ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರ ಈ ರೀಟ್ವೀಟ್‌ ಸಖತ್‌ ವೈರಲ್‌ ಆಗಿದೆ!

|

ಟ್ವಿಟರ್‌ನಲ್ಲಿ ಸಾಕಷ್ಟು ಆಕ್ಟಿವ್‌ ಆಗಿರುವ ಕೈಗಾರಿಕೋದ್ಯಮಿಗಳಲ್ಲಿ ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್ ಮಹೀಂದ್ರಾ ಕೂಡ ಒಬ್ಬರು. ಇವರು ಟ್ವಿಟರ್‌ನಲ್ಲಿ ಸದಾ ಆಕ್ಟಿವ್‌ ಆಗಿರುತ್ತಾರೆ. ಟ್ವಿಟರ್‌ನಲ್ಲಿ ಆನಂದ್‌ ಮಹೀಂದ್ರಾ ಅವರು ಮಾಡುವ ಟ್ವೀಟ್‌ಗಳು ಸದಾ ಟ್ರೆಂಡ್‌ ಆಗುತ್ತಲೆ ಇರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕುತೂಹಲಕರವಾದ ವಿಚಾರವನ್ನು ಶೇರ್‌ ಮಾಡುವುದು. ಟ್ವಿಟರ್‌ನಲ್ಲಿ ವಿಚಾರಗಳ ಬಗ್ಗೆ ಅಭಿಪ್ರಾಯ ಕೇಳುವುದು ಸೇರಿದಂತೆ ಹಲವು ಆಕರ್ಷಕ ವಿಷಯವನ್ನು ಪೋಸ್ಟ್ ಮಾಡುವುದು ಸಾಮಾನ್ಯ. ಇದೀಗ ಇತ್ತೀಚಿಗೆ ಅವರು ತಮಿಳುನಾಡಿನ ರಸ್ತೆ ತಿರುವಿನ ಬಗ್ಗೆ ಮಾಡಿರುವ ಟ್ವಿಟ್‌ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಮಹೀಂದ್ರಾ ಗ್ರೂಪ್‌

ಹೌದು, ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ತಮಿಳುನಾಡಿನ ಕೊಲ್ಲಿ ಹಿಲ್ಸ್‌ ರಸ್ತೆಯ ಅದ್ಭುತ ಚಿತ್ರವನ್ನು ರೀಟ್ವೀಟ್ ಮಾಡಿದ್ದಾರೆ. ಇನ್ನು ಈ ರಸ್ತೆಯು 70 ಹೇರ್‌ಪಿನ್ ತಿರುವುಗಳನ್ನು ಹೊಂದಿದ್ದು, ಇದರ ಚಿತ್ರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೊದಲಿಗೆ ಕೊಲ್ಲಿ ಹಿಲ್ಸ್ ರಸ್ತೆಯ ಚಿತ್ರವನ್ನು ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೀಮ್ ಅವರು ಟ್ವಿಟರ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಆನಂದ್‌ ಮಹೀಂದ್ರಾ ರೀಟ್ವೀಟ್‌ ಮಾಡಿದ್ದಾರೆ. ಹಾಗಾದ್ರೆ ಆನಂದ್‌ ಮಹೀಂದ್ರಾ ಅವರು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನಂದ್‌ ಮಹೀಂದ್ರಾ

