ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಈ ಗ್ಯಾಜೆಟ್ಸ್‌ಗೆ ಭಾರೀ ರಿಯಾಯಿತಿ!

|

ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಸೇಲ್‌ ಮುಂದುವರಿದ ಭಾಗವಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹ್ಯಾಪಿನೆಸ್ ಅಪ್‌ಗ್ರೇಡ್ ಡೇಸ್ 2022 ಅನ್ನು ಅಮೆಜಾನ್ ಆಯೋಜನೆ ಮಾಡಿದೆ. ಇದರಲ್ಲಿ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಟಿವಿಗಳು ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗಿದೆ.

ಅಮೆಜಾನ್‌

ಹೌದು, ಈ ಅಮೆಜಾನ್‌ನ ಹಬ್ಬದ ಋತುವಿನ ಸೇಲ್‌ನಲ್ಲಿ ಪ್ರಮುಖ ಡಿವೈಸ್‌ಗಳು ಭಾರೀ ರಿಯಾಯಿತಿ ಪಡೆದುಕೊಂಡಿವೆ. ಇದರ ಜೊತೆಗೆ ಸಿಟಿ ಬ್ಯಾಂಕ್‌, ಒನ್‌ಕಾರ್ಡ್‌, ಆರ್‌ಬಿಎಲ್‌ ಬ್ಯಾಂಕ್‌ ಮತ್ತು ರುಪೇ ಕಾರ್ಡ್‌ಗಳಲ್ಲಿ ಖರೀದಿ ಮಾಡಿದರೆ 10 % ಹೆಚ್ಚುವರಿ ರಿಯಾಯಿತಿಯನ್ನೂ ಸಹ ನೀಡುತ್ತಿದೆ. ಜೊತೆಗೆ ವಿನಿಮಯ ಆಫರ್‌ ಸಹ ಇದರಲ್ಲಿದೆ. ಹಾಗಿದ್ದರೆ ಈ ಸೇಲ್‌ನಲ್ಲಿ ಲಭ್ಯವಾಗುವ ಪ್ರಮುಖ ಗ್ಯಾಜೆಟ್‌ಗಳು ಯಾವುವು?, ರಿಯಾಯಿತಿ ಎಷ್ಟು ಎಂಬುದನ್ನು ಈ ಲೇಖನದಲ್ಲಿ ಗಮನಿಸೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  S22 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G

ಅಮೆಜಾನ್‌ನ ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಸ್ಮಾರ್ಟ್‌ಫೋನ್‌ ಅನ್ನು 52,999ರೂ. ಗಳ ರಿಯಾಯಿತಿ ದರದಲ್ಲಿ ಖದೀದಿ ಮಾಡಬಹುದಾಗಿದೆ. ಇದು ಕೂಪನ್‌ ಡಿಸ್ಕೌಂಟ್‌ ಆಯ್ಕೆಯನ್ನೂ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಖರೀದಿಗೆ ನೋ ಕಾಸ್ಟ್‌ ಇಎಂಐ ಆಯ್ಕೆ ನೀಡಲಾಗಿದ್ದು, ಪ್ರಮುಖ ಆಯ್ದ ಡಿವೈಸ್‌ಗಳ ವಿನಿಮಯದ ಕೊಡುಗೆಯನ್ನೂ ಸಹ ಕೊಡಲಾಗಿದೆ. ಈ ಮೂಲಕ ಬರೋಬ್ಬರಿ 12,800ರೂ. ಗಳ ವರೆಗೂ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಒನ್ ಪ್ಲಸ್ ನಾರ್ಡ್ CE 2 Lite

ಒನ್ ಪ್ಲಸ್ ನಾರ್ಡ್ CE 2 Lite

ಈ ಸ್ಮಾರ್ಟ್‌ಫೋನ್‌ ಅನ್ನು 18,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಜೊತೆಗೆ ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಲು ಕೂಪನ್ ಅನ್ನು ಬಳಸಬಹುದು. ಇದರಲ್ಲಿ ನೀವು 500ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ. ಜೊತೆಗೆ ಹಳೆಯ ಫೋನ್‌ ವಿನಿಮಯಕ್ಕೆ ತ್ವರಿತ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬರೋಬ್ಬರಿ 14,350ರೂ. ಗಳ ತ್ವರಿತ ಡಿಸ್ಕೌಂಟ್‌ ಪಡೆಯಬಹುದು. ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 19,999ರೂ. ಗಳಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  M13

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಅನ್ನು ಈ ವರ್ಷದ ಅಮೆಜಾನ್‌ನ ಸೇಲ್‌ ನಲ್ಲಿ ಕೇವಲ 10,499ರೂ. ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 14,999ರೂ. ಗಳಾಗಿದೆ. ಇನ್ನುಳಿದಂತೆ ವಿನಿಮಯ ಕೊಡುಗೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ 8,950ರೂ. ಗಳ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಹಾಗೆಯೇ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ಹೆಚ್ಚುವರಿ 1,000ರೂ. ಗಳ ರಿಯಾಯಿತಿ ಪಡೆಯಬಹುದು.

