ಅಮೆಜಾನ್‌ನಿಂದ 144Hz ಗೇಮಿಂಗ್ ಮಾನಿಟರ್‌ಗಳಿಗೆ ಆಕರ್ಷಕ ರಿಯಾಯಿತಿ!

|

ಇಂದಿನ ಟೆಕ್‌ ಯುಗದಲ್ಲಿ ಎಲ್ಲಾ ರೀತಿಯ ಬಳಕೆಗೂ ಒಂದೊಂದು ಗ್ಯಾಜೆಟ್‌ ಲಭ್ಯವಾಗಲಿವೆ. ಅದರಲ್ಲೂ ಗೇಮಿಂಗ್ ವಲಯ ಬಹಳ ವಿಸ್ತಾರವಾಗಿದ್ದು, ಈ ಕಾರಣಕ್ಕೆ ಗೇಮ್‌ ಆಡಲೆಂದೇ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಮಾನಿಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವುಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಮಾನಿಟರ್ಸ್‌ 75Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಪಡೆದಿರುತ್ತವೆಯಾದರೂ ಕೆಲವು ಪ್ರತಿಷ್ಟಿತ ಕಂಪೆನಿಗಳು 240Hz, 360Hz ರಿಫ್ರೆಶ್ ರೇಟ್‌ ಆಯ್ಕೆ ಇರುವ ಮಾನಿಟರ್‌ಗಳನ್ನು ಪರಿಚಯಿಸಿವೆ. ಆದರೆ, ಇವು ಗ್ರಾಫಿಕ್ಸ್‌ ಕಾರ್ಡ್‌ಗೆ ಹೆಚ್ಚಿನ ಒತ್ತಡ ನೀಡುವ ಹಿನ್ನೆಲೆ 144Hz ರಿಫ್ರೆಶ್ ರೇಟ್‌ ಆಯ್ಕೆ ಇರುವ ಗೇಮಿಂಗ್ ಮಾನಿಟರ್‌ಗಳು ಸೂಕ್ತ ಎನಿಸಿವೆ.

ಅಮೆಜಾನ್‌

ಹೌದು, ಅಮೆಜಾನ್‌ 144Hz ರಿಫ್ರೆಶ್ ರೇಟ್ ಆಯ್ಕೆ ಇರುವ ಪ್ರಮುಖ ಕಂಪೆನಿಗಳ ಮಾನಿಟರ್‌ಗಳನ್ನು ಡಿಸ್ಕೌಂಟ್‌ ಬೆಲೆಯಲ್ಲಿ ನೀಡುತ್ತಿದೆ. ಅದರಲ್ಲೂ 30,000 ರೂ. ಗಳ ಆಸುಪಾಸಿನಲ್ಲಿ ಅತ್ಯುತ್ತಮ ಮಾನಿಟರ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಕ್ರಾಸ್‌ಹೇರ್‌ಗಳಂತಹ ಗೇಮಿಂಗ್ ಫೀಚರ್ಸ್‌, ಎನ್‌ವಿಡಿಯಾ ಜಿ-ಸಿಂಕ್, ಎಎಮ್‌ಡಿ ಫ್ರೀಸಿಂಕ್ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನು ಈ ಮಾನಿಟರ್‌ಗಳು ಹೊಂದಿವೆ. ಹಾಗಿದ್ರೆ ಮತ್ಯಾಕೆ ತಡ ಅವುಗಳ ಆಫರ್‌ ಬೆಲೆ ಹಾಗೂ ಕೆಲವು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಎಲ್‌ಜಿ ಅಲ್ಟ್ರಾ ಗೇರ್

ಎಲ್‌ಜಿ ಅಲ್ಟ್ರಾ ಗೇರ್

ಎಲ್‌ಜಿ ಅಲ್ಟ್ರಾ ಗೇರ್ ಮಾನಿಟರ್‌ 26,000ರೂ. ಗಳ ಸಾಮಾನ್ಯ ದರ ಹೊಂದಿದ್ದು, 50% ಡಿಸ್ಕೌಂಟ್‌ ಪಡೆದ ನಂತರ ನಿಮಗೆ ಕೇವಲ 12,999ರೂ. ಗಳಿಗೆ ಲಭ್ಯವಾಗಲಿದೆ. ಈ ಮಾನಿಟರ್‌ 144Hz ರಿಫ್ರೆಶ್ ರೇಟ್‌ ಜೊತೆಗೆ 24 ಇಂಚಿನ ಫುಲ್ HD ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆ ಪಡೆದಿದೆ.

ಎಲ್‌ಜಿ 24Gn650 ಅಲ್ಟ್ರಾಗೇರ್ ಗೇಮಿಂಗ್ ಮಾನಿಟರ್

ಎಲ್‌ಜಿ 24Gn650 ಅಲ್ಟ್ರಾಗೇರ್ ಗೇಮಿಂಗ್ ಮಾನಿಟರ್

ಎಲ್‌ಜಿ 24Gn650 ಅಲ್ಟ್ರಾಗೇರ್ ಗೇಮಿಂಗ್ ಮಾನಿಟರ್ 20,390ರೂ. ಗಳ ಸಾಮಾನ್ಯ ದರ ಹೊಂದಿದ್ದು, 22% ಡಿಸ್ಕೌಂಟ್‌ ಪಡೆದಿದ್ದು, 15,999ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ಮಾನಿಟರ್ 144Hz ರಿಫ್ರೆಶ್ ರೇಟ್‌ ಜೊತೆಗೆ 24 ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ.

ಎಂಎಸ್‌ಐ ಆಪ್ಟಿಕ್ಸ್G241

ಎಂಎಸ್‌ಐ ಆಪ್ಟಿಕ್ಸ್G241

ಎಂಎಸ್‌ಐ ಆಪ್ಟಿಕ್ಸ್ G241 ಮಾನಿಟರ್‌ಗೆ 30,060ರೂ. ಗಳ ಮೂಲ ಬೆಲೆ ಇದ್ದು, ಇದಕ್ಕೆ ಅಮೆಜಾನ್‌ 51% ಡಿಸ್ಕೌಂಟ್‌ ನೀಡಿದೆ. ಈ ಮೂಲಕ 14,845ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. 144Hz ರಿಫ್ರೆಶ್ ರೇಟ್ ಆಯ್ಕೆಯ ಜೊತೆಗೆ 24 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1920 X 1080 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ.

ಏಸರ್‌ ನಿಟ್ರೋ VG271U

ಏಸರ್‌ ನಿಟ್ರೋ VG271U

ಏಸರ್‌ ನಿಟ್ರೋ VG271U ಮಾನಿಟರ್‌ 45,000ರೂ. ಗಳ ಸಾಮಾನ್ಯ ದರ ಹೊಂದಿದ್ದು, 50% ಡಿಸ್ಕೌಂಟ್‌ ಪಡೆಯುವ ಮೂಲಕ 22,299ರೂ. ಗಳಿಗೆ ಲಭ್ಯ ಇರಲಿದೆ. ಈ ಮಾನಿಟರ್‌ ಸಹ 144Hz ರಿಫ್ರೆಶ್ ರೇಟ್ ಜೊತೆಗೆ 27 ಇಂಚಿನ ಐಪಿಎಸ್‌ ಡಿಸ್‌ಪ್ಲೇ ಹೊಂದಿದ್ದು, ಇದು 2560x1440 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ.

ಸ್ಯಾಮ್‌ಸಂಗ್‌ ಒಡಿಸ್ಸಿ G5 ಗೇಮಿಂಗ್ ಮಾನಿಟರ್

ಸ್ಯಾಮ್‌ಸಂಗ್‌ ಒಡಿಸ್ಸಿ G5 ಗೇಮಿಂಗ್ ಮಾನಿಟರ್

ಸ್ಯಾಮ್‌ಸಂಗ್‌ ಒಡಿಸ್ಸಿ G5 ಗೇಮಿಂಗ್ ಮಾನಿಟರ್ 38,000ರೂ. ಗಳ ಸಾಮಾನ್ಯ ದರ ಹೊಂದಿದ್ದು, 34% ರಿಯಾಯಿತಿ ಪಡೆಯುವುದರ ಜೊತೆಗೆ 24,899ರೂ. ಗಳಲ್ಲಿ ಲಭ್ಯ ಇದೆ. ಹಾಗೆಯೇ 144Hz ರಿಫ್ರೆಶ್ ರೇಟ್ ನೊಂದಿಗೆ 27 ಇಂಚಿನ ಕರ್ವ್ಡ್ ಡಿಸ್‌ಪ್ಲೇ ಇದಾಗಿದೆ.

