Subscribe to Gizbot

ಆಂಡ್ರಾಯ್ಡ್ 7.1 ನ್ಯೂಗಾ ಅಪ್‌ಡೇಟ್‌: ಟಾಪ್‌ 5 ಫೀಚರ್‌ಗಳು ಏನು ಗೊತ್ತೇ?

Written By:

ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್ ಇತ್ತೀಚೆಗೆ ತಾನೆ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಆಗಿದೆ. ಆದರೆ ಗೂಗಲ್‌ ಮಾತ್ರ ಈಗಾಗಲೇ ಆಂಡ್ರಾಯ್ಡ್ 7.1 ನ್ಯೂಗಾ ಓಎಸ್‌ ಅನ್ನು ತನ್ನ ಸ್ವಂತ ಡಿವೈಸ್‌ಗಳಾದ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ನಲ್ಲಿ ಜಾರಿಗೊಳಿಸಲು ಸಜ್ಜಾಗಿದೆ. ಇದು ಅಭಿವೃದ್ದಿಗೊಂಡ ಗೂಗಲ್ ಅಸಿಸ್ಟಾನ್ಸ್ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬೋಟ್ ಜೊತೆಗೆ ಹೊರಬರುತ್ತಿದೆ.

ಇತ್ತೀಚೆಗಷ್ಟೆ ಗೂಗಲ್ ತನ್ನ ಸ್ಮಾರ್ಟ್‌ಫೋನ್ ಫ್ಲಾಗ್‌ಶಿಪ್‌ನಲ್ಲಿ ಪಿಕ್ಸೆಲ್, ಪಿಕ್ಸೆಲ್ ಎಕ್ಸ್‌ಎಲ್‌, ಡೇಡ್ರೀಮ್‌ ವೀವ್, ಖ್ರೋಮ್‌ಕಾಸ್ಟ್ ಅಲ್ಟ್ರಾ ಮತ್ತು ಇತರೆ ಪ್ರಾಡಕ್ಟ್‌ ಅನ್ನು ಲಾಂಚ್ ಮಾಡಿತ್ತು. ಪಿಕ್ಸೆಲ್‌ ಸ್ಮಾರ್ಟ್‌ಫೋನ್ ಜೊತೆಗಿನ ಇತರೆ ಡಿವೈಸ್‌ನಲ್ಲಿಯೂ ಸಹ ಗೂಗಲ್ ವೈಯಕ್ತಿಕ ಅಸಿಸ್ಟಾನ್ಸ್ ಅನ್ನು ನೀಡಿರಲಿಲ್ಲ. ಅಂದಹಾಗೆ ಮುಂಬರುವ ಆಂಡ್ರಾಯ್ಡ್ 7.1 ನ್ಯೂಗಾ'ದಲ್ಲಿನ ಟಾಪ್‌ 5 ಹ್ಯಾಂಡ್‌ಫುಲ್ ಫೀಚರ್‌ಗಳು ಏನು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.(Android)

ಸ್ಮಾರ್ಟ್‌ಫೋನ್‌ ಅನ್ನು ಆಂಡ್ರಾಯ್ಡ್ 7.0 ನ್ಯೂಗಾ ಓಎಸ್‌ಗೆ ಅಪ್‌ಡೇಟ್‌ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪ್‌ ಶಾರ್ಟ್‌ಕಟ್‌

ಆಪ್‌ ಶಾರ್ಟ್‌ಕಟ್‌

ಅಂದಹಾಗೆ ಆಪ್‌ ಶಾರ್ಟ್‌ಕಟ್ ಫೀಚರ್ ಅನ್ನು ಆಂಡ್ರಾಯ್ಡ್ ನ್ಯೂಗಾ ಬೆಟಾ ಪ್ರೋಗ್ರಾಮ್‌ನಲ್ಲಿ ಲಾಂಚ್ ಮಾಡಲಾಗಿದೆ. ಈ ಫೀಚರ್‌ 3D ಟಚ್ ರೀತಿಯಲ್ಲಿದ್ದು, ನಿರ್ದಿಷ್ಟ ಆಕ್ಷನ್‌ಆಗಿ ಆಪ್‌ ಐಕಾನ್‌ ಅನ್ನು ಪ್ರೆಸ್ ಮಾಡಿ ಹೋಲ್ಡ್ ಮಾಡಿದರೆ ಆಯಿತು. ಆಂಡ್ರಾಯ್ಡ್ 7.1 ನ್ಯೂಗಾದಲ್ಲಿ ಈ ರೀತಿಯ 5 ಶಾರ್ಟ್‌ಕಟ್‌ಗಳನ್ನು ಹೊಂದಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಮೇಜ್‌ ಕೀಬೋರ್ಡ್‌

ಇಮೇಜ್‌ ಕೀಬೋರ್ಡ್‌

ಈ ಕೀಬೋರ್ಡ್‌ನಲ್ಲಿ ಬಳಕೆದಾರರು ಸ್ಟಿಕ್ಕರ್, ಎಮೋಜಿ, ಜಿಫ್‌ಗಳು ಮತ್ತು ಇತರೆ ಇಮೇಜ್‌ಗಳನ್ನು ಸೆಂಡ್‌ ಮಾಡಬಹುದು.

