ಅಮೆಜಾನ್‌ ಸೇಲ್‌ನಲ್ಲಿ ಆಡಿಯೋ ಪ್ರಾಡಕ್ಟ್‌ಗಳ ಮೇಲೆ 53% ವರೆಗೆ ಡಿಸ್ಕೌಂಟ್‌!

|

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಈಗಾಗಲೇ ಎಲ್ಲಾ ಗ್ರಾಹಕರಿಗೂ ಲೈವ್‌ ಆಗಿದೆ. ಈ ಸೇಲ್‌ನಲ್ಲಿ ಎಲ್ಲಾ ರೀತಿಯ ಗ್ಯಾಜೆಟ್ಸ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ಗಳನ್ನು ನೀಡಲಾಗ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಆಡಿಯೊ ಉತ್ಪನ್ನಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ವೆರಿಯೆಬಲ್ಸ್‌ ಡಿವೈಸ್‌ಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ಆಫರ್‌ ದೊರೆಯುತ್ತಿದೆ. ಅದರಲ್ಲೂ ಮ್ಯೂಸಿಕ್‌ ಪ್ರಿಯರಿಗಾಗಿ ಆಡಿಯೋ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್‌ ಅನ್ನು ಘೋಷಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಆಡಿಯೋ ಪ್ರಾಡಕ್ಟ್‌ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್‌ ನಿಡಲಾಗ್ತಿದೆ. ಹೆಡ್‌ಫೋನ್‌, ಸೌಂಡ್‌ಬಾರ್‌ಗಳ ಮೇಲೆ ಭರ್ಜರಿ ಆಫರ್‌ ದೊರೆಯಲಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಆಡಿಯೊ ಪ್ರಾಡಕ್ಟ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ WH-1000XM4

ಸೋನಿ WH-1000XM4

ಸೋನಿ WH-1000XM4 ಹೆಡ್‌ಫೋನ್‌ ಅಮೆಜಾನ್‌ ಸೇಲ್‌ನಲ್ಲಿ 33% ಡಿಸ್ಕೌಂಟ್‌ ಅನ್ನು ಪಡೆದುಕೊಂಡಿದೆ. ಇದರಿಂದ ಈ ಹೆಡ್‌ಫೋನ್‌ 29,990ರೂ ಬದಲಿಗೆ ಕೇವಲ 19,900ರೂ. ಬೆಲೆಯಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ಈ ಹೆಡ್‌ಫೋನ್‌ HD ನಾಯ್ಸ್‌-ಕ್ಯಾನ್ಸಲೇಶನ್‌ QN1 ಚಿಪ್ ಅನ್ನು ಒಳಗೊಂಡಿದೆ. ಜೊತೆಗೆ ಇದು ಅಲೆಕ್ಸಾ ಇಂಟರ್‌ಬಿಲ್ಟ್‌ನೊಂದಿಗೆ ಬರಲಿದೆ. ಈ ಹೆಡ್‌ಫೋನ್‌ ಸ್ಮಾರ್ಟ್ ಇಯರಿಂಗ್‌ ಹೊಂದಿದ್ದು, ಹೊಂದಾಣಿಕೆಯ ಸೌಂಡ್‌ ಕಂಟ್ರೋಲ್‌ ಅನ್ನು ಒಳಗೊಂಡಿದೆ.

ಸೆನ್ಹೈಸರ್ HD450SE ANC ಹೆಡ್‌ಫೋನ್‌ಗಳು

ಸೆನ್ಹೈಸರ್ HD450SE ANC ಹೆಡ್‌ಫೋನ್‌ಗಳು

ಸೆನ್ಹೈಸರ್ HD450SE ANC ಹೆಡ್‌ಫೋನ್‌ಗಳು ಅಮೆಜಾನ್‌ ಸೇಲ್‌ನಲ್ಲಿ 53% ಡಿಸ್ಕೌಂಟ್‌ ನೀಡಲಾಗ್ತಿದೆ. ಆದರಿಂದ ಈ ಹೆಡ್‌ಫೋನ್‌ಗಳು ಕೇವಲ 6,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಹೆಡ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ನೀಡಲಿದೆ. ಇದು 30 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ದಿನವಿಡೀ ಮ್ಯೂಸಿಕ್‌ ಆಲಿಸುವುದಕ್ಕೆ ಸಾಧ್ಯವಾಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ ಅಮೆಜಾನ್‌ ಸೇಲ್‌ನಲ್ಲಿ 67% ಡಿಸ್ಕೌಂಟ್‌ ನಲ್ಲಿ ಲಭ್ಯವಿದೆ. ಇದರಿಂದ 5,990ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ ಎಕೆಜಿಯಿಂದ ವಿನ್ಯಾಸಗೊಳಿಸಲಾದ 2-ವೇ ಸ್ಪೀಕರ್‌ಗಳನ್ನು ಒಳಗೊಂಡಿರಲಿದೆ. ಜೊತೆಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇನ್ನು ಈ ಹೆಡ್‌ಫೋನ್‌ IPX7 ವಾಟರ್‌ಪ್ರೂಫ್‌ ಅನ್ನು ಹೊಂದಿದೆ.

