ಗೂಗಲ್‌ನ 'ಆಂಡ್ರಾಯ್ಡ್ ಪಿ' ಆಪರೇಟಿಂಗ್ ಸಿಸ್ಟಮ್‌ ಹೆಸರು ಲೀಕ್!!

|

ಹೊಸ ಹೊಸ ಆಪರೆಟಿಂಗ್ ಸಿಸ್ಟಮ್‌ಗಳಿಗೆ ಕಿಟ್​ಕ್ಯಾಟ್​ , ಓರಿಯೂನಂತಹ ಹೆಸರಿಡುವುದರ ಮೂಲಕ ಫೇಮಸ್​ ಆಗಿದ್ದ 'ಗೂಗಲ್' ಈಗ 'ಆಂಡ್ರಾಯ್ಡ್ ಪಿ'ಗೆ ಯಾವ ಹೆಸರಿಡಬಹುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಲೀಕ್​ ಆಗಿರುವ ಮಾಹಿತಿಗಳ ಪ್ರಕಾರ ಹೊಸ ಒಎಸ್​ ಹೆಸರನ್ನು 'ಪಿಸ್ತಾಚಿಯೋ' ಐಸ್​ ಕ್ರೀಂ ಎಂದು ಹೆಸರಿಸಲಾಗುತ್ತದೆ ಎಂದು ಹೇಳಲಾಗಿದೆ.

ಹೌದು, ಕಳೆದ ಓಸ್ ಆಂಡ್ರಾಯ್ಡ್ 8.0ಗೆ ಬಿಸ್ಕತ್ ಹೆಸರಿಟ್ಟಿದ್ದ ಗೂಗಲ್ , ಆಂಡ್ರಾಯ್ಡ್ 9.0ಗೆ 'ಪಿಸ್ತಾಚಿಯೋ' ಐಸ್​ ಕ್ರೀಂ ಎಂದು ಹೆಸರಿಡುತ್ತಿದೆ. ಈ ಮೂಲಕ 2009 ರಲ್ಲಿ ಗೂಗಲ್ ಹೊಸ ಸಂಪ್ರದಾಯವೊಂದನ್ನು ಈಗಲೂ ಮುಂದುವರೆಸಿ, ಹೊಸ​ ಒಎಸ್​ ಅಪ್​ಡೇಟ್​ ಬಿಡುಗಡೆಯಾದಾಗ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳ ಅನುಕ್ರಮದಲ್ಲಿ ಹೆಸರನ್ನು ಇಡುತ್ತಾ ಬರಲಾಗಿದೆ.

 ಗೂಗಲ್‌ನ 'ಆಂಡ್ರಾಯ್ಡ್ ಪಿ' ಆಪರೇಟಿಂಗ್ ಸಿಸ್ಟಮ್‌ ಹೆಸರು ಲೀಕ್!!

2009ರಿಂದಶುರುವಾಗಿರುವ ಈ ಸಂಪ್ರದಾಯದಲ್ಲಿ ಕಪ್ ಕೇಕ್ , ಡೋನಟ್ , ಎಕ್ಲೆರ್ , ಫ್ರೋಯೋ , ಜಿಂಜರ್ ಬ್ರೆಡ್ , ಹನಿಕೊಂಬ್, ಐಸ್ ಕ್ರೀಮ್ ಸ್ಯಾಂಡ್ ವಿಚ್, ಜೆಲ್ಲಿ ಬೀನ್ , ಕಿಟ್ ಕ್ಯಾಟ್, ಲಾಲಿ ಪಾಪ್, ಓರಿಯೋ ಹೀಗೆಲ್ಲಾ ಹೆಸರುಗಳನ್ನು ಗೂಗಲ್ ಇಡುತ್ತಲೇ ಬಂದಿತ್ತು. ಇದೀಗ ಪಿ ಸರದಿ ಬಂದಿದ್ದು, ಪಿಸ್ತಾಚಿಯೋ ಐಸ್​ ಕ್ರೀಂನ್ನು ಪರಿಚಯಿಸಲು ತೀರ್ಮಾನಿಸಿದೆ.

ಈ ಬಗ್ಗೆ ಹಲವು ಇಂಗ್ಲೀಷ್ ಮಾಧ್ಯಮ ವೆಬ್​ಸೈಟ್‌ಗಳು ವರದಿ ಮಾಡಿದ್ದು, ಗೂಗಲ್​ ಪಾಲುದಾರ ಸಂಸ್ಥೆ ಹುವಾವೆ ತನ್ನ ಗ್ರಾಹಕರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದೆ ಎಂದು ತಿಳಿದುಬಂದಿದೆ. ಜೊತೆಗೆ ಆಂತರಿಕವಾಗಿ ಸಂವಾದ ನಡೆಸಲು ಗೂಗಲ್​ ಈ ಹೆಸರನ್ನು ಇಟ್ಟುಕೊಂಡಿರಬಹುದು ಎಂಬ ಗುಮಾನಿಯೂ ಕೇಳಿಬರುತ್ತಿದೆ.

 ಗೂಗಲ್‌ನ 'ಆಂಡ್ರಾಯ್ಡ್ ಪಿ' ಆಪರೇಟಿಂಗ್ ಸಿಸ್ಟಮ್‌ ಹೆಸರು ಲೀಕ್!!

ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಮತ್ತಷ್ಟು ಅಪ್‌ಡೇಟ್ ಆಗಿ ಬರುತ್ತಿರುವ 'ಆಂಡ್ರಾಯ್ಡ್ ಪಿ'ಆಪರೇಟಿಂಗ್ ಸಿಸ್ಟಮ್ ಇದೆ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಗೂಗಲ್‌ನ ಈ​ ಹೊಸ ಅಪ್​ಡೇಟ್​ನ್ನು ಅಲ್ಲಾ ಆಂಡ್ರಾಯ್ಡ್​ ಮೊಬೈಲ್​ಗಳಿಗೆ ಸಿಕ್ಕರೂ ಕೂಡ, ಅದು ನಮ್ಮ ಬಳಕೆಗೆ ಬರುವುದು ಯಾವಾಗ ಎನ್ನುವುದೇ ಕುತೋಹಲ.!

ಓದಿರಿ: ಚಿನ್ನದ ಖನಿಯಂತಿರುವ 'ಬಿಲ್‌ಗೇಟ್ಸ್' ಅವರ ಬಂಗಲೆಗೆ ಮನಸೋಲದವರು ಯಾರು?

Best Mobiles in India

English summary
According to a report by Bloomberg citing "people familiar with the situation," Google is referring to Android P. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X