ಐಕ್ಯೂ ನಿಯೋ 6 5G

ಐಕ್ಯೂ ನಿಯೋ 6 5G

ಐಕ್ಯೂ ನಿಯೋ 6 5G ಈಗ 28,999.ರೂ. ಗಳಿಗೆ ಮಾರಾಟವಾಗುತ್ತಿದೆ. ವಿನಿಯಮ ಆಫರ್‌ ಸಹ ಅನ್ವಯ ಆಗಲಿದ್ದು, 14,350ರೂ. ಗಳ ವರೆಗೆ ರಿಯಾಯಿತಿ ಪಡೆಯಬಹುದು. ಇನ್ನುಳಿದಂತೆ ಎಸ್‌ಬಿಐ ಕ್ರೆಡಿಟ್‌ ಹಾಗೂ ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 2,000ರೂ. ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ಸೋನಿ WH-1000XM4 ವೈರ್‌ಲೆಸ್ ಹೆಡ್‌ಫೋನ್‌

ಸೋನಿ WH-1000XM4 ವೈರ್‌ಲೆಸ್ ಹೆಡ್‌ಫೋನ್‌

ಈ ಡಿವೈಸ್‌ಗೆ ಅಮೆಜಾನ್‌ ಹೆಚ್ಚಿನ ಡಿಸ್ಕೌಂಟ್‌ ನೀಡಿದೆ. ಇದರ ಸಾಮಾನ್ಯ ದರ 29,990ರೂ. ಗಳಾಗಿದ್ದು, 19,900ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನುಳಿದಂತೆ ಈ ಹೆಡ್‌ಫೋನ್‌ ಖರೀದಿಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಸಿದರೆ ಕೇವಲ 16,200ರೂ. ಗಳಲ್ಲಿ ಇದು ನಿಮ್ಮದಾಗುತ್ತದೆ. ಅಷ್ಟೇ ಅಲ್ಲದೆ, ಇನ್ನಿತರೆ ಯಾವುದೇ ಆನ್‌ಲೈನ್‌ ಪಾವತಿಗೂ 2,000ರೂ. ರಿಯಾಯಿತಿ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ TWS ಇಯರ್‌ಫೋನ್‌ಗಳನ್ನು ಅಮೆಜಾನ್‌ನ ಈ ಸೇಲ್‌ನಲ್ಲಿ 7,990ರೂ. ಗಳಿಗೆ ಕೊಂಡುಕೊಳ್ಳಬಹುದು. ಈ ಸ್ಮಾರ್ಟ್‌ ಡಿವೈಸ್‌ 28 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿವೆ. ಹಾಗೆಯೇ 99 % ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆಯನ್ನೂ ಸಹ ಪಡೆದಿದೆ.

ಸೋನಿ ಬ್ರಾವಿಯಾ  ಸ್ಮಾರ್ಟ್‌ಟಿವಿ

ಸೋನಿ ಬ್ರಾವಿಯಾ ಸ್ಮಾರ್ಟ್‌ಟಿವಿ

55 ಇಂಚಿನ 4K ಅಲ್ಟ್ರಾ HD ಡಿಸ್‌ಪ್ಲೇ ಹೊಂದಿರುವ ಸೋನಿ ಬ್ರಾವಿಯಾ ಸ್ಮಾರ್ಟ್‌ಟಿವಿಗೆ ಸಾಮಾನ್ಯ ದರ 99,900ರೂ. ಗಳಾಗಿದ್ದು, ಅಮೆಜಾನ್‌ನಲ್ಲಿ ನೀವು ಕೇವಲ 60,990ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಕೂಪನ್‌ ಬಳಸಿದರೆ 1,000ರೂ. ಗಳ ಹೆಚ್ಚುವರಿ ರಿಯಾಯಿತಿ ಪಡೆಯುವುದರ ಜೊತೆಗೆ ಯಾವುದೇ ಬ್ಯಾಂಕಿನ ಕಾರ್ಡ್ ಬಳಸಿ ಮಾಡಿದ ಪಾವತಿಗಳ ಮೇಲೆ 2,500ರೂ. ಗಳ ಡಿಸ್ಕೌಂಟ್‌ ಸಹ ಪಡೆಯಬಹುದು. ಇದರೊಂದಿಗೆ ವಿನಿಯಮ ಆಫರ್‌ಗಳನ್ನು ಸಹ ನೀಡಲಾಗಿದೆ.

ಎಕೋ ಡಾಟ್ ವಿತ್‌ ವಿಪ್ರೋ ಸ್ಮಾರ್ಟ್ ಬಲ್ಬ್‌

ಎಕೋ ಡಾಟ್ ವಿತ್‌ ವಿಪ್ರೋ ಸ್ಮಾರ್ಟ್ ಬಲ್ಬ್‌

ಮನೆಯ ಅಂದವನ್ನು ಹೆಚ್ಚಿಗೆ ಮಾಡಲು ಈ ಸ್ಮಾರ್ಟ್‌ ಗಾಜೆಟ್ಸ್‌ಗಳು ಸಹಕಾರಿ. ಅಮೆಜಾನ್ ತನ್ನ ಸೇಲ್‌ನಲ್ಲಿ ಈ ಕಿಟ್‌ಅನ್ನು 2,299ರೂ. ಗಳಿಗೆ ಮಾರಾಟ ಮಾಡುತ್ತಿದೆ. ಇದರಲ್ಲಿ ಎಕೋ ಡಾಟ್ ಜೊತೆಗೆ ವಿಪ್ರೋ ಸ್ಮಾರ್ಟ್ ಬಲ್ಬ್‌ ಅನ್ನು ಸಹ ನೀಡುತ್ತಿರುವುದು ವಿಶೇಷ. ಈ ಕಾಂಬೋದ ಮೂಲ ಬೆಲೆ 6,598ರೂ. ಗಳಾಗಿದೆ.

ಫೈರ್ ಟಿವಿ ಸ್ಟಿಕ್

ಫೈರ್ ಟಿವಿ ಸ್ಟಿಕ್

ಫೈರ್ ಟಿವಿ ಸ್ಟಿಕ್ ಅನ್ನು ಅಮೆಜಾನ್‌ 1,999ರೂ. ಗಳಿಗೆ ಮಾರಾಟ ಮಾರಾಟ ಮಾಡುತ್ತಿದೆ. ಇದರೊಂದಿಗೆ ಹಲವಾರು ಸ್ಮಾರ್ಟ್‌ಟಿವಿಗಳ ಟೂಲ್ಸ್‌ಗಳಿಗೆ ಡಿಸ್ಕೌಂಟ್‌ ಘೊಷಣೆ ಮಾಡಿದೆ. ಫೈರ್ ಟಿವಿ ಸ್ಟಿಕ್ ಮೂಲ ದರ 4,999ರೂ. ಗಳಾಗಿದೆ. ಹಾಗೆಯೇ ಇದರಲ್ಲಿ 4K ವೇರಿಯಂಟ್‌ ಸಾಮಾನ್ಯ ದರ 5,999ರೂ. ಗಳಾಗಿದ್ದು, ನೀವು ಕೇವಲ 2,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಕಿಂಡಲ್ 10th gen

ಕಿಂಡಲ್ 10th gen

ಕಿಂಡಲ್ 10th gen ಇ-ಬುಕ್‌ ರೀಡರ್‌ ಅನ್ನು ನೀವು 6,499ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಮೂಲ ದರ 7,999ರೂ. ಗಳಾಗಿದೆ. ಇನ್ನು ಈ ಸ್ಮಾರ್ಟ್‌‌ ಗ್ಯಾಜೆಟ್‌ ಇನ್‌ಬಿಲ್ಟ್‌ ಲೈಟ್‌ ಹಾಗೂ ವೈ-ಫೈ ಆಯ್ಕೆಗಳನ್ನು ಪಡೆದಿದೆ. ಇದರ ಜೊತೆಗೆ ಧೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಇದರಲ್ಲಿ ಪ್ಯಾಕ್‌ ಮಾಡಲಾಗಿದೆ.

Best Mobiles in India

English summary
Amazon has organized Amazon Great Indian Festival Happiness Upgrade Days 2022. In this, laptops, smart TVs and other smart devices get more discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X