ಆನಂದ್‌ ಮಹೀಂದ್ರಾ ಅವರು ರೀಟ್ವೀಟ್‌ ಮಾಡಿರುವ ರಸ್ತೆಯ ಚಿತ್ರ ತಮಿಳುನಾಡಿನ ಕೊಲ್ಲಿ ಹಿಲ್ಸ್‌ ರಸ್ತೆಯಾಗಿದೆ. ಈ ಕೊಲ್ಲಿ ಹಿಲ್ಸ್‌ ರಸ್ತೆ ಅಪಯಕಾರಿ ತಿರುವಗಳನ್ನು ಹೊಂದಿರುವ ಅತ್ಯದ್ಬುತವಾದ ರಸ್ತೆಯಾಗಿದೆ. ಇದು ತಮಿಳುನಾಡಿನ ನಾಮಕ್ಕಲ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳಲ್ಲಿ ಹರಡಿರುವ ಕೊಲ್ಲಿ ಮಲೈ ಎಂಬ ಸಣ್ಣ ಪರ್ವತ ಶ್ರೇಣಿಯಲ್ಲಿದೆ. ಈ ರಸ್ತೆ ನಿರಂತರವಾಗಿ 70 ಹೇರ್‌ಪಿನ್ ಬೆಂಡ್‌ಗಳನ್ನು ಹೊಂದಿದ್ದು, ಭಾರತದಲ್ಲಿರುವ ಅತಿ ಕಡಿದಾದ ಪರ್ವತ ರಸ್ತೆಗಳಲ್ಲಿ ಒಂದಾಗಿದೆ.

ಟ್ವಿಟರ್‌ನಲ್ಲಿ

ಸದ್ಯ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿರುವ ಕೊಲ್ಲಿ ಹಿಲ್ಸ್ ರಸ್ತೆ ಬಗ್ಗೆ ನಾರ್ವೆ ದೇಶದ ರಾಜತಾಂತ್ರಿಕ ಅಧಿಕಾರಿ ಎರಿಕ್‌ ಸೋಲ್ಹೀಮ್‌ ನಮಕ್ಕಲ್ ತಮಿಳುನಾಡು ಎಂದು ಟ್ವಿಟ್‌ ಮಾಡಿದ್ದಾರೆ. ಈ ಪೋಸ್ಟ್‌ನಿಂದ ಪ್ರಭಾವಿತರಾದ ಆನಂದ್ ಮಹೀಂದ್ರಾ ಅದನ್ನು ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ ಎರಿಕ್ ನನ್ನ ಸ್ವಂತ ದೇಶದ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ತೋರಿಸುತ್ತಿದ್ದೀರಿ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ನಾನು ಕಂಡುಹಿಡಿಯಬೇಕು ಮತ್ತು ನಂತರ ನನ್ನ ಥಾರ್‌ನಲ್ಲಿ ಪ್ರಯಾಣಿಸಲು ಬಯಸುತ್ತೇನೆ ಎಂದು ಟ್ವಿಟ್‌ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರ ಪೋಸ್ಟ್ 28,000 ಕ್ಕೂ ಹೆಚ್ಚು ಲೈಕ್ಸ್‌ ಮತ್ತು ಸುಮಾರು 3,000 ರೀಟ್ವೀಟ್‌ಗಳನ್ನು ಪಡೆದಿದೆ.

ಕೊಲ್ಲಿ ಹಿಲ್ಸ್‌ ಹೇರ್‌ಪಿನ್‌ ಬೆಂಡ್‌

ಕೊಲ್ಲಿ ಹಿಲ್ಸ್‌ ಹೇರ್‌ಪಿನ್‌ ಬೆಂಡ್‌

ಕೊಲ್ಲಿ ಹಿಲ್ಸ್ ಸಮುದ್ರ ಮಟ್ಟದಿಂದ 238 ಮೀಟರ್ ಎತ್ತರದಲ್ಲಿದೆ. ಇಲ್ಲಿನ ರಸ್ತೆಯು ಅಸಂಖ್ಯಾತ ತಿರುವುಗಳನ್ನು ಹೊಂದಿದೆ ಮತ್ತು ಹೇರ್‌ಪಿನ್ ತಿರುವುಗಳನ್ನು 15 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ. 70 ಹೇರ್‌ಪಿನ್ ತಿರುವುಗಳ ಮೂಲಕ 20.4 ಕಿಮೀ ಉದ್ದವಿದ್ದು, ಸೊಲಕ್ಕಾಡುನಲ್ಲಿ 1.198 ಮೀಟರ್‌ನಲ್ಲಿ ಕೊನೆಗೊಳ್ಳುತ್ತದೆ.

Best Mobiles in India

English summary
Anand Mahindra retweeted a stunning image of a road in Tamil Nadu the picture has gone viral on social media.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X