ಅಮೆಜಾನ್‌ ಸೇಲ್‌: ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಪವರ್ ಬ್ಯಾಂಕ್‌ಗಳಿಗೆ ಬಿಗ್‌ ಆಫರ್‌!

|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ಇನ್ನಿತರೆ ಡಿವೈಸ್‌ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ ಇವೆ. ಈ ಮಾರಾಟದಲ್ಲಿ ಅಧಿಕ ಬ್ಯಾಟರಿ ಸಾಮರ್ಥ್ಯ ಇರುವ ಪವರ್‌ಬ್ಯಾಂಕ್‌ಗಳಿಗೂ ಸಹ ಅಮೆಜಾನ್‌ ರಿಯಾಯಿತಿ ನೀಡಿದೆ. ಅಮೆಜಾನ್‌ನ ಈ ಸೇಲ್‌ ಇದೇ ತಿಂಗಳ ಸೆ. 23 ರಿಂದ ಆರಂಭ ಆಗಿದ್ದು, ಇಂದು (ಸೆ. 30) ಮುಗಿಯಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಈ ವಿಶೇಷ ಮಾರಾಟ ಮೇಳದಲ್ಲಿ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್‌ ಮಾಡುವ ಪವರ್‌ ಬ್ಯಾಂಕ್‌ಗಳಿಗೆ ಕನಿಷ್ಠ 30% ರಿಯಾಯಿತಿ ನೀಡಿದೆ. ಇದರಲ್ಲಿ ಮಿ, ರಿಯಲ್‌ಮಿ, ಕೂಲ್‌ನಟ್‌ ಸೇರಿದಂತೆ ಪ್ರಮುಖ ಕಂಪೆನಿಯ ಪವರ್‌ ಬ್ಯಾಂಕ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಲಭ್ಯ ಇವೆ. ಈ ಫೆಸ್ಟಿವಲ್‌ ಸೇಲ್‌ನಲ್ಲಿ ಪವರ್‌ಬ್ಯಾಂಕ್‌ ಖರೀದಿಸಬೇಕು ಎಂದುಕೊಂಡಿದ್ದರೆ ಈ ಲೇಖನದಲ್ಲಿ ಯಾವ ಪವರ್‌ ಬ್ಯಾಂಕ್‌ಗೆ ಎಷ್ಟು ಬೆಲೆ? ಹಾಗೂ ಎಷ್ಟು ಬ್ಯಾಟರಿ ಸಾಮರ್ಥ್ಯ ಪಡೆದಿವೆ ಎಂಬಿತ್ಯಾದಿ ಮಾಹಿತಿಯನ್ನು ನೀಡಲಾಗಿದೆ ಓದಿರಿ.

ಮಿ ಪವರ್ ಬ್ಯಾಂಕ್ ಹೈಪರ್ ಸಾನಿಕ್

ಮಿ ಪವರ್ ಬ್ಯಾಂಕ್ ಹೈಪರ್ ಸಾನಿಕ್

ಈ ಡಿವೈಸ್ 4,400ರೂ. ಗಳ ರಿಯಾಯಿತಿ ಪಡೆದಿದ್ದು, 3,599ರೂ. ಗಳಲ್ಲಿ ಲಭ್ಯವಿದೆ. ಈ ಪವರ್ ಬ್ಯಾಂಕ್‌ 20,000mAh ನ ಬ್ಯಾಟರಿ ಸಾಮರ್ಥ್ಯ ಪಡೆದಿದೆ. 50W ಮೊಬೈಲ್ ಚಾರ್ಜಿಂಗ್‌ಗೆ ಸಪೋರ್ಟ್‌ ಜೊತೆಗೆ 3.0 ಫಾಸ್ಟ್ ಚಾರ್ಜಿಂಗ್ ಆಯ್ಕೆ ಇದರಲ್ಲಿದ್ದು, ಟ್ರಿಪಲ್ ಔಟ್‌ಪುಟ್ ಪೋರ್ಟ್‌ಗಳನ್ನು ಒಳಗೊಂಡಿದೆ.

ನೆಕ್ಸ್ಡಿಜಿಟ್ರಾನ್ ಪೋರ್ಟಬಲ್ ಪವರ್ ಸ್ಟೇಷನ್ (Nexdigitron Portable Power Station)

ನೆಕ್ಸ್ಡಿಜಿಟ್ರಾನ್ ಪೋರ್ಟಬಲ್ ಪವರ್ ಸ್ಟೇಷನ್ (Nexdigitron Portable Power Station)

ಈ ಪವರ್‌ಬ್ಯಾಂಕ್‌ 10,500 ರೂ.ಗಳ ರಿಯಾಯಿತಿ ಪಡೆದುಕೊಂಡಿದ್ದು, 9,499ರೂ. ಗಳಲ್ಲಿ ಲಭ್ಯವಿದೆ. ಈ ಪೋರ್ಟಬಲ್ ಪವರ್ ಸ್ಟೇಷನ್ 30,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು ಡಿಜೆಐ ಮಾವಿಕ್ ಮಿನಿಯನ್ನು 4 ರಿಂದ 5 ಬಾರಿ ಮತ್ತು ಐಫೋನ್ 11 ಅನ್ನು 6 ಬಾರಿ ಚಾರ್ಜ್ ಮಾಡುವ ಶಕ್ತಿ ಪಡೆದಿದೆ.

