Subscribe to Gizbot

ಫೇಸ್‌ಬುಕ್ ಕಾಮೆಂಟ್: ಬಂಧನಕ್ಕೆ ಹಿರಿಯ ಅಧಿಕಾರಿ ಅನುಮತಿ ಅಗತ್ಯ

Written By:

ಫೇಸ್‌ಬುಕ್, ಟ್ವೀಟರ್‌ನಂತಹಹ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪಾರ್ಹ ಅನಿಸಿಕೆಗಳನ್ನು ವ್ಯಕ್ತಪಡಿಸಿದ ವ್ಯಕ್ತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಯಿಲ್ಲದೇ ಯಾವುದೇ ಕಾರಣಕ್ಕೆ ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಬರೆದಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಬಾರದು ಎಂಬ ಕೋರಿಕೆಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರವು ಜನವರಿ 9ರಂದು ನೀಡಿದ ನಿರ್ದೇಶನವನ್ನು ಪಾಲಿಸುವಲ್ಲಿ ರಾಜ್ಯ ಸರಕಾರಗಳು ಬದ್ಧವಾಗಿರಬೇಕು ಎಂದು ತಿಳಿಸಿದೆ.

ಫೇಸ್‌ಬುಕ್ ಕಾಮೆಂಟ್: ಬಂಧನಕ್ಕೆ ಹಿರಿಯ ಅಧಿಕಾರಿ ಅನುಮತಿ ಅಗತ್ಯ

ನ್ಯಾಯಮೂರ್ತಿಗಳಾದ ಬಿ.ಎಸ್.ಚೌಹಾಣ್ ಹಾಗೂ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಈ ನಿರ್ದೇಶನ ನೀಡಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಪರಾಮರ್ಶಿಸುತ್ತಿದೆ. ಅಲ್ಲದೇ ಈ ರೀತಿಯ ಪ್ರಕರಣಗಳಲ್ಲಿ ವ್ಯಕ್ತಿಯ ಬಂಧನಕ್ಕೆ ನಿಷೇಧ ಹೇರುವ ಬಗ್ಗೆ ತೀರ್ಪು ನೀಡಲಾಗದು ಎಂದು ಪೀಠ ಹೇಳಿದೆ.

ಫೇಸ್‌ಬುಕ್‌ನಲ್ಲಿ ಕಾಮೆಂಟ್ ಹಾಕಿದ ಹಾಗೂ ಲೈಕ್ ಮಾಡಿದ ಯುವತಿಯರನ್ನು ಇತ್ತೀಚೆಗೆ ಬಂಧಿಸಿರುವುದು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕೇಂದ್ರವು, ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಯಿಲ್ಲದೆ ಬಂಧನ ನಡೆಸುವಂತಿಲ್ಲ ಎಂದು ಜನವರಿ 9ರಂದು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತ್ತು.

ಶಿವಸೇನೆಯ ನಾಯಕ ಬಾಳ್‌ ಠಾಕ್ರೆ ಅವರ ಅಂತಿಮ ಯಾತ್ರೆಯನ್ನು ಆಕ್ಷೇಪಿಸಿ ಫೇಸ್‌ಬುಕ್‌ಗೆ ಹೇಳಿಕೆಗಳನ್ನು ಹಾಕಿದ ಆರೋಪದಲ್ಲಿ ಸೆರೆಯಾಗಿದ್ದ ಥಾಣೆ ಜಿಲ್ಲೆಯ ಪಾಲ್‌ಘರ್‌ನ ಶಹೀನ್‌ ಧಾಡ ಮತ್ತು ರಿನು ಶ್ರೀನಿವಾಸನ್‌ ಎನ್ನುವ ಯುವತಿಯರನ್ನು ಪೊಲೀಸರು ಬಂಧಿಸಿದಾಗ ಜಯಾ ವಿಂಧ್ಯಾಲ್‌ ಪಿಐಎಲ್‌ ದಾಖಲಿಸಿದ್ದರು.

ಇದನ್ನೂ ಓದಿ : ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot