ಅಮೆಜಾನ್‌ ಅಪ್‌ಗ್ರೇಡ್ ಡೇಸ್ ಸೇಲ್; ಈ ಎಲ್ಲಾ ಮೊಬೈಲ್‌ಗಳಿಗೂ ಬಂಪರ್‌ ಆಫರ್!

|

ಇ-ಕಾಮರ್ಸ್‌ ತಾಣಗಳಲ್ಲಿ ಒಂದಾಗಿರುವ ಅಮೆಜಾನ್‌ ಈಗಾಗಲೇ ಹಲವಾರು ಡಿವೈಸ್‌ಗಳನ್ನು ಆಫರ್‌ ಬೆಲೆಗೆ ಮಾರಾಟ ಮಾಡಿದೆ. ಅದರಲ್ಲೂ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವುದು ವಿಶೇಷ. ಇದರ ನಡುವೆ ಈಗ ಮತ್ತೆ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್‌ ನೀಡಲು ಅಮೆಜಾನ್‌ ಮುಂದಾಗಿದೆ. ಅಂತೆಯೇ ಈ ಫೋನ್‌ಗಳು ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ಪಡೆದುಕೊಂಡಿವೆ.

ಅಪ್‌ಗ್ರೇಡ್

ಹೌದು, ಅಮೆಜಾನ್‌ನ ಅಪ್‌ಗ್ರೇಡ್ ಡೇಸ್ ಸೇಲ್ (upgrade days sale) ನಲ್ಲಿ ಟೆಕ್ನೋ, ಶಿಯೋಮಿ, ಐಕ್ಯೂ, ಒಪ್ಪೋ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ರಿಯಾಯಿತಿ ಪಡೆದುಕೊಳ್ಳಲಿವೆ. ಈ ಅಪ್‌ಗ್ರೇಡ್‌ ಡೇಸ್‌ ಸೇಲ್‌ ಇದೇ ತಿಂಗಳ 14 ರ ವರೆಗೆ ಇರಲಿದೆ. ನೀವೇನಾದರೂ ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದುಕೊಂಡರೆ ಕೈಗೆಟಕುವ ದರದಲ್ಲಿ ನಿಮ್ಮ ನೆಚ್ಚಿನ ಫೋನ್‌ನಿಮ್ಮ ಕೈ ಸೇರಲಿದೆ. ಹಾಗಿದ್ರೆ ಯಾವ ಫೋನ್‌ಗೆ ಏನೆಲ್ಲಾ ಬೆಲೆ ಇದೆ. ಬ್ಯಾಂಕ್‌ ಆಫರ್‌ ಏನು? ಎಂಬ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಈ ಫೋನ್‌ಗಳಿಗೆ ಸಿಗುವ ಬ್ಯಾಂಕ್‌ ಆಫರ್‌ ಏನು?

ಈ ಫೋನ್‌ಗಳಿಗೆ ಸಿಗುವ ಬ್ಯಾಂಕ್‌ ಆಫರ್‌ ಏನು?

ಅಮೆಜಾನ್‌ನ ಈ ಆಫರ್‌ನಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್‌ ಕಾರ್ಡ್ ಬಳಕೆ ಮಾಡಿಕೊಂಡು 1,000 ರೂ. ಗಳಿಂದ 5,000 ರೂ. ಗಳ ವರೆಗೆ ಖರೀದಿ ಮಾಡಿದರೆ 10 % ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಹೆಚ್ಚುವರಿಯಾಗಿ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಕನಿಷ್ಠ ಖರೀದಿ ಮೌಲ್ಯ 5,000 ರೂ. ಗಳ ಮೇಲೆ 1,250 ರೂ. ಗಳ ವರೆಗೆ ಅಥವಾ 10% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಶಿಯೋಮಿ

ಶಿಯೋಮಿ

ಅಮೆಜಾನ್‌ನ ಅಪ್‌ಗ್ರೇಡ್ ಡೇಸ್‌ ಸೇಲ್‌ನಲ್ಲಿ ರೆಡ್ಮಿ A1 ಅನ್ನು 5,579 ರೂಗಳಿಗೆ, ರೆಡ್ಮಿ 10A 7,469 ರೂ. ಗಳಿಗೆ, ರೆಡ್ಮಿ 11 ಪ್ರೈಮ್‌ 5G 11,999 ರೂ. ಗಳಿಗೆ ಹಾಗೂ ರೆಡ್ಮಿ ನೋಟ್‌ ಅನ್ನು 10,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿ ಸಹ ಲಭ್ಯವಾಗಲಿದೆ.