ಎಓಸಿ G2490Vx ಬಾರ್ಡರ್‌ಲೆಸ್ ಗೇಮಿಂಗ್ ಲೆಡ್ ಮಾನಿಟರ್

ಎಓಸಿ G2490Vx ಬಾರ್ಡರ್‌ಲೆಸ್ ಗೇಮಿಂಗ್ ಲೆಡ್ ಮಾನಿಟರ್

ಎಓಸಿ G2490Vx ಬಾರ್ಡರ್‌ಲೆಸ್ ಗೇಮಿಂಗ್ ಲೆಡ್ ಮಾನಿಟರ್ 21,990ರೂ. ಗಳ ಸಾಮಾನ್ಯ ದರ ಹೊಂದಿದ್ದು, 50% ಡಿಸ್ಕೌಂಟ್‌ ಪಡೆದಿದೆ. ಈ ಮೂಲಕ ಅಮೆಜಾನ್‌ನಲ್ಲಿ 10,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ 144Hz ರಿಫ್ರೆಶ್ ರೇಟ್ ಆಯ್ಕೆ ಜೊತೆಗೆ 24 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 1920 X 1080 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆ ಪಡೆದಿದೆ.

ವ್ಯೂಸೋನಿಕ್ VX2405-P-MHD

ವ್ಯೂಸೋನಿಕ್ VX2405-P-MHD

ವ್ಯೂಸೋನಿಕ್ VX2405-P-MHD ಮಾನಿಟರ್ 24,930ರೂ. ಗಳ ಮೂಲ ದರ ಹೊಂದಿದ್ದು, 50% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ 12,499ರೂ. ಗಳಿಗೆ ಖರೀದಿ ಮಾಡಬಹುದು. ಈ ಮಾನಿಟರ್ 144Hz ರಿಫ್ರೆಶ್ ರೇಟ್ ನೊಂದಿಗೆ 24 ಇಂಚಿನ ಫುಲ್‌ HD ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ.

ವ್ಯೂಸಾನಿಕ್ ಓಮ್ನಿ ಗೇಮಿಂಗ್ ಮಾನಿಟರ್ Xg2405

ವ್ಯೂಸಾನಿಕ್ ಓಮ್ನಿ ಗೇಮಿಂಗ್ ಮಾನಿಟರ್ Xg2405

ವ್ಯೂಸಾನಿಕ್ ಓಮ್ನಿ ಗೇಮಿಂಗ್ ಮಾನಿಟರ್ 26,100ರೂ. ಗಳ ಸಾಮಾನ್ಯ ದರ ಹೊಂದಿದ್ದು, 41% ರಿಯಾಯಿತಿ ಪಡೆದುಕೊಳ್ಳುವುದರ ಜೊತೆಗೆ 15,499ರೂ. ಗಳಲ್ಲಿ ಲಭ್ಯವಿದೆ. ಇನ್ನುಳಿದಂತೆ 144Hz ರಿಫ್ರೆಶ್ ರೇಟ್ ನೊಂದಿಗೆ ಇದು 24 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1920 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.

ಡೆಲ್ QHD ಗೇಮಿಂಗ್ ಮಾನಿಟರ್

ಡೆಲ್ QHD ಗೇಮಿಂಗ್ ಮಾನಿಟರ್

ಡೆಲ್ QHD ಗೇಮಿಂಗ್ ಮಾನಿಟರ್ 43,599 ಸಾಮಾನ್ಯ ದರ ಹೊಂದಿದ್ದು, 39% ರಿಯಾಯಿತಿ ಪಡೆದುಕೊಂಡಿದೆ. ಅದರಂತೆ 26,848ರೂ. ಗಳಿಗೆ ಲಭ್ಯವಾಗಲಿದೆ. 144Hz ರಿಫ್ರೆಶ್ ರೇಟ್ ಫೀಚರ್ಸ್‌ನೊಂದಿಗೆ 27 ಇಂಚಿನ ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. ಇದು 2560 x 1440 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲಿಸಲಿದೆ.

ಹೆಚ್‌ಪಿ X24c

ಹೆಚ್‌ಪಿ X24c

ಹೆಚ್‌ಪಿ X24c ಮಾನಿಟರ್ 22,681ರೂ. ಗಳ ಸಾಮಾನ್ಯ ದರ ಹೊಂದಿದ್ದು, 31% ರಿಯಾಯಿತಿ ಪಡೆದ ನಂತರ 15,589ರೂ. ಗಳಿಗೆ ಲಭ್ಯವಿದೆ. ಈ ಮಾನಿಟರ್‌ ಸಹ 144 Hz ರಿಫ್ರೆಶ್ ರೇಟ್ ಜೊತೆಗೆ 23.6 ಇಂಚಿನ ಕರ್ವ್ಡ್ ಫುಲ್ HD ಡಿಸ್‌ಪ್ಲೇ ಹೊಂದಿದೆ.

Best Mobiles in India

English summary
Gadget is available for all kinds of use. This article details gaming monitors with 144Hz refresh rate.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X