ಕಾರು ಅಪಘಾತದಲ್ಲಿ 200 ಅಡಿ ಕಣಿವೆಗೆ ಬಿದ್ದ ಯುವತಿ ರಕ್ಷಣೆಗೆ ನೆರವಾದ ಐಫೋನ್!

|

ಆಕಸ್ಮಿಕವಾಗಿ ಏನಾದರೂ ನೀರಲ್ಲಿ ಬಿದ್ದರೆ ಹುಲ್ಲುಕಡ್ಡಿಯೂ ಸಹ ಜೀವ ಉಳಿಸಲು ಸಹಾಯ ಮಾಡುತ್ತದೆ ಎನ್ನುವ ಮಾತುಗಳನ್ನು ಆಗಾಗ್ಗೆ ಕೇಳಿರಬಹುದು. ಅಂದರೆ ನಮ್ಮ ನಡುವೆ ಇರುವ ಯಾವುದೇ ವಸ್ತುಗಳು ಸಹ ಅನುಪಯುಕ್ತವಲ್ಲ. ಅವುಗಳನ್ನು ಬಳಕೆ ಮಾಡಿಕೊಳ್ಳುವ ಕಲೆ ನಮ್ಮಲ್ಲಿರಬೇಕು ಎಂಬುದು ಇದರ ಅರ್ಥ. ಅಂತೆಯೇ ಸ್ಮಾರ್ಟ್‌ಫೋನ್‌ಗಳು ಸಹ ಎಲ್ಲರಿಗೂ ಒಂದಲ್ಲಾ ಒಂದು ವಿಷಯದಲ್ಲಿ ತುಂಬಾನೆ ಸಹಕಾರಿಯಾಗಿವೆ. ಅದರಲ್ಲೂ ಜೀವವನ್ನೂ ಉಳಿಸುವ ಕೆಲಸ ಸಹ ಮಾಡಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಇಂದು ಹೆಚ್ಚಾಗಿದೆ. ಇವುಗಳ ಸೇವೆ ಇಂದು ಕೇವಲ ಕರೆ ಹಾಗೂ ಮೆಸೆಜ್‌ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ಆರೋಗ್ಯ, ಶಿಕ್ಷಣ, ಮನರಂಜನೆ ಸೇರಿದಂತೆ ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ. ಇದರ ಭಾಗವಾಗಿಯೇ ಐಫೋನ್‌ ಸಾವು ಬದುಕಿನ ನಡುವೆ ಯಾರಿಗೂ ತಿಳಿಯದ ಕಣಿವೆಯೊಳಗೆ ಬಿದ್ದಿದ್ದ ಯುವತಿಯ ಜೀವ ಉಳಿಸಲು ಸಹಕಾರಿಯಾಗಿದೆ.

ಕಾರ್ಯಕ್ಷಮತೆ

ಐಫೊನ್‌ ತನ್ನ ಕಾರ್ಯಕ್ಷಮತೆಗಷ್ಟೇ ಹೆಸರಾಗದೆ ಈಗಾಗಲೇ ಹಲವಾರು ಜೀವಗಳನ್ನು ಉಳಿಸಿದ ಕೀರ್ತಿ ತನ್ನದಾಗಿಸಿಕೊಂಡಿದೆ. ಈ ಹಿಂದೆ ಕ್ಯಾಲಿಫೋರ್ನಿಯಾದ ಏಂಜಲೀಸ್ ರಾಷ್ಟ್ರೀಯ ಅರಣ್ಯದ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಇದರಿಂದ ಇಬ್ಬರು ವ್ಯಕ್ತಿಗಳು ಅರಣ್ಯದ ಅಳವಾದ ಕಣಿವೆಯಲ್ಲಿ ಬಿದ್ದಿದ್ದರು. ಆ ಸಂದರ್ಭದಲ್ಲಿ ಅವರ ಬಳಿಯಿದ್ದ ಐಫೋನ್‌ 14ನಲ್ಲಿರುವ ಎಮರ್ಜೆನ್ಸಿ SOS ಫೀಚರ್ಸ್‌ ಉಪಯೋಗಕ್ಕೆ ಬಂದಿದೆ. ಅಪಘಾತವಾಗುತ್ತಿದ್ದ ಹಾಗೆ ಆಕ್ಸಿಡೆಂಟ್‌ ಅನ್ನು ರೆಕಾರ್ಡ್‌ ಮಾಡಿರುವ ಐಫೋನ್‌ 14 ತಕ್ಷಣವೇ ಬಳಕೆದಾರರು ಹೊಂದಿದ್ದ ತುರ್ತು ಸಂಪರ್ಕಗಳಿಗೆ ತುರ್ತು SOS ಅನ್ನು ಕಳುಹಿಸಿದೆ. ಇದರಿಂದ ಸೂಕ್ತ ಸಮಯದಲ್ಲಿ ಅವರನ್ನು ರಕ್ಷಿಸುವುದಕ್ಕೆ ಸಾದ್ಯವಾಗಿದೆ.

ಏನಿದು ಹೊಸ ಘಟನೆ?

ಏನಿದು ಹೊಸ ಘಟನೆ?

