ಅಮೆಜಾನ್‌ ಸೇಲ್‌: ಈ ಲ್ಯಾಪ್‌ಟಾಪ್‌ಗಳಿಗೆ ಆಕರ್ಷಕ ರಿಯಾಯಿತಿ!

|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹ್ಯಾಪಿನೆಸ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಹಲವಾರು ಗ್ಯಾಜೆಟ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌‌, ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳು ಆಕರ್ಷಕ ರಿಯಾಯಿತಿ ಪಡೆದುಕೊಂಡಿವೆ. ಅದರಂತೆ ಈ ಸೇಲ್‌ನಲ್ಲಿ ಪ್ರಮುಖವಾಗಿ ಹಗುರವಾದ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿವೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಸೇಲ್‌ನಲ್ಲಿ ಹಗುರವಾದ ಲ್ಯಾಪ್‌ಟಾಪ್‌ಗಳಿಗೆ ಅಮೆಜಾನ್‌ ಆಕರ್ಷಕ ಕೊಡುಗೆ ನೀಡಲಾಗಿದೆ. ಇದರಲ್ಲಿ ಸ್ಯಾಮ್‌ಸಂಗ್‌, ಲೆನೊವೊ, ಏಸರ್‌ ಸೇರಿದಂತೆ ಇನ್ನಿತರೆ ಕಂಪೆನಿಯ ಲ್ಯಾಪ್‌ಟಾಪ್‌ಗಳು ಹೆಚ್ಚಿನ ರಿಯಾಯಿತಿಯಲ್ಲಿ ಮಾರಾಟ ಆಗುತ್ತಿವೆ. ನೀವೇನಾದರೂ ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಲೇಖನ ಓದಿ. ಇದರಲ್ಲಿ ಹಗುರವಾದ ಲ್ಯಾಪ್‌ಟಾಪ್‌ಗಳ ಬೆಲೆ ಹಾಗೂ ಕೆಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌2

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌2

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌2 ಸಾಮಾನ್ಯ ದರ 83,990ರೂ. ಗಳಾಗಿದ್ದು, ಅಮೆಜಾನ್‌ನ ಈ ಸೇಲ್‌ನಲ್ಲಿ 59,990ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 15.6 ಇಂಚಿನ FHD LED ಡಿಸ್‌ಪ್ಲೇ ಹೊಂದಿದ್ದು, 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್ ಮತ್ತು ಇಂಟೆಲ್‌ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ಸಿದ್ಧವಾಗಿದೆ. ಇನ್ನುಳಿದಂತೆ 8GBRAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ.

ಅಸುಸ್‌ ಜೆನ್‌ಬುಕ್‌13 OLED

ಅಸುಸ್‌ ಜೆನ್‌ಬುಕ್‌13 OLED

ಅಸುಸ್‌ ಜೆನ್‌ಬುಕ್‌13 OLED ಲ್ಯಾಪ್‌ಟಾಪ್‌ 98,990ರೂ. ಗಳ ಸಾಮಾನ್ಯ ದರ ಹೊಂದಿದ್ದು, 67,990ರೂ. ಗಳಿಗೆ ಖರೀದಿ ಮಾಡಬಹುದು. 13 ಇಂಚಿನ FHD OLED ಡಿಸ್‌ಪ್ಲೇ ಹೊಂದಿದ್ದು, 11 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ನಿಂದ ರನ್‌ ಆಗಲಿದೆ. ಹಾಗೆಯೇ ಇದರಲ್ಲಿ 16GB RAM ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಇದ್ದು, ವಿಂಡೋಸ್ 11 ರಲ್ಲಿ ಕಾರ್ಯನಿರ್ವಹಿಸುತ್ತದೆ.

