾಗಿದೆ.

ಎಕೋ ಬಡ್ಸ್ (2ನೇ ತಲೆಮಾರು)

ಎಕೋ ಬಡ್ಸ್ (2ನೇ ತಲೆಮಾರು)

ಈ ಸ್ಮಾರ್ಟ್‌ ಡಿವೈಸ್‌ 6,500 ರೂ.ಗಳ ರಿಯಾಯಿತಿ ಪಡೆದಿದ್ದು, 5,499 ಗಳಲ್ಲಿ ಇದನ್ನು ಕೊಂಡುಕೊಳ್ಳಬಹುದಾಗಿದೆ. ವಾಯರ್‌ಲೆಸ್‌ ಇಯರ್‌ಬಡ್‌ಗಳು ಸಕ್ರಿಯ ಶಬ್ದ ರದ್ದತಿ ಆಯ್ಕೆ ಪಡೆದಿವೆ. ಹಾಗೆಯೇ ಆಂಡ್ರಾಯ್ಡ್‌ ಮತ್ತು iOS ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಅಲೆಕ್ಸಾ ಬೆಂಬಲದಲ್ಲಿ ಕೆಲಸ ಮಾಡಲಿದ್ದು, ಇದನ್ನು ಒಮ್ಮೆಲೆ ಚಾರ್ಜ್‌ ಮಾಡಿದರೆ 5 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಪಡೆಯಬಹುದಾಗಿದೆ.

ಎಕೋ ಫ್ಲೆಕ್ಸ್-ಪ್ಲಗ್-ಇನ್

ಎಕೋ ಫ್ಲೆಕ್ಸ್-ಪ್ಲಗ್-ಇನ್

ಈ ಸ್ಮಾರ್ಟ್‌ ಡಿವಸ್‌ ಸಹ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಇದು 1,500 ರೂ.ಗಳ ಡಿಸ್ಕೌಂಟ್‌ ಪಡೆದಿದ್ದು, 1,499 ರೂ.ನಲ್ಲಿ ಲಭ್ಯವಿದೆ. ಪ್ಲಗ್-ಇನ್ ಎಕೋ ಸಾಧನ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ನಿಮ್ಮ ವಾಯ್ಸ್ ಕಮಂಡ್ಸ್ ಬಳಸಲು ಅನುಮತಿಸುತ್ತದೆ. ಸಾಧನವು ನಿಮ್ಮ ಸಾಮಾನ್ಯ ಸ್ಪೀಕರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಫೈರ್ ಟಿವಿ ಸ್ಟಿಕ್ ಲೈಟ್

ಫೈರ್ ಟಿವಿ ಸ್ಟಿಕ್ ಲೈಟ್

ಈ ಸ್ಮಾರ್ಟ್‌ ಟಿವಿ ಸ್ಟಿಕ್‌ ಬರೋಬ್ಬರಿ 2,300 ರೂ.ಗಳ ರಿಯಾಯಿತಿ ಪಡೆದಿದ್ದು, 1,699 ರೂ. ಗಳಲ್ಲಿ ಲಭ್ಯವಿದೆ. ಫೈರ್ ಟಿವಿ ಸ್ಟಿಕ್ ಲೈಟ್ ಅಲೆಕ್ಸಾ ವಾಯ್ಸ್ ರಿಮೋಟ್ ಲೈಟ್‌ ಆಯ್ಕೆ ಪಡೆದಿದೆ. ಇದರಲ್ಲಿ ಟಿವಿ ನಿಯಂತ್ರಣದ ಆಯ್ಕೆ ಇಲ್ಲ. ಯೂಟ್ಯೂಬ್‌, ಯೂಟ್ಯೂಬ್‌ ಕಿಡ್ಸ್‌, MXPlayer, TVFPlayer, YuppTV, ಮತ್ತು ಇನ್ನೂ ಅನೇಕ ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡಲಿದೆ.

ಫೈರ್ ಟಿವಿ ಸ್ಟಿಕ್ ಪ್ಲಸ್

ಫೈರ್ ಟಿವಿ ಸ್ಟಿಕ್ ಪ್ಲಸ್

ಈ ಫೈರ್ ಟಿವಿ ಸ್ಟಿಕ್ ಪ್ಲಸ್ 5,397 ರೂ.ಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಹಾಗೆಯೇ 2,599 ರೂ.ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ ಡಿವೈಸ್‌ ವಿವಿಧ OTT ಪ್ಲಾಟ್‌ಫಾರ್ಮ್‌ಗಳ ವಾರ್ಷಿಕ ಚಂದಾದಾರಿಕೆಗಳ ಆಯ್ಕೆಯನ್ನೂ ಪಡೆದಿದೆ. ಈ ಸಾಧನವು ಡಾಲ್ಬಿ ಅಟ್ಮಾಸ್ ಬೆಂಬಲದಲ್ಲಿ ಕೆಲಸ ಮಾಡಲಿದ್ದು, ಅಲೆಕ್ಸಾ ವಾಯ್ಸ್ ರಿಮೋಟ್ ಮೂಲಕ ವಾಯ್ಸ್ ಕಮಂಡ್ಸ್ನಲ್ಲಿ ಟಿವಿಯನ್ನು ನಿಯಂತ್ರಿಸಬಹುದಾಗಿದೆ.

ಫೈರ್ ಟಿವಿ ಸ್ಟಿಕ್ 4K

ಫೈರ್ ಟಿವಿ ಸ್ಟಿಕ್ 4K

ಈ ಡಿವೈಸ್‌ 3,000 ರೂ.ಗಳ ರಿಯಾಯಿತಿ ಪಡೆದು 2,999 ರೂ.ಗಳಿಗೆ ಲಭ್ಯವಾಗಲಿದೆ. ಈ ಅಮೆಜಾನ್‌ನ ಫೈರ್ ಟಿವಿ ಸ್ಟಿಕ್ 4K ಡಾಲ್ಬಿ ವಿಷನ್, HDR ಮತ್ತು HDR10+ ಗೆ ಬೆಂಬಲ ನೀಡುತ್ತದೆ. 4K ಅಲ್ಟ್ರಾ ಹೆಚ್‌ಡಿ ನಲ್ಲಿ ಟಿವಿ ನೋಡಲು ಅನುವು ಮಾಡಿಕೊಡುತ್ತದೆ. ಡಾಲ್ಬಿ ಅಟ್ಮಾಸ್ ಆಡಿಯೋ ಜೊತೆಗೆ ಹೋಮ್ ಥಿಯೇಟರ್ ಅನುಭವವನ್ನು ಇದು ನೀಡುತ್ತದೆ.

Best Mobiles in India

English summary
Amazon Great Indian Sale has started. In this article we have given the details of some of the smart devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X