ನೈಟ್‌ ಮೋಡ್

ನೈಟ್‌ ಮೋಡ್

ಬೆಟಾ ಪ್ರೋಗ್ರಾಮ್‌ ಸಮಯದಲ್ಲಿ ಈ ಫೀಚರ್‌ ಅನ್ನು ಪರಿಚಯಿಸಲಾಯಿತು. ಆದರೆ ನಂತರದಲ್ಲಿ ಸ್ಕ್ರಾಪ್ ಆಯಿತು. ಆದರೆ ಈಗ ಆಂಡ್ರಾಯ್ಡ್ 7.1 ಓಎಸ್‌ನಲ್ಲಿ ಈ ಫೀಚರ್‌ ಅನ್ನು ನೀಡಲಾಗುತ್ತಿದೆ. ಅಧಿಕೃತವಾಗಿ ಇದನ್ನು 'ನೈಟ್‌ ಲೈಟ್‌' ಎಂದು ಕರೆಯಲಾಗುತ್ತದೆ. ಇದು ಸ್ಮಾರ್ಟ್‌ಫೋನ್‌ನಲ್ಲಿನ ನೀಲಿ ಬಣ್ಣವನ್ನು ರಿಮೂವ್ ಮಾಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಂಗರ್‌ಪ್ರಿಂಟ್ ಗೆಸ್ಚರ್

ಫಿಂಗರ್‌ಪ್ರಿಂಟ್ ಗೆಸ್ಚರ್

ಫಿಂಗರ್‌ಪ್ರಿಂಟ್ ಗೆಸ್ಚರ್ ಅಪ್‌ಡೇಟ್‌ನಿಂದ ನೋಟಿಫಿಕೇಶನ್ ಪ್ಯಾನೆಲ್‌ ಅನ್ನು ಫಿಂಗರ್‌ಪ್ರಿಂಟ್ ಸೆನ್ಸಾರ್‌ ಬಳಸಿ ಡೌನ್‌/ಅಪ್ ಸ್ವೈಪ್‌ ಮಾಡಿ ಓಪನ್‌ ಮತ್ತು ಕ್ಲೋಸ್ ಮಾಡಬಹುದು.

ಆಂಡ್ರಾಯ್ಡ್ 7.1 ನ್ಯೂಗಾ

ಆಂಡ್ರಾಯ್ಡ್ 7.1 ನ್ಯೂಗಾ

'ಆಂಡ್ರಾಯ್ಡ್ 7.1 ನ್ಯೂಗಾ' ಓಎಸ್‌ ಆಂಡ್ರಾಯ್ಡ್ ಬೆಟಾ ಪ್ರೋಗ್ರಾಮ್‌ನಲ್ಲಿ ಡೆವೆಲಪರ್ ಪ್ರಿವೀವ್‌ ಆಗಿ ಈ ತಿಂಗಳ ಅಂತ್ಯಕ್ಕೆ ಲಾಂಚ್‌ ಆಗಲಿದೆ. ಅಲ್ಲಿಯವರೆಗೆ ಬೆಟಾ ಎಡಿಸನ್ ನೆಕ್ಸಸ್ 5ಎಕ್ಸ್, ನೆಕ್ಸಸ್ 6ಪಿ ಮತ್ತು ಪಿಕ್ಸೆಲ್ ಸಿ ಟ್ಯಾಬ್ಲೆಟ್‌ಗಳಲ್ಲಿ ಪ್ರಾಥಿಮಿಕವಾಗಿ ಲಭ್ಯವಾಗಲಿದೆ.

ನೆಕ್ಸಸ್ 6, ನೆಕ್ಸಸ್ 5ಎಕ್ಸ್, ನೆಕ್ಸಸ್ 6ಪಿ, ನೆಕ್ಸಸ್ 9, ನೆಕ್ಸಸ್ ಪ್ಲೇಯರ್, ಪಿಕ್ಸೆಲ್ ಸಿ, ಪಿಕ್ಸೆಲ್, ಪಿಕ್ಸೆಲ್ ಎಕ್ಸ್ಎಲ್ ಮತ್ತು ಇತರೆ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಡಿಸೆಂಬರ್ ಅಂತ್ಯಕ್ಕೆ ಲಾಂಚ್‌ ಆಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Android 7.1 Nougat Update: 5 Features You'll Find to be Useful. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot