Subscribe to Gizbot

ಅರಬ್‌ ಸಂಸ್ಕೃತಿ ಅವಹೇಳನ ವಿಡಿಯೋ:ಅಮೆರಿಕ ವ್ಯಕ್ತಿ ಜೈಲಿಗೆ

Posted By:

ಅರಬ್‌ನ ಶಿಕ್ಷಣ ಸಂಸ್ಕೃತಿಯನ್ನು ವಿಡಂಬನೆ ಮಾಡಿ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದಕ್ಕೆ ಅಮೆರಿಕ ಮೂಲದ ವ್ಯಕ್ತಿಯೊಬ್ಬನಿಗೆ ಯುಎಇ ಕೋರ್ಟ್‌‌ ಒಂದು ವರ್ಷ‌ ಜೈಲು ಶಿಕ್ಷೆ ವಿಧಿಸಿದೆ.

ಅಮೆರಿಕದ ವ್ಯಕ್ತಿಯೊಂದಿಗೆ ಇಬ್ಬರು ಭಾರತೀಯ ವ್ಯಕ್ತಿಗಳು ವಿಡಿಯೋದಲ್ಲಿ ನಟಿಸಿದ್ದಕ್ಕೆ ಅವರಿಗೂ ಅಬುದಾಭಿ ಕೋರ್ಟ್‌ ಒಂದು ವರ್ಷದ ಜೈಲು ಶಿಕ್ಷೆ ನೀಡಿದೆ.

ದುಬೈಯಲ್ಲಿ ಸತ್ವ ಹೆಸರಿನ ಶಾಲೆಗಳಿದ್ದು ಇಲ್ಲಿ ರಕ್ಷಣೆಗೆ ಸಂಬಂಧಿಸಿದ ಪಾಠಗಳನ್ನು ಹೇಳಿಕೊಡಲಾಗುತ್ತದೆ.ಇದೇ ಶಾಲೆಯ ಶಿಕ್ಷಣ ಕ್ರಮವನ್ನು ವಿಡಂಬನೆ ಮಾಡಿ ವಿಡಿಯೋ ಚಿತ್ರಿಕರಿಸಿದ್ದಕ್ಕಾಗಿ ಕೋರ್ಟ್‌ ಒಂದು ವರ್ಷದ ಜೈಲು ಶಿಕ್ಷೆಯ ಜೊತೆಗೆ 10,000 ಹತ್ತು ಸಾವಿರ‍ ದಿನಾರ್‌(ಅಂದಾಜು 1.6ಲಕ್ಷ ರೂಪಾಯಿ) ದಂಡ ವಿಧಿಸಿದೆ.

ಶಿಕ್ಷಕನೊಬ್ಬ ಚಪ್ಪಲಿಯನ್ನುಆಯುಧವನ್ನಾಗಿ ಬಳಸುವುದಕ್ಕೆ ಉತ್ತೇಜನ ನೀಡುವುದು,ಅಮೆರಿಕದ ಹಿಪ್‌- ಹಾಪ್‌ ಸಂಸ್ಕೃತಿಯನ್ನು ಅರಬ್‌ನ ಯುವಕನೊಬ್ಬ ಅನುಕರಣೆ ಮಾಡುವ ದೃಶ್ಯ ಜೊತೆಗೆ ಟ್ವೀಟರ್‌ ಇಂದಿನ ಕಾಲದಲ್ಲಿ ಎಷ್ಟು ಪ್ರಬಲ ಮಾಧ್ಯಮವಾಗಿ ಬೆಳೆದಿದೆ ಎಂದು ತೋರಿಸುವ ವಿಡಿಯೋವನ್ನು ಇವರು ಚಿತ್ರಿಕರಿಸಿದ್ದರು.

ಗಲ್ಫ್‌ ಅರಬ್‌ ರಾಜ್ಯಗಳ ರಾಜಕೀಯ ನೀತಿ, ಮತ್ತು ಯುಎಇ ಸರ್ಕಾರ ಹಿರಿಯ ಅಧಿಕಾರಿಗಳ ಬಗ್ಗೆ ಟೀಕೆ ಮಾಡಿ ಟ್ವೀಟ್‌‌ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಕಳೆದ ತಿಂಗಳು ಅಬುದಾಭಿ ಕೋರ್ಟ್‌ ಎರಡು ವರ್ಷ‌ದ ಜೈಲು ಶಿಕ್ಷೆಯನ್ನು ವಿಧಿಸಿತ್ತು.


ಇದನ್ನೂ ಓದಿ: ಫೇಸ್‌ಬುಕ್ ಕಾಮೆಂಟ್-ಬಂಧನಕ್ಕೆ ಹಿರಿಯ ಅಧಿಕಾರಿ ಅನುಮತಿ ಅಗತ್ಯ

ಇದನ್ನೂ ಓದಿ: ಈ ವರ್ಷದ ಟಾಪ್‌ 10 ಯೂ ಟ್ಯೂಬ್‌ ಟ್ರೆಂಡಿಂಗ್‌ ವಿಡಿಯೋಗಳು

<center><center><iframe width="100%" height="315" src="//www.youtube.com/embed/IUk5CB9kaBY" frameborder="0" allowfullscreen></iframe></center></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot