Amazon Prime Day 2022: ಪ್ರೈಮ್‌ ಸದಸ್ಯರಿಗೆ ಉಬರ್‌ ರೈಡ್‌ನಲ್ಲಿ ಭರ್ಜರಿ ಕೊಡುಗೆ!

|

ಬಹುನಿರೀಕ್ಷಿತ ಅಮೆಜಾನ್‌ನ ಪ್ರೈಮ್ ಡೇ ಸೇಲ್ ಭಾರತದಲ್ಲಿ ಇದೇ ಜುಲೈ 23 ರಂದು ಪ್ರಾರಂಭವಾಗಲಿದೆ. ಈ ಮಾರಾಟ ಮೇಳವು ಗ್ರಾಹಕರನ್ನು ತನ್ನತ್ತ ಸೆಳೆಯಲು ಶುರು ಮಾಡಿದೆ. ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಪ್ರೈಮ್ ಬಳಕೆದಾರರಿಗೆ ವಿಶೇಷ ಪ್ರಯೋಜನಗಳನ್ನು ನೀಡಲು ರೈಡ್-ಹೇಲಿಂಗ್ ಸೇವೆಯಾದ ಉಬರ್‌ನೊಂದಿಗೆ ಸಹಕರಿಸಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಪ್ರೈಮ್ ಸದಸ್ಯರು UberGo ಬೆಲೆಯಲ್ಲಿ UberPremier ಗೆ ಪ್ರವೇಶವನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅವರು ಪ್ರತಿ ತಿಂಗಳು ಆಯ್ದ ಸಂಖ್ಯೆಯ ರೈಡ್‌ಗಳಲ್ಲಿ ರಿಯಾಯಿತಿಗಳಿಗೆ ಅರ್ಹರಾಗುತ್ತಾರೆ.

ಪ್ರೈಮ್

ಅಮೆಜಾನ್ ಪ್ರಕಾರ, ಪ್ರೈಮ್ ಸದಸ್ಯರು ಇದೀಗ ಉಬರ್ ಜೊತೆ ಪಾಲುದಾರಿಕೆ ಹೊಂದಿರುವುದರಿಂದ ವಿಶೇಷ ಕೊಡುಗೆಗಳನ್ನು ಪಡೆಯುತ್ತಾರೆ. ಅವರು ತಮ್ಮ UberGo ರೈಡ್ ಅನ್ನು UberPremier ಗೆ ತಿಂಗಳಿಗೆ ಮೂರು ಬಾರಿ ಅಪ್‌ಗ್ರೇಡ್ ಮಾಡಲು ಸಾಧ್ಯವಾಗುತ್ತದೆ. ಅದರ ಜೊತೆಗೆ, ಅವರು ತಿಂಗಳಿಗೆ ಮೂರು ಟ್ರಿಪ್‌ಗಳಲ್ಲಿ 60ರೂ. ರವರೆಗಿನ 20 ಪ್ರತಿಶತದಷ್ಟು ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಈ ರಿಯಾಯಿತಿಯು ಉಬರ್ ಆಟೋ, ಮೋಟೋ, ಬಾಡಿಗೆಗಳು ಮತ್ತು ಇಂಟರ್‌ಸಿಟಿಯಲ್ಲಿ ಮಾತ್ರ ಅರ್ಹವಾಗಿರುತ್ತದೆ.

