ಗೂಗಲ್‌ನಿಂದ ಆಂಡ್ರಾಯ್ಡ್‌ 13 ಓಎಸ್ ಬಿಡುಗಡೆ; ಸ್ಮಾರ್ಟ್‌ಟಿವಿಗಳಿಗೆ ಮತ್ತಷ್ಟು ಹೊಸ ಫೀಚರ್ಸ್‌!

|

ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಈಗಾಗಲೇ ಹಲವಾರು ಪ್ರಮುಖ ಬ್ರ್ಯಾಂಡ್‌ಗಳು ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ಟಿವಿಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಅದರಲ್ಲೂ ಓಎಸ್‌ ವಿಭಾಗದಲ್ಲಿ ಇತ್ತೀಚೆಗೆ ಆಂಡ್ರಾಯ್ಡ್‌ 12 ಓಎಸ್‌ ಇರುವ ಸ್ಮಾರ್ಟ್‌ಟಿವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ನಡುವೆ ಈಗ ಗೂಗಲ್‌ ಓಎಸ್‌ ಅನ್ನು ಅಪ್‌ಡೇಟ್‌ ಮಾಡಿದ್ದು, ಇನ್ಮುಂದೆ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ 13 ಓಎಸ್ ಅನ್ನು ಬಳಕೆ ಮಾಡಬಹುದಾಗಿದೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿಗಳಿಗಾಗಿ ಗೂಗಲ್ ಅಧಿಕೃತವಾಗಿ ಆಂಡ್ರಾಯ್ಡ್ 13 ಓಎಸ್ ಅನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಹೊಸ ಸಾಫ್ಟ್‌ವೇರ್ ಹೆಚ್ಚಿನ ಗ್ರಾಹಕೀಕರಣ ಆಯ್ಕೆಗಳು, ಕಾರ್ಯಕ್ಷಮತೆ ಸುಧಾರಣೆಯಂತಹ ಕೆಲವು ಹೊಸ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಯುಐನಲ್ಲಿ ಕೆಲವು ಹೊಸ ಬದಲಾವಣೆ ಕಂಡುಬಂದಿವೆ. ಪ್ರಮುಖ ವಿಷಯ ಎಂದರೆ ನೀವು ಈಗಾಗಲೇ ಆಂಡ್ರಾಯ್ಡ್‌ 12 ಓಎಸ್‌ ಆಯ್ಕೆ ಇರುವ ಸ್ಮಾರ್ಟ್‌ಟಿವಿ ಹೊಂದಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಡಿವೈಸ್‌ ಅನ್ನು ಆಂಡ್ರಾಯ್ಡ್‌ 13 ಗೆ ಅಪ್‌ಡೇಟ್‌ ಮಾಡಬಹುದಾಗಿದೆ.

ಇನ್ನಷ್ಟು ಉತ್ತಮ ಕಾರ್ಯಕ್ಷಮತೆ

ಇನ್ನಷ್ಟು ಉತ್ತಮ ಕಾರ್ಯಕ್ಷಮತೆ

ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ಆಂಡ್ರಾಯ್ಡ್‌ 13 ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಟಿವಿ ಆಡಿಯೊ ಟ್ರ್ಯಾಕ್ ರಚಿಸುವ ಮೊದಲು ರೂಟ್ ಮಾಡಿದ ಡಿವೈಸ್‌ ಮತ್ತು ಬೆಂಬಲಿತ ಫಾರ್ಮಾಟ್ ಫೈಂಡ್‌ ಮಾಡಲು ಆಪ್‌ಗಳಿಗೆ ಅನುಕೂಲ ಮಾಡಿಕೊಡುತ್ತದೆ. ಇದಿಷ್ಟೇ ಅಲ್ಲದೆ, ಬಾಹ್ಯ ಸ್ಪೀಕರ್‌ಗಳು ಮತ್ತು ಸೌಂಡ್‌ಬಾರ್‌ಗಳಿಗೆ ಗೇಮ್‌ ಮತ್ತು ಸ್ಟ್ರೀಮಿಂಗ್ ಆಪ್‌ಗೆ ಸಾಧ್ಯವಾದಷ್ಟು ಉತ್ತಮವಾದ ಆಡಿಯೊ ಅನುಭವವನ್ನು ನೀಡಲು ಅನುಕೂಲ ಮಾಡಿಕೊಡಲಿದೆ.

ರಿಫ್ರೆಶ್ ರೇಟ್‌ ಕಂಟ್ರೋಲ್‌ ಮಾಡಬಹುದು

ರಿಫ್ರೆಶ್ ರೇಟ್‌ ಕಂಟ್ರೋಲ್‌ ಮಾಡಬಹುದು

ಈ ಹೊಸ ಓಎಸ್‌ನಲ್ಲಿ ಹಾರ್ಡ್‌ವೇರ್ ಸಾಮರ್ಥ್ಯಗಳನ್ನು ಅವಲಂಬಿಸಿ, ಹೆಚ್‌ಡಿಎಮ್‌ಐ ಮೂಲ ಡಿವೈಸ್‌ ಮೂಲಕ ರೆಸಲ್ಯೂಶನ್ ಮತ್ತು ರಿಫ್ರೆಶ್ ರೇಟ್‌ ಕಂಟ್ರೋಲ್‌ ಮಾಡಬಹುದಾಗಿದೆ. ಇದರ ಪ್ರಮುಖ ವಿಶೇಷ ಎಂದರೆ ಈ ಓಎಸ್‌ ವಿದ್ಯುತ್ ನಿರ್ವಹಣಾ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಿದ್ದು, ಸ್ಮಾರ್ಟ್‌ಟಿವಿ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವಾಗ ವಿದ್ಯುತ್ ಬಳಕೆ ಆಟೋಮ್ಯಾಟಿಕ್‌ ಆಗಿ ಕಡಿಮೆಯಾಗುತ್ತದೆ.