ಕ್ರಿಸ್‌ಮಸ್‌ನ ಎಲ್ಲಾ ಆಚರಣೆ ಮುಗಿಸಿಕೊಂಡು ಸಂತಸವಾಗಿದ್ದ ಸ್ಯಾನ್ ಬರ್ನಾರ್ಡಿನೋ ಕೌಂಟಿ ಅಗ್ನಿಶಾಮಕ ಇಲಾಖೆ ಒಂದು ಕರೆಯನ್ನು ಸ್ವೀಕರಿಸಿತು. ಕಾರೊಂದು ಸುಮಾರು 200 ಅಡಿ ಕೆಳಗೆ ಪಲ್ಟಿಯಾಗಿದೆ ಮತ್ತು ಮಹಿಳೆಯೊಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ., ಈಕೆಗೆ ತಕ್ಷಣದ ರಕ್ಷಣೆಯ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಅದರಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದಾಗ ಕಾರು ಕಣಿವೆಯ ಪರ್ವತಗಳ ನಡುವೆ ತಲೆಕೆಳಗಾಗಿ ಬಿದ್ದಿತ್ತು. ಸಮಯ ವ್ಯರ್ಥ ಮಾಡದೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸೇನಾ ಸಿಬ್ಬಂದಿ ಕೆಳಗಿಳಿದು ನೋಡಿದಾಗ ಕಾರಿನಲ್ಲಿ ಯುವತಿ ಪತ್ತೆಯಾಗಿದ್ದಳು, ಹಾಗೆಯೇ ಮಾರಣಾಂತಿಕವಾಗಿ ಗಾಯಗೊಂಡಿದ್ದಳು.

ಸಿಬ್ಬಂದಿ

ಇದಾದ ಬಳಿಕ ಸಿಬ್ಬಂದಿ ಕಾರಿನಿಂದ ಆಕೆಯನ್ನು ಹೊರತಂದು ಹಗ್ಗದ ವ್ಯವಸ್ಥೆಗಳ ಸಹಾಯದಿಂದ ಮೇಲೆ ತಂದರು. ಇದಾದ ಬಳಿಕ ಆಕೆಯನ್ನು ಸ್ಥಳೀಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ. ಈ ವಿವರವನ್ನು ಅಗ್ನಿಶಾಮಕ ಸಿಬ್ಬಂದಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ಇವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಕೆಯ ಕುಟುಂಬ ಸದಸ್ಯರೆ.

ಈ ಎಲ್ಲಾ ಕಾರ್ಯಕ್ಕೆ ಕಾರಣವಾಗಿದ್ದು ಐಫೋನ್

ಈ ಎಲ್ಲಾ ಕಾರ್ಯಕ್ಕೆ ಕಾರಣವಾಗಿದ್ದು ಐಫೋನ್

ಹೌದು, ಯುವತಿ ಐಫೋನ್‌ ಬಳಕೆ ಮಾಡುತ್ತಿದ್ದು, ಅದರಲ್ಲಿನ ಫೈಂಡ್ ಮೈ ಐಫೋನ್ ಫೀಚರ್ಸ್‌ ಮೂಲಕ ಕುಟುಂಬಸ್ಥರು ಆಕೆಯ ಅಪಘಾತಕ್ಕೀಡಾದ ಸ್ಥಳವನ್ನು ಪತ್ತೆ ಮಾಡಿ ನಂತರ ಆಕೆಯ ರಕ್ಷಣೆಗಾಗಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನು ಇಡೀ ರಾತ್ರಿ ವಾಹನದಲ್ಲಿಯೇ ಸಿಲುಕಿ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು.

ಅದು ಹೊಸ ಐಫೋನ್ ಸಹ ಅಲ್ಲ

ಅದು ಹೊಸ ಐಫೋನ್ ಸಹ ಅಲ್ಲ

ಸದ್ಯ ಈಗ ಅಸ್ತಿತ್ವದಲ್ಲಿರುವ ಹೊಸ ಐಫೋನ್‌ಗಳು ಬಳಕೆದಾರರಿಗೆ ಸಾಕಷ್ಟು ಫೀಚರ್ಸ್‌ ನೀಡಲಿವೆ. ಅಂದರೆ ಅದರಲ್ಲಿ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್‌ ತಕ್ಷಣವೇ ಉಳಿಸಿದ ಸಂಖ್ಯೆಗಳಿಗೆ ತುರ್ತು ಮಾಹಿತಿಯನ್ನು ಕಳುಹಿಸುತ್ತದೆ ಮತ್ತು ಅಪಘಾತದ ಸಂದರ್ಭದಲ್ಲಿ ಸಹಾಯಕ್ಕಾಗಿ ಕರೆ ಮಾಡುತ್ತದೆ. ಆದರೆ ಯುವತಿಯ ಬಳಿ ಇದ್ದ ಐಫೋನ್ ಈ ಯಾವುದೇ ಫೀಚರ್ಸ್‌ ಅನ್ನು ಹೊಂದಿರಲಿಲ್ಲ. ಆದರೆ ಗಮನಾರ್ಹ ಸಂಗತಿಯೆಂದರೆ ಫೈಂಡ್ ಮೈ ಐಫೋನ್ ಫೀಚರ್ಸ್ ಆಕೆಯ ಜೀವ ಉಳಿಸಲು ಸಹಾಯ ಮಾಡಿದ್ದು ಮಾತ್ರ ಪ್ರಶಂಸಾರ್ಹ.

Best Mobiles in India

English summary
Apple Find my iPhone feature saves woman after car falls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X