ಎನರ್ಜಿ ಇಂಟೆಲಿಜೆನ್ಸ್ ಇನ್ ಪವರ್ ಬ್ಯಾಂಕ್

ಎನರ್ಜಿ ಇಂಟೆಲಿಜೆನ್ಸ್ ಇನ್ ಪವರ್ ಬ್ಯಾಂಕ್

ಈ ಗ್ಯಾಜೆಟ್‌ 3,800ರೂ. ಗಳ ರಿಯಾಯಿತಿ ಪಡೆದಿದ್ದು 6,199ರೂ. ಗಳಲ್ಲಿ ಮಾರಾಟವಾಗುತ್ತಿದೆ. ಇದು 25,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 8 ಬ್ಯಾರೆಲ್ ಅಡಾಪ್ಟರ್ ಪಿನ್‌ಗಳನ್ನು ಹೊಂದಿದೆ. ಜೊತೆಗೆ ಲ್ಯಾಪ್‌ಟಾಪ್‌ಗಳಿಗೆ 4 ರಿಂದ 8 ಗಂಟೆಗಳ ಪವರ್‌ ಬ್ಯಾಕ್‌ಅಪ್‌ ನೀಡಲಿದೆ.

ಕೂಲ್‌ನಟ್ ಪವರ್ ಬ್ಯಾಂಕ್ ಮಿನಿ ಇನ್‌ವರ್ಟರ್‌

ಕೂಲ್‌ನಟ್ ಪವರ್ ಬ್ಯಾಂಕ್ ಮಿನಿ ಇನ್‌ವರ್ಟರ್‌

ಈ ಪವರ್‌ ಬ್ಯಾಂಕ್‌ 12,611ರೂ. ಗಳ ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ 14,388ರೂ. ಗಳಿಗೆ ಲಭ್ಯವಿದೆ. ಈ ಗ್ಯಾಜೆಟ್‌ 60,000mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ವೈ-ಫೈ ರೂಟರ್‌ಗಳನ್ನು ಇದರಲ್ಲಿ ಚಾರ್ಜ್ ಮಾಡಬಹುದು.

TA73 ನಿಕ್ ವೋಲ್ಟಾ ಮಲ್ಪಿಪರ್ಪೋಸ್‌ ಪವರ್ ಬ್ಯಾಂಕ್

TA73 ನಿಕ್ ವೋಲ್ಟಾ ಮಲ್ಪಿಪರ್ಪೋಸ್‌ ಪವರ್ ಬ್ಯಾಂಕ್

ಈ ಮಲ್ಪಿಪರ್ಪೋಸ್‌ ಪವರ್ ಬ್ಯಾಂಕ್ 2,700ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 7,299ರೂ. ಗಳಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್‌ ಬರೋಬ್ಬರಿ 64 ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಶಕ್ತಿ ತುಂಬಲಿದೆ. ಇದರ ಜೊತೆಗೆ ವೈ-ಫೈ ರೂಟರ್‌ಗಳು, ಗೇಮಿಂಗ್ ರೂಟರ್‌ಗಳು, ಡಿಟಿಹೆಚ್‌, ಒಟಿಟಿ ಬಾಕ್ಸ್‌ಗಳು ಸೇರಿದಂತೆ ಇನ್ನಿತರೆ ಡಿವೈಸ್‌ಗಳಿಗೆ ಇದನ್ನು ಬಳಕೆ ಮಾಡಬಹುದಾಗಿದೆ.

ಆಂಬ್ರೇನ್ ಸ್ಟೈಲೋ ಪ್ರೊ ಪವರ್ ಬ್ಯಾಂಕ್

ಆಂಬ್ರೇನ್ ಸ್ಟೈಲೋ ಪ್ರೊ ಪವರ್ ಬ್ಯಾಂಕ್

ಇದು 800ರೂ. ಗಳ ರಿಯಾಯಿತಿ ಪಡೆದಿದ್ದು, 2,199ರೂ. ಗಳಲ್ಲಿ ಲಭ್ಯವಿದೆ. ಈ ಪವರ್ ಬ್ಯಾಂಕ್ 27,000mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಟ್ರಿಪಲ್ ಔಟ್‌ಪುಟ್ ಪೋರ್ಟ್‌ಗಳ ಆಯ್ಕೆಯ ಜೊತೆಗೆ ಐಫೋನ್, ಆಂಡ್ರಾಯ್ಡ್, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಡಿವೈಸ್‌ಗಳಿಗೆ ಬಳಕೆ ಮಾಡಬಹುದಾಗಿದೆ.

ಎಲೆಕ್ಜೆಟ್ ಪವರ್‌ಪೈ ಪವರ್ ಬ್ಯಾಂಕ್

ಎಲೆಕ್ಜೆಟ್ ಪವರ್‌ಪೈ ಪವರ್ ಬ್ಯಾಂಕ್

ಈ ಪವರ್‌ ಬ್ಯಾಂಕ್‌ 10,251ರೂ. ರಿಯಾಯಿತಿ ಪಡೆದುಕೊಂಡಿದ್ದು, ನೀವು 17,083ರೂ. ಗಳಲ್ಲಿ ಖರೀದಿ ಮಾಡಬಹುದು. ಹಾಗೆಯೇ ಇದು 20,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಯಾವುದೇ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಇದರಲ್ಲಿ ಚಾರ್ಜ್‌ ಮಾಡಬಹುದಾಗಿದೆ.

Best Mobiles in India

English summary
Smartphones, laptops and other devices are already sold at huge discounts in Amazon Great Indian Festival Sale. Now Amazon has given discounts on power banks too.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X