ಬಜೆಟ್ ವೈಪರೀತ್ಯ ಐಫೋನ್ ಬೆಲೆಯಲ್ಲಿ ತೀವ್ರ ಹೆಚ್ಚಳ

Written By:

ಇತ್ತೀಚಿನ ಬಜೆಟ್‌ನಲ್ಲಿ ಉಂಟಾದ ವೈಪರೀತ್ಯದಿಂದಾಗಿ ಆಪಲ್ ಭಾರತದಲ್ಲಿ ಐಫೋನ್ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನಲ್ಲಿ ರೂ 2,500 ಅನ್ನು ಆಪಲ್ ಏರಿಸಿದ್ದು ಐಫೋನ್ 6, 16 ಜಿಬಿ ಆವೃತ್ತಿ ಬೆಲೆ 53,500 ರೂಪಾಯಿಗಳ ಬದಲಿಗೆ ರೂ 56,000 ಅಂತೆಯೇ 64ಜಿಬಿ ಮತ್ತು 128 ಜಿಬಿ ಐಫೋನ್ 6 ಆವೃತ್ತಿಗಳು 65,000 ರೂಪಾಯಿ ಮತ್ತು ರೂ 74,000 ಗಳಲ್ಲಿ ದೊರೆಯಲಿದೆ.

ಬಜೆಟ್ ವೈಪರೀತ್ಯ ಐಫೋನ್ ಬೆಲೆಯಲ್ಲಿ ತೀವ್ರ ಹೆಚ್ಚಳ

ಇನ್ನು 16 ಜಿಬಿ ಐಫೋನ್ 6 ಪ್ಲಸ್ ರೂ 65,000 ಕ್ಕೆ ದೊರೆಯಲಿದ್ದು, 64 ಜಿಬಿ ಮತ್ತು 128 ಜಿಬಿ ಫೋನ್‌ಗಳು 74,000 ಮತ್ತು 83,000 ಗಳಲ್ಲಿ ದೊರೆಯಲಿದೆ.

ಇನ್ನು ಐಫೋನ್‌ನ ಹಳೆಯ ಮಾಡೆಲ್‌ಗಳು ಕೂಡ ಬೆಲೆ ಏರಿಕೆಯನ್ನು ಕಂಡಿದ್ದು, 8 ಜಿಬಿ ಐಫೋನ್ 5ಸಿ ಬೆಲೆ ರೂ 33,500 ಆಗಿದ್ದು, ಐಫೋನ್ 5 ಎಸ್ 16 ಜಿಬಿ ಆವೃತ್ತಿ ಬೆಲೆ ರೂ 47,000 ವಾಗಿದ್ದು 32ಜಿಬಿ ಆವೃತ್ತಿ 51,500 ರೂಪಾಯಿಗಳಲ್ಲಿ ದೊರೆಯಲಿದೆ ಎಂದು ವರದಿ ತಿಳಿಸಿದೆ.

English summary
Due to budget variation Cupertino giant apple has increasing its iphone variants price in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot