ಶಾರ್ಟ್‌ ವಿಡಿಯೋ ವಿಭಾಗಕ್ಕೂ ಎಂಟ್ರಿ ಕೊಟ್ಟ ಅಮೆಜಾನ್; ಏನಿದು ಹೊಸ ಫೀಚರ್ಸ್‌! ?

|

ಇ-ಕಾಮರ್ಸ್‌ ತಾಣಗಳಲ್ಲಿ ಪ್ರಮುಖವೆನಿಸಿರುವ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಗ್ಯಾಜೆಟ್‌ ಹಾಗೂ ವಿವಿಧ ಡಿವೈಸ್‌ಗಳನ್ನು ಆಕರ್ಷಕ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ನಡುವೆ ಮುಂದಿನ ಆರ್ಥಿಕ ಸಂಕಷ್ಟವನ್ನು ಎದುರಿಸುವ ಉದ್ದೇಶದಿಂದ ಅಮೆಜಾನ್‌ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಈ ಎಲ್ಲಾ ಬೆಳವಣಿಗೆ ನಂತರ ಬಳಕೆದಾರರಿಗೆ ವಿಶಿಷ್ಟ ಅನುಭವ ನೀಡಲು ಮುಂದಾಗಿದೆ.

ಅಮೆಜಾನ್‌

ಹೌದು, ಇ-ಕಾಮರ್ಸ್ ಆಪ್‌ ಅಮೆಜಾನ್‌ನಲ್ಲಿ ಹೊಸ ರೀತಿಯ ಶಾಪಿಂಗ್ ಅನುಭವಕ್ಕೆ ಶೀಘ್ರದಲ್ಲೇ ಟಿಕ್‌ಟಾಕ್‌ ಶೈಲಿಯ ಫೀಚರ್ಸ್‌ ಪರಿಚಯಿಸಲು ಅಮೆಜಾನ್‌ ಮುಂದಾಗಿದೆ. ಹಾಗಿದ್ರೆ ಈ ಫೀಚರ್ಸ್‌ನಿಂದ ಬಳಕೆದಾರರಿಗೆ ಏನೆಲ್ಲಾ ಅನುಕೂಲ, ಅಮೆಜಾನ್‌ ಯಾಕಾಗಿ ಈ ಫೀಚರ್ಸ್‌ ಪರಿಚಯಿಸುತ್ತಿದೆ? ಹಾಗೆಯೇ ಎಂದಿನಿಂದ ಈ ಸೌಲಭ್ಯ ಅಮೆಜಾನ್ ಗ್ರಾಹಕರಿಗೆ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಶಾರ್ಟ್‌ ವಿಡಿಯೋ ಫೀಚರ್ಸ್‌

ಶಾರ್ಟ್‌ ವಿಡಿಯೋ ಫೀಚರ್ಸ್‌

ಈಗಾಗಲೇ ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಸೇರಿದಂತೆ ಶಾರ್ಟ್‌ ವಿಡಿಯೋ ಫೀಚರ್ಸ್‌ ಇದ್ದು, ಬಳಕೆದಾರರು ಅದರಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯ. ಇದರ ನಡುವೆ ಈಗ ಶಾಪಿಂಗ್ ಆಪ್‌ ಅಮೆಜಾನ್‌ನಲ್ಲಿ ಇದೇ ರೀತಿಯ ಫೀಚರ್ಸ್‌ ಬಳಕೆದಾರರಿಗೆ ಲಭ್ಯವಾಗಲಿದೆ. ಹಾಗೆಯೇ ಈ ಸೌಲಭ್ಯ ಟಿಕ್‌ಟಾಕ್‌ನಂತೆಯೇ ಕಾರ್ಯನಿರ್ವಹಿಸಲಿದೆ ಎನ್ನುವ ಮಾತುಗಳು ಟೆಕ್‌ ವಲಯದಿಂದ ಕೇಳಿಬರುತ್ತಿವೆ.

ಉದ್ದೇಶ ಏನು?

ಉದ್ದೇಶ ಏನು?

ಅಮೆಜಾನ್‌ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡುತ್ತಿದ್ದು, ಶಾರ್ಟ್‌ವಿಡಿಯೋ ವಿಭಾಗದಲ್ಲಿ ಭಾಗಿಯಾಗುವುದರ ಜೊತೆಗೆ ಶಾಪಿಂಗ್ ಗೂ ಆಕರ್ಷಿತರಾಗುತ್ತಾರೆ ಎನ್ನುವುದು ಅಮೆಜಾನ್‌ ಅಭಿಪ್ರಾಯ. ಹಾಗೆಯೇ ಹೊಸ ಬಳಕೆದಾರರು ಹೆಚ್ಚಾಗಿ ಈ ಕಡೆ ಮುಖ ಮಾಡುತ್ತಾರೆ ಎನ್ನುವುದು ಅಮೆಜಾನ್‌ನ ನಂಬಿಕೆಯಾಗಿದೆ.

