ಅಮೆಜಾನ್‌ನಿಂದ ಬ್ಯಾಡ್ ನ್ಯೂಸ್‌; ಕರ್ನಾಟಕದಲ್ಲಿ ನೀಡುತ್ತಿದ್ದ ಈ ಸೇವೆಗೆ ಫುಲ್‌ಸ್ಟಾಪ್‌!

|

ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಒಂದಾಗಿರುವ ಅಮೆಜಾನ್‌, ಇತ್ತ ಆಫರ್‌ ಬೆಲೆಗೆ ಗ್ಯಾಜೆಟ್‌ಗಳನ್ನು ಮಾರಾಟ ಮಾಡಿ ಗ್ರಾಹಕರಿಗೆ ಸಂತಸ ಉಂಟು ಮಾಡುತ್ತಿದೆ. ಆದರೆ, ಮತ್ತೊಂದು ಕಡೆ ಅಮೆಜಾನ್‌ ತನ್ನ ಉದ್ಯೋಗಿಗಳಿಗೆ ಬ್ಯಾಡ್‌ ನ್ಯೂಸ್‌ ನೀಡುತ್ತಲೇ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಅಮೆಜಾನ್‌ ಅಕಾಡೆಮಿಯನ್ನು ಭಾರತದಲ್ಲಿ ಸ್ಥಗಿತ ಮಾಡುವ ಬಗ್ಗೆ ಮಾಹಿತಿ ನೀಡಿತ್ತು. ಹಾಗೆಯೇ ಆಹಾರ ವಿತರಣಾ ವ್ಯವಹಾರವನ್ನೂ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿತ್ತು. ಇದೆಲ್ಲಾ ಆದ ಬಳಿಕ ಈಗ ಸಗಟು ವಿತರಣಾ ವ್ಯವಹಾರವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಶೀಘ್ರಗತಿಯ ನಡೆಗಳು ಉದ್ಯೋಗಿಗಳನ್ನು ಆತಂಕದಲ್ಲಿ ಇರುವಂತೆ ಮಾಡಿವೆ. ಭಾರತದಲ್ಲಿ ತನ್ನ ಸಗಟು ವಿತರಣಾ ವ್ಯವಹಾರವನ್ನು ಮುಚ್ಚುವ ಜೊತೆಗೆ ಅಮೆಜಾನ್‌ ಭಾರತದಲ್ಲಿ ಮೂರನೇ ವ್ಯವಹಾರಕ್ಕೆ ತಿಲಾಂಜಲಿ ಇಡುತ್ತಿದೆ. ಪ್ರಮುಖವಾಗಿ ಈ ವ್ಯವಹಾರ ಕರ್ನಾಟಕದ ಮೂರು ನಗರಗಳಾದ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಜರುಗುತ್ತಿತ್ತು.

ಏನಿದು ಅಮೆಜಾನ್ ವಿತರಣೆ ಸೇವೆ

ಏನಿದು ಅಮೆಜಾನ್ ವಿತರಣೆ ಸೇವೆ

ಅಮೆಜಾನ್ ಸಗಟು ವಿತರಣೆಯು (Amazon Distribution) ವ್ಯಾಪಾರದಿಂದ ವ್ಯವಹಾರಕ್ಕೆ (B2B) ಇಕಾಮರ್ಸ್ ಮಾರುಕಟ್ಟೆಗಿಂತ ಭಿನ್ನವಾಗಿ ಕೆಲಸ ಮಾಡುತ್ತಿತ್ತು. ಅಂದರೆ ಇದು ಥರ್ಡ್‌ ಪಾರ್ಟಿ ಮಾರಾಟಗಾರರೊಂದಿಗೆ ಮಾರುಕಟ್ಟೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಯಾಕಾಗಿ ಈ ಕ್ರಮ

ಯಾಕಾಗಿ ಈ ಕ್ರಮ

ಅಮೆಜಾನ್‌ ಮುಂದೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಈಗಲೇ ಸಜ್ಜಾಗುತ್ತಿದೆ. ಈ ಕ್ರಮದಿಂದಾಗಿ FY22 ನಲ್ಲಿ ಸುಮಾರು 23% ನಷ್ಟು ಅಂದರೆ 3,649 ರೂ. ಕೋಟಿಗಳಷ್ಟು ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯಂತೆ. ಈ ಕಾರಣಕ್ಕೆ ಅಮೆಜಾನ್‌ನ ಎಲ್ಲಾ ವಿಭಾಗಗಳಲ್ಲೂ ಈ ರೀತಿಯ ಕ್ರಮ ಜರುಗಿಸುವಿಕೆ ಮುಂದುವರೆದಿದೆ.

ಅಮೆಜಾನ್‌ ಹೇಳಿದ್ದೇನು?

ಅಮೆಜಾನ್‌ ಹೇಳಿದ್ದೇನು?