ಲೆನೊವೊ ಯೋಗ ಸ್ಲಿಮ್ 7 ಪ್ರೊ

ಲೆನೊವೊ ಯೋಗ ಸ್ಲಿಮ್ 7 ಪ್ರೊ

ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ 1,06,290ರೂ. ಗಳ ಸಾಮಾನ್ಯ ದರ ಹೊಂದಿದ್ದು, ಅಮೆಜಾನ್‌ನ ಈ ಸೇಲ್‌ನಲ್ಲಿ 72,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ 2.8K IPS ಡಿಸ್‌ಪ್ಲೇ ಹೊಂದಿದ್ದು, 400nits ಬ್ರೈಟ್‌ನೆಸ್‌ ಹಾಗೂ 90Hz ರಿಫ್ರೆಶ್ ರೇಟ್‌ ಪಡೆದಿದೆ. ಇನ್ನುಳಿದಂತೆ 11 ನೇ ತಲೆಮಾರಿನ ಇಂಟೆಲ್‌ಕೋರ್‌ i5 CPU ನಿಂದ ರನ್‌ ಆಗಲಿದ್ದು, 16GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಏಸರ್ ಸ್ವಿಫ್ಟ್ 3 SF314-512

ಏಸರ್ ಸ್ವಿಫ್ಟ್ 3 SF314-512

ಅಮೆಜಾನ್‌ನ ಈ ಸೇಲ್‌ನಲ್ಲಿ ಏಸರ್ ಸ್ವಿಫ್ಟ್ 3 SF314-512 ಲ್ಯಾಪ್‌ಟಾಪ್‌ ಅನ್ನು 59,990ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 59,990ರೂ. ಗಳಾಗಿದೆ. ಹಾಗೆಯೇ ಇದು 14 ಇಂಚಿನ ಕ್ವಾಡ್ HD IPS ಡಿಸ್‌ಪ್ಲೇ ಹೊಂದಿದ್ದು, 12 ನೇ ತಲೆಮಾರಿನ ಇಂಟೆಲ್ ಕೋರ್ i5 CPU ನಲ್ಲಿ ರನ್‌ ಆಗಲಿದೆ. ಜೊತೆಗೆ 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಪ್ರೊ 360

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಪ್ರೊ 360

ಈ ಲ್ಯಾಪ್‌ಟಾಪ್‌ 1,39,990ರೂ. ಗಳ ಸಾಮಾನ್ಯ ದರ ಹೊಂದಿದ್ದು, ಇದನ್ನು ನೀವು 99,680ರೂ. ಗಳಿಗೆ ಅಮೆಜಾನ್‌ ಸೇಲ್‌ನಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದು 13.3 ಇಂಚಿನ FHD ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, 16GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

Fujitsu CH

Fujitsu CH

ಈ ಲ್ಯಾಪ್‌ಟಾಪ್‌ಗೆ 1,00,590ರೂ. ಗಳ ಸಾಮಾನ್ಯ ದರ ಇದ್ದು, ಅಮೆಜಾನ್‌ 59,990ರೂ. ಗಳಲ್ಲಿ ಮಾರಾಟ ಮಾಡುತ್ತಿದೆ. ಇದು 13 ಇಂಚಿನ FHD ಇಂಡಿಯಂ ಗ್ಯಾಲಿಯಂ ಜಿಂಕ್ ಆಕ್ಸೈಡ್ (IGZO) ಡಿಸ್‌ಪ್ಲೇ ಹೊಂದಿದ್ದು, 400nits ಬ್ರೈಟ್‌ನೆಸ್‌ ನೀಡಲಿದೆ. ಈ ಲ್ಯಾಪ್‌ಟಾಪ್‌ ವಿಂಡೋಸ್‌ 11 ನಲ್ಲಿ ಕಾರ್ಯನಿರ್ವಹಿಸಲಿದ್ದು, 11 ನೇ ತಲೆಮಾರಿನ ಇಂಟೆಲ್‌ ಕೋರ್‌ i5 CPU ನಿಂದ ರನ್‌ ಆಗಲಿದೆ. ಜೊತೆಗೆ 16GB RAM ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

Best Mobiles in India

English summary
Amazon Great Indian Festival Happiness Upgrade Days Sale has announced huge discounts on several gadgets. Similarly, laptops are also heavily discounted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X