ಅಮೆಜಾನ್

ಬಳಕೆದಾರರು ತಮ್ಮ ಉಬರ್ (Uber) ಖಾತೆಯನ್ನು ನಿಮ್ಮ ಅಮೆಜಾನ್‌ ಪೇ (Amazon Pay) ವ್ಯಾಲೆಟ್‌ನೊಂದಿಗೆ ಸಂಪರ್ಕಿಸುವ ಮೂಲಕ ಮತ್ತು ಅದನ್ನು ಬುಕಿಂಗ್ ಟ್ರಿಪ್‌ಗಳಿಗೆ ಬಳಸುವ ಮೂಲಕ ಈ ಕೊಡುಗೆಗಳನ್ನು ಪಡೆಯಬಹುದು. ಕಂಪನಿಯ ಬ್ಲಾಗ್ ಪ್ರಕಾರ, 'ಅಮೆಜಾನ್ ಪ್ರೈಮ್ ಸದಸ್ಯರು ತಮ್ಮ ಅಮೆಜಾನ್ ಪೇ ಬ್ಯಾಲೆನ್ಸ್‌ನೊಂದಿಗೆ ಪಾವತಿಸಿದಾಗ ಅವರಿಗೆ ಸ್ವಯಂಚಾಲಿತವಾಗಿ ರಿಯಾಯಿತಿಗಳನ್ನು ಅನ್ವಯಿಸಲಾಗುತ್ತದೆ.

ಉಬರ್ ರೈಡ್‌ಗಳಲ್ಲಿ ರಿಯಾಯಿತಿ ಪಡೆಯುವುದು ಹೇಗೆ?

ಉಬರ್ ರೈಡ್‌ಗಳಲ್ಲಿ ರಿಯಾಯಿತಿ ಪಡೆಯುವುದು ಹೇಗೆ?

ಬಳಕೆದಾರರು ಅಮೆಜಾನ್‌ ಪ್ರೈಮ್ ಸದಸ್ಯರಾಗಿದ್ದರೆ, ಈ ಪ್ರಯೋಜನ ಪಡೆಯಲು ಸಾಧ್ಯ. ಈ ಪ್ರಯೋಜನಗಳನ್ನು ಪಡೆಯಲು, ನೀವು ಈ ಮುಂದಿನ ಹಂತಗಳನ್ನು ಅನುಸರಿಸಬೇಕು:
* ನೀವು ಸಕ್ರಿಯ ಅಮೆಜಾನ್‌ ಪ್ರೈಮ್ ಖಾತೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ
* ನಿಮ್ಮ ಉಬರ್ ವಾಲೆಟ್‌ ಜೊತೆಗೆ ನಿಮ್ಮ ಅಮೆಜಾನ್‌ ಪೇ ಅನ್ನು ಲಿಂಕ್ ಮಾಡಿ
* ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್‌ನೊಂದಿಗೆ ನಿಮ್ಮ ರೈಡ್‌ಗಳಿಗೆ ಪಾವತಿಸಿ
* ನೀವು ಸ್ವಯಂಚಾಲಿತವಾಗಿ ರಿಯಾಯಿತಿಗಳನ್ನು ಪಡೆಯುತ್ತೀರಿ

ಅಮೆಜಾನ್ ಪೇ ವಾಲೆಟ್ ಅನ್ನು ಉಬರ್ ಜೊತೆಗೆ ಲಿಂಕ್ ಮಾಡಲು ಹೀಗೆ ಮಾಡಿ:

ಅಮೆಜಾನ್ ಪೇ ವಾಲೆಟ್ ಅನ್ನು ಉಬರ್ ಜೊತೆಗೆ ಲಿಂಕ್ ಮಾಡಲು ಹೀಗೆ ಮಾಡಿ:

ಅಮೆಜಾನ್ ಪೇ ವಾಲೆಟ್ ಅನ್ನು ಉಬರ್‌ ಜೊತೆಗೆ ಲಿಂಕ್ ಮಾಡಲು ಮತ್ತು ಪ್ರೈಮ್ ಸದಸ್ಯರ ಪ್ರಯೋಜನಗಳನ್ನು ಪಡೆಯಲು ನೀವು ಅನುಸರಿಸಬಹುದಾದ ಹಂತಗಳು ಇಲ್ಲಿವೆ:

* ಉಬರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕೆಳಭಾಗದಲ್ಲಿರುವ ಖಾತೆ ಐಕಾನ್ ಮೇಲೆ ಟ್ಯಾಪ್ ಮಾಡಿ

* 'ವಾಲೆಟ್‌' ಆಯ್ಕೆಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಪಾವತಿ ವಿಧಾನವನ್ನು ಸೇರಿಸಿ' ಟ್ಯಾಪ್ ಮಾಡಿ
* 'ಅಮೆಜಾನ್ ಪೇ' ಆಯ್ಕೆ ಮಾಡಿ
* ನಿಮ್ಮ ಖಾತೆಯ ಅಗತ್ಯ ಮಾಹಿತಿಗಳಿಂದ ನಿಮ್ಮ ಅಮೆಜಾನ್‌ ಖಾತೆಗೆ ಸೈನ್ ಇನ್ ಮಾಡಿ
* ಈಗ ನೀವು 'ಆಡ್ ಫಂಡ್ಸ್' ಆಯ್ಕೆಯನ್ನು ಬಳಸಿಕೊಂಡು ಹಣವನ್ನು ಸೇರಿಸಬಹುದು.

ಅಮೆಜಾನ್‌ ಪೇ ಬಳಸಿ UPI ID ರಚಿಸುವುದು ಹೇಗೆ?

ಅಮೆಜಾನ್‌ ಪೇ ಬಳಸಿ UPI ID ರಚಿಸುವುದು ಹೇಗೆ?

* ಅಮೆಜಾನ್‌ ಅಪ್ಲಿಕೇಶನ್ ತೆರೆಯಿರಿ
* ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಸಾಲುಗಳ ಮೇಲೆ ಟ್ಯಾಪ್ ಮಾಡಿ
* ಅಮೆಜಾನ್‌ ಪೇ ಮೇಲೆ ಟ್ಯಾಪ್ ಮಾಡಿ
* ಅಮೆಜಾನ್‌ ಪೇ UPI ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಮುಂದುವರೆಯಿರಿ
* UPI ಐಡಿ ಹೊಂದಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
* ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲಾಗುತ್ತದೆ
* UPI ಐಡಿಯನ್ನು ರಚಿಸಲಾಗುತ್ತದೆ
* UPI ಐಡಿ ಮತ್ತು ಬ್ಯಾಂಕ್ ಖಾತೆಯನ್ನು ಸೇರಿಸಲು ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ
* ಹೆಚ್ಚಿನ UPI ಐಡಿಗಳನ್ನು ಸೇರಿಸಲು ಬಯಸಿದರೆ, ನೀವು ಅದೇ ಪರದೆಯಲ್ಲಿ UPI ಐಡಿಗಳನ್ನು ನಿರ್ವಹಿಸಿ ಕ್ಲಿಕ್ ಮಾಡಬಹುದು.

ಫೋನ್‌ಪೇ ವ್ಯಾಲೆಟ್‌ಗೆ ಹಣ ಜಮೆ ಮಾಡುವುದಕ್ಕೆ ಈ ಕ್ರಮ ಅನುಸರಿಸಿ

ಫೋನ್‌ಪೇ ವ್ಯಾಲೆಟ್‌ಗೆ ಹಣ ಜಮೆ ಮಾಡುವುದಕ್ಕೆ ಈ ಕ್ರಮ ಅನುಸರಿಸಿ

ಹಂತ:1 ಮೊದಲಿಗೆ ನೀವು ನಿಮ್ಮ ಫೋನ್‌ಪೇ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಮೇನ್‌ಪೇಜ್‌ನಲ್ಲಿ ನಿಮಗೆ ಫೋನ್‌ಪೇ ವ್ಯಾಲೆಟ್‌ ಆಯ್ಕೆ ಕಾಣಲಿದೆ
ಹಂತ:3 ಫೋನ್‌ಪೇ ವ್ಯಾಲೆಟ್‌ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ
ಹಂತ:4 ಇದರಲ್ಲಿ ನೀವು ಬಯಸಿದ ಮೊತ್ತವನ್ನು ನಮೂದಿಸಿ
ಹಂತ:5 ನಂತರ ಪ್ರೊಸಿಡ್‌ ಟಾಪ್‌ ಅಪ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ.
ಹಂತ:6 ನಿಮ್ಮ ಬ್ಯಾಂಕ್‌ ಅಕೌಂಟ್‌ ಕ್ಲಿಕ್‌ ಮಾಡಿ ಮತ್ತು ಯುಪಿಐ ಪಿನ್‌ ನಮೂದಿಸಿ
ಹಂತ:7 ಪೇ ಆಯ್ಕೆಯನ್ನು ಕ್ಲಿಕ್‌ ಮಾಡಿದ ತಕ್ಷಣ ನಿಮ್ಮ ಹಣ ಫೋನ್‌ ಪೇ ವ್ಯಾಲೆಟ್‌ ಸೇರಲಿದೆ.

ಯುಪಿಐ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುವುದು ಹೇಗೆ?

ಯುಪಿಐ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ ಮತ್ತು ಪೇಟಿಎಂ ವ್ಯಾಲೆಟ್‌ ಆಯ್ಕೆಯನ್ನು ಆರಿಸಿ
ಹಂತ:2 ಇದೀಗ ‘ಆಡ್‌ ಮನಿ ಟು ಪೇಟಿಎಂ ವಾಲೆಟ್‌' ಅಡಿಯಲ್ಲಿ ನೀವು ಸೇರಿಸಲು ಬಯಸುವ ಮೊತ್ತವನ್ನು ನಮೂದಿಸಿ
ಹಂತ:3 ಕಂಟಿನ್ಯೂ ಬಟನ್‌ ಮೇಲೆ ಕ್ಲಿಕ್ ಮಾಡಿ
ಹಂತ:4 ವ್ಯಾಲೆಟ್‌ಗೆ ಹಣವನ್ನು ಸೇರಿಸಲು ನಿಮಗೆ ಹಲವು ಆಯ್ಕೆಗಳು ಕಾಣಲಿದೆ
ಹಂತ:5 ಇದರಲ್ಲಿ UPI ಆಯ್ಕೆಯನ್ನು ಟ್ಯಾಪ್‌ ಮಾಡಿರಿ
ಹಂತ:6 ಇದೀಗ ನಿಮ್ಮ ವ್ಯಾಲೆಟ್‌ಗೆ ತಕ್ಷಣವೇ ಹಣವನ್ನು ಸೇರಿಸಲು UPI ಪಿನ್ ಅನ್ನು ನಮೂದಿಸಿ

ವ್ಯಾಲೆಟ್‌

ಇದೀಗ ನಿಮ್ಮ ಪೇಟಿಎಂ ವ್ಯಾಲೆಟ್‌ನಲ್ಲಿ ಹಣ ಜಮೆ ಆಗಿರುತ್ತದೆ. ಇನ್ನು ಪೇಟಿಎಂ ವ್ಯಾಲೆಟ್‌ ಮೂಲಕ ನೀವು ಫ್ಲೈಟ್‌ಗಳು, ರೈಲು ಮತ್ತು ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪೇಟಿಎಂ ವ್ಯಾಲೆಟ್‌ ಅನ್ನು ಇತರೆ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪಾವತಿ ಮಾಡುವುದಕ್ಕೆ ಕೂಡ ಬಳಸಬಹುದು. ಇದಲ್ಲದೆ ಪೇಟಿಎಂ ವ್ಯಾಲೆಟ್‌ ಬ್ಯಾಲೆನ್ಸ್‌ ಬಳಸಿಕೊಂಡು ನೀವು ಫಾಸ್ಟ್‌ಟ್ಯಾಗ್‌ ಅನ್ನು ಕೂಡ ರೀಚಾರ್ಜ್‌ ಮಾಡಬಹುದು.

Best Mobiles in India

English summary
Amazon Prime Day 2022: Amazon, Uber team up to offer exclusive benefits for Prime members.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X