ಐಕ್ಯೂ

ಐಕ್ಯೂ

ಐಕ್ಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಐಕ್ಯೂ ನಿಯೋ ಫೋನ್‌ 6 ಅನ್ನು 26,999 ರೂ. ಗಳಿಗೆ, ಐಕ್ಯೂ Z6 ಪ್ರೊ ಫೋನ್‌ ಅನ್ನು 19,999 ರೂ. ಗಳಿಗೆ ಮತ್ತು ಐಕ್ಯೂ Z6 ಲೈಟ್‌ ಸ್ಮಾರ್ಟ್‌ಫೋನ್‌ ಅನ್ನು 12,499 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಟೆಕ್ನೋ

ಟೆಕ್ನೋ

ಟೆಕ್ನೋ ಕಂಪೆನಿಯ ಟೆಕ್ನೋ ಪಾಪ್ 6 ಪ್ರೊ ಸ್ಮಾರ್ಟ್‌ಫೋನ್‌ ಅನ್ನು 5,579 ರೂ. ಗಳಿಗೆ ಹಾಗೂ ಟೆಕ್ನೋ ಸ್ಪಾರ್ಕ್ 9 ಅನ್ನು 7,649 ರೂ. ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಟೆಕ್ನೋ ಪೋವಾ 5G ಗೆ 14, 299 ರೂ. ಗಳು ಮತ್ತು ಟೆಕ್ನೋ ಕ್ಯಾಮನ್‌ 19 ಮಾಂಡ್ರಿಯನ್‌ಗೆ 16,999 ರೂ. ಗಳಾಗಿದೆ.

ರಿಯಲ್‌ಮಿ

ರಿಯಲ್‌ಮಿ

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಕೈಗೆಟಕುವ ಬೆಲೆ ಹೊಂದಿದ್ದು, ಈ ಆಫರ್‌ಲ್ಲಿ ಇನ್ನು ಸಹ ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಅದರಲ್ಲಿ ರಿಯಲ್‌ಮಿ ನಾರ್ಜೊ 5,499 ರೂ. ಗಳು ಹಾಗೂ ರಿಯಲ್‌ಮಿ ನಾರ್ಜೋ 50A ಪ್ರೈಮ್ 8,999 ರೂ. ಗಳ ಬೆಲೆ ಪಡೆಯಲಿವೆ.

ಒಪ್ಪೋ

ಒಪ್ಪೋ

ಒಪ್ಪೋ ವಿಭಾಗದಲ್ಲಿ ಒಪ್ಪೋ F21s ಪ್ರೊ 5G ಸ್ಮಾರ್ಟ್‌ಫೋನ್‌ಗೆ 24,499 ರೂ. ಗಳ ಬೆಲೆ ಇರಲಿದ್ದು, ಒಪ್ಪೋ A76 ಫೊನ್‌ಗೆ 15,490 ರೂ. ಹಾಗೂ ಒಪ್ಪೋ A77 ಸ್ಮಾರ್ಟ್‌ಫೋನ್‌ಗೆ 16, 99ರೂ. ಗಳನ್ನು ನಿಗದಿ ಮಾಡಲಾಗುತ್ತದೆ.

ಲಾವಾ

ಲಾವಾ

ಹಾಗೆಯೇ, ಲಾವಾ ಬ್ಲೇ ಬ್ಲೇಜ್ NXT ಸ್ಮಾರ್ಟ್‌ಫೋನ್ ಅನ್ನು 8,369 ರೂ. ಗಳಲ್ಲಿ ಖರೀದಿಸಬಹುದಾಗಿದ್ದು, ಲಾವಾ Z3 ಫೋನ್‌ ಅನ್ನು ನೀವು 6,299 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Amazon to offer huge discounts on smartphones in upgrade sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X