ಟಿಕ್‌ಟಾಕ್ ನಂತೆಯೇ ಕೆಲಸ

ಟಿಕ್‌ಟಾಕ್ ನಂತೆಯೇ ಕೆಲಸ

ಅಮೆಜಾನ್‌ನಲ್ಲಿ ಲಭ್ಯವಾಗುವ ಈ ಫೀಚರ್ಸ್‌ ಟಿಕ್‌ಟಾಕ್‌ ರೀತಿಯಲ್ಲೇ ಕೆಲಸ ಮಾಡಲಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಬಳಕೆದಾರರು ಸೆಲೆಬ್ರಿಟಿ ಹಾಗೂ ಇನ್ನಿತರೆ ಪ್ರಮುಖರ ಫೋಟೋ ಹಾಗೂ ವಿಡಿಯೋಗಳನ್ನು ಇಲ್ಲಿ ಸ್ಟ್ರೀಮ್‌ ಮಾಡಬಹುದಾಗಿದೆ.

ತಕ್ಷಣಕ್ಕೆ ಎಲ್ಲರಿಗೂ ಲಭ್ಯವಿಲ್ಲ

ತಕ್ಷಣಕ್ಕೆ ಎಲ್ಲರಿಗೂ ಲಭ್ಯವಿಲ್ಲ

ಅಮೆಜಾನ್‌ ಮಾಹಿತಿ ಪ್ರಕಾರ ಈ ವಿಶೇಷ ಸೌಲಭ್ಯ ತಕ್ಷಣಕ್ಕೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವುದಿಲ್ಲವಂತೆ. ಇನ್ನು ಅಮೆಜಾನ್‌ ಆಪ್‌ನಲ್ಲಿ ಲೈಟ್‌ ಬಲ್ಬ್‌ ಎಂಬ ಆಯ್ಕೆ ನೀಡಲಾಗಿದ್ದು, ಅದನ್ನು ಕ್ಲಿಕ್‌ ಮಾಡುವ ಮೂಲಕ ಬಳಕೆದಾರರು ಈ ಫೀಚರ್ಸ್‌ ಭಾಗವಾಗಬಹುದಾಗಿದೆ. ಸದ್ಯಕ್ಕೆ ಈ ಫೀಚರ್ಸ್‌ ಅನ್ನು ಅಮೆರಿಕಾದ ಕೆಲವು ಬಳಕೆದಾರರಿಗೆ ನೀಡಲಾಗಿದೆ. ಅಂತೆಯೇ ಇನ್ನೇನು ಕೆಲವು ತಿಂಗಳಲ್ಲಿ ಈ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೆ ಹಾಗೂ ಎಲ್ಲಾ ದೇಶಗಳಿಗೆ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಭಯಕ್ಕೆ ಈ ಫೀಚರ್ಸ್‌ ಹೊರ ತಂದ ಅಮೆಜಾನ್?

ಭಯಕ್ಕೆ ಈ ಫೀಚರ್ಸ್‌ ಹೊರ ತಂದ ಅಮೆಜಾನ್?

ಅಮೆರಿಕದಲ್ಲಿ ಆರ್ಥಿಕತೆಯ ಅನಿಶ್ಚಿತತೆ ಇರುವ ಈ ಸಮಯದಲ್ಲಿ ಅಮೆಜಾನ್ ಹೊಸ ಹೆಜ್ಜೆ ಇಟ್ಟಿದೆ. ಈಗ ಹಣದುಬ್ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಹೀಗಾಗಿ ಜನರಲ್ಲಿ ಶಾಪಿಂಗ್ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಪರಿಣಾಮ ಇದೇ ಆಪ್‌ನಲ್ಲಿ ಈ ರೀತಿಯ ಶಾರ್ಟ್‌ ವಿಡಿಯೋಗಳ ಮೂಲಕ ಅವರನ್ನು ಅಮೆಜಾನ್‌ ಕಡೆ ಆಕರ್ಷಿತರನ್ನಾಗಿ ಮಾಡಲು ಈ ಪ್ಲ್ಯಾನ್‌ ಮಾಡಲಾಗಿದೆ ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ.

ಮತ್ತೆ ವಜಾ ಪ್ರಕ್ರಿಯೆಗೆ ಮುಂದಾದ ಅಮೆಜಾನ್

ಮತ್ತೆ ವಜಾ ಪ್ರಕ್ರಿಯೆಗೆ ಮುಂದಾದ ಅಮೆಜಾನ್

ಮುಂಬರುವ ತಿಂಗಳುಗಳಲ್ಲಿ ಕಾರ್ಪೊರೇಟ್ ಕಾರ್ಯನಿರ್ವಾಹಕರು ಸೇರಿದಂತೆ ಸುಮಾರು 20,000 ಉದ್ಯೋಗಿಗಳನ್ನು ಅಮೆಜಾನ್‌ ಕೆಲಸದಿಂದ ತೆಗೆದುಹಾಕಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಜಾಗತಿಕವಾಗಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಅಮೆಜಾನ್‌ ಹೊಂದಿದ್ದು, ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಮತ್ತೆ ವಜಾ ಮಾಡಲು ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ವಿತರಣಾ ಕೆಲಸಗಾರರು, ಕಾರ್ಪೊರೇಟ್ ಅಧಿಕಾರಿಗಳು ಮತ್ತು ತಂತ್ರಜ್ಞಾನ ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.

Best Mobiles in India

English summary
Amazon Launches TikTok Inspired Shopping Feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X