ಕೀಬೋರ್ಡ್ ಲೇಔಟ್ ನಲ್ಲಿ ಎಪಿಐ ಫೀಚರ್ಸ್‌

ಕೀಬೋರ್ಡ್ ಲೇಔಟ್ ನಲ್ಲಿ ಎಪಿಐ ಫೀಚರ್ಸ್‌

ಇನ್ನು ಈ ಆಂಡ್ರಾಯ್ಡ್‌ 13 ಓಎಸ್‌ನಲ್ಲಿ ಹೊಸ ಕೀಬೋರ್ಡ್ ಲೇಔಟ್ ಎಪಿಐ ನಂತಹ ಫೀಚರ್ಸ್‌ಗಳನ್ನು ಗೂಗಲ್‌ ಪರಿಚಯಿಸಿದೆ. ಹಾಗೆಯೇ ಬಳಕೆದಾರರು ಸಿಸ್ಟಂ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಹಾರ್ಡ್‌ವೇರ್ ಮ್ಯೂಟ್ ಸ್ವಿಚ್ ಸ್ಥಿತಿಯ ಲಭ್ಯತೆ, ಮೈಕ್ರೊಫೋನ್ ಪ್ರವೇಶಕ್ಕಾಗಿ ಸುಧಾರಿತ ಬಳಕೆದಾರ ನಿಯಂತ್ರಣ ಹಾಗೂ ಬಾಹ್ಯ ಕೀಬೋರ್ಡ್‌ಗಳಿಗಾಗಿ ವಿಭಿನ್ನ ಭಾಷೆಯ ಲೇಔಟ್‌ಗಳನ್ನು ಆಯ್ಕೆ ಮಾಡಲು ಇದು ಅನುಮತಿ ನೀಡುತ್ತದೆ. ಈ ಮೂಲಕ ಹೊಸ ರೀತಿಯ ಅನುಭವ ಸ್ಮಾರ್ಟ್‌ಟಿವಿ ಬಳಕೆದಾರರಿಗೆ ಲಭ್ಯವಾಗಲಿದೆ.

ನಿಮ್ಮಿಷ್ಟದ ಭಾಷಾ ಆಯ್ಕೆಗೆ ಅನುಮತಿ

ನಿಮ್ಮಿಷ್ಟದ ಭಾಷಾ ಆಯ್ಕೆಗೆ ಅನುಮತಿ

ಇನ್ನು ಈ ಹಿಂದೆ ಇದ್ದಂತಹ ಓಎಸ್‌ನಲ್ಲಿ ಆಯ್ದ ಭಾಷೆಗಳನ್ನು ಬಳಕೆ ಮಾಡಲು ಮಾತ್ರ ಅನುಮತಿ ಇತ್ತು. ಆದರೆ, ಈ ಹೊಸ ಓಎಸ್‌ನಲ್ಲಿ ಹೆಚ್‌ಡಿಎಮ್‌ಐ ಡಿವೈಸ್‌ಗಳಿಗೆ ಸುಧಾರಿತ ಭಾಷಾ ಆಯ್ಕೆಯನ್ನು ನೀಡಲಿದೆ. ಅದರಲ್ಲೂ ಆಂಡ್ರಾಯ್ಡ್‌ 13 ನ ಅಂತಿಮ ಆವೃತ್ತಿಯು ಡೆವಲಪರ್‌ಗಳಿಗೆ ಸೀಮಿತವಾಗಿದ್ದು, OEMಗಳು ಮುಂಬರುವ ದಿನಗಳಲ್ಲಿ ಸ್ಮಾರ್ಟ್‌ಟಿವಿಗಾಗಿ ಆಂಡ್ರಾಯ್ಡ್‌ 13 ನೊಂದಿಗೆ ತಮ್ಮ ಸ್ಮಾರ್ಟ್ ಟಿವಿಗಳನ್ನು ನವೀಕರಿಸುವ ನೀರೀಕ್ಷೆ ಇದೆ.

ಯಾವಾಗ ಲಭ್ಯ ?

ಯಾವಾಗ ಲಭ್ಯ ?

ಹೊಸ ಓಎಸ್‌ ಫೀಚರ್ಸ್‌ನ ಸೆಟ್‌ಗೆ ಹೊಂದಿಸಲು ಆಪ್‌ಗಳಿಗೆ ಮತ್ತು ಇತರ ಇಂಟರ್ಫೇಸ್‌ಗಳನ್ನು ಸ್ಥಾಪಿಸಲು ಡೆವಲಪರ್‌ಗಳಿಗೆ ಅವಕಾಶ ನೀಡಲಾಗಿದ್ದು. ಆಂಡ್ರಾಯ್ಡ್ 12 ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಹೆಚ್ಚಿನ ಸ್ಮಾರ್ಟ್‌ಟಿವಿಗಳು ಮುಂದಿನ ವರ್ಷದೊಳಗೆ ನವೀಕರಣಗೊಳ್ಳಲಿವೆ. ಅದರಲ್ಲೂ ಗೂಗಲ್‌ ಬೆಂಬಲಿತ ಒನ್‌ಪ್ಲಸ್‌, ಶಿಯೋಮಿ ಹಾಗೂ ಕ್ರೋಮಾಕಾಸ್ಟ್‌ ಈ ಹೊಸ ಓಎಸ್‌ ಅನ್ನು ಇತರರಿಗಿಂತ ಬೇಗ ಪಡೆದುಕೊಳ್ಳಲಿವೆ.

Best Mobiles in India

English summary
Android 13 for tv officially launched by Google: What Features Will Your Smart TVs Get In 2023?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X