ಸೆನ್ಹೈಸರ್ ANC CX ಪ್ಲಸ್

ಸೆನ್ಹೈಸರ್ ANC CX ಪ್ಲಸ್

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಗುಣಮಟ್ಟದ TWS ಇಯರ್‌ಬಡ್ಸ್‌ ಇದಾಗಿದೆ. ಸೆನ್ಹೈಸರ್ ANC CX ಪ್ಲಸ್‌ ಇಯರ್‌ಬಡ್ಸ್‌ ಬಾಸ್ ಬೂಸ್ಟ್ ಟೆಕ್ನಾಲಜಿಯೊಂದಿಗೆ ಬರಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಪ್ರಸ್ತುತ ಈ ಹೆಡ್‌ಫೋನ್‌ 53% ಡಿಸ್ಕೌಂಟ್‌ ಪಡೆದುಕೊಂಡಿದ್ದು, ಕೇವಲ 6,990ರೂ. ಬೆಲೆಗೆ ಲಭ್ಯವಾಗಲಿದೆ.

ಒನ್‌ಪ್ಲಸ್‌ ಬುಲೆಟ್ಸ್ Z2

ಒನ್‌ಪ್ಲಸ್‌ ಬುಲೆಟ್ಸ್ Z2

ಅಮೆಜಾನ್‌ ಸೇಲ್‌ನಲ್ಲಿ ಒನ್‌ಪ್ಲಸ್‌ ಬುಲೆಟ್ಸ್ Z2 30% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಇಯರ್‌ಬಡ್ಸ್‌ 1,599ರೂ. ಬೆಲೆಗೆ ಲಭ್ಯವಾಗಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 30 ಗಂಟೆಗಳ ಲಾಂಗ್‌ ಬ್ಯಾಟರಿ ಲೈಪ್‌ ನೀಡಲಿದೆ. ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 20 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ಪಡೆಯಲು ನಿಮಗೆ ಅನುಮತಿಸಲಿದೆ.

ಸೋನಿ WI-C100

ಸೋನಿ WI-C100

ಸೋನಿ WI-C100 ನೆಕ್‌ಬ್ಯಾಡ್‌ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 50% ಡಿಸ್ಕೌಂಟ್‌ ಪಡೆದಿದೆ. ಇದರಿಂದ ಈ ನೆಕ್‌ಬ್ಯಾಂಡ್‌ 1,399ರೂ. ಬೆಲೆಯಲ್ಲಿ ದೊರೆಯಲಿದೆ. ಈ ನೆಕ್‌ಬ್ಯಾಂಡ್‌ 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಕ್ವಿಕ್‌ ಚಾರ್ಜ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ನೆಕ್‌ಬ್ಯಾಂಡ್‌ ಸ್ಪ್ಲಾಶ್ ಪ್ರೂಫ್ (IPX4), 360RA, ಸ್ವಿಫ್ಟ್ ಪೇರ್, ಫಾಸ್ಟ್ ಪೇರ್, ಫೋನ್ ಕಾಲ್‌ ಮತ್ತು ಇನ್-ಇಯರ್ ಬ್ಲೂಟೂತ್ ಫೀಚರ್ಸ್‌ ಅನ್ನು ಹೊಂದಿದೆ.

ಸೋನಿ HT-S20R

ಸೋನಿ HT-S20R

ಸೋನಿ HT-S20R ರಿಯಲ್ 5.1ch ಡಾಲ್ಬಿ ಡಿಜಿಟಲ್ ಸೌಂಡ್‌ಬಾರ್ ಎನಿಸಿಕೊಂಡಿದೆ. ಈ ಸೌಂಡ್‌ಬಾರ್‌ ಸಬ್ ವೂಫರ್ ಮತ್ತು ಎರಡು ಸಣ್ಣ ಸ್ಪೀಕರ್‌ಗಳನ್ನು ಹೊಂದಿದೆ. ಇದು 5.1-ಚಾನೆಲ್ ಸಿಸ್ಟಮ್ ಆಗಿದ್ದು, ಡಾಲ್ಬಿ ಆಡಿಯೊವನ್ನು ಒಳಗೊಂಡಿದೆ. ಇನ್ನು ಈ ಸೌಂಡ್‌ಬಾರ್‌ ಅಮೆಜಾನ್‌ ಸೇಲ್‌ನಲ್ಲಿ 33% ಡಿಸ್ಕೌಂಟ್‌ ಪಡೆದಿದೆ. ಆದರಿಂದ ಈ ಸೌಂಡ್‌ಬಾರ್‌ 15,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Amazon Great Indian Festival sale: Best Discounts on soundbars and headphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X