ಅಮೆಜಾನ್‌ ಎಕ್ಸ್‌ಟ್ರಾ ಹ್ಯಾಪಿನೆಸ್ ಡೇಸ್ ಸೇಲ್‌: ಈ ಗ್ಯಾಜೆಟ್ಸ್‌ಗಳಿಗೆ ಭಾರೀ ಆಫರ್

|

ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಎಕ್ಸ್‌ಟ್ರಾ ಹ್ಯಾಪಿನೆಸ್ ಡೇಸ್ ಸೇಲ್‌ನಲ್ಲಿ ಹಲವಾರು ಗ್ಯಾಜೆಟ್‌ಗಳಿಗೆ ಭರ್ಜರಿ ಆಫರ್‌ ನೀಡಿದೆ ಅದರಲ್ಲೂ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಹೋಮ್‌ ಗ್ಯಾಜೆಟ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡಿವೆ. ಅದಕ್ಕೂ ಮಿಗಿಲಾಗಿ ಅಮೆಜಾನ್‌ನ ಈ ಸೇಲ್‌ನಲ್ಲಿ ಪ್ರಮುಖ ಗ್ಯಾಜೆಟ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಸೇಲ್‌ನಲ್ಲಿ ಒನ್‌ಪ್ಲಸ್‌, ಐಕ್ಯೂ, ಬೋಟ್‌ ಸೇರಿದಂತೆ ಇನ್ನಿತರೆ ಕಂಪೆನಿಗಳ ಗ್ಯಾಜೆಟ್‌ಗಳನ್ನು ನೀವು ಆಕರ್ಷಕ ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಬಹುದು. ಅದರಲ್ಲೂ ಸಹ ಆಯ್ದ ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ. ಹಾಗಿದ್ರೆ ಆಫರ್‌ ಬೆಲೆಯಲ್ಲಿ ಲಭ್ಯ ಆಗುವ ಕೆಲವು ಗ್ಯಾಜೆಟ್‌ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಒನ್‌ಪ್ಲಸ್ 10R 5G ಪ್ರೈಮ್‌ ಎಡಿಷನ್

ಒನ್‌ಪ್ಲಸ್ 10R 5G ಪ್ರೈಮ್‌ ಎಡಿಷನ್

ಇದರ ಮೂಲ ಬೆಲೆ 38,999ರೂ. ಗಳಾಗಿದ್ದು, ಅಮೆಜಾನ್‌ 32,999ರೂ. ಗಳಿಗೆ ನೀಡುತ್ತಿದೆ. ಇದಿಷ್ಟೇ ಅಲ್ಲದೆ ಐಸಿಐಸಿಐ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿ ಮಾಡಿದರೆ 2,000 ತ್ವರಿತ ರಿಯಾಯಿತಿ ಪಡೆಯಬಹುದು. ಜೊತೆಗೆ ವಿನಿಮಯ ಆಯ್ಕೆ ಸಹ ಇದ್ದು 28,000ರೂ. ಗಳ ವರೆಗೆ ರಿಯಾಯಿತಿ ಸಿಗಲಿದೆ. ಇದರ ಜೊತೆಗೆ ಅಮೆಜಾನ್‌ ಪೇ ಮೂಲಕ ಕೊಂಡುಕೊಂಡರೆ 500ರೂ. ಗಳ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಇನ್ನು ಈ ಸ್ಮರ್ಟ್‌ಫೋನ್‌ 6.7ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ನಿಂದ ಕಾರ್ಯನಿರ್ವಹಿಸಲಿದೆ.

ಐಕ್ಯೂ Z6 ಲೈಟ್ 5G

ಐಕ್ಯೂ Z6 ಲೈಟ್ 5G

ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್‌ಗೆ ಮೂಲ ದರ 15,999ರೂ. ಗಳಾಗಿದ್ದು, ಅಮೆಜಾನ್‌ನಲ್ಲಿ 13,999ರೂ. ಗಳಿಗೆ ಖರೀದಿ ಮಾಡಬಹುದು. ಇದರಲ್ಲಿ ಯಾವುದೇ ಬ್ಯಾಂಕ್‌ಗಳ ಕ್ರೆಡಿಟ್‌ ಹಾಗೂ ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,000 ರೂ. ಗಳ ತ್ವರಿತ ರಿಯಾಯಿತಿ ಸಿಗಲಿದೆ. ಹಾಗೆಯೇ ಇಎಂಐ ಆಯ್ಕೆ ಮತ್ತು ವಿನಿಮಯ ಕೊಡುಗೆ ಸಹ ಲಭ್ಯ ಇರಲಿದೆ. ಈ ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್‌ ವಿಶ್ವದ ಮೊದಲ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಿದೆ. ಹಾಗೆಯೇ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಇದರಲ್ಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಬೋಟ್ ರಾಕರ್ಜ್ 450

