ಅಮೆಜಾನ್ ಫೆಸ್ಟಿವಲ್ ಸೇಲ್: ಈ ಸ್ಮಾರ್ಟ್ ಬಲ್ಬ್‌ಗಳಿಗೆ ಆಫರ್‌!

|

ದೀಪಾವಳಿ ಹಬ್ಬದ ಹಿನ್ನೆಲೆ ಅಮೆಜಾನ್‌ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಬಹುಪಾಲು ಎಲ್ಲಾ ಸ್ಮಾರ್ಟ್‌ ಗ್ಯಾಜೆಟ್‌ಗಳ ಮೇಲೂ ರಿಯಾಯಿತಿ ಘೋಷಣೆ ಮಾಡಿದೆ. ಅದರಲ್ಲೂ ಸ್ಮಾರ್ಟ್‌ ಹೋಮ್‌ ಗ್ಯಾಜೆಟ್‌ಗಳಿಗೆ ಈ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಹಬ್ಬದ ವೇಳೆ ಮನೆಯ ಅಂದ ಹೆಚ್ಚಿಸುವ ಸ್ಮಾರ್ಟ್‌ಬಲ್ಬ್‌ಗಳಿಗೆ ಅಮೆಜಾನ್‌ ಆಕರ್ಷಕ ಕೊಡುಗೆ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಸೇಲ್‌ನಲ್ಲಿ ಸ್ಮಾರ್ಟ್‌ ಬಲ್ಬ್‌ಗಳು ಹಾಗೂ ಅಲಂಕಾರಿಕ ಬಲ್ಬ್‌ಗಳಿಗೆ ಉತ್ತಮ ರಿಯಾಯಿತಿ ನೀಡಲಾಗಿದೆ. ಇವುಗಳನ್ನು ಖರೀದಿಸಿ ಮನೆಯ ಒಳಗಿನ ಹಾಗೂ ಹೊರಗಿನ ಜಾಗವನ್ನು ಅಲಂಕಾರ ಮಾಡಿಕೊಳ್ಳಬಹುದು. ಈ ಆಫರ್‌ನಲ್ಲಿ ಮಿ, ಗೆಸ್ಟೊ, ಬ್ಲಿಸ್‌ಬೆಲ್ಸ್ ಸೇರಿದಂತೆ ವಿವಿಧ ಕಂಪೆನಿಗಳು ಬಲ್ಬ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡಿವೆ. ಹಾಗಿದ್ರೆ ಅವುಗಳ ಆಫರ್‌ ಬೆಲೆ ಎಷ್ಟು? ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಿ ಎಲ್‌ಇಡಿ ಸ್ಮಾರ್ಟ್ ಕಲರ್ ಬಲ್ಬ್ B22

ಮಿ ಎಲ್‌ಇಡಿ ಸ್ಮಾರ್ಟ್ ಕಲರ್ ಬಲ್ಬ್ B22

ಮಿ ಎಲ್‌ಇಡಿ ಸ್ಮಾರ್ಟ್ ಕಲರ್ ಬಲ್ಬ್ ಗೆ ಅಮೆಜಾನ್‌ 350ರೂ. ಗಳ ರಿಯಾಯಿತಿ ನೀಡಿದ್ದು, 649ರೂ. ಗಳಿಗೆ ನೀವು ಖರೀದಿ ಮಾಡಬಹುದಾಗಿದೆ. ಈ ಬಲ್ಬ್‌ ಬರೋಬ್ಬರಿ 11 ವರ್ಷಗಳ ವರೆಗೆ ಬಾಳಿಕೆ ಬರುತ್ತದೆ ಎಂದು ಕಂಪೆನಿ ತಿಳಿದಿದೆ. ಹಾಗೆಯೇ ಇದನ್ನು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ ಮೂಲಕ ನಿರ್ವಹಿಸಬಹುದಾಗಿದೆ.

ಗೆಸ್ಟೊ 300 ಸ್ಮಾರ್ಟ್ ಎಲ್‌ಇಡಿ ಲೈಟ್ ಸ್ಟ್ರಿಪ್

ಗೆಸ್ಟೊ 300 ಸ್ಮಾರ್ಟ್ ಎಲ್‌ಇಡಿ ಲೈಟ್ ಸ್ಟ್ರಿಪ್

ಗೆಸ್ಟೊ 300 ಸ್ಮಾರ್ಟ್ ಎಲ್‌ಇಡಿ ಲೈಟ್ ಸ್ಟ್ರಿಪ್ 1,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನಿಮಗೆ 925ರೂ. ಗಳಲ್ಲಿ ಲಭ್ಯ ಇದೆ. ಈ ಬಲ್ಬ್ ವಿಶೇಷ ಎಂದರೆ ಮನೆಯಲ್ಲಿ ಯಾವುದಾದರೂ ಹಾಡನ್ನು ಹಾಕಿರುವಾಗ ಅದಕ್ಕೆ ಸಿಂಕ್‌ ಆಗಿ ಅತ್ಯುತ್ತಮ ಅನುಭವ ನೀಡುತ್ತದೆ. ಇದರಲ್ಲಿ ವಾಯ್ಸ್‌ ಕಂಟ್ರೋಲ್‌ ಆಯ್ಕೆಯನ್ನೂ ನೀಡಲಾಗಿದೆ.

ಬ್ಲಿಸ್‌ಬೆಲ್ಸ್ ಎಲ್‌ಇಡಿ 5W ಇಂಟೀರಿಯರ್ ವಾಲ್ ಲೈಟ್

ಬ್ಲಿಸ್‌ಬೆಲ್ಸ್ ಎಲ್‌ಇಡಿ 5W ಇಂಟೀರಿಯರ್ ವಾಲ್ ಲೈಟ್

ಈ ಲೈಟ್ 2,240ರೂ. ಗಳ ರಿಯಾಯಿತಿ ಪಡೆದುಕೊಂಡಿದೆ. ಅದರಂತೆ ನೀವು ಕೇವಲ 759ರೂ. ಗಳಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಇನ್ನು 360 ಡಿಗ್ರಿಯಲ್ಲಿ ಹೊಂದಾಣಿಕೆಯಾಗುವ ಈ ಬಲ್ಬ್‌ ಅನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಳಸಬಹುದು. ಇದರಲ್ಲಿ ಸುರುಳಿಯಾಕಾರದ ಅಲಂಕಾರಿಕ ಥೀಮ್ ಬೆಳಕನ್ನು ಕಾಣಬಹುದಾಗಿದೆ.

ಲೈಟ್‌ವೇವರ್ಸ್ ಎಲ್‌ಇಡಿ ವಾಲ್ ಸ್ಕೋನ್ಸ್ ಲೈಟ್

ಲೈಟ್‌ವೇವರ್ಸ್ ಎಲ್‌ಇಡಿ ವಾಲ್ ಸ್ಕೋನ್ಸ್ ಲೈಟ್

ಈ ಬಲ್ಬ್‌ 2,100ರೂ. ಗಳ ರಿಯಾಯಿತಿ ಪಡೆದಿದ್ದು, 899ರೂ. ಗಳಲ್ಲಿ ಖರೀದಿಗೆ ಲಭ್ಯ ಇದೆ. ಇದನ್ನು ಗೋಡೆ ಹಾಗೂ ಕಾಂಪೌಂಡ್‌ಗಳ ಮೇಲೆ ಇರಿಸಬಹುದಾಗಿದೆ. ಇದು ನೀಡುವ ತ್ರಿಕೋನಾಕಾರದ ಬೆಳಕು ಮನೆಯ ಅಂದವನ್ನು ಹೆಚ್ಚಿಗೆ ಮಾಡಲಿದೆ. ಇದಕ್ಕೆ 50,000 ಗಂಟೆಗಳ ಲೈಫ್‌ ಇರಲಿದೆ ಎಂದು ಕಂಪೆನಿ ಹೇಳಿದೆ.

ಪ್ರೋಟಿಯಮ್ ಪಿಸಿ ಡ್ರೀಮ್ ಕಲರ್ WS2812B

ಪ್ರೋಟಿಯಮ್ ಪಿಸಿ ಡ್ರೀಮ್ ಕಲರ್ WS2812B

ಪ್ರೋಟಿಯಮ್ ಪಿಸಿ ಡ್ರೀಮ್ ಕಲರ್ WS2812B 1,200ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನೀವು ಇದನ್ನು ಅಮೆಜಾನ್‌ನಲ್ಲಿ 3,785ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಲೈಟ್ ಸ್ಟ್ರಿಪ್‌ನ ಪ್ರತಿ ಮೀಟರ್‌ನಲ್ಲಿ 60 ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಐದು ಮೀಟರ್ ಉದ್ದ ಇರುವ ಈ ಪಿಕ್ಸೆಲ್ ಲೈಟ್ ಸ್ಟ್ರಿಪ್‌ ಅನ್ನು ಬಟನ್ ಮತ್ತು ಮೊಬೈಲ್ ಅಪ್ಲಿಕೇಶನ್‌ ಮೂಲಕ ನಿಯಂತ್ರಿಸಬಹುದು.

ಅಮಾಜ್‌ಪ್ರೊ ಮೋಷನ್ ಲೇಸರ್ ಲೈಟ್ಸ್ ಪ್ರೊಜೆಕ್ಟರ್

ಅಮಾಜ್‌ಪ್ರೊ ಮೋಷನ್ ಲೇಸರ್ ಲೈಟ್ಸ್ ಪ್ರೊಜೆಕ್ಟರ್

ಅಮಾಜ್‌ಪ್ರೊ ಮೋಷನ್ ಲೇಸರ್ ಲೈಟ್ಸ್ ಪ್ರೊಜೆಕ್ಟರ್ 1,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನೀವು 1,995ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ಲೇಸರ್ ಲೈಟ್ ಪ್ರೊಜೆಕ್ಟರ್ 3,000 ಚದರ ಅಡಿಗಳವರೆಗೆ ವಿಸ್ತರಿಸಿಕೊಳ್ಳಲಿದೆ. ಇದು ನಕ್ಷತ್ರ ಹಾಗೂ ಇನ್ನಿತರ ಆಕಾರಗಳನ್ನು ಗೋಡೆ, ಮರ ಹಾಗೂ ಮನೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಹೋಮ್‌ಮೇಟ್ ಸ್ಮಾರ್ಟ್ ಎಲ್‌ಇಡಿ ಸರ್ಫೇಸ್ ಲೈಟ್

ಹೋಮ್‌ಮೇಟ್ ಸ್ಮಾರ್ಟ್ ಎಲ್‌ಇಡಿ ಸರ್ಫೇಸ್ ಲೈಟ್

ಈ ಬಲ್ಬ್‌ 2,500ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 1,499ರೂ. ಗಳಲ್ಲಿ ಲಭ್ಯ ಇದೆ. ಇದು ಲಾಸ್ಟ್‌ ಸ್ಟೇಟ್‌ ಮೆಮೋರಿ ಫೀಚರ್‌ ಹೊಂದಿದ್ದು, ಅಲೆಕ್ಸಾ ಹಾಗೂ ಗೂಗಲ್‌ ಹೋಮ್‌ ಮೂಲಕ ನಿಯಂತ್ರಣ ಮಾಡಬಹುದು.

ಪಿಕ್ ur ನೀಡ್ಸ್ ಡಿಜೆ ಡಿಸ್ಕೋ

ಪಿಕ್ ur ನೀಡ್ಸ್ ಡಿಜೆ ಡಿಸ್ಕೋ

ಪಿಕ್ ur ನೀಡ್ಸ್ ಡಿಜೆ ಡಿಸ್ಕೋ ಡಿವೈಸ್‌ 1,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 999ರೂ. ಗಳಲ್ಲಿ ಖರೀದಿ ಮಾಡಬಹುದು. ಈ ಲೇಸರ್ ಲೈಟ್ ಪ್ರೊಜೆಕ್ಟರ್ ಹಾಡುಗಳ ಲಯಕ್ಕೆ ತಕ್ಕಂತೆ ಸಿಂಕ್ ಆಗುತ್ತದೆ. ಇದು 12 ವಿನ್ಯಾಸಗಳು ಹಾಗೂ ಕಾಂಬಿನೇಷನ್ ಮೋಡ್‌ ನೀಡಲಿದೆ.

ಎಲೆವಿಯಾ ಲೇಸರ್ ಎಲ್ಇಡಿ ಲೈಟ್ ಪ್ರೊಜೆಕ್ಟರ್

ಎಲೆವಿಯಾ ಲೇಸರ್ ಎಲ್ಇಡಿ ಲೈಟ್ ಪ್ರೊಜೆಕ್ಟರ್

ಈ ಪ್ರೊಜೆಕ್ಟರ್ 2,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 1,999ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಅನ್ನು ಹೊರಾಂಗಣ ಹಾಗೂ ಒಳಾಂಗಣದಲ್ಲಿ ಬಳಕೆ ಮಾಡಬಹುದು. ಈ ಲೇಸರ್ ಪ್ರೊಜೆಕ್ಟರ್ ಎಲ್ಲಾ ಸಮಾರಂಭಗಳಿಗೂ ಹೊಂದಿಕೆಯಾಗುತ್ತದೆ

ಫಿಲಿಪ್ಸ್ ವಿಜ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್

ಫಿಲಿಪ್ಸ್ ವಿಜ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್

ಫಿಲಿಪ್ಸ್ ವಿಜ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್ 1,150ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 849ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಬಲ್ಬ್‌ ಅನ್ನು ಮೊಬೈಲ್ ಅಪ್ಲಿಕೇಶನ್‌ನಿಂದ ನಿಯಂತ್ರಣ ಮಾಡಬಹುದು. ಹಾಗೆಯೇ ಇದು ಅಲೆಕ್ಸಾ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಸಪೋರ್ಟ್‌ ಮಾಡಲಿದೆ.

Best Mobiles in India

English summary
Amazon has started its Great Indian Festival Sale. In this, decorative smart bulbs are given a higher discount.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X