Just In
Don't Miss
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Movies
ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಂಡ್ರಾಯ್ಡ್ 12 ಓಎಸ್‌ನಲ್ಲಿ ಬರಲಿವೆ ನಿಮಗೆ ಅಚ್ಚರಿ ಅನಿಸುವ ಫೀಚರ್ಸ್‌ಗಳು!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಅಂಡ್ರಾಯ್ಡ್ 12 ಆವೃತ್ತಿಯನ್ನು ಈ ವರ್ಷ ಅನಾವರಣ ಮಾಡಲಿದ್ದು, ಕಂಪನಿಯು ಸಕಲ ತಯಾರಿ ನಡೆಸಿದೆ. ಆಂಡ್ರಾಯ್ಡ್ 12 ಓಎಸ್ ಪ್ರಸ್ತುತ ಇರುವ ಆಂಡ್ರಾಯ್ಡ್ 11 ಓಎಸ್ ಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಬರಲಿರುವ ಆಂಡ್ರಾಯ್ಡ್ 12 ಓಎಸ್‌ನ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಲ್ಲಿ ಈಗಾಗಲೇ ಕುತೂಹಲ ಮೂಡಿದೆ.

ಗೂಗಲ್ ಸಂಸ್ತೆಯು ಹೊಸ ಆಂಡ್ರಾಯ್ಡ್ 12 ಓಎಸ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚಿನ ಡೇಟಾ ಪಾರದರ್ಶಕತೆ ಮತ್ತು ಗೌಪ್ಯತೆ ನಿಯಂತ್ರಣವನ್ನು ನೀಡುವತ್ತ ಗಮನ ಹರಿಸಿದೆ. ಕೆಲವು ಆಯ್ದ ಗೂಗಲ್ ಪಿಕ್ಸಲ್ ಆವೃತ್ತಿಯ ಫೋನ್‌ಗಳಲ್ಲಿ ಪ್ರಾಯೋಗಿಕವಾಗಿ ಆಂಡ್ರಾಯ್ಡ್ 12 ಓಎಸ್ ಲಭ್ಯವಾಗಿದೆ. ಈ ವರ್ಷ ಇತರೆ ಫೋನ್‌ಗಳಲ್ಲಿ ಲಭ್ಯವಾಗುವ ನಿರೀಕ್ಷಿಗಳಿವೆ. ಹಾಗಾದರೇ ಆಂಡ್ರಾಯ್ಡ್ 12 ಓಎಸ್ ನಲ್ಲಿ ಯಾವೆಲ್ಲಾ ಹೊಸ ಫೀಚರ್ಸ್‌ಗಳು ಫೋನ್‌ಗೆ ಸೇರಲಿವೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಕಡಿಮೆ ಸ್ಟೋರೇಜ್‌ನಲ್ಲಿ ಹೈ ಕ್ವಾಲಿಟಿ ವಿಡಿಯೊ ಸಪೋರ್ಟ್
ಆಂಡ್ರಾಯ್ಡ್ 12 ಓಎಸ್ ಕಡಿಮೆ ಸ್ಟೋರೇಜ್‌ನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ನೀಡುವ ಅವಕಾಶ ಹೊಂದಿರಲಿದೆ. ಅದಕ್ಕಾಗಿ HEVC -ಕಾಂಪಿಟೇಬಲ್ ಮೀಡಿಯಾ ಟ್ರಾನ್ಸ್‌ಕೋಡಿಂಗ್ ಬೆಂಬಲವನ್ನು ಗೂಗಲ್ ಸೇರಿಸಲಿದೆ. ಈ HEVC ವೈಶಿಷ್ಟ್ಯದೊಂದಿಗೆ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಸ್ವಯಂಚಾಲಿತವಾಗಿ ಫೈಲ್ ಅನ್ನು AVC ಗೆ ಟ್ರಾನ್ಸ್‌ಕೋಡ್ ಮಾಡಬಹುದು. ಅಪ್ಲಿಕೇಶನ್‌ಗಳು ಉತ್ತಮ ವೀಡಿಯೊಗಳನ್ನು ಶೂಟ್ ಮಾಡುತ್ತದೆ ಮತ್ತು ಕಡಿಮೆ ಶೇಖರಣಾ ಸ್ಥಳವನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

JPEG ಗಿಂತ ಉತ್ತಮ ಪೋಟೊ ಸಪೋರ್ಟ್
ಆಂಡ್ರಾಯ್ಡ್ 12 ಓಎಸ್ AV1 ಇಮೇಜ್ ಫೈಲ್ ಫಾರ್ಮ್ಯಾಟ್ ಅನ್ನು ಬೆಂಬಲಿಸಲಿದೆ. ಇದರಲ್ಲಿ ಫೋಟೊಗಳು JPEG ಫಾರ್ಮೇಟ್‌ಗಿಂತ ಉತ್ತಮ ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.

ಅಧಿಕ ಡೇಟಾದ ಆಪ್ಸ್ ಭಾರವಲ್ಲ
ಆಂಡ್ರಾಯ್ಡ್ 12 ನಲ್ಲಿ ಅಧಿಕ ಡೇಟಾದ ಆಪ್ಸ್‌ಗಳು ಸುಗಮವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇರಲಿದೆ. ಹೀಗಾಗಿ ಆಂಡ್ರಾಯ್ಡ್ 12 ಓಎಸ್‌ನಲ್ಲಿ ಅಧಿಕ ಡೇಟಾದ ಆಪ್ಸ್ ಭಾರವಲ್ಲ. ವಿಶೇಷವಾಗಿ ಸೋಶೀಯಲ್ ಮೀಡಿಯಾ ಆಪ್ಸ್ ಹಾಗೂ ಗೇಮಿಂಗ್ ಇತ್ಯಾದಿಗಳ ಬಳಕೆ ಸುಗಮವಾಗಿರಲಿದೆ.

ನೂತನ ಗೆಸ್ಚರ್ ಆಯ್ಕೆ
ಆಂಡ್ರಾಯ್ಡ್ 12 ಓಎಸ್‌ನಲ್ಲಿ ಹೊಸದಾಗಿ ಗೆಸ್ಚರ್‌ಗಳು ಸೇರ್ಪಡೆ ಆಗಲಿವೆ. ಹೊಸ ಓಎಸ್‌ನಲ್ಲಿ ವೀಡಿಯೊ ನೋಡುವಾಗ, ಪುಸ್ತಕ ಓದುವಾಗ ಅಥವಾ ಆಟವನ್ನು ಆಡುವಾಗ ಗೂಗಲ್ ಉತ್ತಮ ಗೆಸ್ಚರ್ ನ್ಯಾವಿಗೇಷನ್ ನೀಡುತ್ತದೆ.

ತ್ವರಿತ ಆಪರೇಟಿಂಗ್
ಆಂಡ್ರಾಯ್ಡ್ 12 ಓಎಸ್‌ನಲ್ಲಿ ನೋಟಿಫೀಕೇಶನ್ ಹಾಗೂ ಆಪ್‌ಗಳ ತೆರೆಯುವಿಕೆ ಕಾರ್ಯ ಹೆಚ್ಚು ತ್ವರಿತವಾಗಲಿವೆ. ಕಸ್ಟಮ್ ವಿಷಯ ಮತ್ತು ಐಕಾನ್‌ಗಳೊಂದಿಗೆ ಉತ್ತಮವಾಗಿ ಕಾಣುವಂತೆ ಗೂಗಲ್ ನೋಟಿಫೀಕೇಶನ್ ವಿನ್ಯಾಸಗಳನ್ನು ರಿಫ್ರೆಶ್ ಮಾಡುತ್ತಿದೆ. ಅಲ್ಲದೆ, ನೋಟಿಫೀಕೇಶನ್ ವೇಗವಾಗಿ ತೆರೆದುಕೊಳ್ಳುತ್ತವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999