ಬೋಟ್ ರಾಕರ್ಜ್ 450

ಬೋಟ್ ರಾಕರ್ಜ್ 450 ಬ್ಲೂಟೂತ್ ಆನ್ ಇಯರ್ ಹೆಡ್‌ಫೋನ್‌ ಮೂಲ ದರ 3,990ರೂ. ಗಳಾಗಿದ್ದು, ಅಮೆಜಾನ್‌ನಲ್ಲಿ ಕೇವಲ 1,149ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮತ್ತು ಅಮೆಜಾನ್ ಪೇ ಮೂಲಕ ಖರೀದಿ ಮಾಡಿದರೆ ಇನ್ನೂ ಹೆಚ್ಚುವರಿ ರಿಯಾಯಿತಿ ಲಭ್ಯ ಆಗಲಿದೆ. ಈ ಬೋಟ್ ರಾಕರ್ಜ್ 450 ಹೆಡ್‌ಫೋನ್‌ ಬ್ಲೂಟೂತ್ ಮತ್ತು ಆಕ್ಸ್ ಇನ್‌ಪುಟ್ ಮೂಲಕ ಡ್ಯುಯಲ್ ಮೋಡ್ ಕನೆಕ್ಟಿವಿಟಿ ಆಯ್ಕೆ ಪಡೆದಿದ್ದು, 15 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. 40 ಎಂಎಂ ಡೈನಾಮಿಕ್ ಡ್ರೈವರ್‌ ಆಯ್ಕೆಯ ಜೊತೆಗೆ ಅತ್ಯುತ್ತಮ ಸಂಗೀತದ ಅನುಭವ ಸಿಗಲಿದೆ.

ಒನ್‌ಪ್ಲಸ್ ಟಿವಿ 43 Y1S ಪ್ರೊ

ಒನ್‌ಪ್ಲಸ್ ಟಿವಿ 43 Y1S ಪ್ರೊ

ಒನ್‌ಪ್ಲಸ್ ಟಿವಿ 43 Y1S ಪ್ರೊ ಸ್ಮಾರ್ಟ್‌ಟಿವಿ ಮೂಲ ದರ 39,999ರೂ. ಗಳಾಗಿದ್ದು, ಇದನ್ನು ನೀವು ಅಮೆಜಾನ್‌ನ ಈ ಸೇಲ್‌ನಲ್ಲಿ 26,999ರೂ. ಗಳಿಗೆ ಕೊಂಡಕೊಳ್ಳಬಹುದು. ಇದರ ಜೊತೆಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ 26,499ರೂ. ಗಳನ್ನಷ್ಟೇ ಪಾವತಿಸಬಹುದು. ಹಾಗೆಯೇ ಅಮೆಜಾನ್ ಪೇ ಮೂಲಕ 300ರೂ. ಗಳ ಕ್ಯಾಶ್‌ಬ್ಯಾಕ್ ಮತ್ತು ಬೋನಸ್ ಪಾಯಿಂಟ್‌ಗಳು ಲಭ್ಯವಾಗಲಿವೆ.ಈ ಸ್ಮಾರ್ಟ್ ಟಿವಿ 43 ಇಂಚಿನ 4K ಯುಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಎರಡು ಪೂರ್ಣ ಶ್ರೇಣಿಯ ಸ್ಪೀಕರ್‌ಗಳನ್ನು ಹೊಂದಿದೆ. ಇವು 24W ನ ಸಂಯೋಜಿತ ಆಡಿಯೋ ಔಟ್‌ಪುಟ್‌ ನೀಡಲಿದ್ದು, ಡಾಲ್ಬಿ ಆಡಿಯೊ ಆಯ್ಕೆಯನ್ನು ಇದು ಬೆಂಬಲಿಸುತ್ತದೆ.

ಅಮೇಜ್‌ಫಿಟ್ ಜಿಟಿಎಸ್ 2 (ಹೊಸ ಆವೃತ್ತಿ)

ಅಮೇಜ್‌ಫಿಟ್ ಜಿಟಿಎಸ್ 2 (ಹೊಸ ಆವೃತ್ತಿ)

ಅಮೇಜ್‌ಫಿಟ್ ಜಿಟಿಎಸ್ 2 ಸ್ಮಾರ್ಟ್‌ವಾಚ್‌ 16,999ರೂ. ಗಳ ಮೂಲ ದರ ಹೊಂದಿದ್ದು, ಅಮೆಜಾನ್‌ 7,499ರೂ. ಗಳಿಗೆ ಮಾರಾಟ ಮಾಡಲಿದೆ. ಇದರೊಂದಿಗೆ ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 1,250ರೂ. ಗಳ ರಿಯಾಯಿತಿ ಸಹ ಪಡೆದುಕೊಳ್ಳಬಹುದು. ವಿನಿಮಯ ಆಫರ್‌ನಲ್ಲಿ 7,100ರೂ. ಗಳ ಡಿಸ್ಕೌಂಟ್‌ ಸಹ ಲಭ್ಯ ಆಗಲಿದೆ. ಅಮೇಜ್‌ಫಿಟ್ ಜಿಟಿಎಸ್ 2 ಸ್ಮಾರ್ಟ್ ವಾಚ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90 ಸ್ಪೋರ್ಟ್‌ ಮೋಡ್‌ಗಳನ್ನು ಹೊಂದಿದೆ. ಈ ವಾಚ್‌ ಹೃದಯ ಬಡಿತದ ಟ್ರ್ಯಾಕಿಂಗ್, SpO2 ಮಾನಿಟರಿಂಗ್, ಒತ್ತಡದ ಟ್ರ್ಯಾಕಿಂಗ್ ಹಾಗೂ ಇನ್ನಿತರ ಆರೋಗ್ಯ ಸಂಬಂಧಿತ ಮೇಲ್ವಿಚಾರಣೆ ಮಾಡಲಿದೆ.

ಒನ್‌ಪ್ಲಸ್ ಬುಲೆಟ್ಸ್‌ ವೈರ್‌ಲೆಸ್ Z2

ಒನ್‌ಪ್ಲಸ್ ಬುಲೆಟ್ಸ್‌ ವೈರ್‌ಲೆಸ್ Z2

ಒನ್‌ಪ್ಲಸ್ ಬುಲೆಟ್ಸ್‌ ವೈರ್‌ಲೆಸ್ Z2 ನೆಕ್‌ಬ್ಯಾಂಡ್ 2,299ರೂ, ಗಳ ಮೂಲ ಬೆಲೆ ಹೊಂದಿದ್ದು, ಇದನ್ನು ಆಫರ್‌ ಬೆಲೆಯಲ್ಲಿ 1,599ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ 12.4 ಎಂಎಂ ಡ್ರೈವರ್‌ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ.

ಎಕೋ ಶೋ 8 (2ನೇ ಜನ್)

ಎಕೋ ಶೋ 8 (2ನೇ ಜನ್)

ಎಕೋ ಶೋ 8 (2ನೇ ಜನ್) ಸ್ಮಾರ್ಟ್‌ ಸ್ಪೀಕರ್ 13,999ರೂ. ಗಳ ಸಾಮಾನ್ಯ ದರ ಹೊಂದಿದ್ದು, ಇದನ್ನು 7,499ರೂ. ಗಳಿಗೆ ಖರೀದಿ ಮಾಡಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1,250 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನೂ ಸಹ ಪಡೆಯಬಹುದಾಗಿದೆ. ಈ ಎಕೋ ಶೋ 8 (2ನೇ ಜನ್) ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ 8 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇನ್‌ಬಿಲ್ಟ್‌ ಅಲೆಕ್ಸಾ ಫೀಚರ್ಸ್‌ ಹೊಂದಿದ್ದು, ವಿಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಇದರಲ್ಲಿದೆ.

Best Mobiles in India

English summary
Amazon has offered several gadgets at its Great Indian Festival Extra Happiness Days Sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X