ಆಪಲ್-ಗೂಗಲ್ ನಡುವೆ ಬೆಂಕಿ ಇಟ್ಟ 'ಬರ್ಗರ್': ಏನಿದು 'ಬರ್ಗರ್ ವಿವಾದ'

ಗೂಗಲ್ ಮತ್ತು ಆಪಲ್‌ಗಳೇರಡು ತಮ್ಮದೇ ಆದ ಹೊಸ ಮಾದರಿಯ ಎಮೋಜಿಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಆದರೆ ಆಪಲ್ ಮತ್ತು ಗೂಗಲ್ ಎರಡು ಒಂದೇ ಮಾದರಿಯ ಎಮೋಜಿಗಳನ್ನು ವಿಭಿನ್ನ ಮಾದರಿ ಮತ್ತು ಬಣ್ಣದಲ್ಲಿ ನೀಡುತ್ತಿವೆ.

|

ಟೆಕ್ ದೈತ್ಯಗಳಾದ ಆಪಲ್ ಮತ್ತು ಗೂಗಲ್ ತಿನ್ನುವ ಬರ್ಗರ್ ವಿಚಾರವಾಗಿ ಕಿತ್ತಾಡುತ್ತಿವೆ ಎಂದರೆ ನೀವು ನಂಬಲೇ ಬೇಕು. ಅದುವೇ ತಿನ್ನುವ ಬರ್ಗರ್ ಗಾಗಿ ಅಲ್ಲ, ಬದಲಾಗಿ ಬರ್ಗರ್ ಎಮೊಜಿಗಾಗಿ. ಒಂದು ಎಮೋಜಿ ಎರಡು ಕಂಪನಿಗಳ ಕಿತ್ತಾಟಕ್ಕೆ ಕಾರಣವಾಗಿದೆ.

ಆಪಲ್-ಗೂಗಲ್ ನಡುವೆ ಬೆಂಕಿ ಇಟ್ಟ 'ಬರ್ಗರ್': ಏನಿದು 'ಬರ್ಗರ್ ವಿವಾದ'

ಓದಿರಿ: ಬಿಡುಗಡೆ ಆಯ್ತು ನೋಕಿಯಾ 2: ಬೆಲೆ ಕೇಳಿದ್ರೆ ಚೀನಾ ಫೋನ್‌ಗಳ ಅಧ್ಯಾಯ ಮುಕ್ತಾಯ ಎಂದರ್ಥ.!

ಹೌದು ಗೂಗಲ್ ಮತ್ತು ಆಪಲ್‌ಗಳೇರಡು ತಮ್ಮದೇ ಆದ ಹೊಸ ಮಾದರಿಯ ಎಮೋಜಿಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಆದರೆ ಆಪಲ್ ಮತ್ತು ಗೂಗಲ್ ಎರಡು ಒಂದೇ ಮಾದರಿಯ ಎಮೋಜಿಗಳನ್ನು ವಿಭಿನ್ನ ಮಾದರಿ ಮತ್ತು ಬಣ್ಣದಲ್ಲಿ ನೀಡುತ್ತಿವೆ. ಆದರೆ ಈ ಬಾರಿ ಬರ್ಗರ್ ಮಾತ್ರ ಕಿತ್ತಾಟಕ್ಕೆ ಕಾರಣವಾಗಿದೆ.

ಬರ್ಗರ್ ಗಾಗಿ ಹೊಡೆದಾಟ:

ಬರ್ಗರ್ ಗಾಗಿ ಹೊಡೆದಾಟ:

ಆಪಲ್ ಮತ್ತು ಗೂಗಲ್ ಬರ್ಗರ್ ಎಮೋಜಿಯನ್ನು ಬೇರೆ ಬೇರೆ ಮಾದರಿಯಲ್ಲಿ ಚಿತ್ರಿಸಿವೆ, ಆದರೆ ಇಲ್ಲಿ ಕಿತ್ತಾಟ ಆರಂಭವಾಗಿರುವುದು ಬರ್ಗರ್ ಎಮೋಜಿಗಲ್ಲ ಅದರಲ್ಲಿ ಹಾಕಿರುವ ಚೀಸ್‌ಗಾಗಿ. ಆಪಲ್ ಚೀಸ್ ಮೆಲ್ಬಾಗದಲ್ಲಿ ಇಟ್ಟಿದರೆ, ಗೂಗಲ್ ಕೆಳಭಾಗದಲ್ಲಿ ಇಟ್ಟಿದೆ.

ಚೀಸ್ ಸ್ಥಾನಕ್ಕೆ ವಾದ-ವಿವಾದ:

ಚೀಸ್ ಸ್ಥಾನಕ್ಕೆ ವಾದ-ವಿವಾದ:

ಆಪಲ್ ಚೀಸ್ ಮೆಲ್ಭಾಗದಲ್ಲಿ ಇಟ್ಟಿದ್ದು, ಇದನ್ನು ಕೆಲವರು ಸರಿ ಎಂದರೆ ಇನ್ನು ಕೆಲವರು ಹೊಸದಾಗಿ ಬಂದಿರುವ ಗೂಗಲ್ ಬರ್ಗರ್ ನಲ್ಲಿ ಚೀಸ್ ಕೆಳಭಾಗದಲ್ಲಿದೆ. ಇದನ್ನು ಹಲವರು ಸರಿಯಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇದರ ಕುರಿತು ಭಾರೀ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:

ಬರ್ಗರ್ ಕುರಿತು ಅದರಲ್ಲೂ ಬರ್ಗರ್ ಚೀಸ್ ಸ್ಥಾನದಲ್ಲಿ ಆಗಿರುವ ಬದಾವಣೆಯನ್ನು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯೂ ಆರಂಭವಾಗಿದೆ ಎನ್ನಲಾಗಿದೆ. ಕೆಲವರು ಗೂಗಲ್ ಸರಿ ಎಂದರೆ ಇನ್ನು ಕೆಲವರು ಆಪಲ್ ಸರಿ ಎನ್ನುತ್ತಿದ್ದಾರೆ.

ಎಲ್ಲಾ ಬರ್ಗರ್ ಆಪಲ್ ನಂತೆ ಇದೆ:

ಎಲ್ಲಾ ಬರ್ಗರ್ ಆಪಲ್ ನಂತೆ ಇದೆ:

ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳು ತಮ್ಮದೇ ಮಾದರಿಯ ಎಮೋಜಿಗಳನ್ನು ಹೊಂದಿದೆ. ಆದರೆ ಎಲ್ಲಾದರಲೂ ಚೀಸ್ ಬರ್ಗರ್ ಮೇಲ್ಭಾಗದಲ್ಲಿಯೇ ಇದೆ. ಆದರೆ ಗೂಗಲ್ ಈ ಸಂಪ್ರದಾಯವನ್ನು ಬಿಟ್ಟು ಕೆಳಗೆ ಚೀಸ್ ಇಟ್ಟು ವಿವಾದಕ್ಕೆ ಗುರಿಯಾಗಿದೆ.

Best Mobiles in India

English summary
Apple & Google Can’t Agree On Cheese Placement In Burger. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X