ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌: ಹೆಡ್‌ಫೋನ್‌ಗಳ ಮೇಲೆ 60%ಡಿಸ್ಕೌಂಟ್‌!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ ನಡೆಸುತ್ತಿದೆ. ಆನ್‌ಲೈನ್‌ ಗ್ರಾಹಕರಿಗಾಗಿ ಒಂದಿಲ್ಲೊಂದು ವಿಶೇಷ ಸೇಲ್‌ ನಡೆಸುವ ಅಮೆಜಾನ್‌ ಮ್ಯೂಸಿಕ್‌ ಪ್ರೇಮಿಗಳಿಗಾಗಿ ಈ ಸೇಲ್‌ ಅನ್ನು ಹೊತ್ತು ತಂದಿದೆ. ಇನ್ನು ಈ ಸೇಲ್‌ನಲ್ಲಿ ಬ್ಲೂಪಂಕ್ಟ್, ಬೋಟ್‌, ಸೋನಿ, ಜೆಬಿಎಲ್‌, ಸೆನ್ಹೈಸರ್‌, ಕಂಪೆನಿಯ ಹೆಡ್‌ಫೋನ್‌ಗಳು, ಸ್ಪೀಕರ್‌ಗಳು, ಗಿಟಾರ್‌ಗಳ ಮೇಲೆ ಬಿಗ್‌ ಆಫರ್‌ ನೀಡುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಇಂಡಿಯಾ ಮ್ಯೂಸಿಕ್‌ ಪ್ರೇಮಿಗಳಿಗಾಗಿ ಹೊಸ 'ಮೆಗಾ ಮ್ಯೂಸಿಕ್ ಫೆಸ್ಟ್' ಅನ್ನು ಘೋಷಿಸಿದೆ. ಈ ಫೆಸ್ಟ್ ಸೇಲ್‌ 31 ಆಗಸ್ಟ್ 2022 ರವರೆಗೆ ಲೈವ್ ಆಗಿರಲಿದೆ. ಇದರಲ್ಲಿ ಗ್ರಾಹಕರು 60% ರಿಯಾಯಿತಿ ಪಡೆಯಬಹುದು ಎನ್ನಲಾಗಿದೆ. ಇದರಿಂದ ಹಬ್ಬದ ಸಂಭ್ರಮದಲ್ಲಿ ಹೊಸ ಹೆಡ್‌ಫೋನ್‌, ಇಯರ್‌ಫೋನ್‌, ಸ್ಪೀಕರ್‌ಗಳನ್ನು ಖರೀದಿಸಲು ಬಯಸುವವರಿಗೆ ಇದು ಬೆಸ್ಟ್‌ ಟೈಂ ಆಗಿದೆ. ಹಾಗಾದ್ರೆ ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್‌ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೆಡ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌

ಹೆಡ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌

ಬೋಟ್‌ ರಾಕರ್ಜ್‌ 450 ಹೆಡ್‌ಫೋನ್: ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ನಲ್ಲಿ ಬೋಟ್‌ ರಾಕರ್ಜ್‌ 450 ಹೆಡ್‌ಫೋನ್ ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಹೆಡ್‌ಫೋನ್‌ 3 ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ 15 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಇದು 40 ಎಂಎಂ ಆಡಿಯೋ ಡ್ರೈವರ್‌ ಒಳಗೊಂಡಿದೆ. ಈ ಹೆಡ್‌ಫೋನ್‌ ಆನ್-ಇಯರ್ ಹೆಡ್‌ಫೋನ್‌ನಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಬ್ಲೂಟೂತ್‌ ಮತ್ತು AUX ಮೂಲಕ ಕನೆಕ್ಟ್‌ ಮಾಡಬಹುದಾಗಿದೆ. ಈ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 1,299ರೂ. ಬೆಲೆಯಲ್ಲಿ ಲಭ್ಯವಿದೆ.

ಸೋನಿ WF-1000XM4 ಇಯರ್‌ಬಡ್ಸ್‌

ಸೋನಿ WF-1000XM4 ಇಯರ್‌ಬಡ್ಸ್‌

ಸೋನಿ WF-1000XM4 ಇಯರ್‌ಬಡ್ಸ್‌ ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಕೇವಲ 19,990 ರೂಗಳಲ್ಲಿ ಲಭ್ಯವಿದೆ. ಇನ್ನು ಈ ಇಯರ್‌ಬಡ್ಸ್‌ ಹೊಸ ಇಂಟಿಗ್ರೇಟೆಡ್ ಪ್ರೊಸೆಸರ್ V1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಸ್ಪಷ್ಟ ಧ್ವನಿ ಪತ್ತೆಯನ್ನು ಒದಗಿಸಲು ಬೋನ್‌-ಕಂಡಕ್ಷನ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದು ಮಾತನಾಡಲು-ಚಾಟ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದರಿಂದ ಸಂಭಾಷಣೆಯ ಸಮಯದಲ್ಲಿ ಆಟೋ ಮ್ಯಾಟಿಕ್‌ ಸೌಂಡ್‌ ಅನ್ನು ಕಡಿಮೆ ಮಾಡಲಿದೆ.

ಸ್ಪೀಕರ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌

ಸ್ಪೀಕರ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌

JBL ಫ್ಲಿಪ್ 6 ವಾಯರ್‌ಲೆಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್
JBL ಫ್ಲಿಪ್ 6 ವೈರ್‌ಲೆಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಅಮೆಜಾನ್‌ ಸೇಲ್‌ನಲ್ಲಿ 11,999 ರೂಗಳಲ್ಲಿ ಲಭ್ಯವಿದೆ. ಇದು 2 ವೇ ಸ್ಪೀಕರ್ ಸಿಸ್ಟಮ್‌ನೊಂದಿಗೆ JBL ಒರಿಜಿನಲ್ ಪ್ರೊ ಸೌಂಡ್ ಅನ್ನು ನೀಡುತ್ತದೆ. ಸಿಂಗಲ್‌ ಚಾರ್ಜ್‌ನಲ್ಲಿ 12-ಗಂಟೆಗಳ ಪ್ಲೇಬ್ಯಾಕ್ ಸಮಯದೊಂದಿಗೆ ಬರುತ್ತದೆ. ಬ್ಲೂಟೂತ್ 5.1, IP67 ನೀರು ಮತ್ತು ಧೂಳಿನ ಪ್ರತಿರೋಧವನ್ನು ನೀಡಲಿದೆ. ಪಾರ್ಟಿಬೂಸ್ಟ್ ಕಾರ್ಯವು ಸ್ಟೀರಿಯೋ ಸೌಂಡ್‌ಗಾಗಿ ಎರಡು JBL ಪಾರ್ಟಿಬೂಸ್ಟ್ ಹೊಂದಾಣಿಕೆಯ ಸ್ಪೀಕರ್‌ಗಳನ್ನು ಜೋಡಿಸಲು ಅನುಮತಿಸಲಿದೆ.

ಬ್ಲೂಪಂಕ್ಟ್ SBA30 ವಾಯರ್‌ಲೆಸ್ ಬ್ಲೂಟೂತ್ ಸೌಂಡ್‌ಬಾರ್

ಬ್ಲೂಪಂಕ್ಟ್ SBA30 ವಾಯರ್‌ಲೆಸ್ ಬ್ಲೂಟೂತ್ ಸೌಂಡ್‌ಬಾರ್

ಬ್ಲೂಪಂಕ್ಟ್ SBA30 ವಾಯರ್‌ಲೆಸ್ ಬ್ಲೂಟೂತ್ ಸೌಂಡ್‌ಬಾರ್ ಅಮೆಜಾನ್‌ ಸೇಲ್‌ನಲ್ಲಿ 2,799 ರೂಗಳಲ್ಲಿ ಲಭ್ಯವಿದೆ. ಇದು SBA30 ಬ್ಯಾಟರಿಯೊಂದಿಗೆ ಬರುವ ಭಾರತದ ಮೊದಲ ಸೌಂಡ್‌ಬಾರ್ ಎಂದು ಬ್ಲೂಪಂಕ್ಟ್ ಹೇಳಿಕೊಂಡಿದೆ. ಇದು "ಯುರೋಪಿಯನ್" ವಿನ್ಯಾಸ ಭಾಷೆಯೊಂದಿಗೆ ಬರುತ್ತದೆ. ಇನ್ನು ಈ ಸೌಂಡ್‌ಬಾರ್‌ 30W ಸ್ಟಿರಿಯೊ ಸೌಂಡ್‌ ಅನ್ನು ನೀಡಲಿದೆ. ಜೊತೆಗೆ ಈ ಸೌಂಡ್‌ಬಾರ್ 2400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 14 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ.

Best Mobiles in India

English summary
Amazon Mega Music Fest sale: Discounts on headphones, speakers and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X