ನಮ್ಮ ವಾರ್ಷಿಕ ಕಾರ್ಯಾಚರಣಾ ಯೋಜನೆ ಪರಿಶೀಲನೆ ಪ್ರಕ್ರಿಯೆಯಲ್ಲಿ ತೀರ್ಮಾನಿಸಿದಂತೆ, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಸುತ್ತಮುತ್ತಲಿನ ಸಣ್ಣ ನೆರೆಹೊರೆಯ ಅಂಗಡಿಗಳಿಗಾಗಿ ನಮ್ಮ ಸಗಟು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ವಿತರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮಾಡಲಾಗಿದೆ. ಪ್ರಸ್ತುತ ಗ್ರಾಹಕರು ಮತ್ತು ಪಾಲುದಾರರಿಗೆ ತೊಂದರೆ ಆಗಬಾರದ ಹಾಗೆ ನೋಡಿಕೊಳ್ಳುವ ಉದ್ದೇಶದಿಂದ ಕಂಪನಿಯು ಹಂತಹಂತವಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಿದೆ ಮತ್ತು ಈ ನಿರ್ಧಾರದಿಂದ ನೊಂದ ಉದ್ಯೋಗಿಗಳಿಗೆ ಬೆಂಬಲವಾಗಿ ಅಮೆಜಾನ್ ನಿಲ್ಲುತ್ತದೆ ಎಂದು ತಿಳಿಸಿದೆ.

ಸ್ಪರ್ಧಾತ್ಮಕ

ಹಾಗೆಯೇ ಮುಂದುವರೆದು ಈ ಬಗ್ಗೆ ವಿವರಿಸಿರುವ ಅಮೆಜಾನ್‌, ನಾವು ಸ್ಪರ್ಧಾತ್ಮಕ ಬೆಲೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಒದಗಿಸುತ್ತೇವೆ ಅದರಲ್ಲೂ ನಿಮ್ಮ ಮನೆ ಬಾಗಿಲಿಗೆ ಈ ಅನುಕೂಲವನ್ನು ಒದಗಿಸುತ್ತೇವೆ. ನೀವು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮತ್ತು ಬೃಹತ್ ಪ್ರಮಾಣದಲ್ಲಿ ದಿನದ ಯಾವುದೇ ಸಮಯದಲ್ಲಿ ಮರು ಮಾರಾಟಕ್ಕಾಗಿ ಸಾವಿರಾರು ವಸ್ತುಗಳನ್ನು ಖರೀದಿಸಬಹುದು. ಜೊತೆಗೆ ಲಭ್ಯವಿರುವ ವಿವಿಧ ಪಾವತಿ ಆಯ್ಕೆಗಳ ಮೂಲಕ ಪಾವತಿ ಮಾಡಬಹುದು. ಹಾಗೆಯೇ ನಿಮ್ಮ ಆರ್ಡರ್‌ಗಾಗಿ ಜಿಎಸ್‌ಟಿ ಬಿಲ್ ಸಹ ಪಡೆಯಬಹುದು ಎಂದು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ.

ಇದು ಮೂರನೇ ಸ್ಥಗಿತ ಪ್ರಕ್ರಿಯೆ

ಇದು ಮೂರನೇ ಸ್ಥಗಿತ ಪ್ರಕ್ರಿಯೆ

ಈ ತಿಂಗಳು ಅಮೆಜಾನ್‌ ಸ್ಥಗಿತ ಮಾಡಿರುವ ಮೂರನೇ ವ್ಯವಹಾರ ಇದಾಗಿದೆ. ಕಳೆದ ವಾರ, ಅಮೆಜಾನ್ ಇಂಡಿಯಾ ತನ್ನ ಆಹಾರ ವಿತರಣಾ ವ್ಯವಹಾರವನ್ನು ವರ್ಷದ ಅಂತ್ಯದ ವೇಳೆಗೆ ಮುಚ್ಚಲು ನಿರ್ಧರಿಸಿತ್ತು. ಅಂತೆಯೇ ಇದರ ನಡುವೆ ಅಮೆಜಾನ್ ತನ್ನ ರೆಸ್ಟೋರೆಂಟ್ ಪಾಲುದಾರರಿಗೆ ಡಿಸೆಂಬರ್ 29, 2022 ರಿಂದ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿಯೂ ಮಾಹಿತಿ ರವಾನಿಸಿತ್ತು. ಇದರೊಂದಿಗೆ ಅಮೆಜಾನ್ ಅಕಾಡೆಮಿಯನ್ನು ಮುಚ್ಚುತ್ತಿದೆ ಎಂದು ಘೋಷಣೆ ಮಾಡಿತ್ತು.

ಉದ್ಯೋಗ ಕಡಿತ ಮುಂದುವರಿಯಲಿದೆ....

ಉದ್ಯೋಗ ಕಡಿತ ಮುಂದುವರಿಯಲಿದೆ....

ಇದರ ನಡುವೆ ಅಮೆಜಾನ್ ಉದ್ಯೋಗಗಳನ್ನು ಕಡಿತಗೊಳಿಸುವ ಕೆಲಸವನ್ನೂ ಮಾಡಿಕೊಂಡು ಬರುತ್ತಿದೆ. ಈಗಾಗಲೇ 10,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದ್ದು, ಇದರಲ್ಲಿ ಅಮೆಜಾನ್‌ನ ಡಿವೈಸ್‌ಗಳು ಮತ್ತು ಸರ್ವಿಸ್‌ ವಿಭಾಗಗಳು ಸೇರಿದಂತೆ ಇತರೆ ಕೆಲವು ವಿಭಾಗಗಳಲ್ಲಿನ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅದಾಗ್ಯೂ 2023 ರಲ್ಲಿ ಹೆಚ್ಚಿನ ಉದ್ಯೋಗ ಕಡಿತ ಆಗಬಹುದು ಎಂದು ತಿಳಿದುಬಂದಿದೆ.

Best Mobiles in India

Read more about:
English summary
Amazon shuts down another business in karnataka.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X