ಐಫೋನ್‌ ಪ್ರಿಯರಿಗೆ ಗುಡ್‌ನ್ಯೂಸ್‌!..ಈ ಡಿಸ್ಕೌಂಟ್‌ ತಿಳಿದ್ರೆ, ನೀವು ಶಾಕ್‌!

|

ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ಬಹುತೇಕರು ಐಫೋನ್ ಖರೀದಿಸುವ ಇಚ್ಛೆ ಹೊಂದಿರುತ್ತಾರೆ. ಹೀಗೆ ನೀವೇನಾದರೂ ನೂತನ ಐಫೋನ್‌ ಖರೀದಿಸುವ ಪ್ಲ್ಯಾನ್ ಹೊಂದಿದ್ದರೆ, ಅದಕ್ಕೆ ಇದೀಗ ಸಕಾಲ ಎನ್ನಬಹುದು. ಏಕೆಂದರೇ ಇ ಕಾಮರ್ಸ್‌ ದಿಗ್ಗಜ ಪ್ಲಾಟ್‌ಫಾರ್ಮ್ ಗಳಲ್ಲಿ ಅಮೆಜಾನ್ (Amazon) ಹಾಗೂ ಫ್ಲಿಪ್‌ಕಾರ್ಟ್‌ (Flipkart) ತಾಣಗಳು ಜನಪ್ರಿಯ ಐಫೋನ್‌ 11 (Apple iPhone 11) ಭರ್ಜರಿ ರಿಯಾಯಿತಿ ಖರೀದಿಸಬಹುದಾಗಿದೆ.

ಅಮೆಜಾನ್ (Amazon)

ಹೌದು, ಅಮೆಜಾನ್ (Amazon) ಹಾಗೂ ಫ್ಲಿಪ್‌ಕಾರ್ಟ್‌ (Flipkart) ಇ ಕಾಮರ್ಸ್‌ ತಾಣಗಳಲ್ಲಿ ಐಫೋನ್‌ 11 (Apple iPhone 11) ಆಕರ್ಷಕ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ಐಫೋನ್‌ 11 ಅನ್ನು ಸುಮಾರು 23,000ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಕೊಡುಗೆ ಇ ಕಾಮರ್ಸ್‌ ನೀಡಿರುವ ರಿಯಾಯಿತಿ ಹಾಗೂ ಎಕ್ಸ್‌ಚೇಂಜ್ ಕೊಡುಗೆಯನ್ನು ಒಳಗೊಂಡಿರಲಿದೆ.

ಐಫೋನ್‌ 11 (64GB)

ಐಫೋನ್‌ 11 (64GB)

ಫ್ಲಿಪ್‌ಕಾರ್ಟ್‌ ತಾಣವು ಐಫೋನ್‌ 11 (64GB) ಗೆ 8% ರಿಯಾಯಿತಿ ನೀಡಿದ್ದು, ಜೊತೆಗೆ 17,500ರೂ ವರೆಗೆ ಎಕ್ಸ್‌ಚೇಂಜ್ ಕೊಡುಗೆ ಲಭ್ಯ ಮಾಡಿದೆ. ಅದೇ ರೀತಿ ಅಮೆಜಾನ್ ಐಫೋನ್‌ 11 (64GB) ಗೆ ಸುಮಾರು 25,000ರೂ. ವರೆಗೂ ಎಕ್ಸ್‌ಚೇಂಜ್ ರಿಯಾಯಿತಿ ಲಭ್ಯ ಮಾಡಿದೆ. ಹಾಗಾದರೆ ಐಫೋನ್‌ 11 ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 11 ಡಿಸ್‌ಪ್ಲೇ

ಐಫೋನ್ 11 ಡಿಸ್‌ಪ್ಲೇ

ಐಫೋನ್ 11 6.1 ಇಂಚಿನ ಲಿಕ್ವಿಡ್ ರೆಟಿನಾ XDR ಡಿಸ್ಪ್ಲೇ ಮತ್ತು ಐಫೋನ್ 12 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಯನ್ನು ಪಡೆದಿದೆ. ಇದಲ್ಲದೆ, ಐಫೋನ್ 11 ಫೋನ್ 326 ಪಿಪಿಐನಲ್ಲಿ 1792 × 828 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಐಫೋನ್ 11 20,00,000: 1 ಕಾಂಟ್ರಾಸ್ಟ್ ಅನುಪಾತಕ್ಕೆ ಹೋಲಿಸಿದರೆ 1,400: 1 (ವಿಶಿಷ್ಟ) ದೊಂದಿಗೆ ಬರುತ್ತದೆ. ಐಫೋನ್ 11 ವಿಶಿಷ್ಟ ಗರಿಷ್ಠ ಹೊಳಪು 625 ನಿಟ್‌ಗಳು ಆಗಿದೆ.

ಐಫೋನ್ 11 ಕ್ಯಾಮೆರಾ

ಐಫೋನ್ 11 ಕ್ಯಾಮೆರಾ

ಐಫೋನ್ 11 ಫೋನ್ ಹಿಂಬದಿಯ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ವಿನ್ಯಾಸದೊಂದಿಗೆ ಒಳಗೊಂಡಿದೆ. ಇನ್ನು ಈ ಫೋನಿನ ಕ್ಯಾಮೆರಾ ಸಂವೇದಕಗಳಲ್ಲಿ - 12 ಎಂಪಿ ಅಲ್ಟ್ರಾ-ವೈಡ್ ಮತ್ತು 12 ಎಂಪಿ ವೈಡ್-ಆಂಗಲ್ ಸೆನ್ಸರ್‌ಗಳು. ಹಾಗೆಯೇ ಐಫೋನ್ 11 ಆಪಲ್ 4 ಕೆ ಯಲ್ಲಿ 24 ಎಫ್‌ಪಿಎಸ್, 30 ಎಫ್‌ಪಿಎಸ್ ಮತ್ತು 60 ಎಫ್‌ಪಿಎಸ್‌ನಲ್ಲಿ ರೆಕಾರ್ಡ್ ಮಾಡಲು ಅನುಮತಿಸುತ್ತದೆ. ಇದಲ್ಲದೆ, ಐಫೋನ್ 11 ಹಿಂದಿನ ಕ್ಯಾಮೆರಾಗಳು 1080p ಹೆಚ್‌ಡಿ ರೆಕಾರ್ಡಿಂಗ್ ಅನ್ನು 30fps ಅಥವಾ 60fps ನಲ್ಲಿ ಬೆಂಬಲಿಸುತ್ತವೆ.

ಐಫೋನ್ 11 ಬ್ಯಾಟರಿ

ಐಫೋನ್ 11 ಬ್ಯಾಟರಿ

ಐಫೋನ್‌ಗಳನ್ನು ಆಪಲ್‌ನ ಆಂತರಿಕ ಸಿಲಿಕಾನ್ ಚಿಪ್‌ಸೆಟ್‌ಗಳು ನಿಯಂತ್ರಿಸುತ್ತವೆ. ಐಫೋನ್ 11 ಎ 13 ಬಯೋನಿಕ್ ಜೊತೆ ಸಾಗಿಸುತ್ತದೆ. ಐಫೋನ್ 11 ಅಂತರ್ನಿರ್ಮಿತ ಪುನರ್ಭರ್ತಿ ಮಾಡಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಒಳಗೊಂಡಿದೆ. ಈ ಫೋನ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಐಫೋನ್ 14 ಫೀಚರ್ಸ್‌

ಐಫೋನ್ 14 ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

Best Mobiles in India

English summary
Apple iPhone 11 massive price drop: Check this Deal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X