ಬೆಂಗಳೂರು ಮೂಲದ ಆಸ್ಟ್ರಿಯಾ ಏರೋಸ್ಪೇಸ್‌ನ ಈ ಡ್ರೋನ್‌ಗೆ DGCA ಹಸಿರು ನಿಶಾನೆ

|

ಪೂರ್ಣ ಪ್ರಮಾಣವಾಗಿ ಡ್ರೋನ್ ತಂತ್ರಜ್ಞಾನ ಕಂಪನಿ ಬೆಂಗಳೂರು ಮೂಲದ ಆಸ್ಟೇರಿಯಾ ಏರೋಸ್ಪೇಸ್ (Asteria Aerospace) ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಎ200-ಎಕ್ಸ್ ಟಿ ಡ್ರೋನ್‌ಗೆ (A200-XT drone) ನಾಗರಿಕ ವಿಮಾನಯಾನ ನಿರ್ದೇಶನಾಲಯ ದಿಂದ (DGCA) ಮಾದರಿ ಪ್ರಮಾಣೀಕರಣ ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ, ಆಸ್ಟೇರಿಯಾ ಡಿಜಿಸಿಎ ಪ್ರಮಾಣೀಕೃತಗೊಳಿಸಿದ ಎರಡು ಡ್ರೋನ್‌ ಗಳನ್ನು ಹೊಂದಿರುವ ಮೊದಲ ಕಂಪನಿಯಾಗಿದೆ. ಅದು ಕಾನೂನು ಜಾರಿ, ಕೈಗಾರಿಕಾ ಭದ್ರತೆ, ಮೂಲಸೌಕರ್ಯ ತಪಾಸಣೆ ಮತ್ತು ಕೃಷಿ ಹಾಗೂ ಭೂ ಸರ್ವೇ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಿಗಾಗಿ ತನ್ನ ಗ್ರಾಹಕರಿಗೆ ನೀಡಬಹುದು.

ಬೆಂಗಳೂರು ಮೂಲದ ಆಸ್ಟ್ರಿಯಾ ಏರೋಸ್ಪೇಸ್‌ನ ಈ ಡ್ರೋನ್‌ಗೆ DGCA ಹಸಿರು ನಿಶಾನೆ

ಎ200-ಎಕ್ಸ್ ಟಿ ಡ್ರೋನ್ (A200 - XT drone) ಪೇಲೋಡ್‌ ಗಳೊಂದಿಗೆ ಬಹುಮುಖ ಡ್ರೋನ್ ಆಗಿದ್ದು, ಇದನ್ನು ಹೈ ರೆಸಲ್ಯೂಶನ್ ಹೈ ಝೂಮ್ ಡೇ ಕ್ಯಾಮೆರಾ ಮತ್ತು ರಾತ್ರಿ ಸಮಯದ ಥರ್ಮಲ್ ಕ್ಯಾಮೆರಾ ನಡುವೆ ವೇಗವಾಗಿ ಬದಲಾಯಿಸಬಹುದು. ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಫಾರ್ಮ್ ಫ್ಯಾಕ್ಟರ್ ಮತ್ತು 40 ನಿಮಿಷಗಳ ವರೆಗೆ ಹಾರಾಟದ ಸಮಯ ದೊಂದಿಗೆ, ಇದನ್ನು ರಕ್ಷಣೆ ಮತ್ತು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಐಎಸ್ ಆರ್ ಕಾರ್ಯಾಚರಣೆಗಳು ಮತ್ತು ಕೈಗಾರಿಕಾ ಭದ್ರತೆ ಹಾಗೂ ತಪಾಸಣೆ ಆಪ್‌ ಗಳಿಗೆ ಬಳಸಬಹುದು.

ಎ200-ಎಕ್ಸ್ ಟಿ ಡ್ರೋನ್ ಸಂಕೀರ್ಣ ಪರಿಸರದಲ್ಲಿ 360 ಡಿಗ್ರಿ ಹಾರಲು ಅಡಚಣೆ ತಪ್ಪಿಸುವುದು, ಪುನರಾವರ್ತನೆಗಾಗಿ ಡ್ಯುಯಲ್ ಜಿಪಿಎಸ್ (GPS) ಸೆನ್ಸರ್ ಗಳು, ಕಡಿಮೆ ಉಪಕರಣದ ಸೆಟಪ್ ಮತ್ತು ಟೇಕ್ ಆಫ್‌ನಿಂದ ಲ್ಯಾಂಡಿಂಗ್‌ವರೆಗೆ ಸ್ವಯಂಚಾಲಿತ ಕಾರ್ಯಾಚರಣೆಗಳು ಸೇರಿದಂತೆ ಸುಧಾರಿತ ಫೀಚರ್ಸ್‌ ಗಳೊಂದಿಗೆ ಬರುತ್ತದೆ.

ಬೆಂಗಳೂರು ಮೂಲದ ಆಸ್ಟ್ರಿಯಾ ಏರೋಸ್ಪೇಸ್‌ನ ಈ ಡ್ರೋನ್‌ಗೆ DGCA ಹಸಿರು ನಿಶಾನೆ

ಈ ಸಾಧನೆ ಬಗ್ಗೆ ಮಾತನಾಡಿದ ಆಸ್ಟೇರಿಯಾ ಏರೋಸ್ಪೇಸ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀಲ್ ಮೆಹ್ತಾ, 'ಭಾರತೀಯ ಮಾರುಕಟ್ಟೆ ನಿಯಮಾವಳಿಗಳಿಗೆ ಸಂಪೂರ್ಣ ಬದ್ಧವಾದ, ವಿಶ್ವಾಸಾರ್ಹ ಮತ್ತು ಸ್ಥಳೀಯ ಡ್ರೋನ್‌ ಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಈ ಮೈಲುಗಲ್ಲು ಸಾಕ್ಷಿ ಆಗಿದೆ. ಡ್ರೋನ್ ನಿಯಮಗಳು - 2021 ರ ಅಡಿಯಲ್ಲಿ ಎಲ್ಲ ವಿನ್ಯಾಸ, ಉತ್ಪಾದನೆ, ಗುಣಮಟ್ಟ ನಿಯಂತ್ರಣ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಡಿಜಿಸಿಎ ಯಿಂದ ನಮ್ಮ ಎ200-ಎಕ್ಸ್ ಟಿ ಪ್ರಮಾಣೀಕರಣವು ಡ್ರೋನ್ ಉತ್ಪನ್ನದ ಮೇಲಿನ ನಂಬಿಕೆಯ ಮುದ್ರೆಯಾಗಿದೆ. ಡ್ರೋಸಮರ್ಥ, ಸುರಕ್ಷಿತ ಮತ್ತು ನಿಯಮಾವಳಿಗಳ ಚೌಕಟ್ಟಿನಲ್ಲಿ ವ್ಯಾಪಾರ ಕಾರ್ಯಾಚರಣೆ ಗಳಲ್ಲಿ ನಮ್ಮ ಗ್ರಾಹಕರಿಗೆ ಸಹಾಯ ಮಾಡುವ ನವೀನ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ,' ಎಂದಿದ್ದಾರೆ.

ಬೆಂಗಳೂರು ಮೂಲದ ಆಸ್ಟ್ರಿಯಾ ಏರೋಸ್ಪೇಸ್‌ನ ಈ ಡ್ರೋನ್‌ಗೆ DGCA ಹಸಿರು ನಿಶಾನೆ

ಆಸ್ಟೇರಿಯಾ ಏರೋಸ್ಪೇಸ್ ಲಿಮಿಟೆಡ್
ಆಸ್ಟೇರಿಯಾ ಏರೋಸ್ಪೇಸ್ ಲಿಮಿಟೆಡ್ (Asteria Aerospace) ಎಂಬುದು ವೈಮಾನಿಕ ಡೇಟಾದಿಂದ ಕ್ರಿಯಾಶೀಲ ಬುದ್ಧಿಮತ್ತೆ ಒದಗಿಸುವ ಪೂರ್ಣ ಸ್ಟಾಕ್ ಡ್ರೋನ್ ತಂತ್ರಜ್ಞಾನ ಕಂಪನಿಯಾಗಿದೆ. ಕಂಪನಿಯು ತನ್ನ ಆಂತರಿಕ ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು, ಸರ್ಕಾರ ಮತ್ತು ಉದ್ಯಮದ ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ರೂಪಿಸಿದ ಡ್ರೋನ್ ಸಲ್ಯೂಷನ್ ಅಭಿವೃದ್ಧಿಪಡಿಸುತ್ತದೆ.

ಆಸ್ಟೇರಿಯಾವು ದೀರ್ಘ ಅವಧಿಯ, ಗುಣಮಟ್ಟ ಕೇಂದ್ರಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ರಕ್ಷಣೆ ಹಾಗೂ ಹೋಮ್‌ಲ್ಯಾಂಡ್ ಸೆಕ್ಯೂರಿಟಿ, ಕೃಷಿ, ತೈಲ ಮತ್ತು ಅನಿಲ, ಶಕ್ತಿ ಮತ್ತು ಬಳಕೆಗಳು, ದೂರಸಂಪರ್ಕ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಒದಗಿಸಲು ವಿಶ್ವಾಸಾರ್ಹ ಪಾಲುದಾರ ಆಗಿದೆ. ಆಸ್ಟೇರಿಯಾ ಏರೋಸ್ಪೇಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಆಗಿದ್ದು, ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಹುಪಾಲು ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

Best Mobiles in India

English summary
Asteria Aerospace received type certification for its indigenously designed and manufactured A200-XT drone from the Directorate General of Civil Aviation (DGCA). Know complete details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X